ಪ್ರಥಮ್ ಗೆ ನೋವು ಹೆಪ್ಪುಗಟ್ಟಿದೆ: 'ಒಳ್ಳೆ ಹುಡುಗ'ನ ಪರ ಶೀತಲ್ ಬ್ಯಾಟಿಂಗ್!

By Bharath Kumar

'ಒಳ್ಳೆ ಹುಡುಗ ಪ್ರಥಮ್' ತಮ್ಮ ನಿರಂತರ ಮಾತು ಹಾಗೂ ನಡುವಳಿಕೆಯಿಂದ 'ಬಿಗ್ ಬಾಸ್' ಮನೆಯ ಎಲ್ಲ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ವಿಚಾರದಲ್ಲಿ ಶೀತಲ್ ಶೆಟ್ಟಿ ಅವರಿಗೂ ಅದೇಷ್ಟೋ ಬಾರಿ ಪ್ರಥಮ್ ಟಾರ್ಗೆಟ್ ಆಗಿದ್ದರು.

ಈ ಮಧ್ಯೆ ಹಲವು ಬಾರಿಯ ಮನೆಯಲ್ಲಿ ಕಲೆವರಿಗೆ ಹೋಲಿಸಿಕೊಂಡ್ರೆ ಪ್ರಥಮ್ ಬೆಸ್ಟ್ ಎಂಬ ವಾದಗಳು ಬಂದಿರುವುದನ್ನ ನೀವು ಗಮನಿಸಿದ್ದೀರ. ಈಗ ಇದೇ ಮಾತುಗಳನ್ನ ಶೀತಲ್ ಶೆಟ್ಟಿ ಅವರು ಹೇಳಿದ್ದಾರೆ.['ಬಿಗ್ ಬಾಸ್' ಸದಸ್ಯರ ಅಸಲಿ ಮುಖಗಳನ್ನ ಬಿಚ್ಚಿಟ್ಟ ಶೀತಲ್ ಶೆಟ್ಟಿ!]

''ಪ್ರಥಮ್ ಮಾತಿನಿಂದ ಕಿರಿಕಿರಿ ಆಗೋದು ಕಾಮನ್. ಆದ್ರೆ, ಅದನ್ನೆಲ್ಲ ಹೊರತು ಪಡಿಸಿ, ಪ್ರಥಮ್ ಒಬ್ಬ ಒಳ್ಳೆ ವ್ಯಕ್ತಿ. ಅವರಲ್ಲಿ ನೋವುಗಳು ಹೆಪ್ಪುಗಟ್ಟಿದೆ'' ಎಂದು ಒಳ್ಳೆ ಹುಡುಗನ ಪರ ಶೀತಲ್ ಬ್ಯಾಟ್ ಬೀಸಿದ್ದಾರೆ. ಪ್ರಥಮ್ ಬಗ್ಗೆ ಶೀತಲ್ ಹೇಳಿರುವ ಮಾತುಗಳು ಮುಂದೆ ಓದಿ...

ಪ್ರಥಮ್ ಬಗ್ಗೆ, ಶೀತಲ್ ಹೇಳಿದ್ದೇನು?

ಪ್ರಥಮ್ ಬಗ್ಗೆ, ಶೀತಲ್ ಹೇಳಿದ್ದೇನು?

