For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕಿಂತ ತಮಿಳಿನಲ್ಲಿಯೇ ರಾಗಿಣಿ ಬ್ಯುಸಿ: ಸ್ಯಾಂಡಲ್‌ವುಡ್ ಬಗ್ಗೆ ಏನಂತಾರೆ ತುಪ್ಪದ ಬೆಡಗಿ?

  |

  ಸ್ಯಾಂಡಲ್‌ವುಡ್ ನಟಿ ರಾಗಿಣಿ ಒಂದರ ಹಿಂದೊಂದು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ. ಅದರಲ್ಲೂ ತಮಿಳು ಸಿನಿಮಾಗಳನ್ನೇ ಹೆಚ್ಚು ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ತುಪ್ಪದ ಬೆಡಗಿ ರಾಗಿಣಿ ಮೂರನೇ ತಮಿಳು ಸಿನಿಮಾಗೆ ಜೈ ಎಂದಿದ್ದರು. ಅಂದ್ಹಾಗೆ ರಾಗಿಣಿಯ ಮೂರನೇ ತಮಿಳು ಸಿನಿಮಾ 'ಈ ಮೇಲ್' ಕೆಲವು ದಿನಗಳ ಹಿಂದಷ್ಟೇ ಸೆಟ್ಟೇರಿತ್ತು. ಈಗ ಅದೇ ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ.

  ರಾಗಿಣಿ ಇದೇ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಮೊದಲ ಸಿನಿಮಾ ಕೂಡ ಹೌದು. ಇತ್ತೀಚೆಗೆ ತಮಿಳು, ತೆಲುಗು, ಮಲಯಾಳಂ ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಟಿ ಕನ್ನಡ ಚಿತ್ರರಂಗವನ್ನು ಮರತೇ ಬಿಟ್ರಾ? ಸ್ಯಾಂಡಲ್‌ವುಡ್‌ಗೆ ಏನಾದರೂ ಗುಡ್ ಬೈ ಹೇಳಿದ್ರಾ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಹುಟ್ಟೋದು ಸಹಜ. ಈ ಎಲ್ಲಾ ವಿಷಯಗಳ ಬಗ್ಗೆ ರಾಗಿಣಿ ಫಿಲ್ಮಿ ಬೀಟ್ ಜೊತೆ ಮನಬಿಚ್ಚಿ ಮಾತಾಡಿದ್ದಾರೆ.

  'ಕಾಲಾಪತ್ಥರ್' ಲುಕ್ ನೋಡಿ ಅಪ್ಪು ಮಾಮ ಖಂಡಿತಾ ಫೋನ್ ಮಾಡ್ತಿದ್ರು- ಧನ್ಯಾ ರಾಮ್ ಕುಮಾರ್!'ಕಾಲಾಪತ್ಥರ್' ಲುಕ್ ನೋಡಿ ಅಪ್ಪು ಮಾಮ ಖಂಡಿತಾ ಫೋನ್ ಮಾಡ್ತಿದ್ರು- ಧನ್ಯಾ ರಾಮ್ ಕುಮಾರ್!

  3ನೇ ತಮಿಳು ಸಿನಿಮಾದ ಅನುಭವ ಹೇಗಿದೆ?

  3ನೇ ತಮಿಳು ಸಿನಿಮಾದ ಅನುಭವ ಹೇಗಿದೆ?

  " ಈ ಮೇಲ್.. ಇದು ತಮಿಳಿನಲ್ಲಿ ನನ್ನ ಮೂರನೇ ಸಿನಿಮಾ. ಸೋಲೋ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಿದು. ಇದರಲ್ಲಿ ನಾನು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇದರಲ್ಲಿ ಮನೋಬಾಲ ಸರ್ ಇದ್ದಾರೆ. ಅಶೋಕ್ ಕುಮಾರನ್ ಸರ ಇದ್ದಾರೆ. ಜೈ ಭೀಮ್ ಸಿನಿಮಾ ಮಾಡಿರುವ ಮ್ಯೂಸಿಕ್ ಡೈರೆಕ್ಟರ್ ಮ್ಯೂಸಿಕ್ ಮಾಡುತ್ತಿದ್ದಾರೆ. ರಜನ್ ಎಂಬುವವರು ಡೈರೆಕ್ಟ್ ಮಾಡಿ ಪ್ರಡ್ಯೂಸ್ ಕೂಡ ಮಾಡುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಈಗಾಗಲೇ ಶೂರುವಾಗಿದ್ದು, ಈ ಫೋಟೊಗಳು ಆ ಸಿನಿಮಾದ್ದೇ ಲುಕ್."

