twitter
    For Quick Alerts
    ALLOW NOTIFICATIONS  
    For Daily Alerts

    ರಾಜಕೀಯಕ್ಕೆ ಎಂಟ್ರಿಕೊಡುತ್ತಿರುವ 'ರಂಗಾಯಣ ರಘು' ಎಕ್ಸ್‌ಕ್ಲೂಸಿವ್ ಸಂದರ್ಶನ

    By Pavithra
    |

    ಸಿನಿಮಾರಂಗಕ್ಕೂ ರಾಜಕೀಯಕ್ಕೂ ಭಾರಿ ಅಂತರವೇನಿಲ್ಲ. ರಾಜಕೀಯದಿಂದ ಸಿನಿಮಾಕ್ಷೇತ್ರಕ್ಕೆ ಸಿನಿಮಾರಂಗದಿಂದ ರಾಜಕೀಯಕ್ಕೆ ಬದಲಾವಣೆಗಳು ಆಗುತ್ತಲೇ ಇರುತ್ತೆ. ಮೊನ್ನೆ ಮೊನ್ನೆಯಷ್ಟೇ ನಟಿ 'ಅಮೂಲ್ಯ' ರಾಜಕೀಯಕ್ಕೆ ಬರ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಈಗ ಮತ್ತೊಬ್ಬ ನಟ ಪಾಲಿಟಿಕ್ಸ್ ಗೆ ಎಂಟ್ರಿ ಆಗುವ ಸಾಧ್ಯತೆ ಹೆಚ್ಚಾಗಿ ಗೋಚರವಾಗ್ತಿದೆ.

    ತಮ್ಮ ಅಭಿನಯದ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಛಾಪು ಮೂಡಿಸಿರೋ ನಟ 'ರಂಗಾಯಣ ರಘು' ಈ ಬಾರಿಯ ಚುನಾವಣೆ ಮೂಲಕ ರಾಜಕೀಯಕ್ಕೆ ಬರ್ತಾರೆ ಅನ್ನೋ ಸುದ್ದಿ ಹರಿದಾಡ್ತಿವೆ. ಸಿನಿಮಾರಂಗದಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದಿರೋ 'ರಂಗಾಯಣ ರಘು' ಮಧುಗಿರಿಯಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿವೆ. ಈ ಬಗ್ಗೆ ರಂಗಾಯಣ ರಘು 'ಫಿಲ್ಮಿಬೀಟ್' ಜೊತೆ ಮಾತನಾಡಿದ್ದಾರೆ. ಹಾಗಾದ್ರೆ 'ರಂಗಾಯಣ ರಘು' ರಾಜಕೀಯ ಎಂಟ್ರಿ ಬಗ್ಗೆ ಏನು ಹೇಳಿದ್ದಾರೆ.? ಮುಂದೆ ಓದಿ...

    'ರಾಜಕೀಯ'ಕ್ಕೆ ಬರ್ತಾರಂತೆ ಹೌದಾ?

    'ರಾಜಕೀಯ'ಕ್ಕೆ ಬರ್ತಾರಂತೆ ಹೌದಾ?

    ಅಯ್ಯೋ..ಇನ್ನೂ ಏನಾಗುತ್ತೆ ಗೊತ್ತಿಲ್ಲ ಆಸಕ್ತಿಯಂತೂ ಇದೆ. ಹಿಂದಿನಿಂದಲೂ ಆಸಕ್ತಿ ಇದೆ. ಅವಕಾಶ ಸಿಕ್ಕರೆ ಖಂಡಿತವಾಗಿಯೂ ಸ್ಪರ್ಧೆ ಮಾಡುವುದು ನಿಜ.

    'ಜೆ.ಡಿ.ಎಸ್' ನಿಂದ ಸ್ಪರ್ಧೆ ಮಾಡ್ತಿರಂತೆ ಹೌದಾ.?

    'ಜೆ.ಡಿ.ಎಸ್' ನಿಂದ ಸ್ಪರ್ಧೆ ಮಾಡ್ತಿರಂತೆ ಹೌದಾ.?

