For Quick Alerts
  ALLOW NOTIFICATIONS  
  For Daily Alerts

  ಸಿನಿಮಾದಲ್ಲಿ ನೋಡಿದ ಹಾಗೆ ನಾನಿಲ್ಲ, ನನಗೆ ತುಂಬಾ ಧೈರ್ಯ: ಹಿರಿಯ ನಟಿ ಶ್ರುತಿ

  |

  ಸುಮಾರು ಎರಡು ದಶಕಗಳಿಂದ ಕನ್ನಡ ಚಿತ್ರರಂಗದ ಮೇರು ನಟಿ ಎನಿಸಿಕೊಂಡಿರುವ ಚಂದನವನದ ಕರ್ಪೂರದ ಗೊಂಬೆ ಶ್ರುತಿ ಇಂದು (ಸೆಪ್ಟೆಂಬರ್ 18) ಹುಟ್ಟುಹಬ್ಬದ ಸಂಭ್ರದಲ್ಲಿದ್ದಾರೆ. 47ನೇ ವಸಂತಕ್ಕೆ ಕಾಲಿಟ್ಟಿರುವ ಶ್ರುತಿ ಅವರಿಗೆ ಸಿನಿಮಾ ಹಾಗೂ ರಾಜಕೀಯ ಗಣ್ಯರು ಶುಭ ಹಾರೈಸಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದುಬಂದಿದೆ.

  ಸದ್ಯ ನಟಿ ಶ್ರುತಿ ತಮ್ಮ ಮಗಳೊಂದಿಗೆ ಮಾಲ್ಡೀವ್ಸ್​ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸುಮಾರು 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶ್ರುತಿ ವಿಷ್ಣುವರ್ಧನ್​,ಅಂಬರೀಶ್​, ಕಮಲ್​ ಹಾಸನ್​ರಂತಹ ದಿಗ್ಗಜರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ನಟರ ಜೊತೆ ನಟಿಸಿರುವ ಶ್ರುತಿ ಅವರಿಗೆ ತಮ್ಮ ವೃತ್ತಿ ಬದುಕಿನಲ್ಲಿ ಒಂದು ಕೊರತೆ ಇದೆ ಅಂತೆ ಈ ವಿಚಾರವನ್ನು ಫಿಲ್ಮಿಬೀಟ್​ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.

  ಹುಟ್ಟುಹಬ್ಬಕ್ಕೆ ಮಾಲ್ಡೀವ್ಸ್​ಗೆ ಹಾರಿದ ನಟಿ ಶ್ರುತಿ: ಇಲ್ಲಿವೆ ಫೋಟೋಗಳುಹುಟ್ಟುಹಬ್ಬಕ್ಕೆ ಮಾಲ್ಡೀವ್ಸ್​ಗೆ ಹಾರಿದ ನಟಿ ಶ್ರುತಿ: ಇಲ್ಲಿವೆ ಫೋಟೋಗಳು

  ರಾಜಕುಮಾರ್​ ಅಪ್ಪಾಜಿ ಜೊತೆ ನಾನು ಆ್ಯಕ್ಟ್​ ಮಾಡಬೇಕಿತ್ತು. 'ಜೀವನ ಚೈತ್ರ' ಸಿನಿಮಾದಲ್ಲಿ ಅವರ ಮಗಳ ಪಾತ್ರಕ್ಕೆ ಅವಕಾಶ ಬಂದಾಗ, ಬೇರೆ ಸಿನಿಮಾಗಳಿಂದ ಆ ಚಿತ್ರ ಕೈತಪ್ಪಿತು. 'ಜೀವನ ಚೈತ್ರ' ಕಥೆ ಬರೆಯುವಾಗ ಪಾತ್ರದ ಹೆಸರನ್ನು ಶ್ರುತಿ ಅಂತಾನೆ ಬರೆದಿದ್ದರು. ಆ ಅವಕಾಶ ಕೈ ತಪ್ಪಿದ್ದಕ್ಕೆ ಬಹಳ ಬೇಸರ ಇದೆ ನನಗೆ ಎಂದು ಶ್ರುತಿ ಫಿಲ್ಮೀಬೀಟ್​ ಕನ್ನಡದ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.

