For Quick Alerts
  ALLOW NOTIFICATIONS  
  For Daily Alerts

  ಜನರ ಭಾವನೆಗಳ ಜೊತೆ ಆಟವಾಡಬೇಡಿ: ಫೋಟೋ ಶೇರ್ ಮಾಡಿ ಸುಧಾರಾಣಿ ಎಚ್ಚರಿಕೆಯ ಸಂದೇಶ

  |

  ಸ್ಯಾಂಡಲ್ ವುಡ್ ನ ಹಿರಿಯ ನಟಿ ಸುಧಾರಾಣಿ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. ಆಗಾಗ ಕುಟುಂಬದ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ತಾವಾಯಿತು ತಮ್ಮ ಸಿನಿಮಾವಾಯಿತು ಅಂತ ಬ್ಯುಸಿ ಇರುವ ಸುಧಾರಾಣಿ ಬೇರೆ ವಿಚಾರಗಳಿಗೆ ಹೆಚ್ಚು ತಲೆಕೆಡಿಸಿಕೊಂಡವರಲ್ಲ.

  ಆದರೀಗ ಕೋಪಗೊಂಡಿರುವ ಸುಧಾರಾಣಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಜನರ ಭಾವನೆಗಳ ಜೊತೆ ಆಟವಾಡಬೇಡಿ ಎಂದು ಡಾ.ರಾಜ್ ಕುಮಾರ್ ಜೊತೆಗಿರುವ ಫೋಟೋವನ್ನು ಶೇರ್ ಮಾಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಷ್ಟಕ್ಕು ಸುಧಾರಾಣಿ ಕೆಂಡವಾಗಿದ್ದೇಕೆ, ದಿಢೀರ್ ಅಂತ ಈ ಪೋಸ್ಟ್ ಹಾಕಿದ್ದೇಕೆ? ಯಾಕೆಂದರೆ ಡಾ.ರಾಜ್ ಕುಮಾರ್ ಪ್ರತಿಮೆ ವಿಚಾರವಾಗಿ ಶಾಂತಿ ನಗರದ ಶಾಸಕ ಎನ್ ಎ ಹ್ಯಾರಿಸ್ ಆಡಿದ ಮಾತಿನಿಂದ ಎನ್ನುವುದು ಗೊತ್ತಾಗುತ್ತಿದೆ. ಡಾ. ರಾಜ್ ಕುಮಾರ್ ಪ್ರತಿಮೆ ವಿಚಾರವಾಗಿ ಹ್ಯಾರಿಸ್ ವಿವಾದಿತ ಹೇಳಿಕೆ ನೀಡಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದೆ.

  ಡಾ ರಾಜ್ ಪ್ರತಿಮೆಗೆ ಅಪಮಾನ ಆರೋಪ: ಶಾಸಕ ಹ್ಯಾರೀಸ್ ಸ್ಪಷ್ಟನೆ

  ಆದರೆ ಸುಧಾರಾಣಿ ಇಲ್ಲಿ ಯಾರ ಹೆಸರನ್ನು ಉಲ್ಲೇಖ ಮಾಡದೆ ಡಾ.ರಾಜ್ ಕುಮಾರ್ ಅವರ ಬಗ್ಗೆ ಬಾಯಿಗೆ ಬಂದಹಾಗೆ ಮಾತನಾಡಿ ಜನರ ಭಾವನೆಯ ಜೊತೆ ಆಟವಾಡಬೇಡಿ ಎಂದು ಹೇಳಿದ್ದಾರೆ. ಮುಂದೆ ಓದಿ..

  ಸುಧಾರಾಣಿ ಪೋಸ್ಟ್ ನಲ್ಲಿ ಏನಿದೆ?

  ಸುಧಾರಾಣಿ ಪೋಸ್ಟ್ ನಲ್ಲಿ ಏನಿದೆ?

  ದೇವತಾ ಮನುಷ್ಯ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಮಗಳಾಗಿ ನಟಿಸಿದ್ದ ಫೋಟೋವನ್ನು ಸುಧಾರಾಣಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ,'ಜನರ ಭಾವನೆಗಳ ಜೊತೆ ಆಟವಾಡಬೇಡಿ. ಮತನಾಡುವ ಮೊದಲು ಯೋಚಿಸಿ' ಎಂದು ಹೇಳಿದ್ದಾರೆ.

