»   » ಎಲ್ಲಾ ಮುಗಿದ್ಮೇಲೆ ಹುಚ್ಚ ವೆಂಕಟ್ ದಿಢೀರ್ ಪ್ರೆಸ್ ಮೀಟ್ ಮಾಡಿದ್ಯಾಕೆ?

ಎಲ್ಲಾ ಮುಗಿದ್ಮೇಲೆ ಹುಚ್ಚ ವೆಂಕಟ್ ದಿಢೀರ್ ಪ್ರೆಸ್ ಮೀಟ್ ಮಾಡಿದ್ಯಾಕೆ?

Posted By:
Subscribe to Filmibeat Kannada

ಪ್ರಥಮ್ ಮೇಲೆ ಹುಚ್ಚ ವೆಂಕಟ್ ಹಲ್ಲೆ ಮಾಡಿದ್ದು, ಅದಾದ ನಂತರ ಕಿಚ್ಚ ಸುದೀಪ್ 'ಬಿಗ್ ಬಾಸ್' ಕಾರ್ಯಕ್ರಮವನ್ನ ನಿರೂಪಣೆ ಮಾಡಲ್ಲ ಅಂದಿದ್ದು, ಆಮೇಲೆ ಹುಚ್ಚ ವೆಂಕಟ್ ಕ್ಷಮೆ ಕೇಳಿದ್ದು, ಇದೆಲ್ಲ ಬೆಳವಣಿಗೆ ಆದ ನಂತರ 'ಬಿಗ್ ಬಾಸ್' ಕಾರ್ಯಕ್ರಮವನ್ನ ಎಂದಿನಂತೆ ಸುದೀಪ್ ನಿರೂಪಣೆ ಮಾಡಿದರು. ಅಲ್ಲಿಗೆ, ವಿವಾದಕ್ಕೆ ಫುಲ್ ಸ್ಟಾಪ್ ಬಿತ್ತು.

ಎಲ್ಲವೂ ಮುಗಿದು ಹೋದರೂ, ಹುಚ್ಚ ವೆಂಕಟ್ ಮಾತ್ರ ಸುಮ್ಮನೆ ಕೂರಲಿಲ್ಲ. ದಿಢೀರ್ ಅಂತ ಪ್ರೆಸ್ ಮೀಟ್ ಕರೆದರು. ಈ ವೇಳೆ ನಮ್ಮ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತಿಗೆ ಸಿಕ್ಕ ವೆಂಕಟ್, ಪ್ರಥಮ್ ಮೇಲೆ ಮತ್ತೆ ಗರಂ ಆದರು. ''ಪ್ರಥಮ್ ನನ್ನ ಎಕ್ಕಡ. ಅವನು ಇರುವೆ. ನನ್ನ ರೇಂಜ್ ಏನು? ಅವನ ರೇಂಜ್ ಏನು? ನಾನು ವರ್ಲ್ಡ್ ಫೇಮಸ್, ಅವನು ಅವನ ಏರಿಯಾನೇ ಫೇಮಸ್ ಅಲ್ಲ'' ಅಂತ ಬಾಯಿಗೆ ಬಂದ್ಹಂಗೆ ಮಾತನಾಡಿದರು. ['ಪ್ರಥಮ್ ನನ್ನ ಎಕ್ಕಡ': ಮತ್ತೆ ರೊಚ್ಚಿಗೆದ್ದ ಹುಚ್ಚ ವೆಂಕಟ್]

ಸಾಲದು ಅಂತ ಅವರಿಗಿರುವ ದೊಡ್ಡ ಆಸೆ ಬಗ್ಗೆ ಬಾಯ್ಬಿಟ್ಟರು. ಆ ಆಸೆ ನೆರವೇರುವುದು ಕಿಚ್ಚ ಸುದೀಪ್ ಕೈಯಲ್ಲಿದೆ. ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಹುಚ್ಚ ವೆಂಕಟ್ ನೀಡಿರುವ ಸಂದರ್ಶನದ ವಿಡಿಯೋ ಇಲ್ಲಿದೆ. ಮಿಸ್ ಮಾಡದೆ ನೋಡಿ...

English summary
Here is the interview of YouTube Star Huccha Venkat after hitting Bigg Boss Contestant Pratham. Watch the video..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada