ಯುವ ಜಂಟಲ್‌ಮನ್; 'ಎಕ್ಕ' ಚಿತ್ರದಲ್ಲಿ ನಟಿಸಿದ್ದು ಖುಷಿಯಿದೆ- ಸಂಪದಾ

ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ರೋಹಿತ್ ಪದಕಿ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಸಂಜನಾ ಆನಂದ್ ಹಾಗೂ ಸಂಪದಾ ಹುಲಿವನ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಮುಂದಿನ ವಾರವೇ ಸಿನಿಮಾ ತೆರೆಗೆ ಬರ್ತಿದೆ. ಸಂಪದಾ ಸಣ್ಣದಾಗಿ ತಮ್ಮ ಪರಿಚಯ ಮಾಡಿಕೊಟ್ಟಿದ್ದಾರೆ.

'ಯುವ' ಬಳಿಕ ರಾಘಣ್ಣನ ಕಿರಿಮಗ ನಟಿಸುತ್ತಿರುವ 2ನೇ ಸಿನಿಮಾ ಇದು. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಸಂಸ್ಥೆಗಳು ಒಟ್ಟಾಗಿ 'ಎಕ್ಕ' ಚಿತ್ರ ನಿರ್ಮಿಸಿವೆ. ಚರಣ್ ರಾಜ್ ಸಂಗೀತದಲ್ಲಿ ಚಿತ್ರದ ಹಾಡುಗಳು ಸದ್ದು ಮಾಡ್ತಿದೆ. ಅದರಲ್ಲೂ 'ಬ್ಯಾಂಗಲ್ ಬಂಗಾರಿ' ಕ್ರೇಜ್ ಜೋರಾಗಿಯೇ ಇದೆ. ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

Sampada Hulivana on Her Big-Screen Comeback in Ekka Playing Mallika and Her Dream to Act in a Historical Role

ಕಳೆದ 6 ತಿಂಗಳು ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬಂದಿಲ್ಲ. 'ಎಕ್ಕ' ಆ ದಿಶೆಯಲ್ಲಿ ಕುತೂಹಲ ಮೂಡಿಸಿದೆ. ದೊಡ್ಡಮಟ್ಟದ ಓಪನಿಂಗ್ ಸಿಗುವ ಲೆಕ್ಕಾಚಾರ ಶುರುವಾಗಿದೆ. ವರ್ಷದ ಮೊದಲ ಹಿಟ್ ಸಿನಿಮಾ ಎನಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ. ಇನ್ನು ಚಿತ್ರದ ಮೂಲಕ ನಾಯಕಿ ಸಂಪದಾ ಮತ್ತೆ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಪ್ರಜ್ವಲ್ ದೇವರಾಜ್‌ ಜೊತೆ 'ಕರಾವಳಿ' ಚಿತ್ರಕ್ಕೂ ಮಿನ್ನ 'ಎಕ್ಕ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸಂಪದಾ ಅವರನ್ನು ನೋಡಿ ನಿರ್ದೇಶಕ ಗುರುದತ್ ಗಾಣಿಗ ನೋಡಿ 'ಕರಾವಳಿ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದರು. ಅದೇ ರೀತಿ ರೋಹಿತ್ ಪದಕಿ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ನೋಡಿ 'ಎಕ್ಕ' ಚಿತ್ರದ ಅವಕಾಶ ಕೊಟ್ಟಿದ್ದಾರೆ. ಈ ಸಿನಿಮಾ ಬಗ್ಗೆ ಆಕೆಗೆ ಬಹಳ ನಿರೀಕ್ಷೆಯಿದೆ. ಫಿಲ್ಮಿಬೀಟ್ ಕನ್ನಡ ಜೊತೆ ಈ ಬಗ್ಗೆ ಮಾತನಾಡಿದ್ದಾರೆ.

ಸಂಪದಾ ನಿಮ್ಮ ಹಿನ್ನೆಲೆ?

ನಾನು ಹುಟ್ಟಿದ್ದು ಬೆಳೆದಿದ್ದು ಬೆಂಗಳೂರಿನಲ್ಲೇ. ಆದರೆ ನಮ್ಮ ಬೇರುಗಳು ಹುಲಿವನ ಎಂಬ ಊರು. ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಓದಿದ್ದು. ಅದೇ ಸಮಯದಲ್ಲಿ ಮಾಡೆಲಿಂಗ್, ಆಕ್ಟಿಂಗ್ ಕಡೆ ಒಲವು ಮೂಡಿತು. ಮಾಡೆಲಿಂಗ್, ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಬಳಿಕ ಓದಬೇಕು ಎಂದು ಬ್ರೇಕ್ ಪಡೆದಿದ್ದೆ. ಬಳಿಕ 'ಕರಾವಳಿ' ಚಿತ್ರದ ಅವಕಾಶ ಸಿಕ್ಕಿತ್ತು. ಆ ನಂತರ 'ಎಕ್ಕ' ಚಿತ್ರಕ್ಕೆ ಆಯ್ಕೆ ಆಗಿದ್ದೆ.

