Exclusive: "ಕೊಂಚ ಗ್ಯಾಪ್ ತಗೊಂಡ್ರೆ ಎಲ್ಲಾ ಮರೆತೇಬಿಟ್ರು.. ಕನ್ನಡ ಕೂಡ ಮರೆತು ಹೋದಂತಾಗಿದೆ": ಆವಂತಿಕಾ ಶೆಟ್ಟಿ

'ರಂಗತರಂಗ' ಸೇರಿದಂತೆ ಮೂರ್ನಾಲ್ಕು ಚಿತ್ರಗಳಲ್ಲಿ ಮಿಂಚಿದ ನಟಿ ಆವಂತಿಕಾ ಶೆಟ್ಟಿ ದಿಢೀರ್ ಸೈಲೆಂಟ್ ಆಗಿಬಿಟ್ಟಿದ್ದರು. 'ರಾಜರಥ' ನಂತರ ಮತ್ಯಾವುದೇ ಚಿತ್ರದಲ್ಲಿ ಕರಾವಳಿ ಚೆಲುವೆ ನಟಿಸಲಿಲ್ಲ. ಯಾಕೆ ನಟಿಸುತ್ತಿಲ್ಲ ಎಂದು ಕೇಳಿದವರಿಗೆಲ್ಲಾ ಉತ್ತರ ಕೊಟ್ಟು ಸುಸ್ತಾಗಿರುವ ನಟಿ ಈಗ ಅವಕಾಶ ಕೊಡಿ ಎಂದು ಬಹಿರಂಗವಾಗಿ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಒಂದಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಆವಂತಿಕಾ ಶೆಟ್ಟಿ ಅವರನ್ನು ಆಡಿಷನ್ ಮಾಡಿ ಅನೂಪ್ ಭಂಡಾರಿ ತಮ್ಮ 'ರಂಗತರಂಗ' ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಮೊದಲ ಸಿನಿಮಾ ನಂತರ ಒಂದಷ್ಟು ದಿನ ಫಾರಿನ್‌ನಲ್ಲಿದ್ದ ಆವಂತಿಕಾ 'ಕಲ್ಪನಾ -2' ಚಿತ್ರದಲ್ಲಿ ನಟಿಸಿದರು. ಅದು ಬಿಡುಗಡೆ ಆಗುಚ ಹೊತ್ತಿಗೆ 'ರಾಜು ಕನ್ನಡ ಮೀಡಿಯಂ' ಸಿನಿಮಾ ಅವಕಾಶ ಸಿಕ್ಕಿತ್ತು. ಈ ಚಿತ್ರತಂಡದ ಜೊತೆ ಆವಂತಿಕಾ ಕಿರಿಕ್ ಮಾಡಿಕೊಂಡಿದ್ದಾಗಿಯೂ ವರದಿ ಆಗಿತ್ತು. ನಂತರ ಕೊನೆಯದಾಗಿ ಮತ್ತೆ ಅನೂಪ್ ಭಂಡಾರಿ ನಿರ್ದೇಶನದ 'ರಾಜರಥ' ಚಿತ್ರದಲ್ಲಿ ನಟಿಸಿದ್ದರು.

Avanatika Shetty request KFI Filmmakers

ಕಳೆದ 5 ವರ್ಷಗಳಿಂದ ಆವಂತಿಕಾ ಶೆಟ್ಟಿ ಯಾವುದೇ ಸಿನಿಮಾದಲ್ಲೂ ನಟಿಸಿಲ್ಲ. ಗ್ಲಾಮರ್, ಅಭಿನಯ ಎರಡಕ್ಕೂ ಸೈ ಎಂದಿದ್ದ ನಟಿಗೆ ಯಾಕೆ ಅವಕಾಶ ಸಿಗಲಿಲ್ಲ? ಖುದ್ದು ಆವಂತಿಕಾ ಇಂಡಸ್ಟ್ರಿಯಿಂದ ದೂರಾದ್ರಾ? ಎನ್ನುವ ಪ್ರಶ್ನೆಗಳು ಕೆಲವರನ್ನು ಕಾಡುತ್ತಿತ್ತು. ಅದಕ್ಕೆಲ್ಲಾ ಈಗ ಕರವಳಿ ಚೆಲುವೆ ಉತ್ತರ ಕೊಟ್ಟಿದ್ದಾರೆ. ನಾನು ನಟಿಸೋಕೆ ಸಿದ್ಧ ಅವಕಾಶ ಕೊಡಿ ಎಂದು ಕೇಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆವಂತಿಕಾ ಪೋಸ್ಟ್ ಸಖತ್ ವೈರಲ್ ಆಗಿದೆ.

