twitter
    For Quick Alerts
    ALLOW NOTIFICATIONS  
    For Daily Alerts

    ಸಂದರ್ಶನ: 'ದೇಸಾಯಿ ಈಸ್ ಬ್ಯಾಕ್' ಎನ್ನುತ್ತಿದೆ 'ಉದ್ಘರ್ಷ'

    |

    ಸುನೀಲ್ ಕುಮಾರ್ ದೇಸಾಯಿ ಸಿನಿಮಾಗಳು ಅಂದ್ರೆ ಭಾರತೀಯ ಚಿತ್ರರಂಗದಲ್ಲಿ ಅದಕ್ಕೊಂದು ವಿಶೇಷ ಸ್ಥಾನವಿದೆ. 'ತರ್ಕ' ಚಿತ್ರದಿಂದ 'ರೇ' ಚಿತ್ರದವರೆಗೂ ದೇಸಾಯಿ ಅವರು ತಮ್ಮ ಬ್ರಾಂಡ್ ಉಳಿಸಿಕೊಂಡಿದ್ದಾರೆ. ತರ್ಕ, ಉತ್ಕರ್ಷ, ನಿಷ್ಕರ್ಷ, ಮರ್ಮ, ಕ್ಷಣ ಕ್ಷಣ ಚಿತ್ರಗಳ ಬಳಿಕ ಮತ್ತೇ ಅಂತಹದೊಂದು ಸೂಪರ್ ಸಸ್ಪೆನ್ಸ್ ಸಿನಿಮಾ ಮಾಡಬೇಕು ಅಂದುಕೊಂಡಾಗ ಹುಟ್ಟಿಕೊಂಡಿದ್ದೇ ಉದ್ಘರ್ಷ.

    ಸಸ್ಪೆನ್ಸ್, ಥ್ರಿಲ್, ಆಕ್ಷನ್ ಹೀಗೆ ಎಲ್ಲವನ್ನ ಒಂದೇ ಚಿತ್ರದಲ್ಲಿ ಕೊಟ್ಟರೇ ಹೇಗಿರುತ್ತೆ ಎಂಬ ಉದ್ದೇಶದಿಂದ ಉದ್ಘರ್ಷ ಆಗಿದೆ ಎನ್ನುತ್ತಾರೆ ಸುನೀಲ್ ಕುಮಾರ್ ದೇಸಾಯಿ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಇದೇ ವಾರ (ಮಾರ್ಚ್ 22) ತೆರೆಕಾಣುತ್ತಿದ್ದು, ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಹುಟ್ಟಿಕೊಂಡಿದೆ.

    ಸುನೀಲ್ ಕುಮಾರ್ ದೇಸಾಯಿ ಸಂದರ್ಶನ: ನಾನು, ನನ್ನ ಬರ್ತಡೇ ಮತ್ತು 'ಉದ್ಘರ್ಷ' ಸುನೀಲ್ ಕುಮಾರ್ ದೇಸಾಯಿ ಸಂದರ್ಶನ: ನಾನು, ನನ್ನ ಬರ್ತಡೇ ಮತ್ತು 'ಉದ್ಘರ್ಷ'

    ಠಾಕೂರ್ ಅನೂಪ್, ಸಾಯಿ ಧನ್ಸಿಕಾ, ಕಬೀರ್ ದುಹಾನ್ ಸಿಂಗ್, ಕಿಶೋರ್, ಹರ್ಷಿಕಾ ಪೂಣಚ್ಛ, ತಾನ್ಯ ಹೋಪ್, ಡ್ಯಾನಿಶ್ ಸಫ್ ಅಖ್ತರ್ ಅಂತಹ ಯುವ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಟ್ರೈಲರ್ ದೊಡ್ಡ ಸದ್ದು ಮಾಡಿದ್ದು, ತುಂಬಾ ವರ್ಷದ ನಂತರ 'ದೇಸಾಯಿ ಈಸ್ ಬ್ಯಾಕ್' ಎನ್ನುತ್ತಿದ್ದಾರೆ. ಸಿನಿಮಾ ರಿಲೀಸ್ ಗೂ ಮುಂಚೆ ಫಿಲ್ಮಿಬೀಟ್ ಕನ್ನಡದ ಜೊತೆ ಸುನೀಲ್ ಕುಮಾರ್ ದೇಸಾಯಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮುಂದೆ ಓದಿ.....

