ಸಂದರ್ಶನ: ಡ್ಯಾನ್ಸರ್ ಆಗಿಯೇ ಇರಬೇಕಾಗಿದ್ದವರು ನಟಿಯಾದಾಗ

By ಸುನೀತಾ ಗೌಡ

'ರಂಗಿತರಂಗ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಪರಿಚಯಗೊಂಡ ನಟಿ ರಾಧಿಕಾ ಚೇತನ್ ಅವರು ಸಿನಿಮಾ ಕ್ಷೇತ್ರಕ್ಕೆ ಬಂದಿದ್ದೇ ಒಂದು ವಿಶೇಷ. ಯಾವುದೋ ಒಂದು ಕಾರ್ಪೋರೇಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ರಾಧಿಕಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಆಕಸ್ಮಿಕ.

ಥಿಯೇಟರ್ ಆರ್ಟಿಸ್ಟ್ ಆಗಿದ್ದ ರಾಧಿಕಾ ಚೇತನ್ ಅವರು ಹಲವಾರು ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದರು. ಜೊತೆಗೆ ಕಥಕ್ ಕಲಿತಿದ್ದ ಅವರು ಸಿನಿಮಾಗೆ ಬರುತ್ತೇನೆ ಅಂತಲೂ ಅಂದುಕೊಂಡಿರಲಿಲ್ಲವಂತೆ.

ನಾಟಕ, ಕಥಕ್ ಜೊತೆ-ಜೊತೆಗೆ ಒಂದು ಕಾರ್ಪೋರೇಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಾ, ಹಾಗೆ ಇರಬೇಕು ಅಂದುಕೊಂಡಿದ್ದ ರಾಧಿಕಾ ಅವರಿಗೆ, ಸ್ಟಾರ್ ಪಟ್ಟ ತಂದುಕೊಟ್ಟಿದ್ದು, ನವ ನಿರ್ದೇಶಕ ಅನುಪ್ ಭಂಡಾರಿ ಅವರು.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]

ಕಿರುಚಿತ್ರವೊಂದರಲ್ಲಿ ರಾಧಿಕಾ ಅವರ ಅಧ್ಬುತ ನಟನೆ ನೋಡಿ ಮೆಚ್ಚಿಕೊಂಡಿದ್ದ ಅನುಪ್ ಅವರು ನೇರವಾಗಿ ತಮ್ಮ ಚೊಚ್ಚಲ ಸಿನಿಮಾದಲ್ಲಿ ನಟಿಸಲು ಕೇಳಿಕೊಂಡರು, ಅಂತ ಖುಷಿಯಿಂದ ಹೇಳುತ್ತಾರೆ ರಾಧಿಕಾ ಚೇತನ್ ಅವರು.

ಮೊದಲ ಚಿತ್ರದಲ್ಲಿಯೇ ಯಾವ ಸ್ಟಾರ್ ನಟಿಗೂ ಕಮ್ಮಿ ಇಲ್ಲದಂತೆ ನಟಿಸಿ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ರಾಧಿಕಾ ಚೇತನ್ ಅವರು, ಇತ್ತೀಚೆಗೆ ಬೆಂಗಳೂರಿನ ಫೈವ್‌ ಸ್ಟಾರ್ ಹೋಟೆಲ್ ಒಂದಕ್ಕೆ 'ಚೆಫ್ ಪೋಸ್ಟ್' ಲಾಂಚ್ ಗೆ ಆಗಮಿಸಿದ್ದರು. ಆ ಕಾರ್ಯಕ್ರಮದಲ್ಲಿ ರ್ಯಾಂಪ್ ವಾಕ್ ಮಾಡಿದ ನಂತರ, ನಿಮ್ಮ ಫಿಲ್ಮಿಬೀಟ್ ಕನ್ನಡದ ಜೊತೆ ಮಾತಿಗೆ ಸಿಕ್ಕಾಗ, ಕೆಲವು ಅಪರೂಪದ ಸಂಗತಿಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಸಂಪೂರ್ಣ ಸಂದರ್ಶನಕ್ಕಾಗಿ ಮುಂದೆ ಓದಿ...