  ನಾನು ಅವರಂತೆ ಡ್ರಾಮಾ ಮಾಡಿದ್ದರೆ ಇನ್ನಷ್ಟು ದಿನ ಮನೆಯಲ್ಲಿರಬಹುದಿತ್ತು: ಕಿರಣ್ನಾನು ಅವರಂತೆ ಡ್ರಾಮಾ ಮಾಡಿದ್ದರೆ ಇನ್ನಷ್ಟು ದಿನ ಮನೆಯಲ್ಲಿರಬಹುದಿತ್ತು: ಕಿರಣ್

  'ಈ ಮೇಲ್' ಸಿನಿಮಾ ಸ್ಟೋರಿ ಬಗ್ಗೆ ಹೇಳಿ?

  'ಈ ಮೇಲ್' ಸಿನಿಮಾ ಸ್ಟೋರಿ ಬಗ್ಗೆ ಹೇಳಿ?

  "ಈ ಸಿನಿಮಾದಲ್ಲಿ ಗೇಮಿಂಗ್ ಬಗ್ಗೆ ಮಾಡುತ್ತಿದ್ದೇವೆ. ಈ ಜನರೇಷನ್‌ನ ಯುವಕರು ಹೇಗೆ ಆನ್‌ಲೈನ್ ಗೇಮ್‌ಗೆ ದಾಸರಾಗುತ್ತಿದ್ದಾರೆ. ಅದರಿಂದ ಏನೆಲ್ಲಾ ಎಫೆಕ್ಟ್ ಆಗುತ್ತೆ? ಅನ್ನೋದನ್ನು ರಿಯಲ್ ಲೈಫ್ ಸ್ಟೋರಿಯನ್ನು ಇಟ್ಟುಕೊಂಡು ಮಾಡುತ್ತಿದ್ದೇವೆ. ಕೆಳ ಮಧ್ಯಮ ವರ್ಗದಿಂದ ಬಂದ ಹುಡುಗಿಯೊಬ್ಬಳು ಆನ್‌ಲೈನ್ ಗೇಮರ್ ಆಗುತ್ತಾಳೆ. ಅದು ಹೇಗೆ ಅವಳ ಲೈಫ್ ಚೇಂಜ್ ಮಾಡುತ್ತೆ ಅನ್ನೋದೇ ಈ ಸಿನಿಮಾದ ಕಥೆ."

  ಟೈಟಲ್ ಬಗ್ಗೆ ಏನಂತಿರಾ?

  ಟೈಟಲ್ ಬಗ್ಗೆ ಏನಂತಿರಾ?

  "ಟೈಟಲ್‌ನಲ್ಲಿ ಈ ಮೇಲ್ ಯಾಕೆ ಅಂದ್ರೆ, ಈ ಮೇಲ್ ಮೂಲಕವೇ ಇಲ್ಲಿ ಟ್ವಿಸ್ಟ್ ಅಂಡ್ ಟರ್ನ್ ಆಗುತ್ತಿರುತ್ತೆ. ಟೆಕ್ನಾಲಜಿ ಮೂಲಕ ಹೇಗೆ ಒಳ್ಳೆಯದ್ದೂ ಆಗುತ್ತೆ. ಕೆಟ್ಟದ್ದೂ ಆಗುತ್ತೆ ಅನ್ನೋದನ್ನು ತೋರಿಸುತ್ತಿದ್ದೇವೆ. ಅಭಿನಯಕ್ಕೆ ಅವಕಾಶವಿರುವ ಪಾತ್ರವಿದು. ಫೈಟ್ ಇದೆ. ಸಾಂಗ್ ಇದೆ. ಗ್ಲಾಮರ್ ಇದೆ. ತಮಿಳಿನಲ್ಲಿ ನಾನು ಇನ್ನೂ ಆಕ್ಷನ್ ಸಿನಿಮಾ ಮಾಡಿಲ್ಲ. ಇದೊಂದು ಹೊಸ ತರಹದ ಸಿನಿಮಾ ಅಂತ ಹೇಳಬಹುದು."

  ಸ್ಯಾಂಡಲ್‌ವುಡ್‌ಗೆ ಗುಡ್‌ಬೈ ಹೇಳಿದ್ರಾ ಹೇಗೆ?

  ಸ್ಯಾಂಡಲ್‌ವುಡ್‌ಗೆ ಗುಡ್‌ಬೈ ಹೇಳಿದ್ರಾ ಹೇಗೆ?

