twitter
    For Quick Alerts
    ALLOW NOTIFICATIONS  
    For Daily Alerts

    'ಆಫ್ ದಿ ರೆಕಾರ್ಡ್' : ಅಂಬಿ ಕುರಿತು ಸುಗುಣ ಸ್ಟ್ರೈಟ್ ಮಾತುಗಳು

    |

    ಅಂಬರೀಶ್ ಅವರ ಬಗ್ಗೆ ಬೇರೆನೋ ಹೇಳಬೇಕು... ಹೇಗೆ ಹೇಳೋದು. ಅವರ ಜೊತೆಗಿದ್ದ ನಟ, ನಟಿ, ಸಿನಿಮಾದವರಿಂದ ವಿಷಯ ತೆಗೆದುಕೊಳಬೇಕೆ, ಸ್ನೇಹಿತರನ್ನು ಪ್ರಶ್ನೆ ಮಾಡಬೇಕೆ ಅಥವಾ ಮನೆಯವರನ್ನ ಮಾತನಾಡಿಸಬೇಕೆ....

    ನಾನು ಅಂಬರೀಶ್ ಅವರ ಬಗ್ಗೆ ಒಂದು ವಿಶೇಷ ಲೇಖನ ಬರೆಯಬೇಕು ಎಂದಾಗ ಈ ಗೊಂದಲಗಳು ಬಂದವು. ಆಮೇಲೆ ಅನಿಸಿದ್ದು, ಅಂಬರೀಶ್ ಅವರ ಕುರಿತು ಏಕೆ ಪತ್ರಕರ್ತರನ್ನು ಮಾತನಾಡಿಸಬಾರದು ಅಂತ.

    ಅಂಬರೀಶ್ ಮನೆಗೆ ಭೇಟಿ ನೀಡಿದ ಬಾಲಿವುಡ್ ನಟ ಅಂಬರೀಶ್ ಮನೆಗೆ ಭೇಟಿ ನೀಡಿದ ಬಾಲಿವುಡ್ ನಟ

    ನಾನೂ ಒಬ್ಬ ಪತ್ರಕರ್ತನಾಗಿ ಯೋಚನೆ ಮಾಡಿದೆ, ನಿಜಕ್ಕೂ ಹೊರ ಪ್ರಪಂಚಕ್ಕೆ ತಿಳಿಯದ ಅದೆಷ್ಟೋ ವಿಷಯಗಳು ಒಬ್ಬ ಪತ್ರಕರ್ತನಿಗೆ ತಿಳಿದಿರುತ್ತದೆ. ಅಂಬರೀಶ್ ಅವರ ಕುರಿತು ಆ ರೀತಿಯ ವಿಷಯವನ್ನು ಬರೆಯಬೇಕು ಅಂತ ಅನಿಸಿತು. ಆಗ ನೆನಪಾದ ಹೆಸರು ಸುಗುಣ.

    ಎಲ್ಲರಿಗೂ ತಿಳಿದಿರುವ ಹಾಗೆ, ಸುಗುಣ ಅನೇಕ ವರ್ಷಗಳಿಂದ ಸಿನಿಮಾ ವರದಿಗಾರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ, ಸುವರ್ಣ ನ್ಯೂಸ್ ವಾಹಿನಿಯ ಸಿನಿಮಾ ವಿಭಾಗ ಮುಖ್ಯಸ್ಥೆ ಆಗಿದ್ದಾರೆ. ಎಲ್ಲದಕ್ಕೂ ಹೆಚ್ಚಾಗಿ ಅಂಬರೀಶ್ ಅವರನ್ನು ಹತ್ತಿರದಿಂದ ನೋಡಿದ್ದಾರೆ, ಅವರ ಬಗ್ಗೆ ಅನೇಕ ವಿಷಯ ತಿಳಿದಿದ್ದಾರೆ. ಹೀಗೆ ಯೋಚಿಸಿದ್ದೆ ತಡ ಅವರ ನಂಬರ್ ಗೆ ಫೋನ್ ಮಾಡಿದೆ.

    ಫಿಲ್ಮಿಬೀಟ್ ಪ್ರತಿನಿಧಿ : ಹಾಯ್ ಮೇಡಮ್..

    ಸುಗುಣ : ಹಾಯ್ ನವೀನ್.. ಹೇಗಿದ್ದೀರಿ..?

    ಫಿಲ್ಮಿಬೀಟ್ ಪ್ರತಿನಿಧಿ : ನಾನು ಆರಾಮು, ನೀವು

    ಸುಗುಣ : ನಾನು ಸೂಪರ್... ಏನೋ ಆರ್ಟಿಕಲ್ ಅಂತ ಹೇಳಿದ್ರಲ್ಲ..

