For Quick Alerts
ALLOW NOTIFICATIONS  
For Daily Alerts

ಪಿಯುಸಿಯಲ್ಲಿ ರಾಜ್ಯಕ್ಕೆ 7ನೇ Rank ಪಡೆದ 'ರಂಗ'ನಾಯಕಿ

|

ಸಾಮಾನ್ಯವಾಗಿ ಹೆಚ್ಚು ಅಂಕಗಳಿಸುವ ಮಕ್ಕಳು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗಿಯಾಗುವುದು ಕಡಿಮೆ. ಅದೇ ರೀತಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗೆಲ್ಲುವ ಮಕ್ಕಳು ಬುಕ್ ಹಿಡಿಯುವುದು ಕಡಿಮೆ. ಹೀಗಿರುವಾಗ, ಈ ಎರಡೂ ವಿಭಾಗದಲ್ಲಿಯೂ ಮಿಂಚುವ ಮಕ್ಕಳು ತೀರ ಅಪರೂಪ.

ಇತ್ತ ತಂದೆ, ತಾಯಿ ಕೂಡ ಓದಲು ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಮಕ್ಕಳನ್ನು ನಾಟಕ, ಡ್ಯಾನ್ಸ್, ಸಂಗೀತ ಈ ರೀತಿ ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರ ಇಡುತ್ತಾರೆ. ಆದರೆ, ಇಲ್ಲೊಬ್ಬಳು ವಿದ್ಯಾರ್ಥಿನಿ ಈ ಎರಡೂ ವಿಭಾಗದಲ್ಲಿ ಗೆದ್ದು ತೋರಿಸಿದ್ದಾರೆ.

ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗಿ ರಾಜ್ಯಕ್ಕೆ ಪ್ರಥಮ

ನಿನ್ನೆ ದ್ವಿತೀಯ ಪಿಯುಸಿ ಫಲಿತಾಂಶ ಬಂದಿದ್ದು, ಅದರಲ್ಲಿ ಸಿಂಚನಾ ಎಂಬ ಬೆಂಗಳೂರಿನ ಹುಡುಗಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 7ನೇ ರಾಂಕ್ ಪಡೆದಿದ್ದಾರೆ. ನಾಟಕಗಳ ನಿರಂತರ ತಾಲಿಮು, ವಾರಾಂತ್ಯದ ಪ್ರದರ್ಶನಗಳು, ಭರತನಾಟ್ಯ, ಡ್ಯಾನ್ಸ್ ಇವುಗಳ ಜೊತೆಗೆ ಓದಿ Rank ಬಂದಿದ್ದಾರೆ.

Rank ಬಂದ ಸಿಂಚನಾ ತಮ್ಮ ಖುಷಿಯನ್ನು 'ಒನ್ ಇಂಡಿಯಾ'ದ ಜೊತೆಗೆ ಹಂಚಿಕೊಂಡಿದ್ದಾರೆ. ನಾಟಕ ಅವರ ಓದಿಗೆ ಹೇಗೆ ಸಹಾಯ ಆಯ್ತು ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ, ಸಿಂಚನಾ ಅವರ ಪೂರ್ಣ ಸಂದರ್ಶನ ಮುಂದಿದೆ....

ಸಂದರ್ಶನ : ನವಿ ಕನಸು (ನವೀನ್ ಎಮ್ ಎಸ್ )

ಮಾರ್ಕ್ಸ್ ನೋಡಿದ ತಕ್ಷಣ ಹೇಗನಿಸಿತು, ಅಪ್ಪ, ಅಮ್ಮ ಏನ್ ಹೇಳಿದ್ರು?

ಮಾರ್ಕ್ಸ್ ನೋಡಿದ ತಕ್ಷಣ ಹೇಗನಿಸಿತು, ಅಪ್ಪ, ಅಮ್ಮ ಏನ್ ಹೇಳಿದ್ರು?

''ಮಾರ್ಕ್ಸ್ ನೋಡಿದ ತಕ್ಷಣ ಸಿಕ್ಕಾಪಟ್ಟೆ ಖುಷಿಯಾಯ್ತು. ಆ ಕ್ಷಣಕ್ಕೆ ನನ್ನ ಖುಷಿಯನ್ನು ಯಾರಿಗೂ ಹೇಳಲಿಲ್ಲ. ಆಮೇಲೆ ಅಶ್ವಿತಾ ಅಕ್ಕ ನೋಡಿ ಎಲ್ಲರಿಗೆ ಹೇಳಿದರು. ರಿಸಲ್ಟ್ ನೋಡಿ ಸೂಪರ್ ಡೂಪರ್ ಖುಷಿ ಆಗಿತ್ತು ನನಗೆ. ಅಪ್ಪ ಅಮ್ಮ ಕೂಡ ಸಖತ್ ಖುಷಿಯಾದರು.''

