For Quick Alerts
  ALLOW NOTIFICATIONS  
  For Daily Alerts

  ಅಪ್ಪನ ಕನಸು ನನಸು ಮಾಡಲು ಪಣತೊಟ್ಟ ಮರಿ ಟೈಗರ್

  By Pavithra
  |

  ಕನ್ನಡದ ಸಿನಿಮಾರಂಗದ ಟೈಗರ್ ಅಂದ ತಕ್ಷಣ ನೆನಪಾಗುವುದು ಟೈಗರ್ ಪ್ರಭಾಕರ್. ಬಾಡಿ ಬಿಲ್ಡರ್ ಅಂದ್ರೆ ಹಿಂಗೆ ಇರುತ್ತಾರಾ? ಎಂದು ಹೇಳುವಷ್ಟರ ಮಟ್ಟಿಗೆ ಪ್ರಭಾಕರ್ ತಮ್ಮ ದೇಹವನ್ನ ದಂಡಿಸಿ ಕಟ್ಟು ಮಸ್ತಾದ ಮೈಕಟ್ಟನ್ನು ಇಟ್ಟುಕೊಂಡಿದ್ದರು. ನಂತರದ ದಿನಗಳಲ್ಲಿ ಪ್ರಭಾಕರ್ ಸಿನಿಮಾರಂಗದಲ್ಲಿ ಅದ್ಬುತ ಕಲಾವಿದನಾಗಿ ಗುರುತಿಸಿಕೊಂಡರು.

  ಒಂದು ಮಾತಿದೆ "ಹುಲಿ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುವುದು" ಎಂದು. ಈ ಮಾತು ಸದ್ಯದ ಪರಿಸ್ಥಿತಿಯಲ್ಲಿ ನಟ ವಿನೋದ್ ಪ್ರಭಾಕರ್ ಅವರಿಗೆ ಸರಿಯಾಗಿ ಹೊಂದುತ್ತದೆ. ಕಳೆದ ಆರು ತಿಂಗಳಿಂದ ಮರಿ ಟೈಗರ್ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಖಾಸಗಿ ಸಮಾರಂಭಗಳಲ್ಲಿ ಇವರ ಹಾಜರಿಯೇ ಇಲ್ಲ. ಹಾಗಾದರೆ ವಿನೋದ್ ಪ್ರಭಾಕರ್ ಎಲ್ಲಿ ಹೋದರು ಎಂದು ಹುಡುಕುತ್ತಾ ಹೋದವರಿಗೆ ಸಿಕ್ಕ ಉತ್ತರ ಅಪ್ಪನ ಕನಸನ್ನು ನನಸು ಮಾಡುವಲ್ಲಿ ವಿನೋದ್ ನಿರತರಾಗಿದ್ದಾರೆ ಎಂದು.

  ಆರು ತಿಂಗಳಿಂದ ವಿನೋದ್ ಪ್ರಕಾರ್ ಏನು ಮಾಡುತ್ತಿದ್ದರು? ವಿನೋದ್ ಅವರನ್ನ ಈಗ ನೋಡಿದ ತಕ್ಷಣ ವಾರೆವ್ಹಾ ಅಂತ ಅನ್ನಿಸುತ್ತಿರುವುದು ಏಕೆ? ಪ್ರಭಾಕರ್ ಅವರು ಕಂಡ ಬಹು ದಿನದ ಕನಸಾದರೂ ಏನು? ಈ ಎಲ್ಲಾ ವಿಚಾರದ ಬಗ್ಗೆ ವಿನೋದ್ ಪ್ರಭಾಕರ್ ನೇರವಾಗಿ ಫಿಲ್ಮೀ ಬೀಟ್ ಜೊತೆ ಮಾತನಾಡಿದ್ದಾರೆ. ಮುಂದೆ ಓದಿ

  ಆರು ತಿಂಗಳಿಂದ ಎಲ್ಲಿಯೂ ಕಾಣಿಸಿಕೊಂಡಿಲ್ಲ ಏಕೆ?

  ಆರು ತಿಂಗಳಿಂದ ಎಲ್ಲಿಯೂ ಕಾಣಿಸಿಕೊಂಡಿಲ್ಲ ಏಕೆ?

  ರಗಡ್ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಅದಕ್ಕಾಗಿ ಭರ್ಜರಿ ತಯಾರಿಯೂ ಬೇಕಿತ್ತು. ಆ ಕೆಲಸದಲ್ಲೇ ಬ್ಯುಸಿ ಆಗಿದ್ದೆ. ಆದ್ದರಿಂದ ಹುಟ್ಟುಹಬ್ಬ ಬಿಟ್ಟು ಮತ್ತೆಲ್ಲಿಯೂ ಕಾಣಿಸಿಕೊಂಡಿಲ್ಲ.

  ವಿನೋದ್ ಪ್ರಭಾಕರ್ ಕನ್ನಡದ ಅರ್ನಾಡ್ ಆಗಿ ಬದಲಾಗಿದ್ದು ಹೇಗೆ?

  ವಿನೋದ್ ಪ್ರಭಾಕರ್ ಕನ್ನಡದ ಅರ್ನಾಡ್ ಆಗಿ ಬದಲಾಗಿದ್ದು ಹೇಗೆ?

  ವರ್ಕ್ ಔಟ್ ಮಾಡುವುದು ನನಗೆ ಹಿಂದಿನಿಂದಲೂ ಅಭ್ಯಾಸ ಆಗಿದೆ. ಆದರೆ ಬೆಳ್ಳಿ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಬೆನ್ನಿಗೆ ಗಾಯ ಆಗಿತ್ತು. ಆದ್ದರಿಂದ ಮನೆಯಲ್ಲೇ ವರ್ಕ್ ಔಟ್ ಮಾಡುತ್ತಿದ್ದೆ. ರಗಡ್ ಸಿನಿಮಾಗಾಗಿ ಸಿಕ್ಸ್ ಪ್ಯಾಕ್ ಬೇಕು ಎಂದಿದ್ದರು. ಅದಕ್ಕಾಗಿ ಮತ್ತು ನನಗೂ ಅನ್ನಿಸಿತ್ತು ಹಾಗಾಗಿ ಈ ರೀತಿಯ ವರ್ಕ್ ಔಟ್ ಶುರುವಾಯ್ತು.

  ಆರು ತಿಂಗಳು, 8 ಪ್ಯಾಕ್ , ಹೇಗೆ ಸಾಧ್ಯ ಆಯಿತು

  ಆರು ತಿಂಗಳು, 8 ಪ್ಯಾಕ್ , ಹೇಗೆ ಸಾಧ್ಯ ಆಯಿತು

  ವರ್ಕ್ ಔಟ್ ಮಾಡಬೇಕು, ಬಾಡಿ ಬಿಲ್ಡ್ ಮಾಡಬೇಕು ಎಂದು ನಿರ್ಧಾರ ಮಾಡಿದಾಗ ಮೊದಲು ಮನೆಯೆಂಬ ಸೇಫರ್ ಝೋನ್ ಬಿಟ್ಟು ಹೊರ ಬರಬೇಕು ಎಂದು ನಿರ್ಧಾರ ಮಾಡಿ ಚೆನೈಗೆ ಹೊರಟೆ. 1994 ನಲ್ಲಿ ಮಿಸ್ಟರ್ ಇಂಡಿಯಾ ಆಗಿದ್ದ ಅರಸು ಎನ್ನುವವರು ನನಗೆ ಸ್ನೇಹಿತರು ಅವರು ಚೆನೈ ನಲ್ಲಿ ಒಂದು ತಿಂಗಳು ಟ್ರೈನಿಂಗ್ ನೀಡಿದರು. ನಂತರ ಬೆಂಗಳೂರಿನಲ್ಲಿ ವರ್ಕ್ಔಟ್ ಆರಂಭ ಮಾಡಿದ್ದೆ. ಪ್ರದೀಪ್ ಅನ್ನುವವರು ಟ್ರೈನರ್ ಆಗಿದ್ದರು. ಬದ್ದತೆ, ಪರಿಶ್ರಮ, ಎಲ್ಲವೂ ಇದ್ದಾಗ ಸಾಧನೆ ಸಾಧ್ಯ ಎನ್ನಿಸಿತು.

  ಬಾಡಿ ಬಿಲ್ಡಿಂಗ್ ಗಾಗಿ, ಲೈಫ್ ಸ್ಟೈಲ್ ಹೇಗೆ ಬದಲಾಯ್ತು ?

  ಬಾಡಿ ಬಿಲ್ಡಿಂಗ್ ಗಾಗಿ, ಲೈಫ್ ಸ್ಟೈಲ್ ಹೇಗೆ ಬದಲಾಯ್ತು ?

