twitter
    For Quick Alerts
    ALLOW NOTIFICATIONS  
    For Daily Alerts

    ಆರ್.ಜಿ.ವಿ ಚಿತ್ರದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗೋಕೂ ರೆಡಿ

    By Suneetha
    |

    ಸ್ಯಾಂಡಲ್ ವುಡ್ ನಲ್ಲಿ ಭಾರಿ ಸುದ್ದಿ ಮಾಡುತ್ತಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಕಿಲ್ಲಿಂಗ್ ವೀರಪ್ಪನ್' ನಲ್ಲಿ ಭಟ್ರ ಶಿಷ್ಯ 'ದ್ಯಾವ್ರೇ' ಖ್ಯಾತಿಯ ಗಡ್ಡಾ ವಿಜಿ ಅವರು ಒಂದು ಸಣ್ಣ ರೋಲ್ ಮಾಡ್ತಾ ಇದ್ದಾರೆ ಅಂತ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನಾವೇ ನಿಮಗೆ ಹೇಳಿದ್ವಿ.

    ರಾಮ್ ಗೋಪಾಲ್ ವರ್ಮಾ ಆಕ್ಷನ್-ಕಟ್ ಹೇಳುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಸಣ್ಣ ರೋಲ್ ಮಾಡುತ್ತಿರುವ ನಿರ್ದೇಶಕ ಗಡ್ಡಾ ವಿಜಿಯವರು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತಿಗೆ ಸಿಕ್ಕಿದ್ದರು.

    'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಶೂಟಿಂಗ್ ಸೆಟ್ ನಲ್ಲಾದ ಅನುಭವದ ಬಗ್ಗೆ ಗಡ್ಡಾ ವಿಜಿ ಹೇಳಿದ್ದು ಹೀಗೆ -

    Role in RGV's 'Killing Veerappan' ; Director Gadda Viji interview

    * ರಾಮ್ ಗೋಪಾಲ್ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಬಗ್ಗೆ...
    ಇಲ್ಲಿ ಒಂಥರಾ ವಿಶೇಷ ಕುತೂಹಲ ಇದೆ. ಯಾಕಂದ್ರೆ ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಕಥೆ. ಈ ರಿಯಲ್ ಕಥೆಯನ್ನು ವರ್ಮಾ ಅವರ ದೃಷ್ಟಿಕೋನದಲ್ಲಿ ಬೇರೆ ಯಾವ ತರಹ ಹೇಳಬಹುದು ಅಂತ. ಅಲ್ಲದೇ ನೈಜತೆಗೆ ತುಂಬಾ ಹತ್ತಿರವಾಗಿ ಚಿತ್ರೀಕರಣ ಮಾಡಿರುವುದರಿಂದ ಚಿತ್ರದ ಬಗ್ಗೆ ತುಂಬಾ ಕುತೂಹಲ ಇದೆ. ತುಂಬಾ ಸ್ವಾಭಾವಿಕವಾಗಿ ಚಿತ್ರೀಕರಣ ಮಾಡುವುದು ಹಾಗೆಯೇ ನಟ-ನಟಿಯರ ಆಯ್ಕೆಯಲ್ಲಿಯೂ ಪರ್ಫೆಕ್ಟ್ ಆಗಿ ಯೋಚನೆ ಮಾಡಿದ್ದಾರೆ. ಪಾತ್ರಕ್ಕೆ ತಕ್ಕಂತೆ ಹೊಂದಾಣಿಕೆಯಾಗುವವರನ್ನೇ ಆಯ್ಕೆ ಮಾಡಿದ್ದಾರೆ. ['ಕಿಲ್ಲಿಂಗ್ ವೀರಪ್ಪನ್'ನಲ್ಲಿ ಭಟ್ರ ಶಿಷ್ಯ 'ದ್ಯಾವ್ರೇ' ಗಡ್ಡಾ ವಿಜಿ]

    Role in RGV's 'Killing Veerappan' ; Director Gadda Viji interview

    * ಚಿತ್ರದಲ್ಲಿ ನಿಮ್ಮ ರೋಲ್ ಏನು?
    - 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಫಾರೆಸ್ಟ್ ಆಫೀಸರ್ ಶ್ರೀನಿವಾಸ್ ಪಾತ್ರ ಮಾಡ್ತಾ ಇದ್ದೀನಿ.

    * ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಪರಿಚಯ ಹೇಗಾಯ್ತು?
    - ವರ್ಮಾ ಸರ್ ಅವರು ಪಾತ್ರಕ್ಕೆ ತಕ್ಕಂತೆ ಕ್ಯಾರೆಕ್ಟರ್ ಹುಡುಕುತ್ತಿರುವಾಗ, ಅಚಾನಕ್ಕಾಗಿ ಗೂಗಲ್ ಸರ್ಚ್ ನಲ್ಲಿ ನನ್ನ ಮುಖ ಕಂಡಿದೆ. ಅಲ್ಲದೇ ಕನ್ನಡ ಸಿನೆಮಾಗೆ ಕನ್ನಡದವರೇ ಹೆಚ್ಚಾಗಿ ಬೇಕಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಪಾತ್ರಕ್ಕೆ ತಕ್ಕ ಮುಖ ಬೇಕಾಗಿತ್ತು. ಫಾರೆಸ್ಟ್ ಆಫೀಸರ್ ಶ್ರೀನಿವಾಸ್ ಮುಖ, ಗಡ್ಡ ಎಲ್ಲಾ ಸೇಮ್ ನನ್ನ ಥರಾನೇ ಇದ್ದಿದ್ದರಿಂದ ನನ್ನನ್ನ ಸೆಲೆಕ್ಟ್ ಮಾಡಿದ್ರು.[ರಾಮ್ ಗೋಪಾಲ್ ವರ್ಮಾ ಬಗ್ಗೆ ಎಂಥಾ ಕಾಮೆಂಟು.!]

