'ಅನಂತ್ ನಾಗ್ ಗೆ ಡಿಫರೆಂಟ್ ಲುಕ್ ಕೊಟ್ಟ ಹೆಗ್ಗಳಿಕೆ ನನ್ನದು'
* ನಿಮ್ಮ ನಿರ್ದೇಶನದ ಹೊಸ ಚಿತ್ರ 'ಪ್ಲಸ್' ಬಗ್ಗೆ ಹೇಳಿ....
- 'ಪ್ಲಸ್' ಬಗ್ಗೆ ಹೇಳ್ಬೇಕು ಅಂದ್ರೆ, ಇದನ್ನು ಸ್ವಲ್ಪ ವಿಶೇಷವಾಗಿ ಮಾಡಬೇಕು, 'ದ್ಯಾವ್ರೇ' ಚಿತ್ರದ ಯಾವುದೇ ಛಾಯೆ ಇಲ್ಲಿ ಇರಬಾರದು. ವಿತ್ ಕಾಂಟ್ರಾಸ್ಟ್ ಆಗಿ ಕೆಲಸ ಮಾಡಬೇಕು ಅಂತ ಹೊರಟಾಗ ರಿತೇಶ್ ಅವರು ಒಂದು ಕಥೆ ಹೇಳಿದ್ರು. ಮೂಲ ಕಥೆ ಅವರದ್ದು. ನಾನು ಅದನ್ನು ಅಭಿವೃದ್ಧಿ ಪಡಿಸಿ ಸಿನಿಮಾ ಮಾಡಿದ್ದೀನಿ.
* 'ಪ್ಲಸ್' ಚಿತ್ರದಲ್ಲಿ ಅನಂತ್ ನಾಗ್ ಅವರ ಪಾತ್ರದ ಬಗ್ಗೆ ಹೇಳಿ....
- ನನ್ನ ಚಿತ್ರಕ್ಕೆ ಒಬ್ಬ ದೊಡ್ಡ ಹೀರೋ ಬೇಕು ಅಂತ ನನಗೊಂದು ಆಸೆ ಇತ್ತು. ಜಗತ್ತಿನ ದೊಡ್ಡ ಹೀರೋಗಳಲ್ಲಿ ಅನಂತ್ ನಾಗ್ ಕೂಡ ಒಬ್ಬರು. 'ಪ್ಲಸ್' ಚಿತ್ರದಲ್ಲಿ ಅನಂತ್ ನಾಗ್ ಮುಖ್ಯ ಪಾತ್ರ ಮಾಡಿದ್ದಾರೆ. ಇನ್ನುಳಿದಂತೆ ಬೇರೆ ಆರ್ಟಿಸ್ಟ್ ಗಳು ಅಭಿನಯಿಸಿದ್ದಾರೆ.

* 'ಪ್ಲಸ್' ಚಿತ್ರದಲ್ಲಿ ಅನಂತ್ ನಾಗ್ ಅವರನ್ನು ಡಿಫರೆಂಟ್ ಗೆಟಪ್ ನಲ್ಲಿ ತೋರಿಸುವ ಐಡಿಯಾ...
- ಅವರು ನಿಜವಾಗ್ಲೂ ನೋಡೋಕೆ ತುಂಬಾ ಚೆನ್ನಾಗಿದ್ದಾರೆ. ಅನಂತ್ ನಾಗ್ ಅಂದಾಕ್ಷಣ ಕಥೆಯಲ್ಲಿ ಅವರು ದೊಡ್ಡ ಇಂಡಸ್ಟ್ರಿಯಲಿಸ್ಟ್ ಪಾತ್ರ ಮಾಡ್ತಾ ಇದ್ದಾರೆ. ಸೋ ಸ್ವಲ್ಪ ಸ್ಟೈಲಿಷ್ ಆಗಿ ತೋರಿಸೋಣ ಅಂತ ನಾನು ಮತ್ತು ರಿತೇಶ್ ಕೆಲ ಗೆಟಪ್ಸ್ ಸೆಲೆಕ್ಟ್ ಮಾಡಿದ್ವಿ. [ಬಂದ..ಬಂದ..ನೋಡಿ ಹೊಸ ವೀರಪ್ಪನ್..]

* ಗೆಟಪ್ ಗಳ ಬಗ್ಗೆ ಅನಂತ್ ನಾಗ್ ಒಪ್ಪಿಕೊಂಡ್ರಾ?
- ಗೆಟಪ್ ಗಳ ಬಗ್ಗೆ ಅನಂತ್ ನಾಗ್ ಅವರನ್ನ ಕೇಳೋಕೆ ಸ್ವಲ್ಪ ಅಳುಕಿತ್ತು. ಆದ್ರೆ, ತೋರಿಸಿದ ಮೇಲೆ ಅವರು ಫಸ್ಟ್ ''ಹೇ..ಬೇಡ ಗಡ್ಡಾ ಎಲ್ಲಾ ಅಂಟಿಸಿಕೊಂಡರೆ ಆಕ್ಟ್ ಮಾಡೋಕೆ ಕಷ್ಟ ಆಗುತ್ತೆ'' ಅಂದ್ರು. ಆಮೇಲೆ ಮುಂಬೈ ನಿಂದ ವಿಶೇಷ ಟೆಕ್ನೀಷಿಯನ್ ಕರೆಸಿ ಮಾಡಿದ ನಂತರ ಅವರು ಒಪ್ಪಿಕೊಂಡರು. ಇದಕ್ಕೆ ಅನಂತ್ ನಾಗ್ ಅವರ ಪತ್ನಿ ಗಾಯತ್ರಿ ಅವರು ತುಂಬಾನೇ ಸಪೋರ್ಟ್ ಮಾಡಿದ್ರು. ಮೊದ್ಲು ಬೇಡ ಅಂದವರು ಕಡೆಗೆ ಎಲ್ಲಾ ಲುಕ್ ಟೆಸ್ಟ್ ಆದ ಮೇಲೆ ಸರಿ ಅಂತ ಒಪ್ಕೊಂಡ್ರು. ಅನಂತ್ ನಾಗ್ ಅವರಿಗೆ ಈ ಥರ ಮಾಡ್ಬೇಕು ಅಂತ ತುಂಬಾ ಜನ ಅಂದುಕೊಂಡಿದ್ರು. ಆದ್ರೆ ಯಾರು ಮಾಡಿರಲಿಲ್ಲ. ನಾನು ಮಾಡಿದ್ದೀನಿ ಅನ್ನೋದಷ್ಟೇ ವಿಶೇಷ.

* 'ಪ್ಲಸ್' ಯಾವಾಗ ತೆರೆ ಮೇಲೆ ಬರುತ್ತೆ?
- ಮುಂದಿನ ತಿಂಗಳಿನಲ್ಲಿ ಬಿಡುಗಡೆ ಮಾಡ್ತೀವಿ. ಸದ್ಯಕ್ಕೆ ರೀ ರೆಕಾರ್ಡಿಂಗ್ ಮಾಡ್ತಾ ಇದ್ದೀವಿ. ಫೈನಲ್ ಟಚಪ್ ಕೊಟ್ಟು ರಿಲೀಸ್ ಮಾಡ್ತೀವಿ.


Click it and Unblock the Notifications