Sampada Hulivana on Her Big-Screen Comeback in Ekka Playing Mallika and Her Dream to Act in a Historical Role

ನಟನೆ ಆರಂಭವಾಗಿದ್ದು

ಶಾಲೆ, ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ನಾಟಕಗಳಲ್ಲಿ ನಟಿಸುತ್ತಿದ್ದೆ. ನಮ್ಮ ಕಾಲೇಜಿನಲ್ಲೇ ಮಾಡೆಲಿಂಗ್ ಮಾಡಲು ಹೆಚ್ಚಿನ ಅವಕಾಶ ಸಿಕ್ಕಿತ್ತು. ಅದು ಸುಲಭವಾಯಿತು. ಮೊದಲಿಗೆ ಆರು ತಿಂಗಳ ಕಾಲ 'ಮಿಥುನರಾಶಿ' ಧಾರಾವಾಹಿಯಲ್ಲಿ ನಟಿಸಿದ್ದೆ. ಬಳಿಕ ಕೋವಿಡ್ ಸಮಯದಲ್ಲಿ 'ರೈಡರ್' ಹಾಗೂ 'ಬೆಂಕಿ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೆ. ನಂತರ ಎಲ್ಲಾ ಬಿಟ್ಟು ವಿದ್ಯಾಭ್ಯಾಸದ ಕಡೆ ಗಮನ ಹರಿಸಿದ್ದೆ.

'ಕರಾವಳಿ' ಚಿತ್ರದ ಪಾತ್ರದ ಬಗ್ಗೆ ಹೇಳಿ

ಆ ಸಿನಿಮಾ ಚಿತ್ರೀಕರಣ ಕೂಡ ಮುಕ್ತಾಯವಾಗಿದೆ. ಅದರಲ್ಲಿ ಪಶುವೈದ್ಯೆಯ ಪಾತ್ರದಲ್ಲಿ ನಟಿಸಿದ್ದೀನಿ. ಸಂಪೂರ್ಣವಾಗಿ ಕರಾವಳಿ ಭಾಗದಲ್ಲಿ ನಡೆಯುವ ಕಥೆ. ನಗರದಿಂದ ಓದಿಕೊಂಡು ಹಳ್ಳಿಗೆ ಹೋಗಿರುವ ಹುಡುಗಿ. ಆ ಪಾತ್ರ ಮಾಡಲು ಅಲ್ಲಿನ ಕನ್ನಡ ಭಾಷೆ ಕಲಿಯುವ ಪ್ರಯತ್ನ ಮಾಡಿದೆ. ಅಲ್ಲಿನ ಜನರೊಟ್ಟಿಗೆ ಬೆರೆತಾಗ ಅದು ಸುಲಭವಾಯಿತು.

'ಎಕ್ಕ' ಚಿತ್ರದ ಮಲ್ಲಿಕಾ ಪಾತ್ರ ಎಷ್ಟು ವಿಶೇಷ

ಈ ಚಿತ್ರದಲ್ಲಿ ನನ್ನ ಪಾತ್ರದ ಬಗ್ಗೆ ಹೆಚ್ಚು ಮಾತನಾಡಿಲ್ಲ. ನಾನು ಕಾಣಿಸಿಕೊಂಡಿರುವ ಕಂಟೆಂಟ್ ಕೂಡ ಹೊರಬಂದಿಲ್ಲ. ನನ್ನ ಪಾತ್ರದ ಹೆಸರು ಮಲ್ಲಿಕಾ. ಈ ಪಾತ್ರದಿಂದಲೇ ಸಿನಿಮಾ ಶುರುವಾಗಿ, ಮುಕ್ತಾಯ ಕೂಡ ಆಗುತ್ತದೆ. ನಾಯಕ ಮುತ್ತುಗೆ ಜೀವನದ ಬಹುಮುಖ್ಯ ಘಟ್ಟದಲ್ಲಿ ಪರಿಚಯವಾಗುವ ಪಾತ್ರ.