ಪರೀಕ್ಷೆ ಬರೆದಾಗ ಎಷ್ಟು ಮಾರ್ಕ್ಸ್ ಬರಬಹುದು ಅಂತ ನಿನಗೆ ಅನಿಸಿತ್ತು ?

ಪರೀಕ್ಷೆ ಬರೆದಾಗ ಎಷ್ಟು ಮಾರ್ಕ್ಸ್ ಬರಬಹುದು ಅಂತ ನಿನಗೆ ಅನಿಸಿತ್ತು ?

''ಕಾಲೇಜ್ ನಲ್ಲಿ ನನಗೆ ತುಂಬ ಚೆನ್ನಾಗಿ ಮಾರ್ಕ್ಸ್ ಬರುತ್ತಿತ್ತು. ಹಾಗಾಗಿ ನಾನು ನನ್ನ ನೂರಕ್ಕೆ ನೂರರಷ್ಟು ಶ್ರಮ ಹಾಕಿದೆ. ಮಾರ್ಕ್ಸ್ ಚೆನ್ನಾಗಿ ಬರಬೇಕು ಎನ್ನುವ ಆಸೆ, ನಂಬಿಕೆ ಇತ್ತು, ಈಗ ಹಾಗೆಯೇ ಆಯ್ತು. ಇನ್ನೊಂದು ವಿಶೇಷ ಅಂದರೆ, ನನ್ನ ಮತ್ತು ನನ್ನ ಫ್ರೆಂಡ್ ನಡುವೆ ಕೇವಲ ಹತ್ತು ಮಾರ್ಕ್ಸ್ ಅಷ್ಟೇ ವ್ಯತ್ಯಾಸ ಇದೆ. ಅದು ಕೂಡ ಇಬ್ಬರಿಗೂ ಖುಷಿ ನೀಡಿತು.''

ಪಿಯುಸಿ ಫಲಿತಾಂಶ:ಕೊಟ್ಟೂರಿನ 'ಇಂದೂ' ಕಾಲೇಜಿಗೆ 9 Rank

ನಾಟಕ, ನೃತ್ಯ ಅಂತ ಮಕ್ಕಳು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಓದುವುದು ಕಡಿಮೆ ಆಗುತ್ತದೆ ಎನ್ನುವುದು ಅನೇಕ ಪೋಷಕರ ಆರೋಪ, ಅದು ನಿಜವೇ?

ನಾಟಕ, ನೃತ್ಯ ಅಂತ ಮಕ್ಕಳು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಓದುವುದು ಕಡಿಮೆ ಆಗುತ್ತದೆ ಎನ್ನುವುದು ಅನೇಕ ಪೋಷಕರ ಆರೋಪ, ಅದು ನಿಜವೇ?

''ನಾಟಕ, ಡ್ಯಾನ್ಸ್, ಸಂಗೀತ ಈ ಕ್ಷೇತ್ರದಲ್ಲಿ ಮಕ್ಕಳು ಇದ್ದರೆ ಓದಿನ ಆಸಕ್ತಿ ಕಡಿಮೆ ಆಗುತ್ತದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ನಾನು ಕಾಲೇಜ್ ಗಿಂತ ಹೆಚ್ಚು ನಾಟಕದ ಪ್ರಾಕ್ಟಿಸ್ ನಲ್ಲಿಯೇ ಇರುತ್ತಿದ್ದೆ. ಕಾಲೇಜ್ ನಲ್ಲಿ ಪಾಠ ಮಾಡುವಾಗ ಅಲ್ಲಿ ಚೆನ್ನಾಗಿ ಕೇಳಿದರೆ, ಐದಾರು ಗಂಟೆ ಓದುವ ಅಗತ್ಯ ಇಲ್ಲ. ಅದರಲ್ಲಿಯೂ ಎಸ್ ಎಸ್ ಎಲ್ ಸಿ ಅಥವಾ ದ್ವಿತೀಯ ಪಿಯುಸಿ ಎಂದ ತಕ್ಷಣ ಅದನ್ನು ಹೆಚ್ಚು ಒತ್ತಡ ನೀಡದೆ, ಅದು ಕೂಡ ಒಂದು ಪರೀಕ್ಷೆ ಎಂದು ತಾಳ್ಮೆಯಿಂದ ಬರೆದರೆ ಒಳ್ಳೆಯ ಅಂಕ ಬರುತ್ತದೆ.''

ನಾಟಕ ನಿಮ್ಮ ಓದಿಗೆ ಸಹಾಯ ಮಾಡಿದೆಯೇ?, ಅದು ಹೇಗೆ?

