Interview: ಮಾತೃ ಭಾಷೆಯಲ್ಲಿ ದರ್ಶನ್ ಜೊತೆ ನಟಿಸುವುದು ಬಂಪರ್ ಖುಷಿ

ಫಿಲ್ಮಿಬೀಟ್: ಹಾಯ್, ಹ್ಯಾಪಿ ಬರ್ತಡೇ ಆಶಾ ಭಟ್...

ಆಶಾ ಭಟ್: ಥ್ಯಾಂಕ್ ಯೂ ಸೋ ಮಚ್ ಭರತ್....

ಫಿಲ್ಮಿಬೀಟ್: ಬರ್ತಡೇ ಸೆಲೆಬ್ರೇಷನ್ ಎಲ್ಲ ಮುಗಿತಾ?

ಆಶಾ ಭಟ್: ಅಯ್ಯೋ...ಎಲ್ಲ ನಿನ್ನೆನೇ ಆಯ್ತು, ಈಗ ಮನೆಗೆ ಹೋಗ್ತಿದ್ದೀನಿ, ಟಾಫ್ರಿಕ್ ನಲ್ಲಿದ್ದೀನಿ....ಎಂದು ಮಾತು ಮುಂದುವರಿಸಿದರು.

ಸೆಪ್ಟೆಂಬರ್ 5, ಭದ್ರಾವತಿ ಹುಡುಗಿ ಆಶಾ ಭಟ್ ಅವರ ಹುಟ್ಟುಹಬ್ಬ. ಮುಂಬೈನಲ್ಲಿ ನೆಲೆಸಿರುವ ಆಶಾ ಅವರಿಗೆ ಫೋನ್ ಮಾಡಿ ಬರ್ತಡೇ ವಿಶ್ ಮಾಡಿದೆ. ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಬರ್ತಿದ್ದಾರೆ ಅಲ್ವಾ ಹಾಗೆ, ಸಿನಿಮಾ ಬಗ್ಗೆ ಏನಾದರೂ ಹೇಳ್ತಾರಾ ಅಂತ ಕೇಳಿದೆ. ತುಂಬಾ ಎಕ್ಸೈಟ್ ಆಗಿದ್ದ ಅವರು ಚಿತ್ರದ ಬಗ್ಗೆ ಸ್ವಲ್ಪ ಮಾತಾಡಿದ್ರು.

ಕನ್ನಡ ಸಿನಿಮಾ ಮಾಡ್ತಿರುವುದಕ್ಕೆ ಆಶಾ ಭಟ್ ಅವರಂತೂ ಸಿಕ್ಕಾಪಟ್ಟೆ ಖುಷಿ ಆಗಿದ್ದರು. ''ಕನ್ನಡ ಸಿನಿಮಾ ಮಾಡೋಕೆ ಕಾಯ್ತಿದ್ದೆ, ಒಂದೊಳ್ಳೆ ಅವಕಾಶ ಸಿಕ್ತು, ನಿರ್ದೇಶಕರು ಕಥೆ ವಿವರಿಸಿದರು. ದರ್ಶನ್ ಸರ್ ಹೀರೋ, ಒಳ್ಳೆಯ ಟೀಂ, ಫಟ್ ಅಂತ ಒಪ್ಕೊಂಡುಬಿಟ್ಟೆ'' ಎಂದರು. ಮಾತು ಮುಂದುವರಿಸಿದ 2014 ಮಿಸ್ ಸುಪ್ರನ್ಯಾಷನಲ್ ಚೆಲುವೆ ರಾಬರ್ಟ್ ಬಗ್ಗೆ ಮತ್ತಷ್ಟು ಮಾತನಾಡಿದ್ರು. ಮುಂದೆ ಓದಿ....

ಸಂದರ್ಶಕ: ಭರತ್ ಚಕ್ರವರ್ತಿ

ರಾಬರ್ಟ್ ಅವಕಾಶ ಸಿಕ್ಕಿದ್ದು ಹೇಗೆ?

ರಾಬರ್ಟ್ ಅವಕಾಶ ಸಿಕ್ಕಿದ್ದು ಹೇಗೆ?

''ಜಂಗ್ಲಿ (ಹಿಂದಿ) ಸಿನಿಮಾ ನೋಡಿದ್ದ ತರುಣ್ ಸುಧೀರ್ ಸರ್ ನನಗೆ ಫೋನ್ ಮಾಡಿದ್ರು. ದರ್ಶನ್ ಸರ್ ಹೀರೋ, ರಾಬರ್ಟ್ ಅಂತ ಸಿನಿಮಾ ಮಾಡ್ತಿದ್ದೀವಿ ಅಂತ ಹೇಳಿ ಕಥೆ, ನನ್ನ ಪಾತ್ರದ ಬಗ್ಗೆ ವಿವರಿಸಿದರು. ನನ್ನ ಮಾತೃ ಭಾಷೆಯಲ್ಲಿ ಸಿನಿಮಾ ಮಾಡ್ಬೇಕು ಅಂತ ನಾನು ಕಾಯ್ತಿದ್ದೆ, ಒಳ್ಳೆ ಸಿನಿಮಾ, ಒಳ್ಳೆಯ ಟೀಂ ಫಟ್ ಅಂತ ಜೈ ಎಂದೆ'' ಎಂದು ನಮ್ಮ ಕನ್ನಡದ ಹುಡುಗಿ ಸ್ಟೈಲ್ ನಲ್ಲಿ ಹೇಳಿದ್ರು.

