Shaurya Arjun: ಇಂಜಿನಿಯರಿಂಗ್ ಹುಡುಗನ ಪೌರಾಣಿಕ ಜರ್ನಿ.. ಶೌರ್ಯ ಅರ್ಜುನ್ ಹಿನ್ನೆಲೆಯೇನು?
ಪೌರಾಣಿಕ ಪಾತ್ರಗಳನ್ನು ಮಾಡುವುದು ಅಷ್ಟು ಸುಲಭವಲ್ಲ. ಎಲ್ಲರಿಗೂ ಅದು ಮ್ಯಾಚ್ ಆಗುವುದಿಲ್ಲ. ಸಿನಿಮಾ ವಿಚಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅದಕ್ಕೆ ಸೂಕ್ತವಾಗಿದ್ದಾರೆ. ಇದೀಗ ಧಾರಾವಾಹಿ ಲೋಕದಲ್ಲಿ ಪೌರಾಣಿಕ ಪಾತ್ರದಲ್ಲಿ ಶೌರ್ಯ ಮಿಂಚುತ್ತಿದ್ದಾರೆ.
ಸ್ಟಾರ್ ಸುವರ್ಣದಲ್ಲಿ 'ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯಲ್ಲಿ ಕಾರ್ಯಾವೀರ್ಯಾರ್ಜುನ ಎಂಬ ಪಾತ್ರವಿದೆ. ಈತನಿಗೆ ರೇಣು ಮಹಾರಾಜರೇ ಟಾರ್ಗೆಟ್. ಆ ಕಾರ್ತಾವೀರ್ಯಾರ್ಜುನನ ಪಾತ್ರದಲ್ಲಿ ಶೌರ್ಯ ಅರ್ಜುನ್ ನಟಿಸಿದ್ದು, ಫಿಲ್ಮಿ ಬೀಟ್ ಜೊತೆಗೆ ತನ್ನ ಜರ್ನಿ ಹಂಚಿಕೊಂಡಿದ್ದಾರೆ.

ಕಾರ್ತಾವೀರ್ಯಾಜು ಪಾತ್ರ ಒಪ್ಪಿಕೊಳ್ಳೋದಕ್ಕೆ ಕಾರಣ..?
"ಈ ಮೊದಲು ಆನಂದ ಭೈರವಿ ಎಂಬ ಧಾರಾವಾಹಿಯಲ್ಲಿ ಮಾಡಿದ್ದೆ. ಪ್ರೊಡಕ್ಷನ್ ಮ್ಯಾನೇಜರ್ ಶ್ರೀನಿವಾಸ್ ಸರ್ ರೆಫರ್ ಮಾಡಿದ್ದರು. ಲುಕ್ ಟೆಸ್ಟ್ ಅಂತ ಹೋಗಿದ್ದೆ. ಪೌರಾಣಿಕ ಪಾತ್ರಕ್ಕೆ ಸರಿಯಾಗಿ ಮ್ಯಾಚ್ ಆಗಬೇಕು ಅಂತ ಸಾಕಷ್ಟು ಲುಕ್ ಟೆಸ್ಟ್ ಎಲ್ಲಾ ಮಾಡಿದ ಮೇಲೆ, ಫೈನಲ್ ಮಾಡಿದರು. ಈ ಮೊದಲು ಕೂಡ ನಾನು ಪೌರಾಣಿಕ ಪಾತ್ರ ಮಾಡಿದ್ದೆ. ಶುಕ್ಲಾಚಾರ್ಯ ಪಾತ್ರ ಮಾಡಿದ್ದೆ. ಹೀಗಾಗಿ ಬೇರೆ ಪೌರಾಣಿಕ ಪಾತ್ರಗಳನ್ನು ಮಾಡಬೇಕೆಂಬ ಆಸೆ ಬಂತು. ಅದೇ ಸಮಯದಲ್ಲಿ ಬಂದಂತದ್ದು ಕಾರ್ತಾವೀರ್ಯಾಜುನ ಪಾತ್ರ".
ಭಾಷೆಯ ವಿಚಾರ ಹೇಗೆ ಅನ್ನಿಸುತ್ತೆ..?