    ನಾನು ಚಿಕ್ಕವರಿಂದಲೂ ಅಪ್ಪ-ಅಣ್ಣ ಇಬ್ಬರು 'ಜೆ ಡಿ ಎಸ್' ನಲ್ಲೇ ಕೆಲಸ ಮಾಡಿದವರು. ಹಾಗಾಗಿ ಆ ಪಕ್ಷದ ಮೇಲೆ ಅಕ್ಕರೆ ಮತ್ತು ಅವರು ಮಾಡಿರೋ ಕೆಲಸಗಳು ನೆನಪಿದೆ. ಪಾವಗಡ ನಮ್ಮ ಸ್ವಂತ ಊರು ಅಲ್ಲಿಗೆ ಇಲ್ಲಿ ತನಕ ಹೆಚ್ಚಾಗಿ ಬಂದಿರೋದು ದೇವೇಗೌಡರು ಹಾಗೂ ಕುಮಾರಣ್ಣ. ಹಾಗಾಗಿ ಅದೇ ಪಕ್ಷ ಇಷ್ಟವಾಗುತ್ತೆ.

    ಕುಟುಂಬದ ಬೆಂಬಲ ಹೇಗಿದೆ ?

    ಕುಟುಂಬದ ಬೆಂಬಲ ಹೇಗಿದೆ ?

    ಮನೆಯಲ್ಲಿ ಅಣ್ಣ-ಅಪ್ಪ ಇಬ್ಬರು ಕೆಲಸ ಮಾಡಿದ ಪಕ್ಷ, ಹಾಗಾಗಿ ತೊಂದರೆ ಇಲ್ಲ. ಪತ್ನಿ ಜೊತೆ ಇನ್ನೂ ಮಾತನಾಡಬೇಕು ಅವಳು ಒಪ್ಪಿಗೆ ಸೂಚಿಸಿದ್ರೆ ನನಗೆ ಅರ್ಧ ಬೆಂಬಲ ಸಿಗುತ್ತೆ. ಎಲ್ಲರೂ ಖುಷಿ ಪಡ್ತಾರೆ.

    ಕಲಾವಿದನಾಗಿ ಪ್ರಖ್ಯಾತಿ ಹೊಂದಿದ್ದೀರಾ, ರಾಜಕೀಯ ವ್ಯಕ್ತಿಯಾಗಿ ಜನ ಸ್ವೀಕರಿಸುತ್ತಾರಾ?

    ಕಲಾವಿದನಾಗಿ ಪ್ರಖ್ಯಾತಿ ಹೊಂದಿದ್ದೀರಾ, ರಾಜಕೀಯ ವ್ಯಕ್ತಿಯಾಗಿ ಜನ ಸ್ವೀಕರಿಸುತ್ತಾರಾ?

    ಇದು ಅವರದ್ದೇ ಆಸೆ. ನಾನು ಯೋಚನೆ ಮಾಡಿರಲಿಲ್ಲ. ಅವರೇ ನೀವು ಈ ಬಾರಿ ಸ್ಪರ್ಧೆ ಮಾಡಿ ಅಂತ ಹೇಳಿದ್ದು. ಅವರಿಗೆ ಬೇಕಾದ ಕೆಲಸ ಮಾಡಿದ್ರೆ ಖಂಡಿತ ಅವರಿಗೆ ಖುಷಿ ಆಗುತ್ತೆ.

    ರಾಜಕಾರಿಣಿ ಆದರೆ ನಿಮ್ಮ ಮೊದಲ ಆದ್ಯತೆ ಯಾವುದಕ್ಕೆ?

    ರಾಜಕಾರಿಣಿ ಆದರೆ ನಿಮ್ಮ ಮೊದಲ ಆದ್ಯತೆ ಯಾವುದಕ್ಕೆ?