- 'ರಂಗಿತರಂಗ' ಚಿತ್ರಕ್ಕೆ ಆಯ್ಕೆ ಆದ ಸನ್ನಿವೇಶ ಹೇಳಿ

- 'ರಂಗಿತರಂಗ' ಚಿತ್ರಕ್ಕೆ ಆಯ್ಕೆ ಆದ ಸನ್ನಿವೇಶ ಹೇಳಿ

ನಾನೊಂದು ಕಾರ್ಪೋರೇಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದೆ. ಆದರೆ ನನಗೆ ಒಂದು ಕಲಾತ್ಮಕತೆಯ ಬದುಕು ಬೇಕು ಅಂತ ಅನ್ಕೊಂಡು ಕಂಪೆನಿ ಕೆಲಸ ಬಿಟ್ಟು, ಪೂರ್ತಿಯಾಗಿ ನಾಟಕ ಮತ್ತು ಕಥಕ್ ಡ್ಯಾನ್ಸ್ ನಲ್ಲಿ ನನ್ನನ್ನು ನಾನು ತೊಡಗಿಸಿಕೊಂಡೆ. ಹೀಗೆ ಒಂದ್ಸಾರಿ ನಮ್ಮ ನಾಟಕ ತಂಡ ಕಿರುಚಿತ್ರ ಒಂದನ್ನು ಬಿಡುಗಡೆ ಮಾಡಿದ್ರು. ಅದ್ರಲ್ಲಿ ನಾನೂ ನಟಿಸಿದ್ದೆ, ಅದನ್ನು ನೋಡಿ ಅನುಪ್ ಭಂಡಾರಿ ಅವರು ನನಗೆ ಕಾಲ್ ಮಾಡಿದ್ರು. 'ರಂಗಿತರಂಗ' ಅಂತ ಸಿನಿಮಾ ಮಾಡ್ತಾ ಇದ್ದೀನಿ ಆಡಿಷನ್ ಮಾಡ್ತೀಯಾ ಅಂದ್ರು.[ಸಿಬಿಐ ಆಫೀಸರ್ ಆದ 'ರಂಗಿ' ಬೆಡಗಿ ರಾಧಿಕಾ ಚೇತನ್]

ಸ್ಕೈಪ್ ನಲ್ಲಿ ಆಡಿಷನ್

ಸ್ಕೈಪ್ ನಲ್ಲಿ ಆಡಿಷನ್

ಅವರು ಕೇಳಿದ ತಕ್ಷಣ ಒಪ್ಕೊಂಡೆ, ಆಡಿಷನ್ ಕೂಡ ಸ್ಕೈಪ್ ನಲ್ಲಿ ಆಯ್ತು. ಅವರು ಯುಎಸ್ಎನಲ್ಲಿ ಇದ್ದಿದ್ದರಿಂದ ಸ್ಕೈಪ್ ನಲ್ಲಿ ಆಡಿಷನ್ ಮಾಡಿದ್ರು. ಆವಾಗ್ಲೆ ಅವರು ನನ್ನ ಪಾತ್ರದ ಬಗ್ಗೆ ಹೇಳಿದ್ರು. ಗರ್ಭಿಣಿ ಪಾತ್ರ ಮಾಡಬೇಕು, ಯಾವ ತರ ಬಟ್ಟೆ ಹಾಕಿಕೊಳ್ಳಬೇಕು. ನಾನೂ ಕೂಡ ಅವರು ಹೇಳಿದಂತೆ ಎಲ್ಲಾ ತಯಾರಿ ಮಾಡ್ಕೊಂಡೆ, ಆಡಿಷನ್ ನಲ್ಲಿ ಸೆಲೆಕ್ಟ್ ಆದೆ. ಸೋ ಹಾಗೆ ನನ್ನ ಸಿನಿಮಾ ಜರ್ನಿ ಶುರು ಆಯ್ತು.['ರಂಗಿ' ಆಯ್ತು ಇದೀಗ 'ಯೂ-ಟರ್ನ್' ತೆಗೆದುಕೊಂಡ ರಾಧಿಕಾ ಚೇತನ್.!]

