ಸಂದರ್ಶನ: ಚಂದನ್ ಗೆ ಕ್ರೇಜಿ ಫ್ಯಾನ್ಸ್ ಆಗಿದ್ದ ಅಶ್ವಿತಿ 'ಶೋಕಿಲಾಲ'ನಿಗೆ ನಾಯಕಿಯಾದ್ರು

'ನೀವು ಮಂಗಳೂರಿನವರ..?' ಎಂದರೆ ''ನಮ್ಮ ಊರು ಮಂಗಳೂರು... ಆದರೆ, ನಾನು ಈಗ ಬೆಂಗಳೂರಿನಲ್ಲಿಯೇ ಇದ್ದೇನೆ. ಒಟ್ಟಾರೆಯಾಗಿ ನಾನು ಪಕ್ಕಾ ಕನ್ನಡದ ಹುಡುಗಿ'' ಎಂದು ಹೇಳಿ ನಕ್ಕರು ಅಶ್ವಿತಿ ಶೆಟ್ಟಿ.

ನಟಿ ಅಶ್ವಿತಿ ಶೆಟ್ಟಿ ಅನೇಕರಿಗೆ ಚಿರಪರಿಚಿತವಾದ ಹುಡುಗಿ. ಅಶ್ವಿತಿ ಶೆಟ್ಟಿ ಎನ್ನುವುದಕ್ಕಿಂತ ರಾಮಾಚಾರಿ ಚಿತ್ರದ ಸಹೋದರಿಯರು ಎಂದರೆ ಅನೇಕರಿಗೆ ಅವರ ಬಗ್ಗೆ ತಿಳಿಯುತ್ತದೆ.

ಅಶ್ವಿತಿ ಶೆಟ್ಟಿ ಹಾಗೂ ಅದ್ವಿತಿ ಶೆಟ್ಟಿ ಸ್ಯಾಂಡಲ್ ವುಡ್ ನಲ್ಲಿ ಅವಳಿ ಸುಂದರಿಯರು ಅಂತ್ತಾನೆ ಫೇಮಸ್ ಆಗಿದ್ದಾರೆ. ಇದರಲ್ಲಿ ಅಶ್ವಿತಿ ಈಗ 'ಶೋಕಿಲಾಲ'ನ ಜೋಡಿಯಾಗಿದ್ದಾರೆ.

''ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಮಾಡಿದಾಗ ನಾನು ನಟಿ ಆಗಬೇಕು ಎನ್ನುವ ಐಡಿಯಾ ಇರಲಿಲ್ಲ. ಸ್ಕ್ರೀನ್ ಮೇಲೆ ಹೇಗೆ ಕಾಣಿಸಿಕೊಳ್ಳಬೇಕು ಎಂದು ತಿಳಿದಿರಲಿಲ್ಲ. ಹಾಗಾಗಿ ಲುಕ್ ಬಗ್ಗೆ ಗಮನ ಕೊಟ್ಟಿರಲಿಲ್ಲ. ಆದರೆ, ಈಗ ನಾನು ಫಿಟ್ ಆಗಿ ತುಂಬ ಬದಲಾಗಿದ್ದೇನೆ.'' ಎಂದು ಹೇಳುತ್ತಾರೆ ಅಶ್ವಿತಿ ಶೆಟ್ಟಿ.

ತಮ್ಮ 'ಶೋಕಿಲಾಲ' ಹಾಡಿನ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆಗೆ ಅಶ್ವಿತಿ ಶೆಟ್ಟಿ ಮಾತನಾಡಿದ್ದಾರೆ.

ಸಂದರ್ಶನ : ನವೀನ್ ಎಮ್ ಎಸ್ (ನವಿ ಕನಸು)

ಇದು ನಿಮ್ಮ ಮೊದಲ Rap ಹಾಡು.. ಹೇಗಿತ್ತು ಅನುಭವ?

ಇದು ನಿಮ್ಮ ಮೊದಲ Rap ಹಾಡು.. ಹೇಗಿತ್ತು ಅನುಭವ?