    ಖಂಡಿತವಾಗಿಯೂ ರೈತರಿಗೆ. ರೈತರು ಪಡುತ್ತಿರೋ ಕಷ್ಟದ ಹೊರೆಯನ್ನ ಸ್ವಲ್ಪನಾದರೂ ಕಡಿಮೆ ಮಾಡೋ ಕೆಲಸ ಮಾಡುತ್ತೇನೆ. ವರ್ಷಗಟ್ಟಲೆ ತಿಂಗಳುಗಟ್ಟಲೆ ಕಷ್ಟ ಪಟ್ಟು ಬೆಳೆಯೋ ಬೆಳೆಗೆ ಸರಿಯಾದ ಬೆಲೆ ಸಿಗಬೇಕು. ಅದಕ್ಕಾಗಿ ರೈತರ ಪರವಾದ ಪಕ್ಷವನ್ನ ಆಯ್ಕೆ ಮಾಡಿಕೊಂಡಿದ್ದೇನೆ.

    ಸಿನಿಮಾರಂಗ-ರಾಜಕೀಯ ಎರಡನ್ನೂ ಹೇಗೆ ನಿಭಾಯಿಸುತ್ತಿರಾ?

    ಸಿನಿಮಾರಂಗ-ರಾಜಕೀಯ ಎರಡನ್ನೂ ಹೇಗೆ ನಿಭಾಯಿಸುತ್ತಿರಾ?

    ಸಿನಿಮಾ ಮಾಡಿಕೊಂಡೆ ಸಮಯ ಸಿಕ್ಕಾಗಲೆಲ್ಲಾ ಹಳ್ಳಿಗೆ ಹೋಗಿ ಸಮಯ ಕಳೆಯುತ್ತೇನೆ. ಅಲ್ಲಿಯ ಜನರನ್ನ ಸ್ನೇಹಿತರನ್ನ ಮಾತನಾಡಿಸಿ ಬರುತ್ತೇನೆ. ನಾವು ಇನ್ನು ವ್ಯವಸಾಯವನ್ನ ಮಾಡುತ್ತಾ ಇದ್ದೇವೆ. ಹಾಗಾಗಿ ಯಾವುದು ತೊಂದರೆ ಆಗುವುದಿಲ್ಲ.

    ರಾಜಕಾರಣಿ ಆಗುವುದು ನಿಜನಾ?

    ರಾಜಕಾರಣಿ ಆಗುವುದು ನಿಜನಾ?

    ಜನರಿಗೆ ಪ್ರೀತಿ ಇದೆ ನನಗೆ ಆಸಕ್ತಿ ಇದೆ. ದೇವೇಗೌಡರು ಹಾಗೂ ಕುಮಾರಣ್ಣ ಅವ್ರ ನಿರ್ಧಾರಕ್ಕೆ ನಾನು ಬದ್ದವಾಗಿರುತ್ತೇನೆ. ನೋಡೋಣ ಏನು ಆಗುತ್ತೆ ಅಂತ.

    'ಜೆ ಡಿ ಎಸ್' ನಿಂದ ರಂಗಾಯಣ ರಘು ಅವ್ರನ್ನ ಸ್ಪರ್ಧಿಸುವಂತೆ ಅಲ್ಲಿನ ಜನರು ಮನವಿ ಮಾಡಿದ್ದಾರೆ. ಮೂಲತಃ ತುಮಕೂರಿನ ಪವಗಡ ತಾಲೂಕಿನವರಾಗಿರುವ ರಂಗಾಯಣ ರಘು ತಮ್ಮ ಕ್ಷೇತ್ರದಿಂದ ಸ್ಪರ್ಧಿಸೋದಕ್ಕೆ ಆಸಕ್ತಿ ವಹಿಸಿದ್ದಾರೆ. ಈಗಾಗಲೇ ತಮ್ಮ ಸಹೋದರ ಜೆ ಡಿ ಎಸ್ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದು ಜನರು ಆಸೆ ಪಟ್ಟರೆ ಕಂಡಿತವಾಗಿಯೂ ಸ್ಪರ್ಧಿಸುವಿದಾಗಿ ತಿಳಿಸಿದ್ದಾರೆ.

    English summary
    An exclusive interview with Rangayana Raghu. ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ನಟ ರಂಗಾಯಣ ರಘು ಸಿದ್ದತೆ ನಡೆಸಿದ್ದಾರೆ.
    Sunday, November 26, 2017, 14:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X