ಹೊಸ ನಿರ್ದೇಶಕರಿಗೆ ಕಾಲ್ ಶೀಟ್ ಕೊಡಲು ಸೋನು ಗೌಡ ರೆಡಿ.!
ಖ್ಯಾತ ನಿರ್ದೇಶಕ ದುನಿಯಾ ಸೂರಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಪ್ರತಿಭೆ ಸೋನು ಗೌಡ. 'ಇಂತಿ ನಿನ್ನ ಪ್ರೀತಿಯ', 'ಪರಮೇಶಿ ಪಾನ್ವಾಲಾ', 'ಗುಲಾಮ', 'ಕಿರಗೂರಿನ ಗಯ್ಯಾಳಿಗಳು' ಸೇರಿದಂತೆ ಕನ್ನಡ, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ನಟಿ ಸೋನು ಗೌಡ ಸದ್ಯ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು 'ಗುಳ್ಟು' ಚಿತ್ರದಿಂದ.
ಹೊಸಬರ ಹೊಸ ಪ್ರಯತ್ನವಾಗಿದ್ದ 'ಗುಳ್ಟು' ಚಿತ್ರಕ್ಕೆ ಸ್ಟಾರ್ ವಾಲ್ಯೂ ತುಂಬಿದವರು ಇದೇ ಸೋನು ಗೌಡ. ಬರೀ 'ಗುಳ್ಟು'ಗೆ ಮಾತ್ರ ಅಲ್ಲ. ಸೋನು ಗೌಡ ಗ್ರೀನ್ ಸಿಗ್ನಲ್ ಕೊಟ್ಟಿರುವ 'ಒಂಥರಾ ಬಣ್ಣಗಳು' ಹಾಗೂ 'ಫಾರ್ಚುನರ್' ಕೂಡ ನವ ಪ್ರತಿಭೆಗಳ ಪ್ರಯೋಗವೇ.!
ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಿರುವ ನಟಿ ಸೋನು ಗೌಡ ಯಾರೇ ಕಥೆ ಹೇಳಿದರೂ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರಂತೆ. ಕಥೆ ಹಾಗೂ ಪಾತ್ರ ಇಷ್ಟ ಆದರೆ ಹಸಿರು ನಿಶಾನೆ ಕೊಡ್ತಾರಂತೆ. ಹಾಗಂತ ಸ್ವತಃ ನಟಿ ಸೋನು ಗೌಡ 'ಫಿಲ್ಮಿಬೀಟ್ ಕನ್ನಡ'ಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

''ಯಾರೇ ಕಥೆ ಹೇಳಿದರೂ, ನಾನು ಕೇಳಿಸಿಕೊಳ್ಳುತ್ತೇನೆ. ನಾನು ಕೂಡ ಅಪ್ ಗ್ರೇಡ್ ಆಗುತ್ತಿರುವೆ. ನಮ್ಮ ಕನ್ನಡ ಚಿತ್ರರಂಗ ಅಪ್ ಗ್ರೇಡ್ ಆಗುತ್ತಿರಬೇಕು. ಯಾವ ಹುತ್ತದಲ್ಲಿ ಯಾವ ಹಾವು ಇದೆ ಅಂತ ಗೊತ್ತಾಗಲ್ಲ. ಯಾವ ನಿರ್ದೇಶಕರ ಬಳಿ ಯಾವ ಟ್ಯಾಲೆಂಟ್ ಇದೆ ಅಂತ ಗೊತ್ತಾಗಲ್ಲ. ನನಗೆ ನನ್ನ ಪಾತ್ರ ಇಷ್ಟ ಆದರೆ ಖಂಡಿತ ಒಪ್ಪಿಕೊಳ್ಳುವೆ'' ಎಂದಿದ್ದಾರೆ ನಟಿ ಸೋನು ಗೌಡ.
ಸಂದರ್ಶನದ ವಿಡಿಯೋ ಲಿಂಕ್ ಇಲ್ಲಿದೆ ನೋಡಿ...


Click it and Unblock the Notifications











