ನೂರು ಸಂಚಿಕೆ ಪೂರೈಸಿದ 'ಶ್ರೀಗೌರಿ' ಧಾರಾವಾಹಿ; ರಾಜೇಶ್ ಧ್ರುವ ಹೇಳಿದ್ದೇನು ಗೊತ್ತೇ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿಗಳ ಪೈಕಿ 'ಶ್ರೀಗೌರಿ' ಕೂಡಾ ಒಂದು. ಕಾರ್ತಿಕ್ ಅತ್ತಾವರ ಹಾಗೂ ಅಮೂಲ್ಯ ಗೌಡ ಅವರು ನಾಯಕ - ನಾಯಕಿಯಾಗಿ ನಟಿಸಿರುವ 'ಶ್ರೀಗೌರಿ' ಧಾರಾವಾಹಿಯು ಯಶಸ್ವಿ ನೂರು ಸಂಚಿಕೆ ಪೂರೈಸಿದೆ.
'ಶ್ರೀಗೌರಿ' ಧಾರಾವಾಹಿಯಲ್ಲಿ ನಾಯಕಿ ಗೌರಿಯ ಚಿಕ್ಕಪ್ಪನ ಮಗ, ಖಳನಾಯಕ ಶರಣ್ ಆಗಿ ಅಭಿನಯಿಸುತ್ತಿರುವ ರಾಜೇಶ್ ಧ್ರುವ ಸಂತಸ ವ್ಯಕ್ತಪಡಿಸಿದ್ದಾರೆ. ರಾಜೇಶ್ ಧ್ರುವ ಅವರು "ಧಾರಾವಾಹಿ ಎಂದ ಮೇಲೆ ಸಂಚಿಕೆ ಪೂರೈಸುವುದು ಕಾಮನ್ ಸಂಗತಿ. ಆದರೆ ಸಂಚಿಕೆ ಯಾವ ರೀತಿಯಲ್ಲಿ ವೀಕ್ಷಕರಿಗೆ ರೀಚ್ ಆಗುತ್ತದೆ ಎನ್ನುವುದು ಮುಖ್ಯ. ಜನರು ಸಿಕ್ಕಾಗ ಧಾರಾವಾಹಿಯ ಬಗ್ಗೆ ಎಷ್ಟು ಮಾತಾಡ್ತಾರೆ, ಏನು ಮಾತಾಡ್ತಾರೆ ಎನ್ನುವುದು ಮುಖ್ಯ. ಅದು ಆಗ್ತಿದೆ" ಎಂದು ರಾಜೇಶ್ ಧ್ರುವ ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ.

"ನಮ್ಮ ಧಾರಾವಾಹಿ ಶ್ರೀಗೌರಿಗೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಇನ್ನು ಮುಂದೆಯೂ ಕೂಡಾ ಅಷ್ಟೇ ಒಳ್ಳೆಯ ರೆಸ್ಪಾನ್ಸ್ ಬರುವ ಹಾಗೆ ಕಥೆ ಮುಂದುವರಿಯುತ್ತಿದೆ. ನೂರು ಸಂಚಿಕೆ ಪೂರೈಸಿರುವುದಕ್ಕೆ ಜನ ನೀಡಿದ ಪ್ರೋತ್ಸಾಹ, ಬೆಂಬಲ, ಅದಕ್ಕಿಂತಲೂ ಮುಖ್ಯವಾಗಿ ಪ್ರೀತಿ ಕಾರಣ" ಎಂದು ಫಿಲ್ಮಿಬೀಟ್ ಕನ್ನಡಗೆ ರಾಜೇಶ್ ಧ್ರುವ ಮಾಹಿತಿ ಹಂಚಿಕೊಂಡಿದ್ದಾರೆ.
ಇದರ ಜೊತೆಗೆ "ಶರಣನ ಪಾತ್ರದ ಬಗ್ಗೆ ನಾನು ಈ ಮೊದಲೇ ನಿಮ್ಮ ಜೊತೆಗೆ ಹೇಳಿಕೊಂಡಿದ್ದೇನೆ. ನಾನು ಯಾವತ್ತೂ ಮಾಡದೇ ಇರುವಂತಹ ಒಂದು ಕ್ಯಾರಕ್ಟರ್. ಕೆಲವೊಬ್ಬರಿಗೆ ಏನಾಗುತ್ತೆ ಎಂದರೆ, ನಿಜಜೀವನದಲ್ಲಿ ಕೆಲವೊಂದು ಪಾತ್ರ ಸೆಟ್ ಆಗುತ್ತೆ. ಇದು ಕಂಪ್ಲೀಟ್ ಹೊರತು. ನಾನು ಹೈಪರ್ ಆ್ಯಕ್ಟೀವ್ ಎನ್ನುವುದು ನಿಜ. ಆದರೆ, ಶರಣನ ಪಾತ್ರದಷ್ಟು ಹೈಪರ್ ಆ್ಯಕ್ಟೀವ್ ನಾನಲ್ಲ, ಯಾರು ಇರಲ್ಲ" ಎಂದು ರಾಜೇಶ್ ಧ್ರುವ ಹೇಳಿಕೊಂಡಿದ್ದಾರೆ.