''ಪ್ರಥಮ್ ಆರಂಭದ ದಿನಗಳಲ್ಲಿ ಎಲ್ಲರಿಗೂ ಕಿರಿಕಿರಿ ಆಗಿದ್ದು ಹೌದು. ಪ್ರಥಮ್ ಗೆ ಇಷ್ಟೊಂದು ಜನ ಫ್ಯಾನ್ಸ್ ಇದ್ದಾರೆ. ಆದ್ರೆ, 'ಬಿಗ್ ಬಾಸ್' ಮನೆಯಲ್ಲಿ ಆಡೋ ಹಾಗೆ ಏನಾದರೂ, ಫ್ಯಾನ್ಸ್ ಮಧ್ಯೆ ಆಡಿದ್ರೆ, ಎಲ್ಲರೂ ಶಾಕ್ ಆಗ್ಬಿಡ್ತಾರೆ. ಏನೇ ಮಾತಾಡಿದ್ರೂ ಅರ್ಥ ಆಗ್ತಿರಿಲಿಲ್ಲ. ಬಟ್, ಹೋಗ್ತಾ ಹೋಗ್ತಾ ಸ್ವೀಟ್ ಆಗ್ತಾ ಬಂದ. ದಿನ ಕಳೆದ ಹಾಗೆ ಪ್ರಥಮ್ ಇಷ್ಟ ಆಗ್ತಾ ಬರ್ತಾನೆ.[ವಿಡಿಯೋ:'ಬಿಗ್ ಬಾಸ್' ಮನೆಯಿಂದ ಹೊರಬಂದ ಶೀತಲ್ ಶೆಟ್ಟಿ ಹೇಳಿದ್ದೇನು? ]

ಪ್ರಥಮ್ ಗೆ ನೋವು ಹೆಪ್ಪುಗಟ್ಟಿದೆ!

ಪ್ರಥಮ್ ಗೆ ನೋವು ಹೆಪ್ಪುಗಟ್ಟಿದೆ!

''ನನಗೆ ಅನ್ಸುತ್ತೆ ಪ್ರಥಮ್ ಗೆ ನೋವು ಹೆಪ್ಪುಗಟ್ಟಿದೆ. ಅವನ ಬಾಲ್ಯ, ಅವನು ಬೆಳೆದು ಬಂದ ರೀತಿ, ಮನೆಬಿಟ್ಟು ಬಂದ ಘಟನೆ, ಒಳ್ಳೆ ಫ್ಯಾಮಿಲಿಯಿಂದ ಬಂದ ಹುಡುಗ ಪ್ರಥಮ್. ಅದೆಲ್ಲದರಲ್ಲೂ ತುಂಬಾ ಗಟ್ಟಿಯಾಗಿದ್ದಾನೆ.['ಬಿಗ್ ಬಾಸ್' ಶುರುವಾಗುವ ಮುನ್ನವೇ ನಡೆದಿತ್ತು 'ಬಿಗ್ ಡೀಲ್'? ಯಾರು ಆ ಮೂವರು?]

ಉತ್ತಮ ಆಟಗಾರ!

ಉತ್ತಮ ಆಟಗಾರ!

''ಪ್ರಥಮ್ ಗೆ ತುಂಬಾ ಜ್ಞಾನವಿದೆ. ಆ ಜ್ಞಾನವನ್ನ ಕೆಲವು ಕಡೆ ತುಂಬಾ ಚೆನ್ನಾಗಿ ಉಪಯೋಗಿಸಿಕೊಳ್ತಾನೆ. ಸ್ಟ್ರಾಟಜಿ ಮಾಡ್ತಿದ್ದಾನೆ ಅಂತ ಹೇಳ್ತಾರೆ, 'ಬಿಗ್ ಬಾಸ್' ಮನೆಯಲ್ಲಿ ಯಾವ ಯಾವತರನೋ ಸ್ಟ್ರಾಟಜಿ ಮಾಡ್ತಿದ್ದಾರೆ. ಅದರಲ್ಲಿ ಪ್ರಥಮ್ ಒಳ್ಳೆ ರೀತಿಯಲ್ಲಿ ಸ್ಟ್ರಾಟಜಿ ಮಾಡ್ತಿದ್ದಾನೆ ಅಂದ್ರೆ ಅದರ ಬಗ್ಗೆ ಖುಷಿ ಇದೆ''.

ನಾನು ಪ್ರಥಮ್ ಗೆ ಪಾರ್ಟ್-2 ಅಂತೆ!

ನಾನು ಪ್ರಥಮ್ ಗೆ ಪಾರ್ಟ್-2 ಅಂತೆ!

