Interview: "ಸಖತ್ ನರ್ವಸ್ ಆಗಿದ್ದೀನಿ" ಜನ ಪ್ರೀತಿ ತೋರಿಸುತ್ತಾರೆ ಎನ್ನುವ ನಂಬಿಕೆಯಲ್ಲಿ ರಾಗಿಣಿ ಚಂದ್ರನ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದ 'ಲಾ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದೇ ತಿಂಗಳು 17ಕ್ಕೆ ಸಿನಿಮಾ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ತೆರೆಗೆ ಬರುತ್ತಿದೆ. ವಿಶೇಷ ಅಂದರೆ ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವ ಮೊದಲ ಕನ್ನಡದ ಸಿನಿಮಾ ಇದಾಗಿದೆ. ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Recommended Video

ಶಿವಣ್ಣನ ಅಭಿಮಾನಿಗಳು ನಂಗೆ ಏನ್ ಮಾಡ್ತಾರೋ ಅನ್ನೋ ಭಯ ಆಗಿತ್ತು | Vijay Raghavendra | Filmibeat Kannada

ಕೊರೊನಾ ಲಾಕ್ ಡೌನ್ ಬಳಿಕ ಕನ್ನಡದಲ್ಲಿ ಬಿಡುಗೆಯಾಗುತ್ತಿರುವ ಮೊದಲ ಸಿನಿಮಾ ಇದಾಗಿದ್ದು ಸಿನಿಮಾ ಮೇಲೆ ನಿರೀಕ್ಷೆ ತುಸು ಜಾಸ್ತಿನೆ ಇದೆ. ಈಗಾಗಲೆ ಟ್ರೈಲರ್ ರಿಲೀಸ್ ಆಗಿದ್ದು ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಮೊದಲ ಸಿನಿಮಾದ ಅನುಭವದ ನಟಿ ರಾಗಿಣಿ 'ಫಿಲ್ಮಿಬೀಟ್ ಕನ್ನಡ'ದ ಜೊತೆ ಹಂಚಿಕೊಂಡಿದ್ದಾರೆ. ಡ್ಯಾನ್ಸರ್ ಆಗಿ, ರೂಪದರ್ಶಿಯಾಗಿ ಗುರುತಿಸಿಕೊಂಡಿರುವ ಲಾ ಸಿನಿಮಾ ಮೂಲಕ ಚಿತ್ರಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಮೊದಲ ಸಿನಿಮಾದ ಬಗ್ಗೆ ರಾಗಿಣಿ ಹೇಳಿದ್ದೇನು? ಇಲ್ಲಿದೆ ರಾಗಿಣಿ ಮಾತುಗಳು. ಮುಂದೆ ಓದಿ..

ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವ ಮೊದಲ ಕನ್ನಡದ ಸಿನಿಮಾ, ನಿಮಗೂ ಮೊದಲ ಸಿನಿಮಾ ಹೇಗಿದೆ ಫೀಲ್?

ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವ ಮೊದಲ ಕನ್ನಡದ ಸಿನಿಮಾ, ನಿಮಗೂ ಮೊದಲ ಸಿನಿಮಾ ಹೇಗಿದೆ ಫೀಲ್?

ತುಂಬಾ ಒಳ್ಳೆಯ ಸಿನಿಮಾ ವಿದು. ನಾನು ತುಂಬಾ ಅದೃಷ್ಟವಂತೆ ಅಂತ ಅನಿಸುತ್ತೆ. ಮೊದಲ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವುದು. ತುಂಬಾ ನರ್ವಸ್ ಆಗಿದ್ದೀನಿ ಮತ್ತು ಎಕ್ಸಾಯಿಟ್ ಮೆಂಟ್ ನಲ್ಲಿ ಇದೀನಿ. ಏನ್ ಆಗುತ್ತೋ ಗೊತ್ತಿಲ್ಲ. ಜನ ಸಿನಿಮಾ ನೋಡಿ ಪ್ರೀತಿ ತೋರಿಸುತ್ತಾರೆ ಎನ್ನುವ ನಂಬಿಕೆ ಇದೆ. ಖಂಡಿತಾ ಸಿನಿಮಾ ಎಲ್ಲರೂ ಇಷ್ಟಪಡುತ್ತಾರೆ.

 ನಿಮ್ಮ ಮೊದಲ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿವುದರಿಂದ, ಚಿತ್ರಮಂದಿರದ ಫೀಲ್ ಸಿಗುತ್ತಿಲ್ಲ ಎನ್ನುವ ಬೇಸರ ಇದಿಯಾ.?

