ಆಶಿಕಾ ಮುಂದಿನ ಚಿತ್ರ 'ರೇಮೊ' ಆಶಿಕಿ 2 ರಿಮೇಕಾ? ಪವನ್ ಒಡೆಯರ್ ಹೇಳಿದ್ದಿಷ್ಟು

ಯಶ್ ಹಾಗೂ ಪುನೀತ್ ರಾಜ್‌ಕುಮಾರ್ ರೀತಿಯ ಕನ್ನಡದ ಬಿಗ್ಗೆಸ್ಟ್ ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳಿ ಗೆದ್ದಿರುವ ನಿರ್ದೇಶಕ ಪವನ್ ಒಡೆಯರ್ ಅನೇಕ ಯುವ ನಟರಿಗೂ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹೀಗೆ ಸ್ಟಾರ್ ನಟರ ಚಿತ್ರಗಳು ಹಾಗೂ ಯುವ ನಟರ ಚಿತ್ರಗಳನ್ನು ನಿರ್ದೇಶಿಸುವಲ್ಲಿ ಸಮತೋಲನ ಕಾಯ್ದುಕೊಂಡಿರುವ ಪವನ್ ಒಡೆಯರ್ ಇದೀಗ ರೇಮೊ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ.

ರೇಮೊ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು ಟ್ರೈಲರ್ ಕೂಡ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಈ ಹಿಂದೆ ರೋಗ್ ಎಂಬ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಇಶಾನ್ ರೇಮೊ ಚಿತ್ರಕ್ಕೆ ನಾಯಕನಾಗಿದ್ದು ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ. ಚಿತ್ರಕ್ಕೆ ಸಿ ಮನೋಹರ್ ಬಂಡವಾಳ ಹೂಡಿದ್ದು, ಇದೇ ನವೆಂಬರ್ 25ಕ್ಕೆ ರೇಮೊ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.

ಇನ್ನು ಬಿಡುಗಡೆ ದಿನ ಹತ್ತಿರ ಬರುತ್ತಿದ್ದಂತೆ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಚಿತ್ರತಂಡ ತೊಡಗಿಕೊಂಡಿದ್ದು ಸಂದರ್ಶನಗಳಲ್ಲಿ ತಂಡದ ಸದಸ್ಯರು ಭಾಗವಹಿಸಿ ಚಿತ್ರದ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ನಮ್ಮ ಕನ್ನಡ ಫಿಲ್ಮಿಬೀಟ್ ನಡೆಸಿದ ಸಂದರ್ಶನದಲ್ಲಿಯೂ ರೇಮೊ ಚಿತ್ರದ ನಟ ಇಶಾನ್, ನಟಿ ಆಶಿಕಾ ರಂಗನಾಥ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಭಾಗವಹಿಸಿ ಚಿತ್ರದ ಕುರಿತಾಗಿ ಮಾತನಾಡಿದ್ದಾರೆ.

ರೇಮೊ ಆಶಿಕಿ 2 ರಿಮೇಕಾ?

ರೇಮೊ ಆಶಿಕಿ 2 ರಿಮೇಕಾ?

ಇನ್ನು ರೇಮೊ ಚಿತ್ರದಲ್ಲಿ ನಟ ಹಾಗೂ ನಟಿ ಇಬ್ಬರೂ ಸಹ ಸಿಂಗರ್ಸ್ ಆಗಿ ಕಾಣಿಸಿಕೊಂಡಿದ್ದು ಟ್ರೈಲರ್‌ನ ಕೆಲ ದೃಶ್ಯಗಳಿಗೂ ಹಾಗೂ ಹಿಂದಿಯ ಹಿಟ್ ಚಿತ್ರ ಆಶಿಕಿ 2 ಚಿತ್ರದ ದೃಶ್ಯಗಳಿಗೂ ಸಾಕಷ್ಟು ಸಾಮ್ಯತೆ ಇವೆ ಎಂದು ಸಾಕಷ್ಟು ನೆಟ್ಟಿಗರು ಊಹಿಸಿದ್ದರು. ಈ ಕುರಿತಾಗಿ ಮಾತನಾಡಿದ ನಿರ್ದೇಶಕ ಪವನ್ ಒಡೆಯರ್ ರೇಮೊ ಆಶಿಕಿ 2 ಚಿತ್ರದ ರಿಮೇಕ್ ಎನ್ನುವವರನ್ನು ಬೇಗನೇ ಜಡ್ಜ್ ಮಾಡುವ ಜನರು ಎಂದರು. ಅಷ್ಟೇ ಅಲ್ಲದೇ ಊಹೆ ಮಾಡುವುದು ಸರಿ ಆದರೆ ಇದು ರಿಮೇಕ್ ಎಂದು ನಿರ್ಧರಿಸುವುದು ತಪ್ಪು ಎಂದೂ ಸಹ ಪವನ್ ಒಡೆಯರ್ ಹೇಳಿದರು ಮತ್ತು ರೇಮೊ ಯಾವ ಚಿತ್ರದ ರಿಮೇಕ್ ಅಲ್ಲ ಎಂಬುದನ್ನು ಪವನ್ ಒಡೆಯರ್ ಸ್ಪಷ್ಟಪಡಿಸಿದರು.