"ಮಾರ್ಚ್ 2015 ರಲ್ಲಿ 'ರಂಗಿತರಂಗ' ಸಿನಿಮಾ ಆಡಿಯೋ ಲಾಂಚ್ ಆಗಿತ್ತು.
ಇದೇ ದಿನ 5 ವರ್ಷಗಳ ಹಿಂದೆ ನನ್ನ 'ರಾಜರಥ' ಸಿನಿಮಾ ಬಿಡುಗಡೆ ಆಗಿತ್ತು.
2018 ರಲ್ಲಿ ಬಿಡುಗಡೆಯಾಯಿತು. 5 ವರ್ಷಗಳ ಹಿಂದ ಕೆಲಸ ಮಾಡಿದ ಇಂಡಸ್ಟ್ರಿ ಜೊತೆ ಕನೆಕ್ಟ್ ಆಗಲು ಇದಕ್ಕಿಂತ ಒಳ್ಳೆ ಸಮಯ ಬೇರೊಂದಿಲ್ಲ ಎನಿಸುತ್ತಿದೆ. ವೈಯಕ್ತಿ ಲಾಸ್‌ನಿಂದ 5 ವರ್ಷ ನಾನು ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಕನ್ನಡ ಫಿಲ್ಮ್ ಮೇಕರ್ಸ್‌ ಬಳಿ ಕೇಳುವುದು ಏನಂದರೆ ನಾನು ನಿಮ್ಮ ಸಿನಿಮಾಗಳಲ್ಲಿ ಕೆಲಸ ಮಾಡಲು ಇಷ್ಟ ಪಡುತ್ತೀನಿ. ಆದಷ್ಟು ಬೇಗ ಮತ್ತೆ ನಿಮ್ಮ ಮುಂದೆ ಬರುವ ನಿರೀಕ್ಷೆ ಇದೆ." ಈ ಬಗ್ಗೆ ಆಕೆ ಫಿಲ್ಮಿಬೀಟ್ ಜೊತೆಗೂ ಮಾತನಾಡಿದ್ದಾರೆ.

1. 'ರಾಜರಥ' ನಂತರ ಅವಕಾಶ ಸಿಗಲಿಲ್ಲವೇ?

'ರಾಜು ಕನ್ನಡ ಮೀಡಿಯಂ', 'ರಾಜರಥ' ಸಿನಿಮಾಗಳಿಗೆ ಬ್ಯಾಕ್ ಟು ಬ್ಯಾಕ್ ಕೆಲಸ ಮಾಡಿದೆ. ಮನೆಯಲ್ಲಿ ಇರಲು ಸಮಯ ಸಿಗಲಿಲ್ಲ. ಹಾಗಾಗಿ ಬೇಕು ಅಂತಲೇ ಸ್ವಲ್ಪ ಬ್ರೇಕ್ ತಗೊಂಡೆ. ಆ ನಂತರ ನಮ್ಮ ಮನೆಯಲ್ಲಿ ಒಂದಷ್ಟು ಸಮಸ್ಯೆಗಳಾಯಿತು. ಅದನ್ನು ವಿವರಿಸೋದು ಕಷ್ಟ. ಹಾಗಾಗಿ ನಮ್ಮ ಮನೆಯವರಿಗೆ, ಸ್ನೇಹಿತರಿಗೆ ಸ್ವಲ್ಪ ಸಮಯ ಕೊಡಬೇಕಾಯಿತು. ಸ್ವಲ್ಪ ಆಧ್ಯಾತ್ಮದತ್ತ ಹೊರಳಿದ್ದೆ. ಅದಾದ ಮೇಲೆ ಕೋವಿಡ್ ಬಂತು. ನಮ್ಮ ಫ್ಯಾಮಿಲಿ ಬಾಂಬೆಯಲ್ಲಿದೆ. ಹಾಗಾಗಿ ಅಲ್ಲೇ ಇದ್ದೆ. ಕೋವಿಡ್ ನಂತರ ಇಂಡಸ್ಟ್ರಿ ಸ್ತಬ್ಧ ಆಗಿತ್ತು. ನಾನು ಸೋಶಿಯಲ್ ಮೀಡಿಯಾದಲ್ಲೂ ಅಷ್ಟಾಗಿ ಆಕ್ಟೀವ್ ಇಲ್ಲ.