    Role in RGV's 'Killing Veerappan' ; Director Gadda Viji interview

    * ನಿಮ್ಮ ನಿರ್ದೇಶನದ 'ದ್ಯಾವ್ರೇ' ಚಿತ್ರದಲ್ಲಿ ನೀವು ನಿರ್ದೇಶಕ ಯೋಗರಾಜ್ ಭಟ್ಟರನ್ನು ನಟನೆಗೆ ಇಳಿಸಿದ್ರಿ. ಈಗ ಆರ್. ಜಿ.ವಿ ಜೊತೆ ನಿಮ್ಮ ಸರದಿ. ನಿಮ್ಮ ಫೀಲಿಂಗ್ ಹೇಗಿದೆ ?
    - ನನಗೆ ಆಕ್ಟಿಂಗ್ ಅನ್ನೋದಕ್ಕಿಂತಲೂ ಆರ್.ಜಿ.ವಿ ಸರ್ ಸಿನೆಮಾದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆದ್ರೂ ಪರವಾಗಿಲ್ಲ. ಆಕ್ಟ್ ಮಾಡಬೇಕು ಅಂತ ಆಸೆ ಇತ್ತು. ಫಸ್ಟ್ ಅವರು ಪಾತ್ರ ಇದೆ ಅಂದಾಗ ಏನು ಎತ್ತ ಅಂತ ಕೇಳದೆ ಮಾಡ್ತಿನಿ ಅಂತ ಹೇಳಿದೆ. ಯಾಕಂದ್ರೆ ಅವರೊಟ್ಟಿಗೆ ಕೆಲ್ಸ ಮಾಡುವ ಒಂದು ಭಾಗ್ಯ ನನಗೆ ಸಿಕ್ಕಿದ್ದು. ನಾನು ತುಂಬಾ ವರ್ಷಗಳಿಂದ ಅವರ ಸಿನೆಮಾಗಳನ್ನೆಲ್ಲಾ ನೋಡ್ಕೊಂಡು ಬರ್ತಾ ಇದ್ದೀನಿ. ಅವರ ಕೆಲಸದ ಬಗ್ಗೆ ತುಂಬಾ ಗೌರವ ಇದೆ. ಅವರ ಶೈಲಿ ಕೂಡ ತುಂಬಾ ಇಷ್ಟ. ಅವರನ್ನು ಮಾತಾಡಿಸಬೇಕು ಅಂತಾನೇ ಇದ್ದೆ, ಆದ್ರೆ ಆಗಿರಲಿಲ್ಲ, ಆದ್ರೆ ಆ ಅವಕಾಶ ಇದೀಗ ಈ ಮೂಲಕ ಸಿಕ್ಕಿರೋದ್ರಿಂದ ತುಂಬಾನೇ ಖುಷಿ ಆಗ್ತಾ ಇದೆ.

    Role in RGV's 'Killing Veerappan' ; Director Gadda Viji interview

    * ನೀವು ಬಣ್ಣ ಹಚ್ಚಿದ ಅನುಭವ....
    - ಸೆಟ್ ನಲ್ಲಿ ಆಕ್ಟಿಂಗ್ ವಿಷಯಕ್ಕೆ ಬಂದ್ರೆ ನನಗೆ ತುಂಬಾ ಕಷ್ಟ ಅಂತೇನು ಅನಿಸಲಿಲ್ಲಾ. ವರ್ಮಾ ಸರ್ ತುಂಬಾ ಕೋಪಿಷ್ಟ ಆಗಿರಬಹುದು ಅಂದುಕೊಂಡಿದ್ದೆ. ಆದ್ರೆ ಅವರು ತುಂಬಾ ಫ್ರೆಂಡ್ಲಿ ಅಂತ ಅವರ ಜೊತೆ ಬೆರೆತಾಗ ಗೊತ್ತಾಯ್ತು. ಚಿತ್ರದ ಕಥೆ ಬಿಟ್ಟು ಹೀಗೆ ಲೋಕಾರೂಢಿಯಾಗಿ ಮಾತಾಡ್ತ ತುಂಬಾ ಚೆನ್ನಾಗಿ ಟ್ರೀಟ್ ಮಾಡ್ತಾ ಇದ್ರು. ಆಕ್ಚ್ಯುಲಿ, ನನಗೆ ಕ್ಯಾಮರಾ ಮುಂದೆ ನಿಲ್ಲೋಕೆ ಸ್ವಲ್ಪ ಅಳುಕಿದೆ. ಆದ್ರೆ ನನ್ನದು ಒಂದು ಪುಟ್ಟ ಪಾತ್ರ ಸೋ ನಾನು ಯಾವುದೇ ಕನ್ ಫ್ಯೂಶನ್ ಇಲ್ಲದೇ ಮಾಡಿದೆ.

    English summary
    Kannada Director Gadda Viji of 'Dyavre' fame has acted in a small role in Ram Gopal Varma directorial 'Killing Veerappan'. Here is an exclusive interview with Gadda Viji on his role and experience in Shiva Rajkumar starrer 'Killing Veerappan'.
    Sunday, July 19, 2015, 15:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X