»   » ಸುಳಿಯಲ್ಲಿ ಸಿಲುಕಿದರೂ ನಸುನಗುವ ನಿರ್ದೇಶಕ ವಿಶ್ವನಾಥ್

ಸುಳಿಯಲ್ಲಿ ಸಿಲುಕಿದರೂ ನಸುನಗುವ ನಿರ್ದೇಶಕ ವಿಶ್ವನಾಥ್

By ಮಲೆನಾಡಿಗ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಪ್ರಣಯ ರಾಜ ಶ್ರೀನಾಥ್ ವಿಭಿನ್ನ ಪಾತ್ರದಲ್ಲಿ ನಟಿಸಿರುವ ಸುಳಿ ಚಿತ್ರ ಮೇ 27ರಂದು ರಾಜ್ಯದೆಲ್ಲೆಡೆ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ಸುಳಿ ಚಿತ್ರದ ನಿರ್ದೇಶಕ, ಪುಟ್ಟಣ್ಣ ಕಣಗಾಲ್ ಅವರ ಶಿಷ್ಯ ಪಿಎಚ್ ವಿಶ್ವನಾಥ್ ಅವರ ಜತೆ ಫಿಲ್ಮಿಬೀಟ್ ಕನ್ನಡ ತಂಡದ ವಿಶೇಷ ಸಂದರ್ಶನ ಇಲ್ಲಿದೆ...

  ಕಥೆ ಆಯ್ಕೆ : ಕಥೆಗೆ ಒಂದು ಸನ್ನಿವೇಶ ಸ್ಪೂರ್ತಿಯಾಯಿತು ಎಂದು ಹೇಳಬಹುದಾದರೂ ಕಥೆ ವಿಸ್ತರಣೆಯಾಗುತ್ತಾ ಹೋಗಿದ್ದು, ಶ್ರೀನಾಥ್ ಅವರ ಪಾತ್ರದ ಮೂಲಕ, ಆ ಒಂದು ಪಾತ್ರದ ಸುತ್ತಾ ಕಥೆ ಬೆಳೆಯುತ್ತಾ ನಮಗೆ ಪ್ರತಿ ಹಂತದಲ್ಲೂ ಹೊಸ ತಿರುವನ್ನು ನೀಡಿತು. ಅನೇಕ ಬಾರಿ ಸ್ಕ್ರಿಪ್ಟ್ ನಲ್ಲಿಲ್ಲದ ಸನ್ನಿವೇಶಗಳನ್ನು ನೀಡಿ ನಟಿಯರನ್ನು ಕಥೆಗೆ ಬೇಕಾದ ಪಾತ್ರಕ್ಕೆ ಒಗ್ಗಿಕೊಳ್ಳುವಂತೆ ಮಾಡಬೇಕಾಯಿತು.[ಪ್ರಗತಿ, ಅದ್ವಿತಿ, ಅಶ್ವಿತಿ ಸುಳಿಯಲ್ಲಿ ಕಂಡ ಪ್ರತಿಭೆಗಳು]

  ಕಲಾವಿದರ ಆಯ್ಕೆ: ಈ ಕಥೆ ಆಯ್ಕೆ ಮಾಡಿ ನಂತರ ಶ್ರೀನಾಥ್ ಅವರ ನಿರ್ಮಾಣ, ಮುಖ್ಯಪಾತ್ರಧಾರಿಯಾಗುವುದಕ್ಕೆ ಒಪ್ಪಿದ ಮೇಲೆ ನನಗೆ ನನ್ನ ಮೇಲೆ ಒಂದು ರೀತಿ ಕಾನ್ಫಿಡೆನ್ಸ್ ಸಿಕ್ಕಿತು. ರಂಗಭೂಮಿ ಕಲಾವಿದರ ಪರಿಚಯದ ಮೂಲಕ ಸಿಕ್ಕ ಹೊಸ ಪ್ರತಿಭೆಗಳನ್ನು ಶ್ರೀನಾಥ್ ರಂಥ ಅನುಭವಿ ಮುಂದೆ ಸಂಭಾಳಿಸುವ ಚಾಲೆಂಜ್ ಇತ್ತು.