''ಪ್ರಥಮ್ ಬರ್ತಾ ಬರ್ತಾ ನನಗೆ ಹತ್ತಿರವಾದ ವ್ಯಕ್ತಿ. ಅವನು ಯಾವಗಲೂ ಹೇಳ್ತಿದ್ದ, ಪ್ರಥಮ್ ಗೆ ಪಾರ್ಟ್-2 ನೀವು ಅಂತ. ನನಗೆ ಸಿಟ್ಟು ಬರ್ತಾ ಇತ್ತು. ಇವನು ಹಿಂಗೆಲ್ಲಾ ಹೇಳ್ತಾನೆ ಅಲ್ವಾ ಅಂತ. ಬಟ್, ಅಲ್ಟಿಮೆಟ್ ಆಗಿ ತುಂಬಾ ಫನ್, ತುಂಬಾ ಎಂಟರ್ ಟೈನ್ ಆಗಿರುವ ಹುಡುಗ ಪ್ರಥಮ್'',

ಪ್ರಥಮ್ ಗೆ ಒಳ್ಳೆ ಫ್ಯೂಚರ್ ಇದೆ

ಪ್ರಥಮ್ ಗೆ ಒಳ್ಳೆ ಫ್ಯೂಚರ್ ಇದೆ

''ಪ್ರಥಮ್ ಗೆ ಒಳ್ಳೆ ಫ್ಯೂಚರ್ ಇದೆ. ಸ್ವಲ್ಪ ಅರ್ಥ ಮಾಡ್ಕೋಬೇಕು. ಅವರ ವಿಷ್ಯಗಳನ್ನ, ಎದುರುಗಡೆ ಇಡುವಂತಹ ರೀತಿಯನ್ನ, ಅವರಿಗೆ ಇರುವ ಧೈರ್ಯವನ್ನ ಮೆಚ್ಚಿಕೊಳ್ಳಬೇಕು. ಪ್ರಥಮ್ ಗೆ ಸತ್ಯ ಹೇಳೊದಕ್ಕೆ ಭಯವಿಲ್ಲ. ಕೆಲವೊಮ್ಮ ನಾನು ಕೂಡ ಶಾಕ್ ಆಗಿದ್ದೀನಿ. ಹೀಗೆ ಹೇಳ್ಬಿಡ್ತಾನಲ್ಲಪ್ಪ ಅಂತ. ನಾನೂ ತುಂಬಾ ಸರಿ ಯೋಚನೆ ಮಾಡ್ತಿವಿ ಹೇಗೆ ಹೇಳೋದು ಅಂತ ? ಆದ್ರೆ, ಪ್ರಥಮ್ ಆಗಲ್ಲ. ನೇರವಾಗಿ ಹೇಳೆ ಬಿಡ್ತಾನೆ. ಆ ಟೈಮ್ ನಲ್ಲಿ ಖುಷಿಯಾಗಿದ್ದು ಇದೆ''.

'ಬಿಗ್ ಬಾಸ್' ಗೆದ್ದರೂ ಬೇಜಾರಿಲ್ಲ!

'ಬಿಗ್ ಬಾಸ್' ಗೆದ್ದರೂ ಬೇಜಾರಿಲ್ಲ!

''ಪ್ರಥಮ್ ಒಬ್ಬ ವ್ಯಕ್ತಿಯಾಗಿ ವಂಡರ್ ಫುಲ್ ಕ್ಯಾರೆಕ್ಟರ್. ಒಂದು ಪಕ್ಷ ಪ್ರಥಮ್ ಈ ಬಾರಿ 'ಬಿಗ್ ಬಾಸ್' ಗೆದ್ದರೇ ನನಗೇನೂ ಬೇಜಾರಿಲ್ಲ''

More from Filmibeat

English summary
Sheethal Shetty Positive Talks About ''Olle Huduga Pratham''. Here is the interview of News Anchor and Kannada Actress Sheethal Shetty after elimination from Bigg Boss Kannada 4 reality show. Watch the video..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X