  ಆರು ತಿಂಗಳಿಂದ ಅನ್ನ ತಿಂದಿಲ್ಲ, ಸಿಹಿ , ಉಪ್ಪು, ಖಾರ, ಯಾವುದೂ ಇಲ್ಲ ಆರು ತಿಂಗಳಿಂದ ರುಚಿ ಅನ್ನೋದೇ ನಾಲಿಗೆಗೆ ಸೋಕಲಿಲ್ಲ. ಬರೀ ಸೆಪ್ಪೆ ಆಹಾರ, ಹುಟ್ಟುಹಬ್ಬದ ದಿನವೂ ಸ್ವೀಟ್ ತಿಂದಿಲ್ಲ. ಅಷ್ಟು ಕಠಿಣವಾದ ಡಯೆಟ್ ಮಾಡಿದ್ದೆ. ನನ್ನ ಹೆಂಡತಿ ನಿಶಾ ಗೆ ಧನ್ಯವಾದ ತಿಳಿಸಬೇಕು ಆರು ತಿಂಗಳು ನನ್ನ ಜೊತೆಯಲ್ಲೇ ಇದ್ದು ಸಪೋರ್ಟ್ ಮಾಡಿದ್ದಾಳೆ.

  ಅಪ್ಪನ ಕನಸು ನನಸು ಮಾಡುತ್ತಿದ್ದೀರಾ ಎನ್ನುವ ಮಾತು ಕೇಳಿ ಬರುತ್ತಿದೆ?

  ಅಪ್ಪನ ಕನಸು ನನಸು ಮಾಡುತ್ತಿದ್ದೀರಾ ಎನ್ನುವ ಮಾತು ಕೇಳಿ ಬರುತ್ತಿದೆ?

  ಅಪ್ಪನಿಗೆ ಸಿನಿಮಾಗೂ ಬರುವ ಮುನ್ನ ಮಿಸ್ಟರ್ ಮೈಸೂರು ಕಾಂಪಿಟೇಷನ್ ನಲ್ಲಿ ಭಾಗವಹಿಸಬೇಕು ಎಂಬ ಆಸೆ ಇತ್ತು. ಆದರೆ ಚಿತ್ರಗಳಲ್ಲಿ ಬ್ಯುಸಿ ಆದ ನಂತರ ಅವರಿಗೆ ಅದು ಸಾಧ್ಯವಾಗಿಲ್ಲ. ಅದಕ್ಕಾಗಿ ಅವರ ಕನಸನ್ನು ನಾನು ನನಸು ಮಾಡುತ್ತೇನೆ. ಯಾವುದಾದರೂ ಸ್ಪರ್ಧೆಯಲ್ಲಿ ಭಾಗಿ ಆಗಿ ಅಪ್ಪನ ಕನಸನ್ನು ನನಸು ಮಾಡುತ್ತೇನೆ.

  ರಗಡ್ ಸಿನಿಮಾ ಬಗ್ಗೆ ಹೇಳಿ ?

  ರಗಡ್ ಸಿನಿಮಾ ಬಗ್ಗೆ ಹೇಳಿ ?

  ಸಿನಿಮಾದಲ್ಲಿ ಶೋ ಆಫ್ ಮಾಡೋದಕ್ಕೆ ಅಂತ 8 ಪ್ಯಾಕ್ ಮಾಡಿಕೊಂಡಿಲ್ಲ. ಚಿತ್ರದಲ್ಲಿನ ಪಾತ್ರಕ್ಕೆ ಅವಶ್ಯಕತೆ ಇದೆ. ಇಂಟರ್ ವೆಲ್ ಹಾಗೂ ಕ್ಲೈಮ್ಯಾಕ್ಸ್ ನಲ್ಲಿ ನೀವು 8 ಪ್ಯಾಕ್ ಫೈಟಿಂಗ್ ಅನ್ನು ನೋಡಬಹುದಾಗಿದೆ. ಸುಮಾರು 80% ನಷ್ಟು ಚಿತ್ರೀಕರಣ ಮುಗಿದಿದೆ, ಕೊನೆಯ ಹಂತದ ಚಿತ್ರೀಕರಣ ಮುಂದಿನ ವಾರದಲ್ಲಿ ಆರಂಭ ಆಗುತ್ತೆ.

  ಕನ್ನಡದ ಅರ್ನಾಡ್ ಎನ್ನುವ ಮಾತು ಕೇಳಿ ಬರುತ್ತಿದೆ?

  ಕನ್ನಡದ ಅರ್ನಾಡ್ ಎನ್ನುವ ಮಾತು ಕೇಳಿ ಬರುತ್ತಿದೆ?