    ಫಿಲ್ಮಿಬೀಟ್ ಪ್ರತಿನಿಧಿ : ಹಾ ಅಂಬರೀಶ್ ಅವರ ಬಗ್ಗೆ...

    ಹೀಗೆ ಶುರುವಾದ ಈ ಮಾತುಗಳು ಹಾಗೆ ಮುಂದುವರೆಯಿತು, ಅಂಬರೀಶ್ ಅವರ ಅನೇಕ ವಿಷಯಗಳು ಇಲ್ಲಿ ಹೊರ ಬಂದವು...

    ಇವಳು ನಮ್ಮ ಹುಡುಗಿ

    ಇವಳು ನಮ್ಮ ಹುಡುಗಿ

    ''ಅವರು ರೇಸ್ ಕೋರ್ಸ್ ಗೆ ಸೆಲಿಬ್ರಿಟಿಗಳನ್ನು ಕರೆದುಕೊಂಡು ಹೋಗುತ್ತಿದ್ದು, ಬಿಟ್ಟರೆ, ರಿಪೋಟರ್ಸ್ ಗಳನ್ನು ಕರೆದುಕೊಂಡು ಹೋಗಿರಲಿಲ್ಲ. ಆದರೆ, ಒಮ್ಮೆ ನನಗೆ ರೇಸ್ ಕೋರ್ಸ್ ಹಾಗೂ ಗಲ್ಫ್ ಆಟ ಆಡುವ ಜಾಗಕ್ಕೆ ಕರೆದುಕೊಂಡು ಹೋಗಿದ್ದರು. 'ಜೋಗಯ್ಯ' ಚಿತ್ರದ ಮುಹೂರ್ತದ ಸಮಯದಲ್ಲಿ ನನಗೆ ಚಿರಂಜೀವಿ ಅವರ ಸಂದರ್ಶನ ಕೊಡಿಸಿದ್ದರು. ಇವಳು ನಮ್ಮ ಹುಡುಗಿ, ನೀನು ಮಾತಾಡು ಅಂತ ಚಿರಂಜೀವಿಗೆ ಹೇಳಿದರು.''

    ಪ್ರತಿ ಕ್ಷಣ ಎಂಜಾಯ್

    ಪ್ರತಿ ಕ್ಷಣ ಎಂಜಾಯ್

    ''ಅಂಬರೀಶ್ ಅವರಿಗೆ ಒಂದೊಂದಕ್ಕೆ ಒಂದೊಂದು ಸ್ನೇಹಿತ ಬಳಗ ಇತ್ತು. ಕಾರ್ಡ್ ಆಡುವುದಕ್ಕೆ ಬೇರೆ, ರೇಸ್ ಆಡುವುದಕ್ಕೆ ಬೇರೆ, ಗಲ್ಫ್ ಆಡುವುದಕ್ಕೆ ಬೇರೆ ಫ್ರೆಂಡ್ಸ್ ಗಳು ಇರುತ್ತಿದ್ದರು. ಅದರಲ್ಲಿ ಅನೇಕರು ಫಾರಿನ್ ಅವರಾಗಿದ್ದರು. ಪ್ರತಿ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದರು. ಯಾರ ಜೊತೆಗೆ ಇರುತ್ತಾರೆ ಅವರನ್ನು ಖುಷಿಯಾಗಿ ಇಡುತ್ತಿದ್ದರು.''

    ಮದುವೆಯೊಂದರಲ್ಲಿ ತನ್ನಿಂದ ಆದ ನಷ್ಟಕ್ಕೆ ಅಂಬಿ ತೆಗೆದುಕೊಂಡ ನಿರ್ಧಾರವೇನು.? ಮದುವೆಯೊಂದರಲ್ಲಿ ತನ್ನಿಂದ ಆದ ನಷ್ಟಕ್ಕೆ ಅಂಬಿ ತೆಗೆದುಕೊಂಡ ನಿರ್ಧಾರವೇನು.?

