ಒಂದೇ ಮದುವೆ ಸಮಾರಂಭದಲ್ಲಿ ನಟ ನಾಗಚೈತನ್ಯಾ ಹಾಗೂ ನಟಿ ಸಮಂತಾ ಭಾಗಿ; ವಿಡಿಯೋ ವೈರಲ್

ತೆಲುಗು ನಟ ನಾಗಚೈತನ್ಯಾ ಹಾಗೂ ನಟಿ ಸಮಂತಾ ಪ್ರೀತಿಸಿ ಮದುವೆ ಆಗಿದ್ದು ಬಳಿಕ ಇಬ್ಬರೂ ಡಿವೋರ್ಸ್ ಪಡೆದು ಮತ್ತೆ ಬೇರೆಯವರ ಜೊತೆ ಮದುವೆ ಆಗಿದ್ದು ಗೊತ್ತೇಯಿದೆ. ಮಾಜಿ ಸತಿ, ಪತಿ ಇತ್ತೀಚೆಗೆ ಒಂದೇ ಮದುವೆ ಸಮಾರಂಭದಲ್ಲಿ ಹಾಜರಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೊಗಳು ವೈರಲ್ ಆಗ್ತಿದೆ.

ಖ್ಯಾತ ನಿರ್ಮಾಪಕ ಸುನಿಲ್ ನಾರಂಗ್ ಮಗಳು ಸಿಮ್ರನ್ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಸಮಂತಾ ಹಾಗೂ ಚೈತು ಹಾಜರಾಗಿದ್ದರು. ನಾಗಚೈತನ್ಯ ತಮ್ಮ ಪತ್ನಿ ಶೋಭಿತಾ ದುಲಿಪಾಲ ಜೊತೆ ಕಾರ್ಯಕ್ರಮಕ್ಕೆ ಬಂದಿದ್ದರು. ಅದೇ ರೀತಿ ಸಮಂತಾ ತಮ್ಮ ಪತಿ ರಾಜ್ ನಿಡಿಮೋರು ಜೊತೆ ಹಾಜರಾಗಿದ್ದರು. ಡಿವೋರ್ಸ್ ಬಳಿಕ ಚೈ-ಸ್ಯಾಮ್ ಹೀಗೆ ಒಂದೇ ಕಾರ್ಯಕ್ರಮಕ್ಕೆ ಹಾಜರಾಗಿರುವುದು ಇದೇ ಮೊದಲು.

Samantha Naga Chaitanya Attend Same Wedding Reception Post-Divorce With New Partners

ನಾಗಚೈತನ್ಯಾ ತಂದೆ ನಾಗಾರ್ಜುನ ಹಾಗೂ ತಾಯಿ ಅಮಲಾ ಕೂಡ ಈ ಮದುವೆ ಸಮಾರಂಭದಲ್ಲಿ ಭಾಗಿ ಆಗಿ ನವಜೋಡಿಗೆ ಶುಭ ಕೋರಿದ್ದಾರೆ. ಇನ್ನು ಸಮಂತಾ- ರಾಜ್ ಹಾಗೂ ಚೈತು-ಶೋಭಿತಾ ಬಂದು ಹೋಗಿರುವ ವೀಡಿಯೋಗಳು ಸಖತ್ ವೈರಲ್ ಆಗ್ತಿದೆ. ಕಡು ನೀಲಿ ಬಣ್ಣದ ಸೂಟ್‌ನಲ್ಲಿ ನಾಗಚೈತನ್ಯಾ ಕಾಣಿಸಿಕೊಂಡ್ರೆ ತಿಳಿ ಹಸಿರು ಬಣ್ಣದ ಪಾರದರ್ಶಕ ಸೀರೆಯಲ್ಲಿ ಶೋಭಿತಾ ಮಿಂಚಿದ್ದಾರೆ.

