twitter
    For Quick Alerts
    ALLOW NOTIFICATIONS  
    For Daily Alerts

    Exclusive: 5 ದಿನದಲ್ಲಿ ಸಾಯಿ ಪಲ್ಲವಿಗೆ ಕನ್ನಡ ಹೇಳಿಕೊಟ್ಟ ಶೀತಲ್ ಶೆಟ್ಟಿ: 'ಗಾರ್ಗಿ' ಕಥೆಯೇನು?

    |

    ಸಾಯಿ ಪಲ್ಲವಿ ದಕ್ಷಿಣ ಭಾರತದ ಸಹಜ ಸುಂದರಿ. ತೆಲುಗು, ತಮಿಳು, ಮಲಯಾಳಂ ಎಲ್ಲಾ ಭಾಷೆಯಲ್ಲಿ ನಟಿಸಿರುವ ಸಾಯಿ ಪಲ್ಲವಿ, ಕನ್ನಡದಲ್ಲೊಂದು ಸಿನಿಮಾ ಮಾಡಬಾರದಾ ಅಂತ ಅದೆಷ್ಟೋ ಸಿನಿಪ್ರಿಯರು ಅಂದುಕೊಂಡಿರಬಹುದು. ಅವರ ಆಸೆ ಈಗ ಈಡೇರಿದೆ. ಕನ್ನಡದ ಸಿನಿಮಾದಲ್ಲಿ ನಟಿಸದೇ ಹೋದರೂ, ಅವರು ನಟಿಸಿದ ಸಿನಿಮಾವೊಂದು ಕನ್ನಡಕ್ಕೆ ಡಬ್ ಆಗುತ್ತಿದೆ. ಆ ಸಿನಿಮಾಗೆ ಅವರೇ ಕನ್ನಡದಲ್ಲಿ ಧ್ವನಿ ನೀಡಿರುವುದೇ ವಿಶೇಷ.

    ಸಾಯಿ ಪಲ್ಲವಿ ತಮ್ಮ ಹೊಚ್ಚ ಹೊಸ ಸಿನಿಮಾ 'ಗಾರ್ಗಿ' ಡಬ್ಬಿಂಗ್ ವರ್ಷನ್‌ಗೆ ಕನ್ನಡದಲ್ಲಿ ಧ್ವನಿ ನೀಡಿದ್ದು ಒಂದು ಕಡೆ. ಬೆಂಗಳೂರಿಗೆ ಬಂದು, ಕನ್ನಡದಲ್ಲಿ ಡಬ್ ಮಾಡಿರುವುದು ಮತ್ತೊಂದು ಕಡೆ. ಇವೆರಡೂ ಕನ್ನಡಿಗರಿಗೆ ಸಿಕ್ಕಾ ಪಟ್ಟೆ ಖುಷಿಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದಲ್ಲಿ ಡಬ್ ಮಾಡಲು ಬೆಂಗಳೂರಿನಲ್ಲೇ 5 ದಿನ ಉಳಿದುಕೊಂಡಿದ್ದು, ಶೀತಲ್ ಶೆಟ್ಟಿಯವರ 'ಶೀ ಟೇಲ್ಸ್' ಸ್ಟುಡಿಯೋದಲ್ಲಿ ಸಾಯಿ ಪಲ್ಲವಿ ಕನ್ನಡ ಅವರಣಿಕೆಗೆ ಡಬ್ ಮಾಡಿದ್ದಾರೆ.

    ಕನ್ನಡ ಹಿರಿಯ ನಿರ್ದೇಶಕ ಎಆರ್ ಬಾಬು ಅವರ ಪುತ್ರ ಎಆರ್ ಶಾನ್ 'ಗಾರ್ಗಿ' ತಮಿಳು ಅವತರಣಿಕೆಯನ್ನು ಕನ್ನಡಕ್ಕೆ ಭಾಷಾಂತರ ಮಾಡಿದ್ದು, ಸುಮುಖ್ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಇವರಿಬ್ಬರೂ ಶೀತಲ್ ಶೆಟ್ಟಿ ಜೊತೆ ಕೈ ಜೋಡಿದ್ದಾರೆ. ಮೊದಲ ಪ್ರಾಜೆಕ್ಟ್ ಸಾಯಿ ಪಲ್ಲವಿ ಸಿನಿಮಾ ಆದ ಖುಷಿ ಹಾಗೂ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಶೀತಲ್ ಶೆಟ್ಟಿ ಫಿಲ್ಮಿ ಬೀಟ್ ಜೊತೆ ಹಂಚಿಕೊಂಡಿದ್ದಾರೆ.