'ಯು-ಟರ್ನ್' ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಹೇಗೆ.?

'ಯು-ಟರ್ನ್' ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಹೇಗೆ.?

ನನ್ನ ಅಭಿನಯದ 'ರಂಗಿತರಂಗ' ಸಿನಿಮಾ ನೋಡಿದ್ದ ಪವನ್ ಕುಮಾರ್ ಅವರು, ಅನುಪ್ ಅವರ ಜೊತೆ ನನ್ನ ಫೋನ್ ನಂ ಕೇಳಿ, ನನ್ನನ್ನು ಕಾಂಟಾಕ್ಟ್ ಮಾಡಿದ್ರು. ನನ್ನ ಸಿನಿಮಾದಲ್ಲಿ ಒಂದು ಸ್ಪೆಷಲ್ ಪಾತ್ರ ಇದೆ ಮಾಡ್ತೀರಾ ಅಂತ. ನನಗೆ ಪವನ್ ಕುಮಾರ್ ಅವರ ಜೊತೆ ಕೆಲಸ ಮಾಡಬೇಕು ಅಂತ ತುಂಬಾ ದಿನಗಳಿಂದ ಆಸೆ ಇತ್ತು. ಅದೂ ನೆರವೇರಿದೆ. ಮತ್ತೆ ಸ್ಕ್ರಿಪ್ಟ್ ನಲ್ಲಿ ಇದ್ದಿದ್ದಕ್ಕಿಂತ ತುಂಬಾ ಅದ್ಭುತವಾಗಿ ನನ್ನ ಪಾತ್ರ ಮೂಡಿಬಂದಿದೆ. ನನಗೆ ನನ್ನ ಪಾತ್ರದ ಬಗ್ಗೆ ತುಂಬಾ ತೃಪ್ತಿ ಇದೆ.[ರಾಧಿಕಾ ಚೇತನ್ ಅವರ 'ನೆವರ್ ಎಂಡ್' ಟ್ರೈಲರ್ ನೋಡಿದ್ರಾ?]

'ಯು-ಟರ್ನ್' ತೆಲುಗಿನಲ್ಲಿ ಬಂದ್ರೆ, ನಿಮ್ಮ ಪಾತ್ರಕ್ಕೆ, ನಿಮಗೆ ಅವಕಾಶ ಸಿಕ್ಕರೆ ತೆಲುಗಿಗೆ ಹೋಗೋ ಪ್ಲ್ಯಾನ್ ಇದ್ಯಾ.?

'ಯು-ಟರ್ನ್' ತೆಲುಗಿನಲ್ಲಿ ಬಂದ್ರೆ, ನಿಮ್ಮ ಪಾತ್ರಕ್ಕೆ, ನಿಮಗೆ ಅವಕಾಶ ಸಿಕ್ಕರೆ ತೆಲುಗಿಗೆ ಹೋಗೋ ಪ್ಲ್ಯಾನ್ ಇದ್ಯಾ.?

'ಹಾ.. ಅದೇ ಪಾತ್ರ ಮತ್ತೆ ಮಾಡ್ತೀನೋ ಇಲ್ವೋ ಗೊತ್ತಿಲ್ಲ, ಆದ್ರೆ ತೆಲುಗಿಗೆ ಹೋಗೋ ಅವಕಾಶ ಸಿಕ್ಕರೆ ಖಂಡಿತ ಹೋಗುತ್ತೇನೆ.

ನಿಮ್ಮ ಅಭಿನಯದ 'ನೆವರ್ ಎಂಡ್' ಕಿರುಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ.?