2. ಅಭಿಮಾನಿಗಳು ಆವಂತಿಕಾ ಶೆಟ್ಟಿನ ಮಿಸ್ ಮಾಡಿಕೊಳ್ತಿದ್ದಾರೆ..

ಆಧ್ಯಾತ್ಮದತ್ತ ಹೆಚ್ಚು ಒಲವು ಇದ್ದಿದ್ದರಿಂದ ಸೋಶಿಯಲ್ ಮೀಡಿಯಾ ಬಳಸುವುದು ಕಮ್ಮಿ ಆಗಿತ್ತು. ಆ ಸಮಯದಲ್ಲಿ ಬಂದ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. ಗಮನವೆಲ್ಲಾ ಆಧ್ಯಾತ್ಮದತ್ತ ಇತ್ತು. ನೋಡಿ ಕನ್ನಡ ಕೂಡ ಸರಿಯಾಗಿ ಮಾತನಾಡಲು ಆಗುತ್ತಿಲ್ಲ. ಕನ್ನಡ ಮಾತನಾಡಲು ಜೊತೆ ಯಾರು ಇಲ್ಲ. ಬಹಳ ಜನ ಕೇಳುತ್ತಲೇ ಇದ್ದರು. ಏನು ಕನ್ನಡ ಇಂಡಸ್ಟ್ರಿ ಬಿಟ್ಟುಬಿಟ್ರಾ? ಯಾಕೆ ಸಿನಿಮಾಗಳಲ್ಲಿ ನಟಿಸ್ತಿಲ್ಲ ಎನ್ನುತ್ತಿದ್ದರು. ಅದಕ್ಕೆ ಕ್ಲಾರಿಟಿ ಕೊಡಬೇಕಿತ್ತು. ಕನ್ನಡ ಇಂಡಸ್ಟ್ರಿ ಬಿಟ್ಟಿಲ್ಲ. ಮರೆತ್ತಿಲ್ಲ. ನನಗೆ ಅವಕಾಶ ಕೊಟ್ಟ ಇಂಡಸ್ಟ್ರಿ. ಅದಕ್ಕಾಗಿ ಈ ಪೋಸ್ಟ್ ಮಾಡ್ದೆ.

3. ನಟಿಸಿದ ಸಿನಿಮಾಗಳ ಅನುಭವ ಹೇಗಿತ್ತು?

ನಾನು ಮಾಡಿದ್ದು ಎಲ್ಲಾ ಒಳ್ಳೆ ಸಿನಿಮಾಗಳು. ಬಹಳ ಚೂಸಿ ಆಗಿದ್ದೆ. ಸಿಕ್ಕ ಸಿಕ್ಕ ಅವಕಾಶ ಒಪ್ಪಿಕೊಳ್ಳಲಿಲ್ಲ. ನಟನೆಗೆ ಅವಕಾಶ ಇರುವ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೆ. ಒಟ್ಟೊಟ್ಟಿಗೆ ಎರಡು ಸಿನಿಮಾ ಒಪ್ಪುಕೊಳ್ಳುತ್ತಿರಲಿಲ್ಲ. ಒಂದು ಸಿನಿಮಾ ಮುಗಿದ ಮೇಲೆ ಮತ್ತೊಂದು ಸಿನಿಮಾ. ನಟನೆ ವಿಚಾರದಲ್ಲಿ ಕಾಂಪ್ರಮೈಸ್ ಆಗಲಿಲ್ಲ. ಸಾಕಷ್ಟು ಸಮಯ ತೆಗೆದುಕೊಂಡು ನನ್ನ ಸಂಪೂರ್ಣ ಶ್ರಮ ಹಾಕುತ್ತಿದ್ದೆ. ಕೋವಿಡ್ ಬಂತು, ಎಲ್ಲರೂ ಮರೆತುಬಿಟ್ಟರು. ನಾನು ಬೆಂಗಳೂರಿನಲ್ಲಿ ಇರಲ್ಲ. ಚಿತ್ರರಂಗದವಳಾಗಿ ಅಲ್ಲಿ ಇರಬೇಕು. ಅದು ಸಾಧ್ಯವಾಗುತ್ತಿಲ್ಲ. ಅದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡೆ.

Avanatika Shetty

4. ಈ 5 ವರ್ಷಗಳಲ್ಲಿ ಏನು ಮಾಡ್ತಿದ್ರಿ?

