For Quick Alerts
  ALLOW NOTIFICATIONS  
  For Daily Alerts

  ಎಕ್ಸ್ ಕ್ಲ್ಯೂಸಿವ್: ಮಮ್ಮಿ ಹಾರರ್ ಅನುಭವ ತೆರೆದಿಟ್ಟ ಪ್ರಿಯಾಂಕಾ ಉಪೇಂದ್ರ

  By Bharath Kumar
  |

  ''ಮಮ್ಮಿ ಸೇವ್ ಮಿ' ಇದು ಮಹಿಳಾ ಪ್ರಧಾನ ಚಿತ್ರವಲ್ಲ. ಇದೊಂದು ಕಥೆಯಾಧರಿತ ಚಿತ್ರ. ಇದು ಭಾವನಾತ್ಮಕ ಹಾರರ್ ಸಿನಿಮಾ. ವೇಣು ಕ್ಯಾಮೆರಾ ವರ್ಕ್, ಅಜನೀಶ್ ಅವರ ಹಿನ್ನಲೆ ಸಂಗೀತ ಈ ಚಿತ್ರದ ವಿಶೇಷ. ಚಿತ್ರಕ್ಕಾಗಿ ನಿರ್ಮಾಣ ಮಾಡಿದ್ದ ಸೆಟ್ ಕೂಡ ನಮ್ಮ ಚಿತ್ರದ ಒಂದು ಪಾತ್ರ''- ಪ್ರಿಯಾಂಕಾ ಉಪೇಂದ್ರ, ನಟಿ

  ನಟಿ ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಮಮ್ಮಿ ಸೇವ್ ಮಿ' ಚಿತ್ರ ಇದೇ ವಾರ (ಡಿಸೆಂಬರ್ 02) ರಾಜ್ಯಾದ್ಯಂತ ತೆರೆಕಾಣುತ್ತಿದೆ. ಸದ್ಯ, ಚಿತ್ರದ ಟ್ರೈಲರ್ ಮೂಲಕವೇ ಇಡೀ ಸ್ಯಾಂಡಲ್ ವುಡ್ ಮಾತ್ರವಲ್ಲದೇ, ನೆರೆ ರಾಜ್ಯಗಳಲ್ಲೂ ಸಖತ್ ಸೌಂಡ್ ಮಾಡುತ್ತಿದೆ.[ಕಿಚ್ಚ ಮೆಚ್ಚಿದ 'ಮಮ್ಮಿ': 'ನಾನು ನೋಡಲೇಬೇಕು' ಎಂದ ಸುದೀಪ್]

  ಯುವ ನಿರ್ದೇಶಕ ಲೋಹಿತ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಅಜನೀಶ್ ಲೋಕನಾಥ್ ಚಿತ್ರಕ್ಕೆ ಹಿನ್ನಲೆ ಸಂಗೀತ ಒದಗಿಸಿದ್ದಾರೆ. ವೇಣು ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದ್ದು, ಟೆಕ್ನಿಕಲಿ ತುಂಬಾ ಇಂಟ್ರೆಸ್ಟಿಂಗ್ ಎನಿಸಿಕೊಂಡಿದೆ.

  'ಮಮ್ಮಿ ಸೇವ್ ಮಿ' ಚಿತ್ರ ಬರಿ ಹಾರರ್ ಎಲಿಮೆಂಟ್ಸ್ ಗಳು ಮಾತ್ರವಲ್ಲದೇ, ಒಬ್ಬ ತಾಯಿ ಮತ್ತು ಮಗಳ ಭಾವನಾತ್ಮಕ ಸಂಬಂಧದ ಕಥೆ ಹೊಂದಿದೆ. ಪ್ರಿಯಾಂಕಾ ಉಪೇಂದ್ರ ಅವರು ಇದೇ ಮೊದಲ ಬಾರಿಗೆ ಹಾರರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಸಾಮಾನ್ಯವಾಗಿ ಕುತೂಹಲ ಹೆಚ್ಚಿದೆ. ಖ್ಯಾತ ಬಾಲ ನಟಿ ಯುವಿನಾ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರ ಮಗಳ ಪಾತ್ರವನ್ನ ನಿರ್ವಹಿಸಿದ್ದಾರೆ.['ಮಮ್ಮಿ ಸೇವ್ ಮಿ' ಚಿತ್ರತಂಡದ ಕಡೆಯಿಂದ ಬಂದ ಇಂಟ್ರೆಸ್ಟಿಂಗ್ ನ್ಯೂಸ್]

  'ಮಮ್ಮಿ ಸೇವ್ ಮಿ' ಚಿತ್ರದ ಬಿಡುಗಡೆಯ ಸಂತಸದಲ್ಲಿದ್ದ ಚಿತ್ರದ ನಾಯಕಿ ಪ್ರಿಯಾಂಕ ಉಪೇಂದ್ರ, ನಿಮ್ಮ ಫಿಲ್ಮಿ ಬೀಟ್ ಜತೆ ಮಾತನಾಡಿದ್ದಾರೆ. ