Just In
Don't Miss!
- Finance
ಅಮೆಜಾನ್ ಪ್ರೈಮ್ ವೀಡಿಯೋ: 89 ರೂಪಾಯಿಗೂ ಲಭ್ಯವಿದೆ!
- News
ದೆಹಲಿ ಆವರಿಸಿದ ದಟ್ಟ ಮಂಜು; 50ಕ್ಕೂ ಹೆಚ್ಚು ವಿಮಾನಗಳು ವಿಳಂಬ
- Lifestyle
ನೀವು ಅಸಡ್ಡೆ ಮಾಡುವ ಆಲೂಗಡ್ಡೆಯಲ್ಲಿದೆ ಸೌಂದರ್ಯವರ್ಧಕ ಗುಣಗಳು
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಬೇಡಿಕೆ ಹೆಚ್ಚಿದಂತೆ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಕಾಯುವಿಕೆ ಅವಧಿಯಲ್ಲಿ ಮತ್ತಷ್ಟು ಹೆಚ್ಚಳ
- Sports
ಐಪಿಎಲ್ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಅರ್ಹ, ಎಂಐ ಆರಿಸುತ್ತಾ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅರ್ಜುನ್ ಸರ್ಜಾಗೆ ಥ್ಯಾಂಕ್ಸ್ ಹೇಳಿದ 'ಭರ್ಜರಿ' ನಿರ್ದೇಶಕ ಚೇತನ್

ಧ್ರುವ ಸರ್ಜಾ ಅಭಿನಯದ ಚೊಚ್ಚಲ ಸಿನಿಮಾ 'ಅದ್ಧೂರಿ'ಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಚೇತನ್ ಕುಮಾರ್, ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು ಧ್ರುವ ಸರ್ಜಾ ರವರ ಎರಡನೇ ಚಿತ್ರ 'ಬಹದ್ದೂರ್' ಮೂಲಕ.
ಅದಾಗಲೇ ಅದೆಷ್ಟೋ ಕಥೆಗಳನ್ನ ಕೇಳಿದ್ದರೂ, ಯುವ ಪ್ರತಿಭೆ ಚೇತನ್ ರವರ 'ಬಹದ್ದೂರ್' ಚಿತ್ರಕ್ಕೆ ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಗ್ರೀನ್ ಸಿಗ್ನಲ್ ನೀಡಿದರು. ಇದನ್ನ ನೆನೆಸಿಕೊಂಡ ಚೇತನ್, ಅರ್ಜುನ್ ಸರ್ಜಾ ರವರಿಗೆ ಮನಃಪೂರ್ವಕವಾಗಿ ಥ್ಯಾಂಕ್ಸ್ ಹೇಳಿದರು.
'ಫಿಲ್ಮಿಬೀಟ್'ಗೆ 'ಭರ್ಜರಿ' ಹೀರೋ ಧ್ರುವ ಸರ್ಜಾ ಎಕ್ಸ್ ಕ್ಲೂಸಿವ್ ಸಂದರ್ಶನ
'ಭರ್ಜರಿ' ಚಿತ್ರದ ಪ್ರಮೋಷನ್ ನಿಮಿತ್ತ ನಾಯಕ ಧ್ರುವ ಸರ್ಜಾ, ನಾಯಕಿ ರಚಿತಾ ರಾಮ್ ಹಾಗೂ ನಿರ್ದೇಶನ ಚೇತನ್ ಕುಮಾರ್ ನಿಮ್ಮ 'ಒನ್ ಇಂಡಿಯಾ' ಕಛೇರಿಗೆ ಭೇಟಿ ನೀಡಿದ್ದರು.
'ಭರ್ಜರಿ' ಚಿತ್ರದಲ್ಲಿನ ತಮ್ಮ ಪಾತ್ರದ ಗುಟ್ಟು ಬಿಟ್ಟು ಕೊಟ್ಟ 'ಪುಟ್ಟಗೌರಿ' ರಚಿತಾ
'ಒನ್ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ' ತಂಡಕ್ಕೆ ನೀಡಿದ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಅರ್ಜುನ್ ಸರ್ಜಾ ರವರಿಗೆ ಚೇತನ್ ಧನ್ಯವಾದ ಅರ್ಪಿಸಿದರು. ''100 ಡೇಸ್ ಕೊಟ್ಟ ನಾಯಕ ನಟ, ಹೊಸಬರ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಡುವುದು ತುಂಬಾ ಅಪರೂಪ. ಅರ್ಜುನ್ ಸರ್ಜಾ ಸರ್ ಗೆ ನಾನು ಥ್ಯಾಂಕ್ಸ್ ಹೇಳುತ್ತೇನೆ. 'ಬಹದ್ದೂರ್' ಸಿನಿಮಾ ಮಾಡಲು ಅವಕಾಶ ಕಲ್ಪಿಸಿಕೊಟ್ಟರು. ಈಗ 'ಭರ್ಜರಿ' ಸಿನಿಮಾ ಕೊಟ್ಟಿದ್ದಾರೆ. ನಂಬಿಕೆ ಉಳಿಸಿಕೊಂಡಿದ್ದೇನೆ ಎಂಬ ಭಾವಿಸುತ್ತೇನೆ. ಭರ್ಜರಿ ಸಿನಿಮಾ ನಿಜವಾಗಲೂ ಭರ್ಜರಿ ಆಗಿದೆ'' ಎಂದರು ನಿರ್ದೇಶಕ ಚೇತನ್.
ನಮ್ಮ ತಂಡದೊಂದಿಗೆ ನಿರ್ದೇಶಕ ಚೇತನ್ ನೀಡಿದ ಸಂದರ್ಶನದ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....