ಆಧ್ಯಾತ್ಮಿಕ ಹಾಗೂ ಮಾನಸಿಕ ಶಾಂತಿಗೆ ಸಂಬಂಧಪಟ್ಟ ಪವಿತ್ರ ಕೆಲಸಗಳನ್ನು ಮಾಡಿಕೊಂಡು ಇದ್ದೆ. ಮನೆಯಲ್ಲೇ ಪುಟ್ಟ ಗುಡಿ ಇದೆ. ಸದ್ಗುರು ಮಾರ್ಗದರ್ಶನದಲ್ಲಿ ಹೆಚ್ಚು ಆಧ್ಯಾತ್ಮದ, ಯೋಗದ ಒಲವು ಹೆಚ್ಚಾಯಿತು. ಕೋವಿಡ್ ಸಮಯದಲ್ಲಿ ಸಾಕಷ್ಟು ಪ್ರಾಣಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೆ. ಬಹಳ ಹೆಚ್ಚು ಸಮಯ ವ್ಯಯಿಸುತ್ತಿದ್ದೆ. ನಟಿ ಐಂದ್ರಿತಾ ರೇ ಎಲ್ಲರೂ ಇದನ್ನು ಜಾಸ್ತಿ ಮಾಡುತ್ತಿದ್ದಾರೆ. ಸಾಕಷ್ಟು ಪ್ರಾಣಿಗಳನ್ನು ರಕ್ಷಿಸಿ, ಇವತ್ತಿಗೂ ಅವುಗಳಿಗೆ ಆಹಾರ ಉಣಿಸುವ ಕೆಲಸ ನಡೀತಿದೆ. ಒಂದಷ್ಟು ಜಾಹಿರಾತುಗಳಲ್ಲೂ ನಟಿಸಿದೆ.

5. ನಿಮ್ಮ ಪೋಸ್ಟ್ ನೋಡಿ ಇಂಡಸ್ಟ್ರಿಯಿಂದ ಕರೆ ಬಂದಿತ್ತಾ?

ಅನೂಪ್ ಭಂಡಾರಿ ಕರೆ ಮಾಡಿದ್ದರು. ಅವರ ಫ್ಯಾಮಿಲಿ ಜೊತೆ ಬಹಳ ಉತ್ತಮ ಒಡನಾಟ ಇದೆ. ಅವರು ಸಾಕಷ್ಟು ಸಲಹೆ ಕೊಡುತ್ತಾರೆ. ಸಾಕಷ್ಟು ಜನ ಮೆಸೇಜ್‌ಗಳನ್ನು ಮಾಡುತ್ತಿದ್ದಾರೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿ ಮಾತನಾಡುತ್ತಿದ್ದಾರೆ.

6. ಎಂತಹ ಪಾತ್ರಗಳ ನಿರೀಕ್ಷೆಯಲ್ಲಿದ್ದಾರಾ?

ಯಾವುದೇ ಒಳ್ಳೆಯ ಪಾತ್ರ ಆದರೂ ಸರಿ. ಚಾಲೆಂಜಿಂಗ್ ರೋಲ್ ಮಾಡಲು ಸಿದ್ಧ. ಒಳ್ಳೆ ಕಂಬ್ಯಾಕ್ ಸಿಕ್ಕರೆ ಸಾಕು. ಇಂತದ್ದೇ ಪಾತ್ರ ಬೇಕು ಅಂತ ಏನಿಲ್ಲ. ನಾನು ಇಂಡಸ್ಟ್ರಿ ಬಿಟ್ಟಿಲ್ಲ. ಯಾವತ್ತು ಬಿಡಲ್ಲ. ಅದರ ಬಗ್ಗೆ ಕ್ಲಾರಿಟಿ ಕೊಡಲು ಪೋಸ್ಟ್ ಮಾಡಿದ್ದೆ. ಕೆಲ ಕಥೆಗಳನ್ನು ಕೇಳಿದ್ದೆ. ಆದರೆ ಅದು ವರ್ಕೌಟ್ ಆಗಿಲ್ಲ. ಒಳ್ಳೆ ಅವಕಾಶ ಸಿಕ್ಕರೆ ನಟಿಸಲು ಸಿದ್ಧ ಎಂದು ಹೇಳಲು ಇಷ್ಟಪಡುತ್ತೇನೆ.

More from Filmibeat

English summary
Rangitaranaga Actress Avanatika Shetty request KFI Filmmakers to give chance in upcoming projects. Here's a chit-chat with the actress. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X