    ಸಾಯಿ ಪಲ್ಲವಿ ಕನ್ನಡ ಡಬ್ಬಿಂಗ್ ಹೇಗಿದೆ?

    ಸಾಯಿ ಪಲ್ಲವಿ ಕನ್ನಡ ಡಬ್ಬಿಂಗ್ ಹೇಗಿದೆ?

    "ಸಾಯಿ ಪಲ್ಲವಿ ಬರೋದು ಮೊದಲೇ ಕನ್ಫರ್ಮ್ ಆಗಿರಲಿಲ್ಲ. ನಾವೇ ಸಾಯಿ ಪಲ್ಲವಿ ಅವರಿಗೆ ಅಷ್ಟೇ ಚೆನ್ನಾಗಿರುವ ಒಂದು ವಾಯ್ಸ್ ಹುಡುಕಿ, ರೆಕಾರ್ಡ್ ಮಾಡಿಸಿದ್ದೆವು. ಅದೂ ಕೂಡ ಸ್ವಲ್ಪ ಅವರಿಗೆ ಸಹಾಯ ಆಗಿದೆ. ತುಂಬಾನೇ ನಿಷ್ಠೆಯಿಂದ ಕಲಿತು ಕನ್ನಡದಲ್ಲಿ ಡಬ್ ಮಾಡಿದ್ದಾರೆ. ಗೌತಮ್ ರಾಮಚಂದ್ರನ್ ಎಂಬುವವರು 'ಗಾರ್ಗಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅವರೂ ಕನ್ನಡದವರೇ. ಒಂದೊಳ್ಳೆ ಇಚ್ಚಾ ಶಕ್ತಿಯೊಂದಿಗೆ ಬಂದಿದ್ದಾರೆ." ಎನ್ನುತ್ತಾರೆ 'ಶೀ ಟೇಲ್ಸ್' ಸಂಸ್ಥೆಯ ಸಂಸ್ಥಾಪಕಿ ಶೀತಲ್ ಶೆಟ್ಟಿ.

    ನಿಮ್ಮ ಸ್ಟುಡಿಯೋ ಮುಂದೆ ಸಾಯಿ ಪಲ್ಲವಿ ನಿಂತಾಗ?

    ನಿಮ್ಮ ಸ್ಟುಡಿಯೋ ಮುಂದೆ ಸಾಯಿ ಪಲ್ಲವಿ ನಿಂತಾಗ?

    "ನಾವು ಸಾಯಿ ಪಲ್ಲವಿಯರೊಂದಿಗೆ ನಾಲ್ಕು ಜನ ಬಾಡಿ ಗಾರ್ಡ್ ಬರುತ್ತಿರಬಹುದು. ಫುಲ್ ಸ್ಟ್ರಿಕ್ಟ್ ಆಗಿ ಇರುತ್ತಾರೇನೋ ಅಂತೆಲ್ಲಾ ಅಂದುಕೊಂಡಿದ್ದೆವು. ಆದರೆ, ಸಿಂಪಲ್ ಆಗಿ ಅವರು ಹಾಗೂ ನಿರ್ದೇಶಕರು ಇಬ್ಬರೇ ಬಂದಿದ್ದರು. ಅವರು ನೋಡುವಷ್ಟೇ ಸಿಂಪಲ್ ಆಗಿ ಬಂದರು. ಅಷ್ಟೇ ಸಿಂಪಲ್ ಆಗಿ ಕೆಲಸ ಮುಗಿಸಿಕೊಂಡು ಹೋದರು."