ನಿಮ್ಮ ಮೊದಲ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿವುದರಿಂದ, ಚಿತ್ರಮಂದಿರದ ಫೀಲ್ ಸಿಗುತ್ತಿಲ್ಲ ಎನ್ನುವ ಬೇಸರ ಇದಿಯಾ.?

ಬೇಸರ ಏನು ಇಲ್ಲ. ಆಡಿಯೋನ್ಸ್ ಜೊತೆ ಒಂದು ಕನೆಕ್ಷನ್ ಇರುತ್ತೆ ಮತ್ತು ಬಿಗ್ ಸ್ಕ್ರೀನ್ ನಲ್ಲಿ ನೋಡಬೇಕು ಎನ್ನುವ ಆಸೆ ಇರುತ್ತೆ. ಆದರೆ ಇವಾಗ ಪರಿಸ್ಥಿತಿ ಹೀಗಿದೆ. ಚಿತ್ರಮಂದಿರಗಳು ಒಪನ್ ಆಗಿಲ್ಲ. ವಿಡಿಯೋ ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಮೊದಲು ಶೇರ್ ಆಗುತ್ತೆ. ತುಂಬಾ ಜನಕ್ಕೆ ರೀಚ್ ಆಗುತ್ತೆ. ಚಿತ್ರಮಂದಿರದಲ್ಲಿ ಆದರೆ ಕರ್ನಾಟಕದಲ್ಲಿ ಮಾತ್ರ ಸಿನಿಮಾ ಪ್ರಸಾರವಾಗುತ್ತೆ. ಇಲ್ಲಿ ಮಾತ್ರ ನೋಡುತ್ತಾರೆ. ಆದರೀಗ ಒಟಿಟಿ ಮೂಲಕ ಎಲ್ಲಾ ಕಡೆ ರೀಚ್ ಆಗುತ್ತಿದೆ. 200ಕ್ಕೂ ಹೆಚ್ಚು ದೇಶಗಳಲ್ಲಿ ಲಾ ಸಿನಿಮಾ ನೋಡಬಹುದು. ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪುತ್ತಿದೆ. ಖುಷಿಯಾಗುತ್ತಿದೆ.

ಸಿನಿಮಾದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ?

ಸಿನಿಮಾದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ?

ನಂದಿನಿ ಎನ್ನುವ ಪಾತ್ರದ ಕಾಣಿಸಿಕೊಂಡಿದ್ದೀನಿ. ನಂದಿನಿ ಪಾತ್ರ ತುಂಬಾ ಸ್ಟ್ರಾಂಗ್ ಹುಡುಗಿಯ ಪಾತ್ರ. ನನಗೆ ತುಂಬಾ ಹತ್ತಿರವಾದ ಪಾತ್ರ. ಹೇಗಿರುತ್ತೊ ಅದನ್ನ ನೇರವಾಗಿ ಹೇಳುವಂತ ಹುಡುಗಿಯ ಪಾತ್ರ. ತುಂಬಾ ಇಷ್ಟವಾದ ಪಾತ್ರ ನನಗೆ. ತುಂಬಾ ಕನೆಕ್ಟ್ ಆದ ಪಾತ್ರ ತುಂಬಾ ಈಸಿಯಾಗಿ ಮಾಡಿದ್ದೀನಿ.

ನಿಮಗೆ ತುಂಬಾ ಸಿನಿಮಾಗೆ ಆಫರ್ ಬಂದಿರುತ್ತೆ ಆದರೆ ಈ ಸಿನಿಮಾವನ್ನೇ ಒಪ್ಪಿಕೊಳ್ಳಲು ಕಾರಣವೇನು?

ನಿಮಗೆ ತುಂಬಾ ಸಿನಿಮಾಗೆ ಆಫರ್ ಬಂದಿರುತ್ತೆ ಆದರೆ ಈ ಸಿನಿಮಾವನ್ನೇ ಒಪ್ಪಿಕೊಳ್ಳಲು ಕಾರಣವೇನು?