  ಆದರೆ, ನನ್ನ ಆಯ್ಕೆ ನನಗೆ ಕೈಕೊಡಲಿಲ್ಲ, ಎಲ್ಲರೂ ಟ್ಯಾಲೆಂಟೆಡ್ ಆದರೆ, ಈ ಚಿತ್ರದ ಪಾತ್ರಕ್ಕೆ ಸನ್ನಿವೇಶಕ್ಕೆ ಒಗ್ಗಿಕೊಳ್ಳುವಂತೆ ಮಾಡುವುದು ನನ್ನ ಕೆಲಸವಾಗಿತ್ತು. ನಾನು ದಾರಿ ತೋರಿಸಬಹುದು. ಆದರೆ, ಅದರಲ್ಲಿ ನಡೆದು ಪಾತ್ರಕ್ಕೆ ಜೀವ ತುಂಬಿದವರು ಕಲಾವಿದರೇ [ಸುಳಿ-ಭಾವನೆ, ಬದುಕು- ಬವಣೆ, ಬೆಸುಗೆ :ಶ್ರೀನಾಥ್]

  ಜಯರಾಮ್ ನೀನಾಸಂ :ಜೋಸೆಫ್ ಅವರ ತರಬೇತಿಯಿಂದ ಹೊರ ಬಂದಿರುವ ಪ್ರತಿಭೆ ಜಯರಾಮ್ ಈ ಚಿತ್ರದಲ್ಲಿ ಪ್ರಗತಿ ಪಾತ್ರದ ಪತಿಯಾಗಿ ನಟಿಸಿದ್ದಾರೆ. ಎಲ್ಲರಂತೆ ನಾನು ಆಡಿಷನ್ ನಲ್ಲಿ ಪಾಲ್ಗೊಂಡಿದ್ದೆ. ಆದರೆ, ಆಯ್ಕೆ ನಿರೀಕ್ಷೆ ಇರಲಿಲ್ಲ. [ಗಡ್ಡಧಾರಿಯಾಗಿದ್ದ ನನ್ನ ಚಿತ್ರವನ್ನು ಫೇಸ್ ಬುಕ್ ನಲ್ಲಿ ವಿಶ್ವನಾಥ್ ಸರ್ ಆಯ್ಕೆ ಮಾಡಿದ್ರಂತೆ]

  ನನ್ನ ಆಯ್ಕೆಗೆ ನನ್ನ ಗಡ್ಡ ಕೂಡಾ ಸಹಕಾರಿಯಾಗಿತ್ತು. ಆದರೆ, ನನಗೆ ಕರೆ ಬಂದಾಗ ನಾನು ಕ್ಲೀನ್ ಶೇವ್ ಆಗಿ ಹೋಗಿದ್ದೆ. ಗಡ್ದ ಎಲ್ಲಿ ಎಂದು ಕೇಳಿದ್ರು, ಮೂರು ದಿನದಲ್ಲಿ ಬರುತ್ತೆ ಬಿಡಿ ಸಾರ್ ಎಂದೆ. ನನಗೆ ಹೇಗಾದರೂ ಆಯ್ಕೆಯಾಗುವ ತುಡಿತ ಇತ್ತು. ಶ್ರೀನಾಥ್ ಸರ್, ವಿಶ್ವನಾಥ್ ಸರ್ ಜೊತೆ ವರ್ಕ್ ಮಾಡುವ ಅವಕಾಶ ಸುಲಭಕ್ಕೆ ಸಿಗುವುದಿಲ್ಲ. ನಾನು ನೀನಾಸಂನಲ್ಲಿ ಕಲಿತ ಪಾಠಕ್ಕಿಂತ ಹೆಚ್ಚಿನದ್ದನ್ನು ಶ್ರೀನಾಥ್ ಸರ್ ನೋಡಿ ಕಲಿತೆ.

  ರಂಗಭೂಮಿ ಕಲಾವಿದ ಲಿಂಗರಾಜು: ಶೆಟ್ಟಿ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದು ಅದರಲ್ಲೂ ಪುಟ್ಟಣ್ಣ ಅವರ ಗರಡಿಯಿಂದ ಬಂದ ಶ್ರೀನಾಥ್ ಹಾಗೂ ವಿಶ್ವನಾಥ್ ಅವರ ಜತೆ ನಟಿಸಲು ಅವಕಾಶಾ ಸಿಕ್ಕಿದ್ದು ತುಂಬಾ ಖುಷಿ ಕೊಟ್ಟಿತು. ರಂಗಭೂಮಿಯಲ್ಲಿನ ನಟನೆಗೂ ಇಲ್ಲಿಗೂ ಬೇಕಾಗಿದ್ದ ವಾಯ್ಸ್ ಮಾಡುಲೇಷನ್, ಪಾತ್ರಕ್ಕೆ, ಸನ್ನಿವೇಶಕ್ಕೆ ತಕ್ಕ ಬದಲಾವಣೆ ಬಗ್ಗೆ ಶ್ರೀನಾಥ್ ಸರ್ ರಿಂದ ಕಲಿತ ಪಾಠ ಮರೆಯುವಂತಿಲ್ಲ.

