ಯಾವುದೇ ಪಾತ್ರ ಕೊಟ್ಟರೂ ಮಾಡುತ್ತೇನೆ ಎಂದರು ಸೋನು

By Naveen

ನಟಿ ಸೋನು ಗೌಡ ಕಡಿಮೆ ಸಿನಿಮಾ ಮಾಡಿದರು ಕೆಲವು ಒಳ್ಳೆಯ ಪಾತ್ರಗಳನ್ನು ಮಾಡಿದ್ದಾರೆ. ಆದರೆ 'ಇಂತಿ ನಿನ್ನ ಪ್ರೀತಿಯ' ನಂತರ ಸೋನು ಹೆಚ್ಚು ಗುರುತಿಸಿಕೊಳ್ಳುವಂತೆ ಮಾಡಿದ್ದು 'ಗುಳ್ಟು' ಸಿನಿಮಾ.

'ಗುಳ್ಟು' ಸಿನಿಮಾ ಸಕ್ಸಸ್ ಬಳಿಕ ಇತ್ತೀಚಿಗಷ್ಟೆ ಸಂದರ್ಶನದಲ್ಲಿ ಮಾತನಾಡಿದ ಸೋನು ''ನಾನು ಒಬ್ಬ ನಟಿ. ಯಾವ ಪಾತ್ರ ಕೊಟ್ಟರು ಮಾಡುತ್ತೇನೆ. ಗ್ಲಾಮರಸ್ ಪಾತ್ರ ಬಂದರು ಸರಿ ಅಥವಾ ಎಂತಹ ಪಾತ್ರವೇ ಇದ್ದರೂ ನಾನು ಅದಕ್ಕೆ 100% ನೀಡುತ್ತೇನೆ.'' ಎಂದಿದ್ದಾರೆ. ಜೊತೆಗೆ ಬಾಲಿವುಡ್ ನಲ್ಲಿ ಬಂದ 'ಕ್ವೀನ್' ಚಿತ್ರದ ರೀತಿ ಒಂದು ಸಿನಿಮಾ ಮಾಡಬೇಕು ಎಂಬುದು ಸೂನು ಅವರ ಕನಸಂತೆ.

sonu gowda spoke about her upcoming projects

ಕನ್ನಡ ಜೊತೆಗೆ ತಮಿಳು ಹಾಗೂ ಮಲೆಯಾಳಂ ನಲ್ಲಿಯೂ ಸಿನಿಮಾ ಮಾಡಿರುವ ಈ ನಟಿ ಸದ್ಯಕ್ಕೆ ಪರಭಾಷೆಯಲ್ಲಿ ಹೊಸ ಸಿನಿಮಾಗಳನ್ನು ಮಾಡುತ್ತಿಲ್ಲವಂತೆ. ಕನ್ನಡದಲ್ಲಿ ಸೋನು ಫುಲ್ ಬಿಜಿ ಇದ್ದು, 'ಒಂಥರ ಬಣ್ಣಗಳು', 'ಚಂಬಲ್', 'ಶಾಲಿನಿ ಐ ಐ ಎಸ್', 'ಫಾರ್ಚುನರ್' ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.

ಅಂದಹಾಗೆ, ನಟಿ ಸೋನು ಗೌಡ ಅವರ ಸಂಪೂರ್ಣ ಸಂದರ್ಶನ ವಿಡಿಯೋವನ್ನು ಫಿಲ್ಮಿಬೀಟ್ ಕನ್ನಡದಲ್ಲಿ ವೀಕ್ಷಿಸಿ.

More from Filmibeat

English summary
Kannada actress Sonu Gowda spoke about her upcoming projects in an interview with Filmibeat Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X