    ಯಶ್ ಮೇಲೆ ಪ್ರೀತಿ

    ಯಶ್ ಮೇಲೆ ಪ್ರೀತಿ

    ''ಕಲಾವಿದರ ಭವನ ಕಟ್ಟಡ ನಿರ್ಮಾಣ ಆದಾಗ ಇದನ್ನು ನೋಡು ಆದರೆ, ಸುದ್ದಿ ಮಾಡಲು ಅಲ್ಲ ಎಂದು ತೋರಿಸಿದ್ದರು. ಅದರ ಒಪನಿಂಗ್ ದಿನ ಮೊದಲು ರಾಜ್ ಕುಮಾರ್ ಹಾಡು, ನಂತರ ವಿಷ್ಣುವರ್ಧನ್ ಅವರ ಹಾಡು ಹಾಕಿ ಬಳಿಕ ಯಶ್ ಅವರ ಹಾಡನ್ನು ಹಾಕಿಸಿದರು. ಯಶ್ ಅಂದರೆ, ಅಂಬರೀಶ್ ಗೆ ಬಹಳ ಇಷ್ಟ ಎನ್ನುವುದು ಅವತ್ತು ಎಲ್ಲರಿಗೆ ತಿಳಿಯಿತು. ಎಲ್ಲರೂ ಡಿಮ್ಯಾಂಡ್ ಮಾಡಿದ ಮೇಲೆ ತಮ್ಮ ವಿಡಿಯೊ ಹಾಕಿಸಿದರು.''

    ರಜನಿಕಾಂತ್ ಇಂಟರ್ ವ್ಯೂ

    ರಜನಿಕಾಂತ್ ಇಂಟರ್ ವ್ಯೂ

    ''ಒಮ್ಮೆ ರಜನಿಕಾಂತ್ ಅವರ ಇಂಟರ್ ವ್ಯೂ ಮಾಡುವುದು ನನ್ನ ಕನಸು ಅಂತ ಅವರ ಬಳಿ ಹೇಳಿಕೊಂಡಿದೆ. ಒಂದು ವಾರದ ಬಳಿಕ ಫೋನ್ ಮಾಡಿ ರಜನಿ ಬರುತ್ತಾನೆ ಕ್ಯಾಮರಾ ರೆಡಿ ಮಾಡಿಕೊ ಎಂದರು. ಆ ಇಡೀ ದಿನ ಕಾದೆ. ಆ ಕಡೆಯಿಂದ ಫೋನ್ ಬರಲಿಲ್ಲ. ನಾನೇ ಮಾಡಿದಾಗ ರಜನಿಗೆ ಅದೆಲ್ಲ ಇಷ್ಟ ಆಗುವುದಿಲ್ಲ, ಬಂದು ರಜನಿ ಜೊತೆ ಸುಮ್ಮನೆ ಮಾತಾಡಿಕೊಂಡು ಹೋಗು. ಆದರೆ, ಇಂಟರ್ ವ್ಯೂ ಕೊಡಲ್ಲ. ಎಂದರು. ರಜನಿಯನ್ನು ಮೀಟ್ ಮಾಡಿಸಿದ ಆ ಕ್ಷಣವನ್ನು ಮರೆಯಲು ಆಗಲ್ಲ.''

    'ಈತನನ್ನ ಅಂಬಿ ಜಾಗದಲ್ಲಿ ಕೂರಿಸಿ' ಎಂದು ಕೇಳಿಕೊಂಡ ಜಗ್ಗೇಶ್ 'ಈತನನ್ನ ಅಂಬಿ ಜಾಗದಲ್ಲಿ ಕೂರಿಸಿ' ಎಂದು ಕೇಳಿಕೊಂಡ ಜಗ್ಗೇಶ್

    ಮನೆಗೆ ಹೋದರೆ ತಿಂಡಿ ತಿನ್ನಲ್ಲೇ ಬೇಕು

    ಮನೆಗೆ ಹೋದರೆ ತಿಂಡಿ ತಿನ್ನಲ್ಲೇ ಬೇಕು

    ''ಅವರು ಎಲ್ಲರಿಗೂ ಶೇಕ್ ಹ್ಯಾಂಡ್ ಮಾಡುತ್ತಿರಲಿಲ್ಲ. ಯಾರಾದರೂ ಇಷ್ಟ ಆದರೆ, ಸಣ್ಣದಾಗಿ ನಗುತ್ತಿದ್ದರು. ಪ್ರತಿ ದಿನ ಎಷ್ಟೋ ಅಭಿಮಾನಿಗಳು ಮನೆಯಲ್ಲಿ ಆಡಿಗೆ ಮಾಡಿ ಅವರಿಗಾಗಿ ತರುತ್ತಿದ್ದರು. ಪೂಜೆ ಮಾಡಿಸಿ ಪ್ರಸಾದ ತರುತ್ತಿದ್ದರು. ತಿಂಡಿಗೆ ನಾಲ್ಲೈದು ತರ ವೆರೈಟಿ ಇರಬೇಕಿತ್ತು. ಅವರ ಮನೆಗೆ ಹೋದರೆ ತಿಂಡಿ ತಿನ್ನಲ್ಲೇ ಬೇಕಿತ್ತು.''