"ಆನಂದ ಭೈರವಿಯಲ್ಲಿ ಅಘೋರ ಪಾತ್ರ ಮಾಡಿದ್ದೆ. ಆಮೇಲೆ ಶುಕ್ಲಾಚಾರ್ಯ ಪಾತ್ರ ಮಾಡಿದ್ದೆ. ಅಚ್ಚ ಸ್ವಚ್ಛ ಕನ್ನಡದಲ್ಲಿ ಮಾತಾಡಬೇಕಿತ್ತು. ಈ ಪಾತ್ರ ನಿರ್ವಹಿಸುವುದಕ್ಕೆ ಸುಲಭ ಅಂತ ನಂಗೆ ಅನ್ನಿಸಿತ್ತು. ಕಾಂತಾವೀರ್ಯಾರ್ಜುನ ಯಾರು ಅಂತ ಈ ಮೊದಲು ಗೊತ್ತಿರಲಿಲ್ಲ. ದೇವರ ಥರ ಪೂಜಿಸ್ತಾರೆ ಅಂತ ಗೊತ್ತಿತ್ತು. ಬಳಿಕ ಆ ಪಾತ್ರ ಅಂತ ಹೇಳಿದಾಗ, ಓದಿದೆ. ಇನ್ನು ತಿಳಿದುಕೊಂಡಿದ್ದೆ. ಆಮೇಲೆ ಪಾತ್ರ ಮಾಡೋದಕ್ಕೆ ಸುಲಭವಾಯ್ತು".
ಪೌರಾಣಿಕ ಪಾತ್ರಗಳ ಕಡೆಗೆ ಒಲವು ಇದೆಯಾ..?
" ಇಲ್ಲ ಆ ಥರ ಅಲ್ಲ. ನಂಗೆ ಅವಕಾಶ ಯಾವ ರೀತಿ ಬರುತ್ತೆ ಅದನ್ನ ನೋಡ್ತೀನಿ. ಶುಕ್ಲಚಾರ್ಯ ಅವಕಾಶ ಬಂದಾಗ ಬಿಯರ್ಡ್ ಮತ್ತೆ ಲಾಂಗ್ ಹೇರ್ ಇತ್ತು. ಆ ಪಾತ್ರಕ್ಕೆ ಯಂಗ್ ಆಗಿರುವಂತ ಶುಕ್ಲಚಾರ್ಯ ತೋರಿಸುವುದು ತಂಡದ ಉದ್ದೆರಶವಾಗಿತ್ತು. ಆಗ ನನಗೆ ಅವಕಾಶ ಬಂದಿದ್ದು ಖುಷಿ ಆಯ್ತು. ನಾನೊಬ್ಬ ಕಲಾವಿದನಾಗಿ ಎಲ್ಲಾ ಪಾತ್ರಕ್ಕೂ ನ್ಯಾಯ ಒದಗಿಸುವುದಕ್ಕೆ ರೆಡಿಯಾಗಿರಬೇಕು".
ನಿಮ್ಮ ಹೇರ್ ಸ್ಟೈಲ್ ಬಗ್ಗೆ ಹೇಳಿ
"ಹೈಸ್ಕೂಲ್‌ನಲ್ಲಿ ಇರುವಾಗ ಲಾಂಗ್ ಹೇರ್ ಬಿಡಬೇಕು ಎಂಬ ಆಸೆ ಇತ್ತು. ಆದ್ರೆ ಸ್ಕೂಲ್, ಕಾಲೇಜು ಸಮಯದಲ್ಲಿ ಅದು ಸಾಧ್ಯವಾಗಿರಲಿಲ್ಲ. ಇಂಜಿನಿಯರಿಂಗ್ ಮಾಡುವ ಸಮಯದಲ್ಲಿ ರಜೆಯಲ್ಲಿ ಲಾಂಗ್ ಹೇರ್ ಬಿಟ್ಟಿದ್ದೆ. ಕಾಲೇಜಲ್ಲೂ ಏನೂ ಹೇಳಲಿಲ್ಲ. ಅದಾದ ಮೇಲೆ ಮಾಡೆಲಿಂಗ್ ಅಂತ ಕಂಟಿನ್ಯೂ ಆದ್ಮೇಲೆ ಲಾಂಗ್ ಹೇರ್ ಕಂಟಿನ್ಯೂ ಮಾಡಿದೆ".

