ತಾರೇಶ್ ಹಾಗೂ ಸ್ವಾತಿ ಜೋಡಿಯ ಪ್ರೀತಿ.. ಮದುವೆ.. ಸೋಶಿಯಲ್ ಮೀಡಿಯಾ ಜರ್ನಿ

ಪ್ರೀತಿ ಮಾಡುವುದು ಸುಲಭ. ಆದರೆ ಆ ಪ್ರೀತಿಯನ್ನು ಉಳಿಸಿಕೊಳ್ಳುವುದು, ಪ್ರೀತಿಸಿದವರನ್ನು ಕೈಹಿಡಿದು ಕೊನೆಯವರೆಗೆ ನನಗೆ ನೀನು, ನಿನಗೆ ನಾನು ಎಂದು ಬದುಕುವುದು ಕಷ್ಟ. ಇದೇ ಕಾರಣಕ್ಕೆ ಎಷ್ಟೋ ಪ್ರೇಮಿಗಳು ಕಾರಣಾಂತರಗಳಿಂದ ದೂರಾಗಿಬಿಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರಿಗೆ ತಾರೇಶ್ ಹಾಗೂ ಸ್ವಾತಿ ದಂಪತಿ ಚಿರಪರಿಚಿತ ಮುಖಗಳು.

ಇನ್‌ಸ್ಟಾಗ್ರಾಮ್, ಫೇಸ್ಬುಕ್‌ ಓಪನ್ ಮಾಡಿ ಸ್ಕ್ರಾಲ್ ಮಾಡಿದರೆ ತಾರೇಶ್ ಹಾಗೂ ಸ್ವಾತಿ ರೀಲ್ಸ್ ಒಂದಾದರೂ ಕಣ್ಣಿಗೆ ರಾಚುತ್ತದೆ. ಹೀಗೆ ನೋಡ್ತಾ ಹೋದರೆ ಸಾಕಷ್ಟು ಫನ್ನಿ ವೀಡಿಯೋಗಳು ಸಿಗುತ್ತವೆ. ಸಾಕಷ್ಟು ಜಾಬ್ ಅಪ್‌ಡೇಟ್‌ಗಳನ್ನು ತಾರೇಶ್ ಕೊಡುತ್ತಾರೆ. ಇವರಿಬ್ಬರದ್ದು 13-14 ವರ್ಷಗಳ ಲವ್ ಅಂಡ್ ಮ್ಯಾರೇಜ್ ಸ್ಟೋರಿ. ಪೋಷಕರು ಒಪ್ಪದೇ ಇದ್ದರೂ ಸ್ವಾತಿ ಮನೆ ಬಿಟ್ಟು ಬಂದು ತಾರೇಶ್ ಜೊತೆ ಮದುವೆ ಆಗಿದ್ದರು.

Social Media Stars Tharesh and Swathi Share 14-Year Love Journey and Valentine s Day Message

ಮದುವೆ ಬಳಿಕ ಸ್ವಾತಿ ತವರುಮನೆಯವರು ಮಾತನಾಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಸ್ವಾತಿ ಪೋಷಕರು ಒಪ್ಪಿದ್ದು 3 ವರ್ಷಗಳ ಬಳಿಕ ತವರು ಮನೆಗೆ ಪತಿ ಸಮೇತ ಹೋಗಿ ಬಂದಿದ್ದಾರೆ. ಅದನ್ನು ಕೂಡ ವೀಡಿಯೋ ಮಾಡಿ ದಂಪತಿ ಹಂಚಿಕೊಂಡಿದ್ದಾರೆ. ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ದಂಪತಿ ತಮ್ಮಿಬ್ಬರ ಲವ್ ಸ್ಟೋರಿ ಹಾಗೂ ಸೋಶಿಯಲ್ ಮೀಡಿಯಾ ಜರ್ನಿಯನ್ನು ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ.

ಇಬ್ಬರ ಲವ್ ಸ್ಟೋರಿ ಶುರುವಾಗಿದ್ದು?

ಡಿಪ್ಲೊಮೊ ಓದುವಾಗ ಸ್ವಾತಿ ನನ್ನ ಜ್ಯೂನಿಯರ್ ಆಗಿದ್ಲು. ಅಲ್ಲಿ ಲವ್ ಅಟ್ ಫಸ್ಟ್ ಸೈಟ್ ಆಗಿದ್ದು. ಕಾಮನ್ ಫ್ರೆಂಡ್ ಮೂಲಕ ಫೋನ್ ನಂಬರ್ ತಗೊಂಡು ಫ್ರೆಂಡ್ ಆಗಿ ಬಳಿಕ ಪ್ರಪೋಸ್ ಮಾಡಿದ್ದು ಎಂದು ತಾರೇಶ್ ನೆನಪಿಸಿಕೊಂಡಿದ್ದಾರೆ. ಇಷ್ಟ ಆಗಿದ್ರೆ ಪಿಂಕ್ ಕಲರ್ ಡ್ರೆಸ್ ಹಾಕ್ಕೊಂಡು, ಪಾಸ್‌ಪೋರ್ಟ್ ಸೈಜ್ ಫೋಟೊ ತರೋಕೆ ಹೇಳಿದ್ದೆ. ಪಿಂಕ್ ಡ್ರೆಸ್ ಹಾಕಿಕೊಂಡು ಬಂದ್ರು, ಫೋಟೊ ಇಲ್ಲ ಎಂದು ತಂದಿರಲಿಲ್ಲ. ಹೀಗೆ ಲವ್ ಸ್ಟೋರಿ ಶುರುವಾಯಿತು.

Social Media Stars Tharesh and Swathi Share 14-Year Love Journey and Valentine s Day Message

ಮದುವೆಗೆ ಏನೆಲ್ಲಾ ಸಮಸ್ಯೆ ಆಗಿತ್ತು?

ಭಾರೀ ಸಮಸ್ಯೆ ಏನು ಆಗಿರಲಿಲ್ಲ. ಸ್ವಾತಿ ಪೋಷಕರು ಮದುವೆಗೆ ಒಪ್ಪಲಿಲ್ಲ. ಹಾಗಾಗಿ ನಮ್ಮ ಪೋಷಕರ ಜೊತೆಗೆ ಹೋಗಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದೆವು. ಇತ್ತೀಚೆಗೆ ಸ್ವಾತಿ ಅವರ ಮನೆಗೆ ಹೋಗಿ ಬಂದ್ವಿ. ಅವರ ತಾಯಿಗೆ ನಮ್ಮ ಮದುವೆ ಇಷ್ಟವಿರಲಿಲ್ಲ. ಈಗ ಎಲ್ಲಾ ಒಪ್ಪಿಕೊಂಡಿದ್ದಾರೆ. ಈಗ ಚೆನ್ನಾಗಿ ಮಾತನಾಡುತ್ತಾರೆ. ಎಲ್ಲಾ ಸುಖಾಂತ್ಯವಾದಂತೆ ಆಗಿದೆ.

ಇಬ್ಬರ ಉದ್ಯೋಗ? ಬ್ಯುಸಿನೆಸ್?

ನಾನು ಮೊದಲಿನಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದೀನಿ. ಕೊಯಂಬತ್ತೂರಿನ ಹೋಟೆಲ್‌ವೊಂದರಲ್ಲಿ ಸ್ವಾತಿ ಕೆಲಸ ಮಾಡ್ತಿದ್ಲು. ಈಗ ಕೆಲಸ ಬಿಟ್ಟು ನಮ್ಮದೇ ಬಟ್ಟೆ ಶೋರೂಂ ಜವಾಬ್ದಾರಿ ವಹಿಸಿಕೊಂಡಿದ್ದಾಳೆ. ಇತ್ತೀಚೆಗೆ ಕೊಯಂಬತ್ತೂರಿನಿಂದ ಹುಟ್ಟೂರು ಹಾಸನಕ್ಕೆ ವಾಸ್ತವ್ಯ ಬದಲಾಯಿಸಿದ್ದೇವೆ.

ವ್ಯಾಲಂಟೈನ್ಸ್ ಡೇ ಸಂಭ್ರಮ ಹೇಗಿದೆ?

ನಾವು ಯಾವತ್ತು ವ್ಯಾಲಂಟೈನ್ಸ್ ಡೇ ಅಂತೆಲ್ಲಾ ಸೆಲೆಬ್ರೇಟ್ ಮಾಡಿಲ್ಲ. ಪ್ರತಿ ದಿನವೂ ಪ್ರೀತಿಯ ಸೆಲೆಬ್ರೇಷನ್ ನಡೆಯುತ್ತದೆ. ಯಾವಾಗ ಸರ್‌ಪ್ರೈಸ್ ಕೊಡಬೇಕು ಅಂದ್ರೆ, ಆಗ ಕೊಡ್ತೀವಿ. ಅದಕ್ಕಾಗಿ ಇಂಥದ್ದೇ ವಿಶೇಷ ದಿನ ಅಂತ ಕಾಯುವುದಿಲ್ಲ. ಕಂಟೆಂಟ್ ಮಾಡೋಕೆ ಸೆಲಬ್ರೇಟ್ ಮಾಡಬೇಕಷ್ಟೆ. ಅವಕಾಶ ಸಿಕ್ಕಾಗ ಸ್ಪೆಷಲ್ ಮೊಮೆಂಟ್ಸ್ ಕ್ರಿಯೇಟ್ ಮಾಡಿಕೊಳ್ತೀವಿ. ಅದಕ್ಕಾಗಿ ವ್ಯಾಲಂಟೈನ್ಸ್ ಡೇವರೆಗೆ ಕಾಯುವುದಿಲ್ಲ.