ನಾಟಕ ನಿಮ್ಮ ಓದಿಗೆ ಸಹಾಯ ಮಾಡಿದೆಯೇ?, ಅದು ಹೇಗೆ?

''ನಾಟಕದಲ್ಲಿ ನಾವು ಅಷ್ಟೊಂದು ಡೈಲಾಗ್ ಗಳನ್ನು, ಮೊಮೆಂಟ್ಸ್ ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ. ಅದು ನನಗೆ ಜ್ಞಾಪಕ ಶಕ್ತಿಗೆ ತುಂಬ ಸಹಾಯ ಮಾಡಿದೆ. ನಾಟಕದಿಂದ ನಮ್ಮ ಓದಿಗೆ ನೇರವಾಗಿ ಸಹಾಯ ಆಗುತ್ತದೆಯೋ... ಇಲ್ವೋ...ಗೊತ್ತಿಲ್ಲ. ಆದರೆ, ನಮ್ಮ ವ್ಯಕ್ತಿತ್ವಕ್ಕೆ ಅದು ಖಂಡಿತ ಸಹಾಯ ಮಾಡುತ್ತದೆ.''

ದ್ವಿತೀಯ ಪಿಯುಸಿ ಫಲಿತಾಂಶ: ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?

ಮಾರ್ಕ್ಸ್ ಕಾರ್ಡ್ ನ ಮಾರ್ಕ್ಸ್ ಹೆಚ್ಚು ಖುಷಿ ನೀಡುತ್ತದೆಯೋ, ವೇದಿಕೆ ಮೇಲೆ ನಿಂತಾಗ ಬರುವ ಜನರ ಚಪ್ಪಾಳೆ ಹೆಚ್ಚು ಖುಷಿ ನೀಡುತ್ತದೆಯೋ?

ಮಾರ್ಕ್ಸ್ ಕಾರ್ಡ್ ನ ಮಾರ್ಕ್ಸ್ ಹೆಚ್ಚು ಖುಷಿ ನೀಡುತ್ತದೆಯೋ, ವೇದಿಕೆ ಮೇಲೆ ನಿಂತಾಗ ಬರುವ ಜನರ ಚಪ್ಪಾಳೆ ಹೆಚ್ಚು ಖುಷಿ ನೀಡುತ್ತದೆಯೋ?

''ನನಗೆ ಎರಡೂ ಖುಷಿ ನೀಡುತ್ತದೆ. ಎರಡೂ ಕೂಡ ಬಹಳ ಮುಖ್ಯ. ಆದರೆ, ಇವೆರಡರಲ್ಲಿ ನನಗೆ ಯಾವುದು ಸ್ವಲ್ಪ ಹೆಚ್ಚು ಎಂದು ಹೇಳಬೇಕು ಅಂದರೆ, ಅದು ನಾಟಕ. ನಾಟಕ ಚೆನ್ನಾಗಿ ಮಾಡಿದೆ ಎಂದಾಗ ಜನ ಚಪ್ಪಾಳೆ ತಟ್ಟುತಾರಲ್ಲ ಅದೊಂದು ಅದ್ಭುತ ಆನಂದ. ಹಾಗೆಂದು ಮಾರ್ಕ್ಸ್ ಮುಖ್ಯವಲ್ಲ ಅಂತ ಅಲ್ಲ. ಎಲ್ಲರೂ ಮೊದಲು ಕೇಳುವುದು 'ನಿನ್ನ ಮಾರ್ಕ್ಸ್ ಎಷ್ಟು..?' ಅಂತ. ಆ ಕಾರಣಕ್ಕಾದರೂ ನನಗೆ ಮಾರ್ಕ್ಸ್ ಮುಖ್ಯ ಅನಿಸುತ್ತದೆ.''

ಪರೀಕ್ಷೆ ಸಮಯದಲ್ಲಿ ಹೇಗಿತ್ತು ನಿಮ್ಮ ತಯಾರಿ?

ಪರೀಕ್ಷೆ ಸಮಯದಲ್ಲಿ ಹೇಗಿತ್ತು ನಿಮ್ಮ ತಯಾರಿ?

''ನಾನು ಹೆಚ್ಚು ಓದುವುದಿಲ್ಲ. ಪರೀಕ್ಷೆ ಸಮಯದಲ್ಲಿ ಓದುವಾಗಲೂ ಅಪ್ಪ ಎಷ್ಟೂ ಓದುತ್ತೀಯ ಎಂದು ಹೇಳುತ್ತಿದ್ದರು. ನನಗೆ ಅಪ್ಪ, ಅಮ್ಮನಿಂದ ಯಾವುದೇ ಒತ್ತಡ ಇರಲಿಲ್ಲ. ಆ ಕಾರಣ ನಾನು ಆರಾಮಾಗಿ ಓದಿಕೊಳ್ಳುತ್ತಿದೆ. ಮನೆಯ ವಾತಾವರಣ ಚೆನ್ನಾಗಿ ಇದ್ದರೆ, ಅದು ಓದಲು ತುಂಬ ಖುಷಿ ನೀಡುತ್ತದೆ. ಓದು ಓದು ಓದು ಎಂದರೆ ಒತ್ತಡ ಬೀಳುತ್ತದೆ.''