    ಸಂದರ್ಶನ: ಭರತ್ ಕುಮಾರ್

    ಚಿತ್ರಕಥೆಯೇ ಉದ್ಘರ್ಷದ ಶಕ್ತಿ

    ಚಿತ್ರಕಥೆಯೇ ಉದ್ಘರ್ಷದ ಶಕ್ತಿ

    ''ಚಿತ್ರಕಥೆಯೇ ಈ ಸಿನಿಮಾದ ಜೀವಾಳ. ಯಾವುದೇ ಹಾಡು ಇರಲ್ಲ. ಕ್ಯಾಮೆರಾ ವರ್ಕ್, ಸ್ಕ್ರಿಪ್ಟ್, ಹಿನ್ನೆಲೆ ಸಂಗೀತ, ಟೆಕ್ನಿಕಲಿ ಸಿನಿಮಾ ಆಕರ್ಷಣೆಯಾಗಿದೆ. ಈ ಸಿನಿಮಾ ಹೊಸ ಅನುಭವ ಕೊಡುತ್ತೆ. ಯಾಕಂದ್ರೆ, ಕುತೂಹಲ ಅನ್ನೋದು ಹಂತ ಹಂತಕ್ಕೂ ಬರ್ತಿರುತ್ತೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತೆ. ಏನೋ ಗೆಸ್ ಮಾಡಿದ್ರೆ ಅದೇನೋ ಆಗುತ್ತೆ. ಅದೇ ಆಗುತ್ತೆ ಅಂದ್ರೆ ಅದು ಆಗಲ್ಲ ಇನ್ನೇನೋ ಆಗುತ್ತೆ. ಒಟ್ನಲ್ಲಿ ಎರಡು ಗಂಟೆ ನೋಡುಗರಿಗೆ ಪಕ್ಕಾ ಮನರಂಜನೆ ಸಿಗಲಿದೆ'' - ಸುನೀಲ್ ಕುಮಾರ್ ದೇಸಾಯಿ

    ದೇಸಾಯಿ ಬಿಟ್ಟ ಪೋಸ್ಟರ್ ಗಳ ಹಿಂದಿನ ಅರ್ಥ ಏನು?ದೇಸಾಯಿ ಬಿಟ್ಟ ಪೋಸ್ಟರ್ ಗಳ ಹಿಂದಿನ ಅರ್ಥ ಏನು?

    ಹೊಸ ಅನುಭವ ಕೊಡುತ್ತೆ

    ಹೊಸ ಅನುಭವ ಕೊಡುತ್ತೆ

    ''ತರ್ಕದಿಂದ ಉತ್ಕರ್ಷ ಬೇರೆ ಇತ್ತು. ಉತ್ಕರ್ಷದಿಂದ ನಿಷ್ಕರ್ಷ ಬರಿ ಆಕ್ಷನ್ ನಲ್ಲಿತ್ತು. ಮರ್ಮ ಸೈಕಲಾಜಿಕಲ್ ಆಗಿತ್ತು. ಉದ್ಘರ್ಷ ಇದೆಲ್ಲವನ್ನ ಸೇರಿ ಬರ್ತಿದೆ. ಆದ್ರೆ ಈ ಹಿಂದಿನ ಸಿನಿಮಾಗಳಿಗಿಂತ ಹೊಸ ರೀತಿಯ ಫೀಲ್ ಕೊಡುತ್ತೆ''

    ಯುನಿವರ್ಸಲ್ ವಿಷಯ ಎಲ್ಲ ಭಾಷೆಗೂ ಹೋಗಬೇಕು

    ಯುನಿವರ್ಸಲ್ ವಿಷಯ ಎಲ್ಲ ಭಾಷೆಗೂ ಹೋಗಬೇಕು

    ''ನನ್ನ ಎಲ್ಲ ಸಿನಿಮಾಗಳು ತಮಿಳು, ತೆಲುಗಿಗೆ ಡಬ್ ಅಥವಾ ರೀಮೇಕ್ ಆಗಿದೆ. ಆಗ ಮಾರುಕಟ್ಟೆ ಚಿಕ್ಕಿದಿತ್ತು. ತಂತ್ರಜ್ಞಾನ ಬೆಳೆದಿರಲಿಲ್ಲ. ಇಲ್ಲಿ ಸಕ್ಸಸ್ ಆದ ಬಳಿಕ ಬೇರೆಯವರು ಬಂದು ಸಿನಿಮಾ ತಗೊಂಡು ಹೋಗ್ತಿದ್ರು. ಈಗ ತಂತ್ರಜ್ಙಾನ ಬದಲಾಗಿದೆ. ಒಂದೇ ಸಮಯದಲ್ಲಿ ಸಾವಿರಾರು ಚಿತ್ರಮಂದಿರದಲ್ಲಿ ರಿಲೀಸ್ ಮಾಡುವ ಅನುಕೂಲವಿದೆ. ಅದೇ ರೀತಿ ಯುನಿವರ್ಸಲ್ ವಿಷಯವನ್ನಿಟ್ಟ ಚಿತ್ರ ಮಾಡಿದಾಗ ಎಲ್ಲ ಭಾಷೆಯವರು ನೋಡಬಹುದು. ಅದಕ್ಕೆ ಉದ್ಘರ್ಷ ಎಲ್ಲ ಭಾಷೆಗೂ ಹೋಗಿದೆ''