ಸೋಶಿಯಲ್ ಮೀಡಿಯಾ ಜರ್ನಿ ಶುರುವಾಗಿದ್ದು?

ಮೊದಲಿಗೆ ಒಂದು ಸೆಕೆಂಡ್ ಹ್ಯಾಂಡ್ ಐಫೋನ್ ತಗೊಂಡಿದ್ದೆ. ವೀಡಿಯೋ ಮಾಡುವವರನ್ನು ನೋಡಿ ನಾನು ಮಾಡೋಣ ಎಂದು ಸುಮ್ನೆ ಶುರು ಮಾಡಿದ್ದು. ಅದೇ ಸಮಯದಲ್ಲಿ ಒಂದು ಓಲಾ ಬೈಕ್ ರಿವ್ಯೂ ಮಾಡಿದ್ದೆ. ಕೋಚಿಂಗ್ ಸೆಂಟರ್ ಸೇರಿದ್ದೆ. ಅಲ್ಲಿನ ಸ್ಕ್ಯಾಮ್ ಬಗ್ಗೆ ವೀಡಿಯೋ ಮಾಡಿದ್ದೆ. ಅದು ಸಾಕಷ್ಟು ಜನರಿಗೆ ಕನೆಕ್ಟ್ ಆಗಿತ್ತು. ಅದಕ್ಕಾಗಿ ನನ್ನ ಮೇಲೆ ಕೇಸ್ ಕೂಡ ಬಿದ್ದಿತ್ತು. ಬಳಿಕ ಜಾಬ್ ಅಪ್‌ಡೇಟ್ ಕೊಡಲು ಆರಂಭಿಸಿದೆ. ಹಾಗಾಗಿ ನಿಧಾನವಾಗಿ ನಮ್ಮ ಪೇಜ್ ವೈರಲ್ ಆಯಿತು. ಗಂಭೀರ ವಿಚಾರದ ಜೊತೆಗೆ ಫನ್ನಿ ವೀಡಿಯೋ ಮಾಡಲು ಆರಂಭಿಸಿದೆವು. ಜಾಬ್ ಅಪ್‌ಡೇಟ್ ಕೊಟ್ಟರೂ ಕೆಲವರು ಟಾರ್ಗೆಟ್ ಮಾಡ್ತಾರೆ.

ನಿಮ್ಮಿಬ್ಬರ ನಡುವೆ ಜಗಳ ಆಗಲ್ವಾ?

ಎಲ್ಲಾ ಜೋಡಿಗಳ ನಡುವೆ ಜಗಳ ಸಹಜ. ಆದರೆ ಜಗಳ ಆಡಿದ ಬಳಿಕ ಹೇಗೆ ಇರ್ತೀವಿ ಅನ್ನೋದು ಮುಖ್ಯ. ನಾವಂತೂ ನಮ್ಮ ರೀಲ್ಸ್‌ನಲ್ಲಿ ತೋರಿಸುವಂತೆಯೇ ಒಬ್ಬರ ಜಿತೆ ಒಬ್ಬರು ನಿಲ್ಲುತ್ತೇವೆ. ನಾನು ಮನೆಯಲ್ಲಿ ಕೆಲಸ ಮಾಡುವ ವ್ಲಾಗ್‌ ವೀಡಿಯೋ ಮಾಡಿ ಹಾಕ್ತಿದ್ವಿ. ಜಗಳ ಇದ್ದೇ ಇರುತ್ತೆ. ಅದನ್ನೆಲ್ಲಾ ತೋರಿಸೋಕೆ ಆಗಲ್ಲ. ಈಗೋ ಎಲ್ಲರಿಗೂ ಇರುತ್ತೆ. ನಾನು ಮನೆ ಕೆಲಸ ಮಾಡುವುದನ್ನು ನೋಡಿ ಅಮ್ಮಾವ್ರ ಗಂಡ ಅಂತಾರೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳೋಕೆ ಆಗಲ್ಲ.