    ಸಾಯಿ ಪಲ್ಲವಿ ಜೊತೆ ಕೆಲಸ ಮಾಡಿದ ಎಕ್ಸ್‌ಪಿರೀಯನ್ಸ್

    ಸಾಯಿ ಪಲ್ಲವಿ ಜೊತೆ ಕೆಲಸ ಮಾಡಿದ ಎಕ್ಸ್‌ಪಿರೀಯನ್ಸ್

    "ಸಾಯಿ ಪಲ್ಲವಿ ಜೊತೆ ಮಾತಾಡುವುದಕ್ಕೆ ಅದ್ಭುತ ಅಂತ ಅನಿಸುತ್ತೆ. ಸಾಯಿ ಪಲ್ಲವಿ ಬರುತ್ತಾರೆ ಅನ್ನೋದಕ್ಕೆ ಭಯ, ಟೆನ್ಷನ್ ಎಲ್ಲಾ ಇತ್ತು. ಅವರು ಬಂದು ಕಾರು ಇಳಿದು, ಒಂದು ಸ್ಮೈಲ್ ಕೊಟ್ಟು, ಶೀತಲ್ ಅಲ್ವಾ ಅಂತ ಕೇಳಿದ್ರು. ತುಂಬಾನೇ ಫ್ರೆಂಡ್ಲಿಯಾಗಿ, ಎಲ್ಲರ ಬಳಿಯೂ ಮಾತಾಡಿಕೊಂಡು ಇದ್ದರು. ಕೊನೆಯ ದಿನ ಅವರೇ ಕೇಕ್ ತರಿಸಿ, ಖುಷಿಯಾಗಿ ಕಟ್ ಮಾಡಿದ್ದರು. ತುಂಬಾ ಚೆನ್ನಾಗಿ ನಮ್ಮ ಕೆಲಸದ ಬಗ್ಗೆ ಬರೆದುಕೊಂಡಿದ್ದಾರೆ. ಅದೇ ನಮಗೆ ಖುಷಿ. "

    ನಿಮ್ಮ 'ಶೀ ಟೇಲ್ಸ್' ಸಂಸ್ಥೆಯ ಪಾತ್ರವೇನು?

    ನಿಮ್ಮ 'ಶೀ ಟೇಲ್ಸ್' ಸಂಸ್ಥೆಯ ಪಾತ್ರವೇನು?

    "ಈ ಸಿನಿಮಾವನ್ನು ತಮಿಳು-ಕನ್ನಡ ಭಾಷಾಂತರ ಮಾಡಿದ್ದೇವೆ. ಹಾಗೇ ಈ ಸಿನಿಮಾದ ಹಾಡುಗಳನ್ನು ಭಾಷಾಂತರ ಮಾಡಿದ್ದೇವೆ. ಎಲ್ಲಾ ಪಾತ್ರಕ್ಕೂ ಸರಿ ಹೊಂದುವಂತಹ ಧ್ವನಿಯನ್ನು ಹುಡುಗಿ ಕನ್ನಡಕ್ಕೆ ಡಬ್ಬಿಂಗ್ ಮಾಡಲಾಗಿದೆ. 'ಗಾರ್ಗಿ' ಸಿನಿಮಾದಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ಏನೆಲ್ಲಾ ಕೆಲಸವಿದೆ. ಅದೆಲ್ಲವನ್ನೂ ನಮ್ಮ 'ಶೀ ಟೇಲ್ಸ್' ಸಂಸ್ಥೆಯಿಂದ ನಾವು ಮಾಡಿದ್ದೇವೆ. ಹಾಗಂತ ಸುಮ್ ಸುಮ್ಮನೆ ಡಬ್ಬಿಂಗ್ ಮಾಡಿಲ್ಲ. ಪಾತ್ರದ ಭಾವನೆಯನ್ನು ಅರಿತುಕೊಂಡು ಕನ್ನಡಕ್ಕೆ ಡಬ್ಬಿಂಗ್ ಮಾಡಿಸಿದ್ದೇವೆ. ನಾವಂತೂ ಒಂದು ಕನ್ನಡ ಸಿನಿಮಾ ನೋಡಿದಷ್ಟು ಖುಷಿಯಾಗುತ್ತೆ ಅಂತ ಗ್ಯಾರಂಟಿ ಕೊಡುತ್ತೇವೆ."

    'ಶೀ ಟೇಲ್ಸ್‌'ನಲ್ಲಿ ಏನೇನು ಕೆಲಸ ನಡೆಯುತ್ತೆ?

    'ಶೀ ಟೇಲ್ಸ್‌'ನಲ್ಲಿ ಏನೇನು ಕೆಲಸ ನಡೆಯುತ್ತೆ?

