ಕಿರುತೆರೆಯ 'ಸೇವಂತಿ' ಈಗ ಭಕ್ತರ ಪಾಲಿನ 'ತಾಯಿ ರೇಣುಕೆ';'ರೇಣುಕಾ ಯಲ್ಲಮ್ಮ' ನಟಿ ಪ್ರತಿಭಾ ಸಂದರ್ಶನ
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ಯಾವುದೇ ಬಣ್ಣದ ಲೋಕದ ಹಿನ್ನೆಲೆ ಇಲ್ಲದಿದ್ದರೂ ಕೇವಲ ಪ್ರತಿಭೆಯ ಮೂಲಕ ಕನ್ನಡಿಗರ ಮನೆಮಾತಾದವರು ನಟಿ ಪ್ರತಿಭಾ ಗೌಡ. 'ಸೇವಂತಿ' ಧಾರಾವಾಹಿಯ ಮೂಲಕ ಮನೆಮಗಳಾಗಿ ಗುರುತಿಸಿಕೊಂಡ ಇವರು, ಈಗ ಸ್ಟಾರ್ ಸುವರ್ಣದ ಜನಪ್ರಿಯ ಪೌರಾಣಿಕ ಸರಣಿ 'ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ' ದಲ್ಲಿ ದೈವಿಕ ಕಳೆ ಹೊಂದಿರುವ 'ರೇಣುಕೆ'ಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ವೈಯಕ್ತಿಕ ಜೀವನದಲ್ಲಿ ಕೇವಲ ಐದು ತಿಂಗಳ ಮಗುವಿನ ತಾಯಿಯಾಗಿದ್ದರೂ, ವೃತ್ತಿಜೀವನದ ಕಡೆಗಿನ ಬದ್ಧತೆಯಿಂದ ಐದು ಮಕ್ಕಳ ತಾಯಿಯ ಅತೀ ದೊಡ್ಡ ಜವಾಬ್ದಾರಿಯುತ ಪಾತ್ರವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ನೆಗೆಟಿವ್ ರೋಲ್ಗಳಿಂದ ಹಿಡಿದು ಈಗಿನ ಶಾಂತರೂಪಿ ದೈವಿಕ ಅವತಾರದವರೆಗೆ ಇವರ ಅಭಿನಯದ ಪಯಣ ನಿಜಕ್ಕೂ ಕುತೂಹಲಕಾರಿ. ಅವರ ಈ ವಿಶೇಷ ಸಂದರ್ಶನದ ಪೂರ್ಣ ವಿವರಗಳನ್ನು ಇಲ್ಲಿ ಓದಿ.

ನಿಮ್ಮ ಮೂಲ ಊರು ಯಾವುದು? ರಂಗಭೂಮಿಯಿಂದ ಕಿರುತೆರೆ ಜರ್ನಿ ಬಗ್ಗೆ ಸ್ವಲ್ಪ ಹೇಳ್ತೀರಾ?
ಪ್ರತಿಭಾ ಗೌಡ: ನಾನು ಬಾರ್ನ್ ಅಂಡ್ ಬ್ರಾಟ್ ಅಪ್ ಎಲ್ಲಾ ಬೆಂಗಳೂರೇ. ನಾನು ಯಾವುದೇ ಥಿಯೇಟರ್ ಬ್ಯಾಕ್ಗ್ರೌಂಡ್ನಿಂದ ಬಂದವಳಲ್ಲ. ನಮ್ಮ ಫ್ಯಾಮಿಲಿಯಲ್ಲೂ ಯಾರೂ ಈ ಫೀಲ್ಡ್ನಲ್ಲಿ ಇಲ್ಲ, ನಾನೇ ಫಸ್ಟ್ ಬಂದಿರೋದು. ಕಾಲೇಜಿನಲ್ಲಿದ್ದಾಗ ಆಡಿಷನ್ ಕಾಲ್ಸ್ ಬರ್ತಿತ್ತು, ಹಾಗೆ ಆಡಿಷನ್ ಕೊಟ್ಟು ಈ ಆಕ್ಟಿಂಗ್ ಫೀಲ್ಡ್ಗೆ ಬಂದೆ.
'ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ' ಸೀರಿಯಲ್ ಬಗ್ಗೆ ಹೇಳಿ
ಪ್ರತಿಭಾ ಗೌಡ: ಆಫರ್ ಬಂದಾಗ ತುಂಬಾ ಖುಷಿಯಾಯ್ತು. ಆದ್ರೆ ಆ ಟೈಮ್ನಲ್ಲಿ ನನ್ನ ಮಗುವಿಗೆ ಜಸ್ಟ್ 4 ಮಂತ್ಸ್ ಆಗಿತ್ತು. ಹಾಗಾಗಿ ಮಾಡಬೇಕಾ ಬೇಡವಾ ಅನ್ನೋ ಕನ್ಫ್ಯೂಷನ್ ಇತ್ತು. ಇದಕ್ಕೂ ಮುಂಚೆ ಬೇರೆ ಲ್ಯಾಂಗ್ವೇಜ್ನಿಂದ ಆಫರ್ ಬಂದಾಗ ಮಗು ಚಿಕ್ಕದಿದೆ ಅಂತ ರಿಜೆಕ್ಟ್ ಮಾಡಿದ್ದೆ. ಆದ್ರೆ ಇದು ದೇವಿಯ ಕ್ಯಾರೆಕ್ಟರ್ ಆಗಿರೋದ್ರಿಂದ ನಮ್ಮಮ್ಮ ಮತ್ತೆ ಫ್ಯಾಮಿಲಿಯವರು ಸಪೋರ್ಟ್ ಮಾಡಿದ್ರು, ಹಾಗಾಗಿ ಒಪ್ಪಿಕೊಂಡೆ. ಆಕ್ಚುಲಿ ನಾನು ಎಲ್ಲಮ್ಮನ ಕ್ಯಾರೆಕ್ಟರ್ ಮಾಡ್ತೀನಿ ಅಂತ ಕೇಳಿದ್ದೆ, ಆದ್ರೆ ನನಗೆ ರೇಣುಕೆ ಪಾತ್ರ ಸಿಕ್ತು.

ಸೀರಿಯಲ್‌ನ ಬದಲಾವಣೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಿದ್ದಾರೆ?
ಪ್ರತಿಭಾ ಗೌಡ: ನಾನು ಶೂಟಿಂಗ್ನಲ್ಲಿ ತುಂಬಾ ಬ್ಯುಸಿ ಇರೋದ್ರಿಂದ ಹೊರಗಡೆ ಜನರನ್ನ ಅಷ್ಟಾಗಿ ಮೀಟ್ ಮಾಡೋಕೆ ಆಗಿಲ್ಲ. ಆದ್ರೆ ನನ್ನ ಫ್ಯಾಮಿಲಿ ಮೆಂಬರ್ಸ್ ಮತ್ತೆ ಫ್ರೆಂಡ್ಸ್ ಹತ್ತಿರ ಕೇಳಿದಾಗ ತುಂಬಾ ಒಳ್ಳೆ ರೆಸ್ಪಾನ್ಸ್ ಬರ್ತಿದೆ ಅಂತ ಹೇಳಿದ್ರು. ನಾನು ಮಾಡ್ತಿರೋ ತಾಯಿ ಪಾತ್ರ ಮತ್ತೆ ನಾವು ಮಾತಾಡೋ ಭಾಷೆಯನ್ನ ಜನ ತುಂಬಾ ಇಷ್ಟಪಡ್ತಿದ್ದಾರೆ ಅಂತ ಗೊತ್ತಾಯ್ತು.
ಈ ಧಾರಾವಾಹಿಯಲ್ಲಿ ನೀವು ಐದು ಮಕ್ಕಳ ತಾಯಿಯ ಪಾತ್ರ ಮಾಡುತ್ತಿದ್ದೀರಿ, ಆ ಅನುಭವ ಹೇಗಿದೆ?
ಪ್ರತಿಭಾ ಗೌಡ: ನನ್ನ ರಿಯಲ್ ಲೈಫ್ನಲ್ಲಿ ಮಗುವಿಗೆ ಈಗಷ್ಟೇ 5 ತಿಂಗಳು. ಆದ್ರೆ ಸೀರಿಯಲ್ನಲ್ಲಿ ನನಗೆ ಐದು ಜನ ಮಕ್ಕಳು. ವಿಶೇಷ ಅಂದ್ರೆ ನನಗಿಂತ ದೊಡ್ಡ ವಯಸ್ಸಿನವರು ಕೂಡ ಸೆಟ್ನಲ್ಲಿ ನನ್ನನ್ನ 'ಮಮ್ಮಿ' ಅಥವಾ 'ಅಮ್ಮ' ಅಂತ ಕರೀತಾರೆ. ಅಶ್ವತ್ ಸರ್ ತರಹದ ಸೀನಿಯರ್ ಆರ್ಟಿಸ್ಟ್ ಜೊತೆ ಕೆಲಸ ಮಾಡೋದು ನನಗೊಂದು ದೊಡ್ಡ ಲರ್ನಿಂಗ್ ಎಕ್ಸ್ಪೀರಿಯೆನ್ಸ್. ಅವರು 25-30 ವರ್ಷದಿಂದ ಈ ಫೀಲ್ಡ್ನಲ್ಲಿದ್ದಾರೆ, ಅವರಿಂದ ತುಂಬಾ ಕಲಿಯುತ್ತಿದ್ದೇನೆ.