ದರ್ಶನ್ ಅವರ ಜೊತೆ ಸಿನಿಮಾ ಹೇಗಿದೆ ಫೀಲ್?

ದರ್ಶನ್ ಅವರ ಜೊತೆ ಸಿನಿಮಾ ಹೇಗಿದೆ ಫೀಲ್?

''Icing on the Cake ಅಂತಾರೆ ಅಲ್ವಾ ಹಾಗೆ. ಒಳ್ಳೆಯ ನಿರ್ದೇಶಕರು, ಒಳ್ಳೆಯ ಟೀಂ, ಅದಕ್ಕೂ ಮೇಲೆ ದರ್ಶನ್ ಸರ್ ಜೊತೆ ಆಕ್ಟ್ ಮಾಡೋ ಅವಕಾಶ. ತುಂಬಾ ಖುಷಿ ಆಗ್ತಿದೆ. ನನ್ನ ಫ್ಯಾಮಿಲಿ ಕೂಡ ಸಿಕ್ಕಪಟ್ಟೆ ಖುಷಿ ಆಗಿದ್ದಾರೆ. ಅದ್ಯಾವಾಗ ಈ ಸಿನಿಮಾ ರಿಲೀಸ್ ಆಗುತ್ತೆ ಅಂತ ಕಾಯ್ತಿದ್ದಾರೆ. ನನ್ನ ಮೇಲೂ ಜವಾಬ್ದಾರಿ ಹೆಚ್ಚಿದೆ. ದರ್ಶನ್ ಸರ್ ಜೊತೆ ನಟನೆ ಅಂದ್ರೆ ನನ್ನ ಮೇಲೂ ಜನರು ನಿರೀಕ್ಷೆ ಇಟ್ಟಿರ್ತಾರೆ ಅಲ್ವಾ'' ಅಂತ ಸ್ವಚ್ಛ ಕನ್ನಡದಲ್ಲೇ ಸ್ಪಷ್ಟವಾಗಿ ಫಟಾಫಟ್ ಅಂತ ಮಾತಾಡಿದ್ರು.

ನಿಮ್ಮ ಪಾತ್ರದ ಬಗ್ಗೆ ಒಂದಿಷ್ಟು ಹೇಳಿ ನೋಡೋಣ.?

ನಿಮ್ಮ ಪಾತ್ರದ ಬಗ್ಗೆ ಒಂದಿಷ್ಟು ಹೇಳಿ ನೋಡೋಣ.?

ಸಹಜವಾಗಿ ಸಿನಿಮಾ ರಿಲೀಸ್ ಗೂ ಮುಂಚೆ ಪಾತ್ರದ ಬಗ್ಗೆ ಯಾರೂ ಬಿಟ್ಟುಕೊಡಲ್ಲ. ಆದರೂ ಆಶಾ ಭಟ್ ಏನಾದರೂ ಹೇಳಬಹುದಾ ಅಂತ ಕೇಳಿದೆ. ಅದಕ್ಕೆ ಅವರು ನಗು ನಗುತ್ತಲೇ ''ಇಲ್ಲಾ......ಆಗಲ್ಲಾ.... ನೀವು ಸ್ವಲ್ಪ ಕಾಯಿರಿ, ತುಂಬಾ ಇಂಟರೆಸ್ಟಿಂಗ್ ಪಾತ್ರ. ಆದರೆ ಕಾಯ್ಬೇಕು'' ಎಂದಷ್ಟೇ ಹೇಳಿ ನೆಕ್ಸ್ಟ ಅಂದ್ರು.

ಇಷ್ಟು ದಿನ ಯಾಕೆ ಸ್ಯಾಂಡಲ್ ವುಡ್ ಕಡೆ ಕಾಣಿಸಿಕೊಂಡಿಲ್ಲ?

ಇಷ್ಟು ದಿನ ಯಾಕೆ ಸ್ಯಾಂಡಲ್ ವುಡ್ ಕಡೆ ಕಾಣಿಸಿಕೊಂಡಿಲ್ಲ?