ಈ ಸಿನಿಮಾ ಒಪ್ಪಿಕೊಳ್ಳಲು ಪ್ರಮುಖವಾಗಿ ಚಿತ್ರದ ಕಥೆ ಮತ್ತು ನನ್ನ ಪಾತ್ರ. ಯಾವಾಗಲು ಗ್ಲಾಮರ್, ಬಬ್ಲಿ ಪಾತ್ರಗಳನ್ನು ಮಾತ್ರ ಹೆಚ್ಚಾಗಿ ನೋಡುತ್ತೇವೆ. ಆದರೆ ಇದು ವಿಭಿನ್ನವಾದ ಕಥೆ. ಇಲ್ಲಿ ಕಥೆಯೆ ಹೀರೋ. ಸ್ಟ್ರಾಂಗ್ ಆಗಿರುವ ಹುಡುಗಿಯ ಪಾತ್ರ ಎಲ್ಲರಿಗೂ ಇಷ್ಟವಾಗುತ್ತೆ. ನನಗೆ ಇದೆ ರೀತಿಯ ಪಾತ್ರಗಳು ಬೇಕಿತ್ತು. ಹಾಗಾಗಿ ಈ ಸಿನಿಮಾ ಒಪ್ಪಿಕೊಂಡೆ.

ಸಿನಿಮಾದ ಕಥೆ ಆಯ್ಕೆ ಮಾಡಿದ್ದು ನೀವಾ..ಪ್ರಜ್ವಲ್ ಅವರಾ?

ಸಿನಿಮಾದ ಕಥೆ ಆಯ್ಕೆ ಮಾಡಿದ್ದು ನೀವಾ..ಪ್ರಜ್ವಲ್ ಅವರಾ?

ಮೊದಲು ಕಥೆ ಕೇಳಿ ಇಷ್ಟ ಪಟ್ಟಿದ್ದು ಪ್ರಜ್ವಲ್. ನನಗೆ ಇದೆಲ್ಲ ಹೊಸದು. ಕಥೆ ಅವರಿಗೆ ಇಷ್ಟವಾದ ಬಳಿಕ ನನಗೆ ಹೇಳಿದ್ರು. ಕಥೆ ನನಗೂ ಇಷ್ಟವಾಗಿಯು ಹಾಗಾಗಿ ಒಪ್ಪಿಕೊಂಡೆ.

ನಿಮ್ಮದು ಸಿನಿಮಾ ಕುಟುಂಬ ಮಾವ ದೇವರಾಜ್ ಮತ್ತು ಪತಿ ಪ್ರಜ್ವಲ್ ಏನಾದ್ರು ಟಿಪ್ಸ್ ಕೊಟ್ಟಿದ್ದಾರಾ?

ನಿಮ್ಮದು ಸಿನಿಮಾ ಕುಟುಂಬ ಮಾವ ದೇವರಾಜ್ ಮತ್ತು ಪತಿ ಪ್ರಜ್ವಲ್ ಏನಾದ್ರು ಟಿಪ್ಸ್ ಕೊಟ್ಟಿದ್ದಾರಾ?

ಅಪ್ಪ-ಅಮ್ಮ(ದೇವರಾಜ್ ಮತ್ತು ಪತ್ನಿ) ಪ್ರಜ್ವಲ್ ಆಗಿರಬಹುದು ಎಲ್ಲರು ಸಿನಿಮಾವನ್ನು ಆಡಿಯನ್ಸ್ ತರ ನೋಡಲ್ಲ. ವಿಮರ್ಶಾತ್ಮಕವಾಗಿ ಸಿನಿಮಾ ನೋಡುವುದು. ಎಲ್ಲರೂ ಒಟ್ಟಿಗೆ ಕುಳಿತು ಸಿನಿಮಾ ನೋಡುತ್ತೇವೆ. ಹೇಗೆ ಶೂಟ್ ಮಾಡಿದ್ದಾರೆ, ಕ್ಯಾಮರಾ ವರ್ಕ್ ಹೇಗಿದೆ, ಅಭಿನಯ ಹೇಗಿದೆ ಹೀಗೆ ಎಲ್ಲವನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿ ಸಿನಿಮಾ ನೋಡುತ್ತಾರೆ. ನನಗೂ ಹಾಗೆ ಸಿನಿಮಾ ನೋಡಿ ಅಭ್ಯಾಸ ಆಗಿದೆ. ಆ ಸಮಯದಲ್ಲಿ ಹೇಳುವ ಕೆಲವು ಸಲಹೆಗಳು ಅಭಿನಯಿಸುವಾಗ ಬಳಸಿಕೊಂಡಿದ್ದೀನಿ. ಡ್ಯಾನ್ಸರ್ ಆಗಿದ್ದರಿಂದ ಸ್ಟೇಜ್ ಮೇಲೆ ಎಕ್ಸ್ ಪ್ರೆಶನ್ ಎಲ್ಲಾ ಸ್ವಲ್ಪ ಜಾಸ್ತಿನೆ ಇರುತ್ತೆ. ಆದರೆ ಸಿನಿಮಾ ಹಾಗಲ್ಲ.