  ಸಲ್ಲದ ವಿಷಯದ ಬಗ್ಗೆ ಮಾತನಾಡಬೇಡಿ

  ಸಲ್ಲದ ವಿಷಯದ ಬಗ್ಗೆ ಮಾತನಾಡಬೇಡಿ

  ಮತ್ತೊಂದು ಪೋಸ್ಟ್ ನಲ್ಲಿ ರಾಜ್ ಕುಮಾರ್ ಅವರ ಹೆಗಲಮೇಲೆ ಮಲಗಿರುವ ಫೋಟೋ ಶೇರ್ ಮಾಡಿ, 'ಅಭಿಮಾನದ ಅಣೆಕಟ್ಟು ಒಡೆಯಬೇಡಿ. ಸಲ್ಲದ ವಿಷಯದ ಬಗ್ಗೆ ಮಾತನಾಡುವುದು ಸರಿ ಅಲ್ಲ' ಎಂದು ಹೇಳಿದ್ದಾರೆ.

  ಹ್ಯಾರಿಸ್ ವಿಡಿಯೋದಲ್ಲಿ ಏನಿದೆ?

  ಹ್ಯಾರಿಸ್ ವಿಡಿಯೋದಲ್ಲಿ ಏನಿದೆ?

  'ಪ್ರತಿಮೆ ಇಡುವುದೇ ದೊಡ್ಡ ಕತೆ, ಆಫೀಸ್‌ ಬೇರೆ ಮಾಡಿಕೊಡೋಕೆ ಆಗುತ್ತಾ? ಅವರ್ಯಾರೋ ರಾಜ್ ಕುಮಾರ್‌ಗೆಂದು ಮಾಡಿದ್ದಾರೆ. ಅದನ್ನು ತೆಗೆಯಿರಿ, ಸ್ಟ್ಯಾಚ್ಯುಗೆಲ್ಲ ಕವರ್ ಮಾಡಿ ಏಕೆ ಇಡ್ತಾರೆ, ರಸ್ತೆಯಲ್ಲಿ ಏಕೆ ಇಡ್ತಾರೆ, ಮನೆಯಲ್ಲಿ ಇಡಬಹುದಿತ್ತು ಅಲ್ವೇ?....' ಎಂದು ಶಾಸಕ ಹ್ಯಾರಿಸ್ ಮಾತನಾಡಿದ್ದರು. ಈ ವಿಡಿಯೋದಲ್ಲಿ ಡಾ ರಾಜ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಅಣ್ಣಾವ್ರ ಅಭಿಮಾನಿಗಳು ಕಿಡಿ ರೊಚ್ಚಿಗೆದಿದ್ದಾರೆ.

  ಮಾಡಿದ ತಪ್ಪಿನ ಬಗ್ಗೆ ಮಾತನಾಡಿದರ ಶೃತಿ ಹಾಸನ್ | Filmibeat Kannada
  ಕ್ಷಮೆಯಾಚಿಸಿದ ಹ್ಯಾರಿಸ್

  ಕ್ಷಮೆಯಾಚಿಸಿದ ಹ್ಯಾರಿಸ್

  'ರಾಜ್ ಕುಮಾರ್ ಪ್ರತಿಮೆ ಪಕ್ಕ ಒಂದು ಬೋರ್ಡ್ ಹಾಕಬೇಕು ಅಂದ್ರು ಸರಿ ಹಾಕಿ ಎಂದು ಹೇಳಿ ಬಂದಿದ್ದೇನೆ ಅಷ್ಟೇ. ನಾನು ಅಣ್ಣಾವ್ರ ದೊಡ್ಡ ಅಭಿಮಾನಿ. ಇಂಟರ್ ನ್ಯಾಷನಲ್ ಅಣ್ಣಾವ್ರು ಅಂದ್ರೆ ರಾಜ್ ಕುಮಾರ್. ಅವರ ಬಗ್ಗೆ ಯಾರಾದರೂ ಮಾತಾಡೋಕೆ ಆಗುತ್ತಾ, ಉದ್ದೇಶಪೂರ್ವಕವಾಗಿ ನನ್ನ ಹೇಳಿಕೆಯನ್ನು ತಿರುಚಿ ಕಟ್ ವೈರಲ್ ಮಾಡಲಾಗಿದೆ. ಪ್ರತಿಮೆ ಸ್ಥಾಪನೆಗೆ ನಾನು ಶ್ರಮಿಸಿದ್ದೇನೆ. ಅಭಿಮಾನಿಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ' ಎಂದು ಹ್ಯಾರಿಸ್ ಸ್ಪಷ್ಟನೆ ನೀಡಿದ್ದಾರೆ.

  English summary
  Actress Sudharani shares photo with Dr. Rajkumar and says don't play with sentiments of the people.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X