ರಿಮೇಕ್ ಮಾಡದ ನಿರ್ದೇಶಕ ಪವನ್ ಒಡೆಯರ್

ರಿಮೇಕ್ ಮಾಡದ ನಿರ್ದೇಶಕ ಪವನ್ ಒಡೆಯರ್

ನಿರ್ದೇಶಕ ಪವನ್ ಒಡೆಯರ್ ಚಿತ್ರಗಳ ವಿಷಯಕ್ಕೆ ಬಂದರೆ ಅವರ ನಿರ್ದೇಶನದಲ್ಲಿ ಇಲ್ಲಿಯವರೆಗೂ ಮೂಡಿ ಬಂದಿರುವ ಎಲ್ಲಾ ಚಿತ್ರಗಳೂ ಸಹ ಸ್ವಮೇಕ್ ಚಿತ್ರಗಳೇ. ತಮ್ಮ ನಿರ್ದೇಶನದ ಮೊದಲ ಚಿತ್ರ ಗೋವಿಂದಾಯ ನಮಃ ತೆಲುಗಿಗೆ ಪೋಟುಗಾಡು ಎಂದು ರಿಮೇಕ್ ಆಗಿತ್ತು ಹಾಗೂ ಅಲ್ಲಿ ಈ ಚಿತ್ರವನ್ನು ಸ್ವತಃ ಪವನ್ ಒಡೆಯರ್ ನಿರ್ದೇಶಿಸಿದ್ದರು. ಇದನ್ನು ಬಿಟ್ಟರೆ ಪವನ್ ಒಡೆಯರ್ ಪರ ನಿರ್ದೇಶಕರು ಬರೆದಿರುವ ಕತೆಗೆ ಈವರೆಗೂ ಆಕ್ಷನ್ ಕಟ್ ಹೇಳಿದ ಉದಾಹರಣೆಗಳೇ ಇಲ್ಲ.

ರೇಮೊ ಟ್ರೈಲರ್‌ನಲ್ಲಿ ಗೂಗ್ಲಿಯ ಲವ್ ಸ್ಪಿನ್

ರೇಮೊ ಟ್ರೈಲರ್‌ನಲ್ಲಿ ಗೂಗ್ಲಿಯ ಲವ್ ಸ್ಪಿನ್

ರೇಮೊ ಚಿತ್ರದ ಟ್ರೈಲರ್‌ನಲ್ಲಿ ನಟ ಹಾಗೂ ನಟಿಯ ನಡುವೆ ಅಹಂನ ಜಿದ್ದಾಜಿದ್ದಿ ಎಂಬುದನ್ನು ಸ್ಪಷ್ಟವಾಗಿ ತಿಳಿಯಬಹುದಾಗಿದೆ. ಈ ಹಿಂದೆ ಪವನ್ ಒಡೆಯರ್ ನಿರ್ದೇಶಿಸಿದ್ದ ಯಶ್ ಹಾಗೂ ಕೃತಿ ಕರಬಂಧ ಅಭಿನಯದ ಗೂಗ್ಲಿ ಚಿತ್ರದಲ್ಲಿಯೂ ಇದೇ ರೀತಿಯ ಅಂಶವಿತ್ತು. ಸದ್ಯ ರೇಮೊ ಟ್ರೈಲರ್‌ನಲ್ಲೂ ಅದೇ ರೀತಿಯ ಕೆಲ ದೃಶ್ಯಗಳಿದ್ದು, ಮತ್ತೊಮ್ಮೆ ಪವನ್ ಒಡೆಯರ್ ಲವ್ ಸ್ಪಿನ್ ಎಸೆದು ವೀಕ್ಷಕರನ್ನು ಕ್ಲೀನ್ ಬೌಲ್ಡ್ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Raymo is not remake of Ashiqui 2 and it's a straight subject says Pawan Wadeyar. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X