  -
  -
  -
  -
  -
  ಸುಳಿಯಲ್ಲಿ ಸಿಲುಕಿದರೂ ನಸುನಗುವ ನಿರ್ದೇಶಕ ವಿಶ್ವನಾಥ್

  ಸುಳಿಯಲ್ಲಿ ಸಿಲುಕಿದರೂ ನಸುನಗುವ ನಿರ್ದೇಶಕ ವಿಶ್ವನಾಥ್

  -
  -
  -

  ತಾಂತ್ರಿಕ ವರ್ಗದ ಬಗ್ಗೆ ವಿಶ್ವನಾಥ್:
  ಕ್ಯಾಮೆರಾಮನ್ ಆರ್ ಮಂಜುನಾಥ್, ಗಾಯಕರಾದ ಅಂಕುರ್ ಶರ್ಮ, ಪ್ರತೀಕಾ ಭಟ್, ಡಾ. ನಾದಾ ಶೆಟ್ಟಿ ಅವರ ಸಾಹಿತ್ಯ ವೆಂಕಟೇಶ್ ಅವರ ಸಂಗೀತ ಚಿತ್ರದ ಕಥೆಗೆ ಪೂರಕವಾಗಿದೆ. ಕಥೆಯ ಪಾತ್ರವೇ ಆಗಲಿ, ಸಂಗೀತವೇ ಆಗಲಿ ಯಾವುದನ್ನು ತುರುಕಿದ್ದಂತೆ ಕಾಣುವುದಿಲ್ಲ. ಪಾತ್ರದ ಜತೆಗೆ ಪ್ರೇಕ್ಷಕ ಸುಲಭವಾಗಿ ಹೊಂದಿಸಿಕೊಳ್ಳಬಹುದು. ಕೆಂಪರಾಜು ಅವರಂಥ ಅನುಭವಿ ಎಡಿಟರ್ ಸಿಕ್ಕಿದ್ದರಿಂದ ಚಿತ್ರವನ್ನು ಇನ್ನಷ್ಟು ಟ್ರಿಮ್ ಮಾಡಿ ಪ್ರೇಕ್ಷಕರ ಮುಂದಿಡಲು ಸಾಧ್ಯವಾಗಿದೆ.

  ನಾವು ಶೂಟ್ ಮಾಡಿದ ಬಲ್ಲಾಳ ರಾಯನ ದುರ್ಗ, ಕಳಸ ಇರಬಹುದು, ದೂರದ ಕಾಡು ಪ್ರದೇಶದ ಊರು ಇರಬಹುದು, ಅಲ್ಲಿನ ಜನ, ಅವರ ಪ್ರೀತಿ ವಿಶ್ವಾಸ ನಮಗೆ ಹೊಸ ಹುರುಪು ನೀಡುತ್ತಿತ್ತು. ಮಳೆ, ಚಳಿ, ಗಾಳಿ ಪ್ರತಿಕೂಲ ಸನ್ನಿವೇಶದಲ್ಲಿ ನಮ್ಮ ಜತೆ ನಿಂತ ಅಲ್ಲಿನ ಜನರಿಗೆ ನಾವು ಆಭಾರಿಯಾಗಿದ್ದೇವೆ.

  ಕೊನೆಯದಾಗಿ ಹೇಳಬಹುದೆಂದರೆ ಹೊಂದಾಣಿಕೆಯೇ ಸುಳಿಯ ಮೂಲ ಆಶಯ. ಬದುಕಿನ ಜಂಜಾಟ, ನಂಬಿಕೆಯ ಸುಳಿಯಲ್ಲಿ ಸಿಲುಕಿ ಅದರಿಂದ ಹೊರ ಬರಲು ಮಾಡಿಕೊಳ್ಳುವ ಹೊಂದಾಣಿಕೆಯೇ ಚಿತ್ರದ ಮೂಲ ಸಂದೇಶ.

  ಮೇ 20 ರಂದು ಕರ್ನಾಟಕದ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಸುಳಿಯನ್ನು ಕಾಣಬಹುದು. ಮುಂದಿನ ದಿನಗಳಲ್ಲಿ ಯುಎಸ್ಎ, ಯುಕೆ, ಸಿಂಗಪುರ, ಆಸ್ಟ್ರೇಲಿಯಾ, ಬಹರೇನ್, ದುಬೈಗಳಲ್ಲಿ ಚಿತ್ರವನ್ನು ಕೊಂಡೊಯ್ಯಲಾಗುವುದು ಎಂದರು.

  English summary
  Suli tries to depicts how the innocent minds are trapped in the whirlpool of household(family) emotions said Director PH Vishwanath in an interview with Filmibeat Kannada. Suli Kannada Film with Pranaya Raja Srinath and Pragathi AS in the lead role is set to release on May 27.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more