''ಹಾಡಿನ ಅನುಭವ ತುಂಬ ಚೆನ್ನಾಗಿತ್ತು. ನಾನು ಬೆಸಿಕಲಿ ಡ್ಯಾನ್ಸರ್. ಚಂದನ್ ಅವರ ಕ್ರೇಜಿ ಫ್ಯಾನ್ ಆಗಿದೆ. ಸಿನಿಮಾಗಿಂತ ಮ್ಯೂಸಿಕ್ ವಿಡಿಯೋದಲ್ಲಿ ನಟಿಸೋದು ಬೇರೆ ರೀತಿ ಇರುತ್ತದೆ. ಇಂತಹ ದೊಡ್ಡ ಹಾಡಿನಲ್ಲಿ ನನಗೂ ಒಂದು ಪಾತ್ರ ನೀಡಿದ್ದಕ್ಕೆ ಖುಷಿ ಆಗುತ್ತದೆ.''

ಚಂದನ್ ಹಾಡಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಹೇಗೆ ಕೂಡಿ ಬಂತು?

ಚಂದನ್ ಹಾಡಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಹೇಗೆ ಕೂಡಿ ಬಂತು?

''ಚಂದನ್ ಅವರ ಎಲ್ಲ ಹಾಡುಗಳು ನನಗೆ ತುಂಬ ಇಷ್ಟ. ಒಮ್ಮೆ ನನ್ನ ಫ್ರೆಂಡ್ ಗೆ ಚಂದನ್ ಹಾಡಿನಲ್ಲಿ ನಾನು ಕಾಣಿಸಿಕೊಳ್ಳುವ ಆಸೆ ಇದೆ ಎಂದು ಹೇಳಿಕೊಂಡಿದ್ದೆ. ವರ್ಷಗಳ ಬಳಿಕ ಚಂದನ್ ಅವರು ನನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿನ ವಿಡಿಯೋಗಳನ್ನು ನೋಡಿ ನನಗೆ ಅವಕಾಶ ನೀಡಿದರು. ನನ್ನ ಟ್ಯಾಲೆಂಟ್ ಗಮನಿಸಿ 'ನೀನು ನನ್ನ ಪ್ರಾಜಿಕ್ಟ್ ನಲ್ಲಿ ಇರುತ್ತೀಯಾ' ಎಂದು ಒಂದು ಅವಕಾಶ ನೀಡಿದರು. ನನ್ನ ಕನಸು ನನಸಾಯ್ತು ಎನ್ನುವ ಖುಷಿ ಇದೆ.''

ಡ್ಯಾನ್ಸರ್ ಆಗಿರುವ ನೀವು ಎಷ್ಟು ಕಾರ್ಯಕ್ರಮಗಳ ನೀಡಿದ್ದೀರಿ?

ಡ್ಯಾನ್ಸರ್ ಆಗಿರುವ ನೀವು ಎಷ್ಟು ಕಾರ್ಯಕ್ರಮಗಳ ನೀಡಿದ್ದೀರಿ?

''ನಾನು ಮತ್ತು ಅಕ್ಕ 50ಕ್ಕೂ ಹೆಚ್ಚು ಡ್ಯಾನ್ಸ್ ಕಾರ್ಯಕ್ರಮಗಳನ್ನು ದೇಶ ವಿದೇಶದಲ್ಲಿ ನೀಡಿದ್ದೇನೆ. 5 ರಿಯಾಲಿಟಿ ಶೋ ಮಾಡಿದ್ದೇನೆ. 2012 ರಲ್ಲಿ 'ಇಂಡಿಯಾ ಗಾಟ್ ಟ್ಯಾಲೆಂಟ್' ಬಳಿಕ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋ ನಲ್ಲಿ ಭಾಗಿಯಾಗಿದೆ. ಡ್ಯಾನ್ಸ್ ಮೂಲಕ 'ಶೆಟ್ಟಿ ಸಿಸ್ಟರ್ಸ್' ಬಿರುದು ಪಡೆದವು. ಇದೆಲ್ಲದರ ನಂತರ 'ಶೋಕಿಲಾಲ' ಹಾಡಿನಲ್ಲಿ ನನ್ನ ಡ್ಯಾನ್ಸ್ ತೋರಿಸುವ ಅವಕಾಶ ಸಿಕ್ಕಿದೆ.''