    ಒಂದು ಶರ್ಟ್ ಬೆಲೆ 80 ಸಾವಿರದಿಂದ 1 ಲಕ್ಷ

    ಒಂದು ಶರ್ಟ್ ಬೆಲೆ 80 ಸಾವಿರದಿಂದ 1 ಲಕ್ಷ

    ''ಅವರ ಬಳಿ ಇರುವ ಒಂದು ಶರ್ಟ್ ನ ಬೆಲೆ ಮಿನಿಮಮ್ 80 ಸಾವಿರ ದಿಂದ 1 ಲಕ್ಷದವರೆಗೆ ಆಗಿರುತ್ತಿತ್ತು. ಏನೇ ಕೇಳಿದರೆ ತಂದು ಕೊಡುವ ಸ್ನೇಹಿತರು ಅವರ ಬಳಿ ಇದ್ದರು. ಆದರೆ, ಅಂಬಿ ಯಾರ ಬಳಿಯೂ ಏನೂ ಕೇಳಿರಲಿಲ್ಲ. ಯಾರಿಗೆ ಏನೇ ಸಹಾಯ ಇದ್ದರೂ ಮಾಡುತ್ತಿದ್ದರು. ಜೊತೆಗೆ ಅವರ ಫ್ರೆಂಡ್ ಒಬ್ಬರು ರೆಬಲ್ ಸ್ಟಾರ್ ಎಂಬ ಹೆಸರಿನ ಟೋಪಿಯನ್ನು ಗಿಫ್ಟ್ ಮಾಡಿದ್ದರು. ಅದು ಅಂಬಿಗೆ ಬಹಳ ಇಷ್ಟ. 'ಕೇರ್ ಆಫ್ ಫುಟ್ ಪಾತ್' ಸಿನಿಮಾದಲ್ಲಿ ಅದನ್ನು ಹಾಕಿಕೊಂಡಿದ್ದಾರೆ.''

    ಅಂಬಿ ಇಲ್ಲದಿದ್ದರೆ ಕಲಾವಿದರ ಭವನ ಆಗುತ್ತಿರಲಿಲ್ಲ

    ಅಂಬಿ ಇಲ್ಲದಿದ್ದರೆ ಕಲಾವಿದರ ಭವನ ಆಗುತ್ತಿರಲಿಲ್ಲ

    ''ಅಂಬಿ ಇಲ್ಲದೆ ಇದ್ದರೆ ಕಲಾವಿದರ ಭವನ ಆಗುತ್ತಿರಲಿಲ್ಲ. ಕಲಾವಿದರ ಭವನದಲ್ಲಿ ಅಂಬರೀಶ್ ಗಾಗಿಯೇ ಒಂದು ಕೋಟಿಯ ವೆಚ್ಚದಲ್ಲಿ ಒಂದು ಸ್ಪೆಷಲ್ ರೂಮ್ ಕಟ್ಟಿಸಬೇಕು ಅಂತ ರಾಕ್ ಲೈನ್‌ ಯೋಚನೆ ಮಾಡಿದ್ದರು. ಆದರೆ, ಅದು ಆಗುವ ಮೊದಲೇ ಅಂಬಿ ಸರ್ ಇಲ್ಲವಾದರು.''

    ರಾಕಿ ಕಟ್ಟಿದ ಕ್ಷಣ

    ರಾಕಿ ಕಟ್ಟಿದ ಕ್ಷಣ

    ''ಅವರು ಯಾರ ಬಳಿಯೂ ರಾಕಿ ಕಟ್ಟಿಸಿಕೊಳ್ಳುತ್ತಿರಲಿಲ್ಲ. ನಾನು ಅವರಿಗೆ ಹೇಳದೆ, ರಾಕಿ ಕಟ್ಟಬೇಕು ಅಂತ ಭಯದಿಂದಲೇ ಹೋದೆ. ಸರ್, ಇವತ್ತು ರಾಕಿ ಹಬ್ಬ, ನಿಮಗೆ ರಾಕಿ ಕಟ್ಟಬಹುದಾ ಅಂತ ಕೇಳಿದೆ. 'ಹಾ..' ಅಂತ ಒಪ್ಪಿ ಕಟ್ಟಿಸಿಕೊಂಡರು. ಜೊತೆಗೆ ಎರಡು ಸಾವಿರ ರೂಪಾಯಿ ಕೂಡ ಕೊಟ್ಟರು. ಒಂದು ತಿಂಗಳ ಬಳಿಕ ಪೋನ್ ಮಾಡಿ ನೀನು ಕಟ್ಟಿದ ರಾಕಿ ಒಂದು ತಿಂಗಳಾದರೂ ಹಾಗೆ ಇದೆ. ಎಷ್ಟು ಗಟ್ಟಿಯಾಗಿ ಕಟ್ಟಿದ್ದೀಯಾ ಅಂತ ಫೋನ್ ಮಾಡಿ ತಮಾಷೆ ಮಾಡಿದರು.''