ನಿಜ ಜೀವನದಲ್ಲೂ ನಿಮಗೆ ಈಗಷ್ಟೇ ಮಗು ಕೂಡ ಆಗಿದೆ; ತಾಯ್ತನದ ಈ ಖುಷಿ ಶೂಟಿಂಗ್ ಸೆಟ್ನಲ್ಲಿ ಹೇಗೆ ಸಹಾಯ ಮಾಡುತ್ತಿದೆ?
ಪ್ರತಿಭಾ ಗೌಡ: ಖಂಡಿತಾ ಸಹಾಯ ಮಾಡ್ತಿದೆ. ಮನೆಯಲ್ಲಿ ನನ್ನ ಮಗುವನ್ನ ಬಿಟ್ಟು ಬಂದಿರೋ ಆ ಎಮೋಷನ್ಸ್ ಅನ್ನ ಈ ಕ್ಯಾರೆಕ್ಟರ್ಗೆ ಯೂಸ್ ಮಾಡ್ಕೊಳ್ತೀನಿ. ಮಗನನ್ನ ಎಜುಕೇಶನ್ ಗೆ ಅಥವಾ ಬೇರೆ ಕಡೆ ಕಳಿಸಿಕೊಡುವಾಗ ಒಬ್ಬ ತಾಯಿಗೆ ಆಗೋ ನೋವು ಹೇಗಿರುತ್ತೆ ಅಂತ ಇಮ್ಯಾಜಿನ್ ಮಾಡ್ಕೊಂಡು ಆಕ್ಟ್ ಮಾಡ್ತೀನಿ. ಸೆಟ್ನಲ್ಲಿ ಇರೋ ಮಕ್ಕಳು ಬಂದು 'ಅಮ್ಮ' ಅಂತ ಕರೆದಾಗ ಆ ಕನೆಕ್ಷನ್ ಬೇಗ ಆಗುತ್ತೆ.
ಪರಶುರಾಮನು ತಾಯಿಯ ಶಿರಚ್ಛೇದ ಮಾಡುವ ಆ ತೀವ್ರವಾದ ಸನ್ನಿವೇಶದ ಚಿತ್ರೀಕರಣ ಹೇಗಿತ್ತು?
ಪ್ರತಿಭಾ ಗೌಡ: ಆ ಸೀನ್ ಶೂಟ್ ಮಾಡುವಾಗ ತುಂಬಾನೇ ಎಮೋಷನಲ್ ಆಗಿತ್ತು. ಒಬ್ಬ ಮಗ ತಾಯಿಯನ್ನ ಕೊಲ್ಲೋದು ಅಂದ್ರೆ ಅದು ಸಾಮಾನ್ಯ ವಿಷಯ ಅಲ್ಲ. ಆ ಟೈಮ್ನಲ್ಲಿ ಸೆಟ್ನಲ್ಲಿ ಎಲ್ಲರೂ ತುಂಬಾ ಸೈಲೆಂಟ್ ಆಗಿದ್ರು. ಆ ಎಮೋಷನ್ ಕ್ಯಾರಿ ಮಾಡೋದು ಚಾಲೆಂಜಿಂಗ್ ಆಗಿತ್ತು, ಆದ್ರೆ ತುಂಬಾ ಚೆನ್ನಾಗಿ ಬಂತು.
ಗ್ರಾಂಥಿಕ ಭಾಷೆ ಮತ್ತು ಸಂಭಾಷಣೆಗಳನ್ನು ಕಲಿಯಲು ನಿಮ್ಮ ಶ್ರಮ ಎಂತಹದ್ದು?
ಪ್ರತಿಭಾ ಗೌಡ: ಮೊದ ಮೊದಲು ಸ್ವಲ್ಪ ಕಷ್ಟ ಆಯ್ತು ಯಾಕಂದ್ರೆ ನಾರ್ಮಲ್ ಭಾಷೆಗೂ ಈ ಗ್ರಾಂಥಿಕ ಭಾಷೆಗೂ ತುಂಬಾ ವ್ಯತ್ಯಾಸ ಇದೆ. ಡೈಲಾಗ್ಸ್ ಎಲ್ಲ ತುಂಬಾನೇ ಲೆಂತೀ ಇರುತ್ತೆ. ಆದ್ರೆ ಈಗ ಸ್ವಲ್ಪ ರೂಢಿ ಆಗಿದೆ. ಶೂಟಿಂಗ್ ಇಲ್ಲದ ಟೈಮ್ನಲ್ಲಿ ಡೈಲಾಗ್ಸ್ ಪ್ರಾಕ್ಟೀಸ್ ಮಾಡ್ತೀನಿ, ಡೈರೆಕ್ಟರ್ ಮತ್ತೆ ಟೀಮ್ ಅವರು ಕೂಡ ತುಂಬಾ ಹೆಲ್ಪ್ ಮಾಡ್ತಾರೆ.