ನಿಮ್ಮ ಅಭಿನಯದ 'ನೆವರ್ ಎಂಡ್' ಕಿರುಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ.?

ಚಿತ್ರಕ್ಕೆ ಎಲ್ಲಾ ಕಡೆಯಿಂದ ತುಂಬಾ ಚೆನ್ನಾಗಿ ರೆಸ್ಪಾನ್ಸ್ ಬಂದಿದೆ. 'ನೆವರ್ ಎಂಡ್' ಟೀಮ್ ತುಂಬಾನೇ ಚೆನ್ನಾಗಿತ್ತು. ಅವರು ಕಿರುಚಿತ್ರ ಮಾಡುತ್ತಿದ್ದಾರೆ ಅಂತ ಅನಿಸ್ತಾನೆ ಇರ್ಲಿಲ್ಲ. ಯಾಕೆಂದ್ರೆ ಫಾರ್ಮೆಟ್ ಮಾತ್ರ ಕಿರುಚಿತ್ರ ತರ ಇತ್ತು. ಯಾಕೆಂದರೆ ಅದಕ್ಕೆ ನಾವು ಹಾಕಿದ್ದ ಎಫರ್ಟ್ ಪ್ರೊಫೆಶನಲ್ ಆಗಿ ಇತ್ತು. ಅದ್ರಲ್ಲಿದ್ದ ಕಲಾವಿದರು, ತಂತ್ರಜ್ಞರು ಎಲ್ಲರೂ ಕನ್ನಡ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿ ಅನುಭವ ಇದ್ದವರೇ ಆಗಿದ್ದರು. ಹಾಗಾಗಿ ನನಗೆ ಎಲ್ಲೋ ಚಿಕ್ಕ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದೇನೆ ಅಂತ ಅನಿಸಿರಲಿಲ್ಲ. ಮತ್ತೆ ನನ್ನ ಪಾತ್ರ ಕೂಡ ತುಂಬಾ ವಿಭಿನ್ನ, ನಾನು ಸಿಬಿಐ ಪಾತ್ರ ಮಾಡಿದ್ದೇನೆ. ಇನ್ನೇನು ಸದ್ಯದಲ್ಲೇ ಅದು ಫೀಚರ್ ಫಿಲ್ಮ್ ಆಗಿ ಮೂಡಿ ಬರಲಿದೆ. ಅದಕ್ಕೆ ಬೇಕಾದ ಎಲ್ಲಾ ಕೆಲಸಗಳು ಆಗುತ್ತಿದೆ.

ಮುಂದಿನ ಪ್ರಾಜೆಕ್ಟ್ ಯಾವುದು.?

ಮುಂದಿನ ಪ್ರಾಜೆಕ್ಟ್ ಯಾವುದು.?

ಸದ್ಯಕ್ಕೆ 'ಬಿಬಿ5' ಅಂತ ಒಂದು ಸಿನಿಮಾ ಬರ್ತಾ ಇದೆ. ಅದು ಇನ್ನೂ ಕೆಲವು ಸಮಯ ತೆಗೆದುಕೊಳ್ಳುತ್ತದೆ. ಇನ್ನೂ ಕೆಲವು ಮಾತುಕತೆಯ ಹಂತದಲ್ಲಿದೆ. ಯಾವುದನ್ನು ಒಪ್ಪಿಕೊಳ್ಳೋದು, ಬಿಡೋದು ಅನ್ನೋ ಕನ್ ಫ್ಯೂಶನ್ ನಲ್ಲಿ ಇದ್ದೇನೆ.

ಸಂದರ್ಶನ: ಸುನೀತಾ ಗೌಡ

More from Filmibeat

English summary
'RangiTaranga' fame Kannada Actress Radhika Chetan spoke to Filmibeat. Actress Radhika Chetan Shared her experience about first movie 'Rangitaranga' audition. And reveals her Upcoming project. Check out the Interview hear.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X