"ಧಾರಾವಾಹಿಯಲ್ಲಿ ಶರಣ ಮಾಡೋದು ತುಂಬಾ ಓವರ್. ಆದರೆ ಆ್ಯಕ್ಟಿಂಗ್ ಹಾಗೇ ಇರಬಾರದು. ತುಂಬಾ ಸೆಟಲ್ ಆಗಿ ಕಾಮಿಕ್ ರೀತಿಯಲ್ಲಿ ಇರಬೇಕು. ಹೊಟ್ಟೆ ಉರಿಸ್ಬೇಕು, ಹೊಟ್ಟೆ ಉರ್ಕೊಬೇಕು. ಈ ಪಾತ್ರ ನಿಭಾಯಿಸೋದು ತುಂಬಾ ಕಷ್ಟ. ಅದು ಎರಡು ಆಗ್ತಿದೆ. ಫಂಕ್ಷನ್‌ಗೆ ಹೋದಾಗ ಜನ ಮಾತಾಡಿಸ್ತಾರೆ. ಪಾತ್ರದ ಬಗ್ಗೆ ಹೇಳ್ತಾರೆ. ಮೊನ್ನೆ ಮಂಗಳಮುಖಿಯವರು ಸಿಕ್ಕಿದ್ರು, ಅವ್ರು ಕೂಡಾ ಪಾತ್ರ ತುಂಬಾ ಚೆನ್ನಾಗಿ ಬರ್ತಿದೆ ಎಂದು ಹೊಗಳಿದ್ದರು. ಖುಷಿಯಾಯ್ತು" ಎನ್ನುತ್ತಾರೆ ನಟ ರಾಜೇಶ್ ಧ್ರುವ.
"ಪ್ರತಿಯೊಂದು ಕೆಟಗರಿಯ ಜನಕ್ಕೆ ಧಾರಾವಾಹಿ, ಶರಣನ ಪಾತ್ರ ತಲುಪ್ತಾ ಇದೆ. ಮುಂದೆ ಇನ್ನು ಮಜಾ ಇದೆ. ಶರಣ ಇಲ್ಲಿ ವಿಲನ್ ಅಲ್ಲ, ಬದಲಿಗೆ ಅವನೊಬ್ಬ ಕಾಮಿಡಿಯನ್ ಹೌದು. ನಗಿಸ್ತಾನಲ್ಲ, ಅದು ಎಲ್ಲರಿಗೂ ಸಿಗುವ ಪಾತ್ರ ಅಲ್ಲ. ನನಗೆ ಸಿಕ್ಕಿದೆ. ಇನ್ನು ಚಾನೆಲ್ ಕಡೆಯಿಂದಲೂ ಶರಣನ ಪಾತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ತಿದೆ. ಸಿಕ್ಕಾಪಟ್ಟೆ ಚೆನ್ನಾಗಿ ಮಾಡ್ತೀರಾ ಎನ್ನುವ ಕಾಂಪ್ಲಿಮೆಂಟ್ ಸಿಕ್ಕಿದೆ. ಎಲ್ಲಾ ಫೀಡ್ ಬ್ಯಾಕ್ ತೆಗೊಂಡು ಮುಂದೆ ಹೋಗ್ತಿದ್ದೇನೆ" ಎಂದು ಫಿಲ್ಮಿಬೀಟ್ ಕನ್ನಡಗೆ ಮಾಹಿತಿ ರಾಜೇಶ್ ಧ್ರುವ ಮಾಹಿತಿ ಹಂಚಿಕೊಂಡಿದ್ದಾರೆ.


Click it and Unblock the Notifications