    ಡೇರಿಂಗ್ ಪ್ರಶ್ನೆ

    ಡೇರಿಂಗ್ ಪ್ರಶ್ನೆ

    ''ನಾನು ಸ್ಟ್ರೈಟ್ ಹಿಟ್ ಸುಗುಣ ಕಾರ್ಯಕ್ರಮ ಮಾಡುವಾಗ ಅಂಬಿಕಾ ಅವರು ನಿಮಗೆ ಪ್ರಪೋಸ್ ಮಾಡಿದ್ದರಂತೆ ಹೌದಾ? ಎಂದು ಹೇಳಿದ್ದೆ. ಅವರ ಲೈಫ್ ನಲ್ಲಿ ಯಾರು ಅಷ್ಟು ಡೇರಿಂಗ್ ಆಗಿ ಪ್ರಶ್ನೆ ಕೇಳಿರಲಿಲ್ಲ. 'ಹಾ.. ಹೌದು..' ಎಂದಷ್ಟೆ ಉತ್ತರ ನೀಡಿದರು.''

    ಅಭಿಷೇಕ್ exclusive ಸಂದರ್ಶನ

    ಅಭಿಷೇಕ್ exclusive ಸಂದರ್ಶನ

    ಅಂಬರೀಶ್ ಅವರ ಪುತ್ರ ಅಭಿಷೇಕ್ ಸಿನಿಮಾಗೆ ಬರುತ್ತಾರಾ ಇಲ್ವಾ ಎನ್ನುವ ನಿರೀಕ್ಷೆ ಇತ್ತು. ಅಭಿಷೇಕ್ ತತ್ಮ ಜರ್ನಿ ಶುರು ಮಾಡುವಾಗ 'ಅಮರ್' ಸಿನಿಮಾದ ಬಗ್ಗೆ ಮೊದಲ exclusive ಇಂಟರ್ ವ್ಯೂ ನಾವೇ ಮಾಡಿದ್ವಿ. ಅಭಿಷೇಕ್ ಈ ಸಂದರ್ಶನವನ್ನ ಬಹಳ ಇಷ್ಟ ಪಟ್ಟಿದ್ದರು.

    ಬಿರಿಯಾನಿ ಕೊಡಲು ಆಗಲೇ ಇಲ್ಲ

    ಬಿರಿಯಾನಿ ಕೊಡಲು ಆಗಲೇ ಇಲ್ಲ

    ''ನಮ್ಮ ಮನೆಯಲ್ಲಿ ಬಿರಿಯಾನಿ ಚೆನ್ನಾಗಿ ಮಾಡುತ್ತಾರೆ ಅಂದಿದ್ದೆ. ಒಮ್ಮೆ ತಂದು ಕೊಡು ಎಂದಿದ್ದರು. ಪದೇ ಪದೇ ಸಿಕ್ಕಾಗ ಕೇಳುತ್ತಿದ್ದರು. ಆದರೆ, ಆ ಸಮಯ ಬರಲೇ ಇಲ್ಲ. ಅವರು ಈ ಕ್ಷಣಕ್ಕೆ ಇಲ್ಲವಾಗುತ್ತಾರೆ ಅಂತ ಯಾರಿಗೂ ಗೊತ್ತಿರಲಿಲ್ಲ. ಪ್ರತಿದಿನ ಅವರ ದಿನಚರಿ, ಸ್ಟಾರ್ ಲೋಕ, ಚಗಮಗ ಲೈಫ್ ನಡುವೆಯೂ ನಮ್ಮನ್ನು ನೆನಪು ಮಾಡಿಕೊಳ್ಳುತ್ತಿದ್ದರು.'' ಈ ರೀತಿ ಅಂಬರೀಶ್ ಅವರ ಸಾಕಷ್ಟು ವಿಷಯ ತಿಳಿಸಿ ತಮ್ಮ ಮಾತು ಮುಗಿಸಿದರು ಸುಗುಣ.

    English summary
    Senior kannada cinema reporter Sugun spoke about kannada actor Ambareesh.
    Tuesday, December 11, 2018, 13:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X