   ನಾನು ತುಂಬಾ ಬ್ರೇವ್ ಆ್ಯಂಡ್​ ಬೋಲ್ಡ್

  ನಾನು ತುಂಬಾ ಬ್ರೇವ್ ಆ್ಯಂಡ್​ ಬೋಲ್ಡ್

  "ತೆರೆ ಮೇಲೆ ಶ್ರುತಿ ಅಳುಮುಂಜಿ ನಿಜ ಜೀವವನದಲ್ಲಿ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮನುಷ್ಯ ಸಹಜವಾದಂತಹ ಎಲ್ಲಾ ಗುಣಗಳು ನನ್ನಲ್ಲಿದೆ. ಸಿನಿಮಾಗಳಲ್ಲಿ ನೋಡಿದ ಹಾಗೆ ಪ್ರತಿ ವಿಚಾರಕ್ಕೂ ಅಳುವ ವ್ಯಕ್ತಿತ್ವ ನನ್ನದಲ್ಲ. ಅಳು ಸಹಜ ಅದನ್ನು ಮೆಟ್ಟಿ ನಿಲ್ಲುವ ಸ್ವಭಾವನನ್ನಲ್ಲಿದೆ. ನಾನು ತುಂಬಾ ಬ್ರೇವ್ ಆ್ಯಂಡ್​ ಬೋಲ್ಡ್.​ ಆದ್ರೆ ಸಿನಿಮಾಗಳಲ್ಲಿ ನನ್ನನ್ನು ಹಾಗೆ ತೋರಿಸಿಲ್ಲ" ಎಂದಿದ್ದಾರೆ.

  ನೇಗಿಲು ಹಿಡಿದು ಉಳುಮೆಗೆ ಇಳಿದ ಹಿರಿಯ ನಟಿ ಶ್ರುತಿ : ರಿಯಾಲಿಟಿ ಶೋ ಗತಿಯೇನು?ನೇಗಿಲು ಹಿಡಿದು ಉಳುಮೆಗೆ ಇಳಿದ ಹಿರಿಯ ನಟಿ ಶ್ರುತಿ : ರಿಯಾಲಿಟಿ ಶೋ ಗತಿಯೇನು?

   ಮಗಳು ಗಾಯಕಿಯಾಗ ಬೇಕು ಎನ್ನುವ ಆಸೆ ಇದೆ

  ಮಗಳು ಗಾಯಕಿಯಾಗ ಬೇಕು ಎನ್ನುವ ಆಸೆ ಇದೆ

  ಇನ್ನು ತಮ್ಮ ಮಗಳ ಬಗ್ಗೆಯೂ ಶ್ರುತಿ ಮಾತನಾಡಿದ್ದಾರೆ. "ಮಗಳ ಆಸೆಗೆ ನಾನು ಎಂದೂ ಬೇಡ ಎಂದಿಲ್ಲ. ನನ್ನ ಇಷ್ಟಗಳನ್ನು ಎಂದೂ ನಾನು ಅವಳ ಮೇಲೆ ಹೇರಿಲ್ಲ. ಅವಳು ಜೀವನದಲ್ಲಿ ಏನಾಬೇಕು ಅಂತಾ ನನಗೆ ಇಷ್ಟ ಅಂತಾ ಹೇಳಿದ್ದೇನೆ ಅಷ್ಟೆ. ಅವಳ ಇಷ್ಟಗಳನ್ನು ಎಂದಿಗೂ ಪ್ರೋತ್ಸಾಹಿಸುತ್ತೇನೆ. ಅವಳಿಗೆ ಸಿಂಗರ್​ ಆಗಬೇಕು ಎನ್ನುವ ಆಸೆ ಇದೆ. ನನಗೂ ಅದೆ ಆಸೆ ಇದೆ. ನಮ್ಮ ಕುಟುಂಬದಲ್ಲಿ ಎಲ್ಲರೂ ಗಾಯಕರೇ. ಹೀಗಾಗಿ ಅವಳು ಗಾಯಕಿಯಾಗ ಬೇಕೆಂಬುದು ನನ್ನ ಆಸೆ" ಎಂದಿದ್ದಾರೆ.