ಮರೂನ್ ಕಲರ್ ಸೀರೆಯಲ್ಲಿ ಸಮಂತಾ ಬಂದಿದ್ದರು. ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಬ್ಲೇಸರ್ ತೊಟ್ಟು ಪತ್ನಿ ಕೈ ಹಿಡಿದು ರಾಜ್ ನಿಡುಮೊರು ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಪ್ರೈಂ ವೀಡಿಯೋ ಮುಂಬೈ ಈವೆಂಟ್‌ನಲ್ಲಿ ಕೂಡ ಸಮಂತಾ ಹಾಗೂ ಚೈತು ಭಾಗಿ ಆಗಿದ್ದರು. ಆಗ ಸ್ಯಾಮ್ ಇನ್ನು 2ನೇ ಮದುವೆ ಆಗಿರಲಿಲ್ಲ.

ಸಮಂತಾ ಸಾಕಷ್ಟು ಬಾರಿ ತಮ್ಮ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ನಾಗ ಚೈತನ್ಯಾ ಬಗ್ಗೆ ಆರೋಪ ಮಾಡಿದ್ದಾರೆ. ಆದರೆ ಚೈತು ಸಾಧ್ಯವಾದಷ್ಟು ಇಂತಹ ಪ್ರಶ್ನೆಗಳಿಗೆ ಉತ್ತರಿಸದೇ ಇರಲು ಪ್ರಯತ್ನಿಸಿದ್ದಾರೆ.

ನಾಗಚೈತನ್ಯಾ ಜೊತೆ ಶೋಬಿತಾ 2ನೇ ಮದುವೆ ಆದಾಗ ಸಾಕಷ್ಟು ಟೀಕೆ ವ್ಯಕ್ತವಾಯಿತು. ಸೋಶಿಯಲ್ ಮೀಡಿಯಾದಲ್ಲಿ ಆಕೆಯನ್ನು ಟ್ರೋಲ್ ಮಾಡಿದ್ದರು. ಶೋಭಿತಾ ಕಾರಣಕ್ಕೆ ಚೈ-ಸ್ಯಾಮ್ ಡಿವೋರ್ಸ್ ಆಯ್ತು ಅಂತೆಲ್ಲಾ ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಚೈತು ಮಾತನಾಡಿದ್ದರು.

"ಶೋಭಿತಾಳನ್ನು ನೋಡಿದ್ರೆ ಬೇಸರವಾಗುತ್ತದೆ. ಇದರಲ್ಲಿ ಅವಳ ತಪ್ಪೇನು ಇಲ್ಲ. ನನ್ನ ಹಿಂದಿನ ಸಂಬಂಧಕ್ಕೂ ಶೋಭಿತಾಗೂ ಸಂಬಂಧ ಇಲ್ಲ. ಸೋಶಿಯಲ್ ಮೀಡಿಯಾ ಚಾಟ್ ಮೂಲಕ ನಮ್ಮಿಬ್ಬರ ಪರಿಚಯವಾಯಿತು. ಬಳಿಕ ಅದು ಪ್ರೀತಿ ತಿರುಗಿತು. ಅವಳಿಗೆ ಧನ್ಯವಾದ ಹೇಳಬೇಕು, ಇಂತಹ ವಿಚಾರದಲ್ಲಿ ಮೆಚ್ಯೂರ್ಡ್ ಆಗಿ ವರ್ತಿಸಿದ್ದಾಳೆ" ಎಂದಿದ್ದರು.

ಸಮಂತಾ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿಯಾಗಿದೆ. ತಮ್ಮದೇ ಚಿತ್ರ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದಾರೆ. ಪತಿ ರಾಜ್ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಫ್ಯಾಮಿಲಿಮ್ಯಾನ್ ಹಾಗೂ ಸಿಟಾಡೆಲ್ ವೆಬ್ ಸೀರಿಸ್ ಅನ್ನು ಡಿಕೆ ಜೊತೆ ರಾಜ್ ನಿರ್ದೇಶನ ಮಾಡಿದ್ದರು. ಮುಂದೆ ಸಲ್ಮಾನ್ ಖಾನ್ ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ.

Read more about: samantha naga chaitanya tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X