    ದರ್ಶನ್ ಭಾಗಿಯಾಗಿದ್ದ 'ಉದ್ಘರ್ಷ' ಕಾರ್ಯಕ್ರಮಕ್ಕೆ ಸುದೀಪ್ ಬಂದಿಲ್ಲ ಯಾಕೆ?ದರ್ಶನ್ ಭಾಗಿಯಾಗಿದ್ದ 'ಉದ್ಘರ್ಷ' ಕಾರ್ಯಕ್ರಮಕ್ಕೆ ಸುದೀಪ್ ಬಂದಿಲ್ಲ ಯಾಕೆ?

    ಹೊಸ ಕಲಾವಿದರ ಆಯ್ಕೆಯ ಹಿಂದೆ ಸೀಕ್ರೆಟ್ ಇದೆ

    ಹೊಸ ಕಲಾವಿದರ ಆಯ್ಕೆಯ ಹಿಂದೆ ಸೀಕ್ರೆಟ್ ಇದೆ

    ''ಇಲ್ಲಿ ದೊಡ್ಡ ಸ್ಟಾರ್ ನಟರಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿರುವ ಕಲಾವಿದರಿದ್ದಾರೆ. ಈ ಕಥೆಗೆ ಈ ಪಾತ್ರಕ್ಕೆ ಹೊಂದುವಂತಹ ಕಲಾವಿದರನ್ನ ಹುಡುಕಿ ಮಾಡಿರುವ ಚಿತ್ರ. ಇಲ್ಲಿ ಚಿತ್ರದ ಅಂಶವೇ ಮುಖ್ಯವಾಗಿದೆ. ಪಾತ್ರಗಳಿಗೆ ಪ್ರಾಮುಖ್ಯತೆ ಇದೆಯೇ ಹೊರತು ಸ್ಟಾರ್ ಗಳಿಗೆ ಪ್ರಾಮುಖ್ಯತೆ ಇಲ್ಲ. ಉದ್ದೇಶಪೂರ್ವಕವಾಗಿ ಹೊಸಬರ ಜೊತೆ ಮಾಡಲಾಗಿದೆ. ಅದಕ್ಕೊಂದು ಕಾರಣವೂ ಇದೆ''

    ಜಗತ್ತು ಹೋದಂತೆ ನಾವು ಹೋಗಬೇಕು

    ಜಗತ್ತು ಹೋದಂತೆ ನಾವು ಹೋಗಬೇಕು

    ''ಆಗ ಸಿನಿಮಾ ಮಾಡಬೇಕಾದರೂ ನನಗೆ ಆಸೆ ಇತ್ತು. ನಮ್ಮ ಸಿನಿಮಾಗಳನ್ನ ಬೇರೆ ರಾಜ್ಯಗಳಲ್ಲಿ, ಬೇರೆ ದೇಶಗಳಲ್ಲಿ ನೋಡುವಂತಾಗಬೇಕು ಅಂತ. ಆದ್ರೆ, ಆಗ ಅಷ್ಟು ಬಜೆಟ್, ತಂತ್ರಜ್ಞಾನ ಇರಲಿಲ್ಲ. ಈಗ ಬದಲಾಗಿದೆ. ಜಗತ್ತು ಹೇಗೆ ಹೋಗ್ತಿದೆ ಹಾಗೆ ನಾವು ಹೋಗಬೇಕಿದೆ'' ಎಂದು ಸುನೀಲ್ ಕುಮಾರ್ ದೇಸಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    English summary
    Kannada Director Sunil Kumar Desai's new movie udgarsha will release on march 22nd. here is the interview of sunil kumar desai.
    Thursday, March 21, 2019, 17:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X