ದೊಡ್ಡ ತಂಡದ ಕೆಲಸ ಮಾಡಿದ ಅನುಭವ

ಒಂದು ದೊಡ್ಡ ಪ್ರೊಡಕ್ಷನ್ ಚಿತ್ರದಲ್ಲಿ ನಟಿಸುವುದೇ ವಿಶೇಷ. ಅಂಥಾದ್ರದಲ್ಲಿ ಮೂರು ಸಂಸ್ಥೆಗಳು ನಿರ್ಮಾಣ ಮಾಡಿರುವ ಸಿನಿಮಾ 'ಎಕ್ಕ'. ಹಾಗಾಗಿ ಬಹಳ ಸುಲಭವಾಗಿ ಸರಳವಾಗಿ ಸಿನಿಮಾ ಕೆಲಸಗಳು ಮುಗೀತು. ಚಿತ್ರೀಕರಣಕ್ಕೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. ವಾರಣಾಸಿ, ಮೈಸೂರು, ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ನಡೀತು. ಇನ್ನುಳಿದಂತೆ ಬಹುತೇಕ ಸನ್ನಿವೇಶಗಳನ್ನು ಬೆಂಗಳೂರಿನಲ್ಲೇ ಸೆರೆ ಹಿಡಿಯಲಾಯಿತು.

ಕ್ಯಾಮರಾ ಎದುರಿಸಿದ ಬಗ್ಗೆ ಹೇಳಿ

ನನಗೆ ಮೊದಲಿನಿಂದಲೂ ಕ್ಯಾಮರಾ ಭಯ ಇಲ್ಲ. ಕೆಲಸ ಮಾಡಲು ಒಳ್ಳೆ ವಾತಾವರಣ ಇತ್ತು. ಯುವ ಒಳ್ಳೆ ಸಹ ಕಲಾವಿದ. ಜಂಟಲ್‌ಮನ್. ಅವರೊಟ್ಟಿಗೆ ನಟಿಸಿದ್ದು ಬಹಳ ಖುಷಿಯಿದೆ. ಡೌನ್‌ ಟು ಅರ್ಥ ಪರ್ಸನ್. ಎಲ್ಲರೊಟ್ಟಿಗೂ ಬಹಳ ಲವಲವಿಕೆಯಿಂದ ಚಿತ್ರೀರಣದಲ್ಲಿ ಭಾಗವಹಿಸಿದ್ದರು. ಸಂಜನಾ ಅವರೊಟ್ಟಿಗೆ ನನ್ನ ಸನ್ನಿವೇಶಗಳು ಇರುವುದಿಲ್ಲ. ನನ್ನದು ಒಂದು ಸಾಂಗ್ ಇದೆ, ಸಿನಿಮಾ ಬಿಡುಗಡೆ ಬಳಿಕ ಆ ಸಾಂಗ್ ಹೊರಬರಬಹುದು.

ಬೇರೆ ಸಿನಿಮಾಗಳು?

ಒಂದೆರಡು ಕತೆಗಳನ್ನು ಕೇಳಿದ್ದೇನೆ. ಅದರಲ್ಲಿ ಒಂದು ಕನ್ಫರ್ಮ್ ಆಗುವ ಸಾಧ್ಯತೆಯಿದೆ. ಈಗ ಮಾತನಾಡಲು ಸಾಧ್ಯವಿಲ್ಲ. 'ಎಕ್ಕ' ಬಳಿಕ ಆಗಸ್ಟ್‌ನಲ್ಲಿ ಆ ಸಿನಿಮಾ ಶುರುವಾಗಬಹುದು.

ನೆಚ್ಚಿನ ನಟ-ನಟಿ, ಕನಸಿನ ಪಾತ್ರ?

ಮೊದಲಿನಿಂದ ನನಗೆ ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಅಂದ್ರೆ ಬಹಳ ಇಷ್ಟ. ಯುವ ಜೊತೆ ನಟಿಸ್ತೀದ್ದೀನಿ ಅಂತ ಈ ಮಾತು ಹೇಳ್ತಿಲ್ಲ. ನಟಿಯರಲ್ಲಿ ರಮ್ಯಾ ನನ್ನ ಫೇವರಿಟ್ ನಟಿ. ನನಗೆ ಐತಿಹಾಸಿಕ ಪಾತ್ರದಲ್ಲಿ ನಟಿಸುವ ಆಸೆ ಇದೆ. ಕಾಮಿಡಿ ಅಂದ್ರು ಇಷ್ಟ, ಅಂತಹ ಅವಕಾಶ ಸಿಕ್ಕರೂ ನಟಿಸ್ತೀನಿ.

More from Filmibeat

English summary
Actress Sampada Hulivan opens up about her journey from modeling to cinema, her pivotal role in Yuva Rajkumar’s ‘Ekka’
Read more about: ekka actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X