ದ್ವಿತೀಯ ಪಿಯುಸಿ ಫಲಿತಾಂಶ: ಕೃತಿ, ವರ್ಷಿಣಿ, ಸ್ವಾತಿ ಟಾಪರ್ಸ್

ಪರೀಕ್ಷೆ ಎಂದ ಮೇಲೆ ಫೇಲ್ ಆಗುವುದು ಇರುತ್ತದೆ. ಫೇಲ್ ಆದ ಮಾತ್ರಕ್ಕೆ ಮಕ್ಕಳನ್ನು ಬೈಯುವುದು ಸರಿಯೇ?

ಪರೀಕ್ಷೆ ಎಂದ ಮೇಲೆ ಫೇಲ್ ಆಗುವುದು ಇರುತ್ತದೆ. ಫೇಲ್ ಆದ ಮಾತ್ರಕ್ಕೆ ಮಕ್ಕಳನ್ನು ಬೈಯುವುದು ಸರಿಯೇ?

''ಸೋಲೇ ಗೆಲುವಿನ ಮೆಟ್ಟಲು ಅಂತ್ತಾರೆ. ಫೇಲ್ ಆದ ತಕ್ಷಣ ಅದೇ ಕೊನೆ ಅಲ್ಲ. ಎಷ್ಟೋ ಜನ ಫೇಲ್ ಆದ ತಕ್ಷಣ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆ ರೀತಿ ಮಾಡಬಾರದು. ಮತ್ತೆ ಪರೀಕ್ಷೆ ಬರೆದು ಪಾಸ್ ಆಗಬಹುದು. ಎಲ್ಲ ಮಕ್ಕಳು ಒಂದೇ ರೀತಿ ಇರಲ್ಲ. ಎಲ್ಲರನ್ನೂ ಮಾರ್ಕ್ ಮೂಲಕ ಅಳೆಯಲು ಸಾಧ್ಯ ಇಲ್ಲ.''

ಕಾಲೇಜ್ ನಲ್ಲಿ ಏನ್ ಹೇಳಿದರು? ಟಿವಿ ಸಂದರ್ಶನದ ಅನುಭವ ಹೇಗಿತ್ತು?

ಕಾಲೇಜ್ ನಲ್ಲಿ ಏನ್ ಹೇಳಿದರು? ಟಿವಿ ಸಂದರ್ಶನದ ಅನುಭವ ಹೇಗಿತ್ತು?

ಟಿವಿ ಸಂದರ್ಶನಗಳು ತುಂಬ ಚೆನ್ನಾಗಿತ್ತು. ಮುಂಚೆಯಿಂದ ಅದು ನನಗೆ ಇಷ್ಟ. ನಮ್ಮ ಕಾಲೇಜಿನಲ್ಲಿಯೂ ನನ್ನ ಮಾರ್ಕ್ಸ್ ಸಂತಸ ತಂದಿದೆ. ನಿನ್ನೆ ಕಾಲೇಜ್ ಗೆ ಕರೆಸಿದ್ದರು. ಎಲ್ಲರೂ ಖುಷಿ ಪಟ್ಟರು.

ಪರೀಕ್ಷೆಯಲ್ಲಿ Rank ಬಂದಿದ್ದು ಆಗಿದೆ.. ಸೋ..ಮುಂದಿನ ಗುರಿ?

ಪರೀಕ್ಷೆಯಲ್ಲಿ Rank ಬಂದಿದ್ದು ಆಗಿದೆ.. ಸೋ..ಮುಂದಿನ ಗುರಿ?

''ಮುಂದೆ ಜರ್ನಲಿಸಂ ಇಂಗ್ಲೀಷ್ ಲಿಟರೇಚರ್ ಓದಬೇಕು ಅಂತ ಇದ್ದೀನಿ. ನನಗೆ ನಾಟಕಗಳಲ್ಲಿ ಆಸಕ್ತಿ ಇರುವುದರಿಂದ ಅದರಲ್ಲಿಯೂ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆ ಇದೆ.'' ಹೀಗೆ ಹೇಳಿ ನಗುತ್ತ ತಮ್ಮ ಮಾತು ಮುಗಿಸಿದರು ಸಿಂಚನಾ.

English summary
2nd puc result 2019 : Sinchana Shylesh Bengaluru based a young theater girl secured state 7th RANK in 2nd PUC. Here is and Sinchana Shylesh interview.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more