 ಟ್ರೈಲರ್ ನೋಡಿದ ಬಳಿಕ ನಿಮ್ಮ ಕುಟುಂಬದವರ ಪ್ರತಿಕ್ರಿಯೆ ಹೇಗಿತ್ತು?

ಟ್ರೈಲರ್ ನೋಡಿದ ಬಳಿಕ ನಿಮ್ಮ ಕುಟುಂಬದವರ ಪ್ರತಿಕ್ರಿಯೆ ಹೇಗಿತ್ತು?

ಟ್ರೈಲರ್ ನೋಡಿ ತುಂಬಾ ಖುಷಿ ಪಟ್ಟರು. ಇನ್ನೂ ಮನೆಯಲ್ಲಿ ಯಾರು ಸಿನಿಮಾ ನೋಡಿಲ್ಲ. ಹಾಗಾಗಿ ಎಲ್ಲರೂ ಸಿನಿಮಾ ನೋಡಲು ಎಕ್ಸಾಯಿಟ್ ಆಗಿದ್ದಾರೆ.

ನೀವು ಡ್ಯಾನ್ಸಾರ್ ಈ ಸಿನಿಮಾದಲ್ಲಿ ನಿಮ್ಮ ಡ್ಯಾನ್ಸ್ ನೋಡುವ ಅವಕಾಶ ಸಿನಿಮಾಪ್ರಿಯರಿಗೆ ಸಿಗುತ್ತಾ?

ನೀವು ಡ್ಯಾನ್ಸಾರ್ ಈ ಸಿನಿಮಾದಲ್ಲಿ ನಿಮ್ಮ ಡ್ಯಾನ್ಸ್ ನೋಡುವ ಅವಕಾಶ ಸಿನಿಮಾಪ್ರಿಯರಿಗೆ ಸಿಗುತ್ತಾ?

ಈ ಸಿನಿಮಾದಲ್ಲಿ ಡ್ಯಾನ್ಸ್ ಇಲ್ಲ. ನಾನು ಅದನ್ನೆ ಹೇಳಿದೆ. ಆದರೆ ಸಿನಿಮಾದಲ್ಲಿ ಡ್ಯಾನ್ಸ್ ಮಾಡುವಂತ ಸನ್ನಿವೇಶ ಎಲ್ಲೂ ಬರಲ್ಲ. ಹಾಗಂತ ಬೇಸರವೇನು ಇಲ್ಲ.

ಪಿ ಆರ್ ಕೆ ಬ್ಯಾನರ್ ನಿಂದ ಬರ್ತಿರುವ ಸಿನಿಮಾ, ನಿಮ್ಮ ಅಭಿನಯದ ಬಗ್ಗೆ ಪುನೀತ್ ಏನು ಹೇಳಿದರು?

ಪಿ ಆರ್ ಕೆ ಬ್ಯಾನರ್ ನಿಂದ ಬರ್ತಿರುವ ಸಿನಿಮಾ, ನಿಮ್ಮ ಅಭಿನಯದ ಬಗ್ಗೆ ಪುನೀತ್ ಏನು ಹೇಳಿದರು?

ಪಿ ಆರ್ ಕೆ ಬ್ಯಾನರ್ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ತುಂಬಾ ಖುಷಿಯಾಗುತ್ತೆ. ನನ್ನ ಮೊದಲ ಸಿನಿಮಾ ಅಪ್ಪುಅಣ್ಣನ (ಪುನೀತ್ ರಾಜ್ ಕುಮಾರ್) ಬ್ಯಾನರ್ ನಲ್ಲಿ ಬರ್ತಿದೆ ಅಂದರೆ ನಾನು ತುಂಬಾ ಲಕ್ಕಿ. ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಅಪ್ಪು ಅಣ್ಣ ಕಾಲ್ ಮಾಡಿ ಸಿನಿಮಾ ಚೆನ್ನಾಗಿ ಬಂದಿದೆ, ಅಭಿನಯ ಚೆನ್ನಾಗಿದೆ ಎಂದು ಹೇಳಿದ್ರು, ಖುಷಿಯಾಯಿತು. ಮೊದಲ ಸಿನಿಮಾ ಆಗಿದ್ದರಿಂದ ತುಂಬಾ ನರ್ವಸ್ ಆಗಿದ್ದೀನಿ. ಜೊತೆಗೆ ಮೊದಲ ಬಾರಿಗೆ ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವುದರಿಂದ ಜನ ಹೇಗೆ ಸ್ವೀಕಾರ ಮಾಡುತ್ತಾರೆ ಎಂದು ಕಾಯುತ್ತಿದ್ದೀನಿ.

More from Filmibeat

English summary
Ragini Chandran interview about her Law movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X