    "ನಮ್ಮ ಡಬ್ಬಿಂಗ್ ಸ್ಟುಡಿಯೋ ತುಂಬಾನೇ ಸೌಂಡ್ ಆಗಿದೆ. ಅಡ್ವಾನ್ಸ್ ಟೆಕ್ನಾಲಜಿ ಬಳಸಿ ಮಾಡಿದ್ದೇವೆ. ಸೌಂಡು ಅಂತ ಬಂದಾಗ, ಜಾಸ್ತಿ ಪ್ರಾಮುಖ್ಯತೆ ಕೊಡಬೇಕು ಅನ್ನುವ ಸಂಸ್ಕೃತಿ ಕನ್ನಡದಲ್ಲಿ ಸ್ವಲ್ಪ ಕಡಿಮೆ ಇದೆ. ಅದಕ್ಕೆ ನಮ್ಮಲ್ಲಿ ಒಂದೊಳ್ಳೆ ವ್ಯವಸ್ಥೆಯನ್ನು ಮಾಡಿದ್ದೇವೆ. ಮಿಕ್ಸರ್, ಮೈಕ್, ಸ್ಪೀಕರ್ ಎಲ್ಲಾ ಇದೆ. ಎಡಿಟಿಂಗ್ ಮಾಡುತ್ತೇವೆ. ಮ್ಯೂಸಿಕ್ ಕ್ರಿಯೇಟ್ ಮಾಡುವ ಹುಡುಗರು ಇದ್ದಾರೆ. ಜೊತೆ ತಂತ್ರಜ್ಞಾನವನ್ನೂ ಅಡ್ವಾನ್ಸ್ ಆಗಿರುವುದನ್ನೇ ಅಳವಡಿಸಿದ್ದೇವೆ. ಇದೇ ವೇಳೆ ಗ್ರೀನ್ ಮ್ಯಾಟ್ ಹಾಕಿದ್ದು, ಚಿಕ್ಕ ಚಿಕ್ಕ ಶೂಟ್‌ಗೆ, ಜಾಹೀರಾತುಗಳಿಗೆ ಅನುಕೂಲ ಆಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದೇವೆ."

    ನೀವು ಕಂಡಂತೆ ಸಾಯಿ ಪಲ್ಲವಿ?

    ನೀವು ಕಂಡಂತೆ ಸಾಯಿ ಪಲ್ಲವಿ?

    "ಕನ್ನಡದ ಬಗ್ಗೆ ಭಯಾನಕವಾದ ಆಸೆಯಿದೆ. ಇವತ್ತಿನ ಮಟ್ಟಕ್ಕೆ ಸಿನಿಮಾ ಅನ್ನುವುದು ಬೇರೆ ಲೆವೆಲ್‌ಗೆ ಹೋಗಿದೆ. ಇಲ್ಲಿ ಇರೋರು ಯಾರೋ ಬೇರೆ ಭಾಷೆಯ ನಟರನ್ನು ಅಪ್ರೋಚ್ ಮಾಡುವುದಕ್ಕೆ ಆಗುವುದಿಲ್ಲ ಅಂತ ಅಂದುಕೊಳ್ಳಬೇಡಿ. ಈಗ ಎಲ್ಲಾ ಸಿನಿಮಾ ಇಂಡಸ್ಟ್ರಿ ಒಂದಾಗಿದೆ ಎಂದು ಹೇಳಿದ್ರು. ಸಾಯಿ ಪಲ್ಲವಿ ತುಂಬಾನೇ ಪಾಸಿಟಿವ್ ಆಗಿರುತ್ತಾರೆ. ತುಂಬಾ ಆಧ್ಯಾತ್ಮಿಕ ಭಾವನೆಗಳನ್ನು ಹೊಂದಿದ್ದಾರೆ ಅಂತ ಅನಿಸುತ್ತೆ. ಸಂಪೂರ್ಣ ಸಸ್ಯಹಾರಿ, ಲೈಫ್ ಸ್ಟೈಲ್ ತುಂಬಾನೇ ಅದ್ಭುತವಾಗಿದೆ. ಅವರ ನಡೆ-ನುಡಿ, ಬದುಕುತ್ತಿರುವ ರೀತಿ ತುಂಬಾನೇ ಚೆನ್ನಾಗಿದೆ ಅಂತ ಅವರನ್ನು ನೋಡಿದರೆ ಅನಿಸುತ್ತೆ." ಎನ್ನುತ್ತಾರೆ ಶೀತಲ್ ಶೆಟ್ಟಿ.

    English summary
    Sai Pallavi Gargi Movie Dubbing in Sheetal Shetty Studio Special Interview, Know More.
    Saturday, May 14, 2022, 19:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X