ನೆಗೆಟಿವ್ ರೋಲ್ ಮಾಡಿದ ಅನುಭವಕ್ಕೂ, ಈಗಿನ ದೈವಿಕ ಪಾತ್ರಕ್ಕೂ ಇರುವ ವ್ಯತ್ಯಾಸವೇನು?
ಪ್ರತಿಭಾ ಗೌಡ: ತುಂಬಾ ದೊಡ್ಡ ಡಿಫರೆನ್ಸ್ ಇದೆ. ನೆಗೆಟಿವ್ ರೋಲ್ ಮಾಡಿದಾಗ ಜನ ಬೈಕೊಳ್ತಾರೆ, ಆದ್ರೆ ಈ ಪಾತ್ರ ಮಾಡಿದ ಮೇಲೆ ಜನ ಕಾಲು ಬಿದ್ದು ಆಶೀರ್ವಾದ ತಗೊಳ್ತಾರೆ. ಆ ರೆಸ್ಪೆಕ್ಟ್ ಸಿಗುವಾಗ ತುಂಬಾ ಖುಷಿ ಆಗುತ್ತೆ. ನೆಗೆಟಿವ್ ರೋಲ್ನಲ್ಲಿ ಆಂಗರ್ ಇರುತ್ತೆ, ಆದ್ರೆ ಈ ದೇವಿಯ ರೋಲ್ನಲ್ಲಿ ಒಂದು ರೀತಿ ಶಾಂತಿ ಮತ್ತೆ ಪವಿತ್ರತೆ ಇರುತ್ತೆ.
ಜಮದಗ್ನಿ ಮತ್ತು ಪರಶುರಾಮ ಪಾತ್ರಧಾರಿಗಳ ಜೊತೆಗಿನ ನಿಮ್ಮ ಆಫ್-ಸ್ಕ್ರೀನ್ ಬಾಂಡಿಂಗ್ ಹೇಗಿದೆ?
ಪ್ರತಿಭಾ ಗೌಡ: ನಮ್ಮ ಬಾಂಡಿಂಗ್ ತುಂಬಾ ಚೆನ್ನಾಗಿದೆ. ಆಫ್-ಸ್ಕ್ರೀನ್ ನಾವೆಲ್ಲಾ ಫ್ರೆಂಡ್ಸ್ ತರಾನೇ ಇರ್ತೀವಿ. ಶೂಟಿಂಗ್ ಗ್ಯಾಪ್ನಲ್ಲಿ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡ್ತೀವಿ, ಹರಟೆ ಹೊಡೀತೀವಿ. ಆ ಕಂಫರ್ಟ್ ಜೋನ್ ಇರೋದ್ರಿಂದಾನೇ ಆನ್-ಸ್ಕ್ರೀನ್ ಕೆಮಿಸ್ಟ್ರಿ ಕೂಡ ಚೆನ್ನಾಗಿ ಬರೋದಕ್ಕೆ ಸಾಧ್ಯ ಆಗ್ತಿದೆ.
ನಿಮ್ಮನ್ನು ಬೆಂಬಲಿಸುತ್ತಿರುವ ಅಭಿಮಾನಿಗಳಿಗೆ ಏನು ಹೇಳ್ತೀರಾ?
ಪ್ರತಿಭಾ ಗೌಡ: ಎಲ್ಲರಿಗೂ ತುಂಬಾನೇ ಥ್ಯಾಂಕ್ಸ್ ಹೇಳ್ತೀನಿ. ನನ್ನ ಮೊದಲ ಸೀರಿಯಲ್ ಸೇವಂತಿಯಿಂದ ಇಲ್ಲಿಯವರೆಗೂ ನೀವು ತೋರಿಸಿರೋ ಪ್ರೀತಿ, ಸಪೋರ್ಟ್ ಗೆ ನಾನು ಯಾವತ್ತೂ ಚಿರಋಣಿ. ನಿಮ್ಮ ಈ ಸಪೋರ್ಟ್ ಹೀಗೆ ಇರಲಿ, ನಾನು ಇನ್ನೂ ಒಳ್ಳೊಳ್ಳೆ ಪಾತ್ರಗಳನ್ನ ಮಾಡಿ ನಿಮ್ಮನ್ನ ಎಂಟರ್ಟೈನ್ ಮಾಡ್ತೀನಿ.


Click it and Unblock the Notifications











