ದೀಪಕ್ ಗೆ ಭಾಗ್ಯ ತಂದುಕೊಡುತ್ತಾನಂತೆ ರಾಜು

By ಸುನೀತಾ ಗೌಡ

ಹೊಸಬರನ್ನು ಸೇರಿಸಿಕೊಂಡು 'ಭಾಗ್ಯರಾಜ್' ಎಂಬ ವಿಭಿನ್ನ ಸಿನಿಮಾವನ್ನು ಗಾಂಧಿನಗರಕ್ಕೆ ಹೊತ್ತು ತಂದಿರುವ ನವ ನಿರ್ದೇಶಕ ದೀಪಕ್ ಮಧುವನ ಹಳ್ಳಿ ಅವರು ಹೊಸ ನಟ ಮಹೇಶ್ ಮತ್ತು 'ಪರಾರಿ' ಸಿನಿಮಾ ಖ್ಯಾತಿಯ ನಟಿ ಜಾಹ್ನವಿ ಕಾಮತ್ ಅವರನ್ನು ಸೇರಿಸಿಕೊಂಡು ಒಂದೊಳ್ಳೆ ಪ್ರಯತ್ನ ಮಾಡಿದ್ದಾರೆ.

ಲೂಸ್ ಮಾದ ಯೋಗಿ ಅವರ ಸಹೋದರ ನಟ ಮಹೇಶ್ ಅವರು ಈ ಚಿತ್ರದ ನಾಯಕರಾಗಿದ್ದು, ಜೊತೆಗೆ ತಮ್ಮ ಹೋಮ್ ಬ್ಯಾನರ್ ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.[ಈ ವಾರ 'ಭಾಗ್ಯರಾಜ್' ನೋಡುವ ಭಾಗ್ಯ ಪ್ರೇಕ್ಷಕರಿಗೆ!]

Watch video 'Bhagyaraj' Director Deepak Madhuvanahalli Interview

ಹೊಸ ಕಥೆಯನ್ನು ವಿಭಿನ್ನವಾಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ನಿರ್ದೇಶಕರು ಪ್ರಯತ್ನಿಸಿದ್ದಾರೆ ಎಂಬುದು ಈಗಾಗಲೇ ಟ್ರೈಲರ್ ನಲ್ಲಿ ಗೊತ್ತಾಗಿದೆ. ಹೊಸಬರ 'ರಂಗಿತರಂಗ' ಎಂಬ ಸಿನಿಮಾ ಗಾಂಧಿನಗರಕ್ಕೆ ಬಂದು ಹೋದ ಮೇಲೆ ಹೊಸಬರ ನಸೀಬು ಚೆನ್ನಾಗಿದೆ.

ಈಗಾಗಲೇ ಟ್ರೈಲರ್ ಮೂಲಕ ಭಾರಿ ಹಿಟ್ ಆಗಿರುವ 'ಭಾಗ್ಯರಾಜ್' ಸಿನಿಮಾದ ಬಗ್ಗೆ ಸಿನಿರಸಿಕರು ಬಹಳ ಕುತೂಹಲ ಸೃಷ್ಟಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನವಾಗಿ ಚಿತ್ರದ ಪ್ರಚಾರ ಕಾರ್ಯ ಕೈಗೊಂಡಿರುವ ಹೊಸಬರ ತಂಡ ಅಭಿಮಾನಿಗಳನ್ನು ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

Watch video 'Bhagyaraj' Director Deepak Madhuvanahalli Interview

ಹೊಸಬರ 'ಭಾಗ್ಯರಾಜ್' ಸಿನಿಮಾಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ಸಿನಿಮಾ ಫೆಬ್ರವರಿ 5ಕ್ಕೆ ಬಿಡುಗಡೆ ಆಗಲಿದೆ.

ನವ ನಿರ್ದೇಶಕ ದೀಪಕ್ ಮಧುವನ ಹಳ್ಳಿ ಅವರು ಫಿಲ್ಮಿಬೀಟ್ ಕನ್ನಡದ ಜೊತೆಗೆ ತಮ್ಮ ಚಿತ್ರದ ಬಗ್ಗೆ ಮತ್ತು ಮೊದಲ ನಿರ್ದೇಶನದ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ನಿರ್ದೇಶಕ ದೀಪಕ್ ಮಧುವನ ಹಳ್ಳಿ ಅವರ ಜೊತೆ ಫಿಲ್ಮಿಬೀಟ್ ಕನ್ನಡ ನಡೆಸಿದ ಎಕ್ಸ್ ಕ್ಲ್ಯೂಸಿವ್ ಸಂದರ್ಶನ ನೋಡಲು ಈ ವಿಡಿಯೋ ನೋಡಿ...

More from Filmibeat

English summary
Kannada Movie 'Bhagyaraj' releasing this week (February 5th). debudent Director Deepak Madhuvanahalli spoke to Filmibeat. 'Bhagyaraj' Director Deepak Madhuvanahalli Shared his experience about 'Bhagyaraj' shooting. Watch the video here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X