   ತಂದೆ ಕನಸಿನಂತೆ ನಾನು ಕಲಾವಿದೆಯಾದೆ

  ತಂದೆ ಕನಸಿನಂತೆ ನಾನು ಕಲಾವಿದೆಯಾದೆ

  "ಇನ್ನು ನನ್ನ ಫ್ಯಾಮಿಲಿ ನನಗೆ ಯಾವಾಗಲೂ ಗೈಡ್​ ಮಾಡ್ತಾರೆ. ಕಲಿಕೆ ಎನ್ನುವುದು ನಿರಂತರ. ನಾನು ಹೊಸ ವಿಚಾರ ಕಲಿಯಲು ತುಂಬಾ ಆಸೆ ಪಡ್ತಿನಿ. ನನ್ನನ್ನು ಚಿತ್ರರಂಗಕ್ಕೆ ಕರೆದುಕೊಂಡು ಬಂದಿದ್ದು ನನ್ನ ತಂದೆ. ಅವರ ಆಸೆ ಕನಸಿನಂತೆ ನಾನು ಕಲಾವಿದೆ ಆಗಿದ್ದೇನೆ. ನನಗೆ ನಟಿಯಾಗಲು ಆಸೆ ಇರಲಿಲ್ಲ. ಕುಟುಂಬದಲ್ಲಿ ಎಲ್ಲರೂ ಕಲಾವಿದರು. ಅವರು ತಿದ್ದಿ ತೀಡಿದಕ್ಕೆ ನಾನು ಸ್ವಲ್ಪಮಟ್ಟಿಗೆ ಸಾಧಿಸಿದ್ದೇನೆ."

  ರಾಜಕೀಯಕ್ಕೆ ಬಂದಿದ್ದು ಅನಿವಾರ್ಯ

  ರಾಜಕೀಯಕ್ಕೆ ಬಂದಿದ್ದು ಅನಿವಾರ್ಯ

  ಚಿತ್ರರಂಗದಲ್ಲಿದ್ದ ಶ್ರುತಿ ರಾಜಕೀಯದತ್ತ ಯಾಕೆ ಒಲುವು ತೋರಿದರು ಎನ್ನುವುದಕ್ಕೆ ಉತ್ತರ ಇಲ್ಲಿದೆ. ಈ ಬಗ್ಗೆ ಮಾತನಾಡಿದ ನಟಿ ರಾಜಕೀಯಕ್ಕೆ ಬಂದಿದ್ದು ಅನಿವಾರ್ಯ ಕಾರಣಗಳಿಂದ. ರಾಜಕೀಯಕ್ಕೆ ಬರುವ ಉದ್ದೇಶ ಇರಲಿಲ್ಲ. ಚಿತ್ರರಂಗ ಹಾಗೂ ರಾಜಕೀಯ ಎರಡೂ ರಂಗದ ನಡುವೆ ಭಾರೀ ವ್ಯತ್ಯಾಸವಿದೆ. ಒಬ್ಬ ಕಲಾವಿದರಾಗಿ ನಾವು ಜನರ ಬಳಿ ಹೆಚ್ಚು ಹೋಗಲು ಆಗುವುದಿಲ್ಲ. ಜನ ಕಲಾವಿದರನ್ನು ಹತ್ತಿರದಿಂದ ನೋಡದೆ ಇದ್ರೆ ಒಳ್ಳೆಯದು. ಕಲಾವಿದರ ಬದುಕಿನ ಬಗ್ಗೆ ಜನರಿಗೆ ಕುತೂಹಲ ಇರಬೇಕು. ಆದರೆ ರಾಜಕೀಯದಲ್ಲಿ ಜನರ ಜೊತೆ ಪಾರದರ್ಶಕವಾಗಿರ ಬೇಕಾಗುತ್ತದೆ. ಎರಡೂ ವಿರುದ್ಧವಾದ ಕ್ಷೇತ್ರಗಳು ಎಂದಿದ್ದಾರೆ.

  English summary
  Sandalwood actress Shruti has spoken about her personal life with Filmibeat Kannada
  Sunday, September 18, 2022, 18:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X