ಸೋಶಿಯಲ್ ಮೀಡಿಯಾ ನೆಗೆಟಿವ್ ಕಾಮೆಂಟ್ಸ್

ನಮ್ಮ ವೀಡಿಯೋಗಳಿಗೆ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ಸ್ ಮಾಡುವವರು ಇದ್ದಾರೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲ್ಲ. ಫನ್ನಿ ರೀಲ್ಸ್ ಮಾಡಿದ್ರೆ, ಅದಕ್ಕೆ ಬಾಯಿಗೆ ಬಂದಂತೆ ಕಾಮೆಂಟ್ ಮಾಡ್ತಾರೆ. ಗಂಭೀರ ವಿಚಾರದ ಬಗ್ಗೆ ವೀಡಿಯೋ ಮಾಡಿದ್ರೆ, ನೋಡಲ್ಲ. ಎಲ್ಲಾ ತರಹದ ವೀಡಿಯೋ ನಾವು ಮಾಡ್ತೀವಿ. ಮೊದಲಿಗೆ ನೆಗೆಟಿವ್ ಕಾಮೆಂಟ್ಸ್ ನೋಡಿ ಬೇಸರವಾಗ್ತಿತ್ತು. ಆದರೆ ಎಷ್ಟು ಜನರನ್ನು ಮೆಚ್ಚಿಸೋಕೆ ಸಾಧ್ಯ.

ಮುಂದಿನ ಪ್ಲ್ಯಾನ್ ಏನು?

ಒಂದು ಮಗು ಮಾಡಿಕೊಂಡು ಅಪ್ಪ ಅಮ್ಮನ ಜೊತೆ ಖುಷಿಯಾಗಿರಬೇಕು. ಜನರನ್ನು ಎಷ್ಟು ರಂಜಿಸೋಕೆ ಸಾಗುತ್ತೋ ಅಷ್ಟು ರಂಜಿಸ್ತೀವಿ. ಒಳ್ಳೆ ವಿಚಾರಗಳನ್ನು ಹಂಚಿಕೊಳ್ತೀವಿ. ಒಳ್ಳೆ ಪ್ರಮೋಷನ್ ವೀಡಿಯೋಗಳನ್ನು ಮಾತ್ರ ಮಾಡುವ ಪ್ರಯತ್ನ ಮಾಡ್ತೀವಿ. ದುಡ್ಡಿಗಾಗಿ ಮಣ್ಣು ತಿನ್ನುವ ಕೆಲಸ ಮಾಡಲ್ಲ.

ಕಂಟೆಂಟ್‌ ಐಡಿಯಾ ಯಾರದ್ದು?

ಬಹುತೇಕ ಐಡಿಯಾಗಳು ನನ್ನದೇ. ಕೆಲವೊಮ್ಮೆ ಬೇರೆ ವೀಡಿಯೋಗಳನ್ನು ನೋಡಿ ಸ್ಫೂರ್ತಿ ಪಡೆಯುವುದು ಇದೆ. ನಾನು ಒಂದೇ ಟೇಕ್‌ನಲ್ಲಿ ಆಕ್ಟ್ ಮಾಡಿ ಓಕೆ ಮಾಡ್ತೀನಿ. ಅಯ್ಯೋ ನಾನು(ಸ್ವಾತಿ) ಇವತ್ತಿಗೂ 10 ಟೇಕ್ ತಗೊತ್ತೀನಿ. ಸರಿಯಾಗಿ ಬರುವವರೆಗೂ ತಾರೇಶ್ ಒಪ್ಪಲ್ಲ.

ವ್ಯಾಲಂಟೈನ್ಸ್ ಡೇ ಶುಭಾಶಯ

ಎಲ್ಲರಿಗೂ ಪ್ರೇಮಿಗಳ ದಿನಾಚರಣೆ ಶುಭಾಶಯ. ಎಲ್ಲಾ ದಿನ ಪ್ರೀತಿ ಮಾಡಿ, ವ್ಯಾಲಂಟೈನ್ಸ್ ದಿನ ಮಾತ್ರ ಪ್ರೀತಿ ಮಾಡೋದಲ್ಲ. ಎಲ್ಲರೂ ಜೀವನದಲ್ಲಿ ಜಗಳ ಸಹಜ. ಎಲ್ಲರೂ ಖುಷಿಯಾಗಿರಲು ಪ್ರಯತ್ನಿಸಿ, ಆದರೆ ಇದೇ ರೀತಿ ಖುಷಿಯಾಗಿರಬೇಕು ಎಂದುಕೊಳ್ಳಬೇಡಿ. ನೀವು ಏನು ಎನ್ನುವುದು ನಿಮಗೆ ಗೊತ್ತಿರಲಿ. ಒಬ್ಬರನ್ನು ಒಬ್ಬರು ಅರ್ಥ ಮಾಡ್ಕೊಂಡು ಜೀವನ ಮಾಡಿ.

More from Filmibeat

Read more about: social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X