''ಮಿಸ್ ಸುಪ್ರನ್ಯಾಷನಲ್ ಆದ್ಮೇಲೆ ಮುಂಬೈಗೆ ಶಿಫ್ಟ್ ಆದೆ. ಈ ಮಧ್ಯೆ ಯಾವುದೂ ಕನ್ನಡ ಸಿನಿಮಾಗಳ ಅವಕಾಶ ಬಂದಿಲ್ಲ. ಬಂದಿದ್ದರೆ ಖಂಡಿತಾ ಮಾಡ್ತಿದ್ದೆ. ಮೊದಲೆರಡು ವರ್ಷ ಹಿಂದಿ ಚಿತ್ರಕ್ಕೆ ಹೋಯ್ತು. ನಾನು ಕಾಯ್ತಿದ್ದೆ, ಅದಕ್ಕೆ ಇದು ಬಂದ ತಕ್ಷಣ ಎಸ್ ಅಂದೆ'' ಅಂದ್ರು.

ಬೇರೆ ಯಾವ ಪ್ರಾಜೆಕ್ಟ್ ಮಾಡ್ತಿದ್ದೀರಾ?

ಬೇರೆ ಯಾವ ಪ್ರಾಜೆಕ್ಟ್ ಮಾಡ್ತಿದ್ದೀರಾ?

''ಸದ್ಯಕ್ಕೆ ರಾಬರ್ಟ್ ಗೆ ಫಿಕ್ಸ್ ಆಗಿದ್ದೀನಿ. ಹಿಂದಿಯಲ್ಲಿ ಒಂದೆರಡು ಮಾತುಕತೆ ಆಗ್ತಿದೆ. ರಾಬರ್ಟ್ ಮುಗಿಯುವರೆಗೂ ಬೇರೆ ಯಾವುದು ಮಾಡಲ್ಲ'' ಎಂದು ಹೇಳಿ ಆ ಕಡೆ ಟ್ಯಾಕ್ಸಿ ಟ್ರೈವರ್ ಗೆ ಸರ್, ಎಸ್.ಪಿ ರಸ್ತೆ ಕಡೆಯಿಂದ ಹೋಗಿ ಎಂದರು. ಆಗಲೇ ಹೇಳಿದ್ದೆ ಅಲ್ವಾ, ಆಶಾ ಭಟ್ ಮನೆಗೆ ಹೋಗ್ತಿದ್ದರು ಅಂತ. ಟ್ಯಾಕ್ಸಿಯಲ್ಲಿ ಹೋಗುವಾಗ ಈ ಮಾತುಕತೆ ಆಯ್ತು.

ಕನ್ನಡದಲ್ಲಿ ಹೆಚ್ಚಿನ ಸಿನಿಮಾ ನಿರೀಕ್ಷೆ ಮಾಡಬಹುದಾ?

ಕನ್ನಡದಲ್ಲಿ ಹೆಚ್ಚಿನ ಸಿನಿಮಾ ನಿರೀಕ್ಷೆ ಮಾಡಬಹುದಾ?

''ಏನ್ ಗೊತ್ತಾ? ಒಬ್ಬ ನಟಿಯಾಗಿ ಭಾಷೆಯ ಗಡಿ ಇರಬಾರದು. ಯಾವುದೇ ಭಾಷೆಯಲ್ಲಿ ಹೇಳಿದ್ರು ಅದು ಸ್ಟೋರಿನೇ. ನನಗೆ ಯಾಕೆ ಈಗ ಹೆಚ್ಚಿನ ಖುಷಿ ಅಂದ್ರೆ ನನ್ನ ಮಾತೃ ಭಾಷೆಯಲ್ಲಿ ಸಿನಿಮಾ ಮಾಡ್ತಿದ್ದೀನಿ ಅಂತ. ಒಳ್ಳೆ ಕಥೆ, ಒಳ್ಳೆಯ ಪಾತ್ರ, ಚಾಲೆಂಜಿಂಗ್ ಸಿನಿಮಾಗಳು ಬಂದ್ರೆ ನಾನು ಬಿಟ್ಟು ಕೊಡಲ್ಲ. ಜನರಿಗೆ ಮನರಂಜನೆ ಕೊಡಬೇಕು ಎನ್ನುವುದಷ್ಟೇ ನನ್ನ ಗುರಿ'' ಎನ್ನುತ್ತಾ ಮಾತು ಮುಗಿಸುತ್ತಿದ್ದಂತೆ 'ಇಲ್ಲಿಗೆ ನನ್ನ ಸಂದರ್ಶನ ಮುಗಿಯುತು' ಎಂದೆ. ಓಕೆ, ಥ್ಯಾಂಕ್ ಯೂ...ಬೆಂಗಳೂರಿಗೆ ಬಂದ ಮೇಲೆ ಭೇಟಿಯಾಗೋಣ ಎಂದರು. ಅಷ್ಟರಲ್ಲೇ ಮತ್ತೊಮ್ಮೆ ಬರ್ತಡೇ ವಿಶ್ ಮಾಡಿ ನಾನು ಫೋನ್ ಇಟ್ಟೆ.

More from Filmibeat

English summary
Asha Bhat is Born in bhadravathi. she won miss supranational title in 2014. she started her film journey through bollywood. now, she came to sandalwood for the first time with Robert movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X