  ಹೌದು ಫೋಟೋಗಳನ್ನ ನೋಡಿ ಎಲ್ಲರೂ ಹಾಗೆ ಹೇಳುತ್ತಾರೆ. ನನಗೆ ಅರ್ನಾಡ್ ಅವರ ಬಾಡಿ ತುಂಬಾ ಇಷ್ಟ. ಒಂದು ರೀತಿಯಲ್ಲಿ ಸ್ಫೂರ್ತಿ ಎಂದರೆ ತಪ್ಪಾಗುವುದಿಲ್ಲ. ಖುಷಿ ಆಗುತ್ತೆ. ಕನ್ನಡದಲ್ಲೂ ನಟರೂ ಪರಿಶ್ರಮ ಪಡುತ್ತಾರೆ ಎನ್ನುವುದನ್ನ ಬೇರೆಯವರಿಂದ ಕೇಳುವುದೇ ಸಂತೋಷ.

  ಮುಂದಿನ ಸಿನಿಮಾಗಳು ಯಾವುವು?

  ಮುಂದಿನ ಸಿನಿಮಾಗಳು ಯಾವುವು?

  ಟೈಸನ್ ಮತ್ತು ಕ್ಯಾಕ್ ಚಿತ್ರಗಳು ನನಗೆ ಸಿನಿಮಾರಂಗದಲ್ಲಿ ಮತ್ತಷ್ಟು ಅವಕಾಶಗಳನ್ನ ತಂದುಕೊಟ್ಟ ಚಿತ್ರಗಳು. ಸದ್ಯ ರಗಡ್ ಸಿನಿಮಾದಲ್ಲಿ ಬ್ಯುಸಿ ನಂತರ ಗ್ಯಾಮ್ಲರ್ ಚಿತ್ರ ಶೂಟಿಂಗ್ ಸ್ಟಾರ್ಟ್ ಆಗುತ್ತೆ. ಫೈಟರ್ ಸಿನಿಮಾ ಇದೆ 2019 ರ ಕೊನೆಯವರೆಗೂ ಡೇಟ್ಸ್ ಫಿಕ್ಸ್ ಆಗಿದೆ.

  ಫೋಟೋ ಶೂಟ್ ಬಗ್ಗೆ ಹೇಳಿ ?

  ಫೋಟೋ ಶೂಟ್ ಬಗ್ಗೆ ಹೇಳಿ ?

  ಫೋಟೋಸ್ ನೋಡಿದಾಗ ತುಂಬಾ ಚೆನ್ನಾಗಿದೆ ಎನ್ನುವ ಅಭಿಪ್ರಾಯ ಬರುತ್ತಿದೆ. ಆದರೆ ಅದರ ಹಿಂದಿನ ಪರಿಶ್ರಮ ತುಂಬಾ ಕಠಿಣವಾಗಿತ್ತು. ಶೂಟ್ ಮಾಡುವಾಗಲೂ ವಾಟರ್ ಕಟ್ ಮಾಡಬೇಕಿತ್ತು. ಸುಮಾರು ಐದು ದಿನಗಳು ಶೂಟ್ ಮಾಡಿದ್ದು ಚಿತ್ರೀಕರಣ ಮಾಡುವ ಸಮಯದಲ್ಲಿ ಅರ್ಧ ಲೀಟರ್ ನೀರು ಕುಡಿದುಕೊಂಡೇ ಇರತ್ತಿದ್ದೆ. ಆದರೆ ರಿಸಲ್ಟ್ ತುಂಬಾ ಚೆನ್ನಾಗಿ ಬಂದಿದೆ. ಗಿರಿಧರ್ ದಿವಾನ್ ಅವರು ಶೂಟ್ ಮಾಡಿದ್ದು.

  ಒಟ್ಟಾರೆ ವಿನೋದ್ ಪ್ರಭಾಕರ್ ಸಂಪೂರ್ಣ ಬದಲಾಗಿದ್ದಾರೆ. ಹಿಂದಿನ ಅವರ ಓಟ್ ಲುಕ್ ಗೂ ಈಗಿನ ಲುಕ್ ಗೂ ಭಾರಿ ವ್ಯತ್ಯಾಸಗಳಿವೆ. ಕನ್ನಡದ ನಟರೂ ಯಾರಿಗೂ ಕಮ್ಮಿ ಇಲ್ಲ ಎನ್ನುವುದನ್ನು ಮಾಡಿ ತೋರಿಸಿದ್ದಾರೆ. ವಿನೋದ್ ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಪರಭಾಷೆಯಲ್ಲಿಯೂ ಮಿಂಚಲಿ ಎನ್ನುವುದೇ ನಮ್ಮ ಆಶಯ.

  English summary
  Kannada actor Vinod Prabakar has developed a eight -pack for Ragud kannada movie. strict diet plan and a fitness regime that has seen him working out for 3-4 hours every day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X