'ಶೋಕಿಲಾಲ' ಶೂಟಿಂಗ್ ಹೇಗಾಯ್ತು, ಚಂದನ್ ಜೊತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

'ಶೋಕಿಲಾಲ' ಶೂಟಿಂಗ್ ಹೇಗಾಯ್ತು, ಚಂದನ್ ಜೊತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

''ಕಾಸ್ಟೂಮ್ ಬಗ್ಗೆ ನಾನು ತುಂಬ ಪ್ರಾಮುಖ್ಯತೆ ನೀಡುತ್ತೇನೆ. ಹಾಗಾಗಿ ಹಾಡಿನಲ್ಲಿ ಬರುವ ಕಾಸ್ಟೂಮ್ ಹಾಗೂ ಮೇಕಪ್ ನಾನೇ ಹೇಳಿ ಮಾಡಿಸಿಕೊಂಡೆ. ಶೂಟಿಂಗ್ ನಲ್ಲಿ ಮೊದಲು ಸ್ಪಲ್ಪ ಭಯ ಇತ್ತು. ವಿಶೇಷ ಎಂದರೆ, ಹಾಡಿನ ಕೊರಿಯೋಗ್ರಫಿ ಆನ್ ದಿ ಸ್ಪಾಟ್ ಮಾಡಿದ್ದು. ನಾನು ಶೂಟಿಂಗ್ ಗೆ ಮುಂಚೆ ಹಾಡನ್ನೂ ಕೇಳಲಿಲ್ಲ. ಅದು ತುಂಬ ಚಾಲೆಂಜ್ ಆಗಿತ್ತು. ಎಲ್ಲರೂ ತುಂಬ ಚೆನ್ನಾಗಿ ಸಪೋರ್ಟ್ ಮಾಡಿದರು.''

ಹಾಡು ಬಿಡುಗಡೆಯಾದ ಮೇಲೆ ಹೇಗಿದೆ ರೆಸ್ಪಾನ್ಸ್ ?

ಹಾಡು ಬಿಡುಗಡೆಯಾದ ಮೇಲೆ ಹೇಗಿದೆ ರೆಸ್ಪಾನ್ಸ್ ?

''ನಿನ್ನೆ ಆರು ಗಂಟೆಯಿಂದ ನಾನು ನನ್ನ ಮೊಬೈಲ್ ಕೆಳಗೆ ಇಟ್ಟಿಲ್ಲ. ಅಷ್ಟೊಂದು ಕಾಲ್ ಗಳು, ಮೆಸೇಜ್ ಗಳು ಬರುತ್ತಿವೆ. ಎಲ್ಲರೂ ಹಾಡನ್ನು ತುಂಬ ಮೆಚ್ಚಿಕೊಂಡಿದ್ದಾರೆ. ಹಾಡಿನ ಪ್ರಭಾವದಿಂದ ಇನ್ಸ್ಟಾಗ್ರಾಮ್ ನಲ್ಲಿ ಫಾಲೋಹರ್ಸ್ ಗಳ ಸಂಖ್ಯೆ ಕೂಡ ಜಾಸ್ತಿ ಆಗುತ್ತಿದೆ.''

ಮುಂದಿನ ಯೋಜನೆಗಳು ಏನು ?

ಮುಂದಿನ ಯೋಜನೆಗಳು ಏನು ?

''ನಾನು ಡ್ಯಾನ್ಸ್, ಆಕ್ಟಿಂಗ್ ಹಾಗೂ ಮಾಡಲಿಂಗ್ ಮಾಡುತ್ತೇನೆ. ಒಂದೇ ದಾರಿಯಲ್ಲಿ ಹೋಗದೆ, ಎಲ್ಲ ಕಡೆಯಿಂದ ಪ್ರಯತ್ನ ಮಾಡಬೇಕು. ಟ್ಯಾಲೆಂಟ್ ಇದ್ದಾಗ ಯಾವುದೇ ಒಳ್ಳೆಯ ಅವಕಾಶಗಳು ಬಂದರು ಸ್ವೀಕರಿಸಬೇಕು. ಮುಂದೆ ನನ್ನನ್ನು ನಾನು ಬಿಗ್ ಸ್ಕ್ರೀನ್ ಮೇಲೆ ನೋಡಲು ಕಾಯುತ್ತಿದ್ದೇನೆ. ಆ ಅರ್ಹತೆ ಇದೆ ಎನ್ನುವುದು ನನ್ನ ಭಾವನೆ. ಲೈಫ್ ನಲ್ಲಿ ಏನೇ ಬಂದರೂ ತೆಗೆದುಕೊಳ್ಳುತ್ತೇನೆ.''

More from Filmibeat

English summary
'Shokilala' rap song actress Ashvithi Shetty interview. 'Shokilala' is Chandan Shetty's new rap song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X