ನಟನೆ ಬಗ್ಗೆ ಆಸಕ್ತಿ ಬಂದಿದ್ದೇಗೆ..?
"ನಾನು ಮೂಲತಃ ಕೊಡಗಿನವನು. ಇಂಜಿನಿಯರಿಂಗ್ ಮಾಡೋದಕ್ಕೆ ಬೆಂಗಳೂರಿಗೆ ಬಂದಿದ್ದು. ಓದುವಾಗಲೇ ಕಾಲೇಜಿಗೆ ಒಬ್ರು ಡಿಸೈನರ್ ಬಂದಿದ್ರು. ರ್ಯಾಂಪ್ ವಾಕ್ ಮಾಡೋದಕ್ಕೆ ನನಗೆ ಹೇಳಿದ್ರು. ಆದ್ರೆ ನಾನು ಅಪ್ಪ ಅಮ್ಮನನ್ನು ಕೇಳಿ ಹೇಳ್ತೀನಿ ಎಂದಿದ್ದೆ. ಆಗ ಅವರೆಲ್ಲ ಇದಕ್ಕೆಲ್ಲ ಅಪ್ಪ ಅಮ್ಮನ್ನ ಕೇಳ್ತಾರಾ ಅಂತ ನಗಾಡಿದ್ರು. ಸರಿ ಅಂತ ವಾಕ್ ಮಾಡಿದ್ದೆ. ಎಲ್ಲರಿಗೂ ಇಷ್ಟವಾಗಿತ್ತು. ಕಾಲೇಜಲ್ಲಿ ಮತ್ತೊಂದಿನ ಫ್ಯಾಷನ್ ಶೋ ಇತ್ತು. ಆಗ ಕೂಡ ಭಾಗಿಯಾಗಿದ್ದೆ. ಅಲ್ಲಿ ಜಡ್ಜ್ ಆಗಿದ್ದವರು, ನನಗೆ ಮಾಡೆಲಿಂಗ್ ಲೋಕ ಪರಿಚಯ ಮಾಡಿಕೊಟ್ಟಿದ್ದರು. ಆದರೆ, ಎಜ್ಯುಕೇಷನ್ ಮುಗಿದ ಮೇಲೆ ಸಿನಿಮಾ ಕ್ಷೇತ್ರವಾ..? ಕೆಲಸನಾ ಎನ್ನುವಾಗ ಮನೆಯಲ್ಲಿ ಕೇಳಿದಾಗ ನನ್ನ ಆಸೆಗೆ ಓಕೆ ಅಂದ್ರು".
ಸಿನಿಮಾದ ಅವಕಾಶಗಳು ಸಿಕ್ಕಿದ್ದೇಗೆ..?
"6 ಟು 6 ಸಿನಿಮಾದಿಂದ ಜರ್ನಿ ಶುರುವಾಯ್ತು. ಆದರೆ ಇದಕ್ಕೂ ಮುನ್ನ ಮೊದಲು ಒಂದು ಸಿನಿಮಾ ಮಾಡಿದ್ದೇ ಅದು ರಿಲೀಸ್ ಆಗಲಿಲ್ಲ. ನನ್ನ ಲುಕ್ ನಿಂದಾನೇ 'ಆನಂದ ಭೈರವಿ' ಸಿಕ್ಕಿದ್ದು. ಶರಣ್ ಅವರ ಸಿನಿಮಾ 'ರ್ಯಾಂಬೋ 2'ನಲ್ಲಿ ಒಂದು ನೆಗೆಟಿವ್ ಪಾತ್ರ ಮಾಡಿದ್ದೀನಿ. 'ವಿಷ್ಣು ದಶವತಾರಾ', 'ನೇತ್ರಾವತಿ' ಧಾರಾವಾಹಿಯಲ್ಲೆಲ್ಲಾ ಮಾಡಿದ್ದೀನಿ. ಆಮೇಲೆ ವೈರಲ್ ಸಿನಿಮಾ ಸೇರಿ ಹಲವು ಸಿನಿಮಾದಲ್ಲಿ ಮಾಡಿದ್ದೀನಿ". ಎನ್ನುತ್ತಾರೆ ಶೌರ್ಯ ಅರ್ಜುನ್.


Click it and Unblock the Notifications