  "ಈಗ ತಮಿಳಿನಲ್ಲಿ ಮೂರು ಸಿನಿಮಾಗಳನ್ನು ಮಾಡುತ್ತಿದ್ದೇನೆ. ಈಗಾಗಲೇ ಎರಡು ಸೆಟ್ಟೇರಿದೆ. ಹೊಸ ಸಿನಿಮಾ ಸೋಲೊ ಆಗಿ ನಟಿಸುತ್ತಿದ್ದೇನೆ. ಅದು ಬಿಟ್ಟರೆ ಕನ್ನಡದಲ್ಲಿ ಎರಡು ಸಿನಿಮಾ ಫೈನಲ್ ಮಾಡಿಕೊಂಡಿದ್ದೇನೆ. 'ಸಾರಿ: ಕರ್ಮ ರಿಟರ್ನ್ಸ್' ಫಿನಿಶ್ ಆಗಿದೆ. ಪಾರ್ಟ್ 2 ಶುರು ಮಾಡಬೇಕು. ಇನ್ನೊಂದು ಆಕ್ಷನ್ ಸಿನಿಮಾ ಫೈನಲ್ ಮಾಡಿದ್ದೇನೆ. ಮತ್ತೊಂದು ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಯಲ್ಲೂ ಮಾಡುತ್ತಿದ್ದೇನೆ."

  ಸಿನಿಮಾ ಪ್ರಡ್ಯೂಸ್ ಮಾಡ್ತಿರಾ?

  ಸಿನಿಮಾ ಪ್ರಡ್ಯೂಸ್ ಮಾಡ್ತಿರಾ?

  "ಪ್ರೊಡಕ್ಷನ್ ಹೌಸ್ ಮಾಡಬೇಕು ಅನ್ನುವ ಬಗ್ಗೆ ಚಿಂತನೆ ಇದೆ. ಅದು ಈ ವರ್ಷದ ಕೊನೆಯಲ್ಲಿ ಆಗುತ್ತೆ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಅಂತಿದ್ದೇವೆ. ನಿರ್ದೇಶಕರು, ಕಲಾವಿದರು ಯಾರೇ ಇದ್ದರೂ ಹೊಸಬರಿಗೆ ಅವಕಾಶ ಕೊಡಬೇಕು ಅಂತಿದೆ. ಈ ಬಗ್ಗೆ ನ್ಯಾಷನಲ್ ಲೆವೆಲ್ ಬಗ್ಗೆ ಮಾತುಕತೆ ನಡೆಯುತ್ತಿದೆ. ಸದ್ಯ ಒಂದು ವೇದಿಕೆ ರೆಡಿ ಮಾಡಿಕೊಡಬೇಕು ಅಂದುಕೊಂಡಿದ್ದೇವೆ."

  ಸೋಶಿಯಲ್ ವರ್ಕ್ ಎಲ್ಲಿಗೆ ಬಂತು?

  ಸೋಶಿಯಲ್ ವರ್ಕ್ ಎಲ್ಲಿಗೆ ಬಂತು?

  " ಏನಾದರೂ ಮಾಡಬೇಕು ಅಂದರೆ ಮನಸ್ಸು ಇರಬೇಕು. ಅದಾಗೇ ದಾರಿ ಬಂದು ಬಿಡುತ್ತೆ. ಹೊಸ ಹೊಸ ಪ್ರೋಗ್ರಾಂ ಪ್ಲ್ಯಾನ್ ಮಾಡುತ್ತಿದ್ದೇವೆ. ಚಿಕ್ಕ ಚಿಕ್ಕ ಟೌನ್‌ಗಳಿಗಾಗಿ ಒಂದಿಷ್ಟು ಔಷಧಗಳನ್ನು ರೆಡಿ ಮಾಡುತ್ತಿದ್ದೇವೆ. ಜನರಲ್ ಬಾಡಿ, ಹೆಲ್ತ್‌ಗೆ ಸಂಬಂಧ ಪಟ್ಟು ಔಷಧಗಳು ಅವು. ಅದರ ಬಗ್ಗೆ ವರ್ಕ್ ಮಾಡುತ್ತಿದ್ದೇವೆ. ಹಾಗೇ ತೃತೀಯ ಲಿಂಗಿಗಳಿಗೆ ಕಮ್ಯೂಸಿಟಿ ಸೆಂಟರ್ ಮಾಡುತ್ತಿದ್ದೇವೆ. ಹೊಸ ಬದುಕು ಕಂಡುಕೊಳ್ಳುವುದಕ್ಕೆ ಸಹಾಯ ಮಾಡುತ್ತಿದ್ದೇವೆ. ಅವರಿಗೆ ಲೋನ್ ಕೊಡುವ ಬಗ್ಗೆ ಚಿಂತನೆ ನಡೆದಿದೆ." ಎನ್ನುತ್ತಾರೆ ರಾಗಿಣಿ ದ್ವಿವೇದಿ.

  English summary
  Ragini Dwivedi Interview About Her New Tamil Movie Email And Kannada Films, Know More.
  Friday, August 19, 2022, 16:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X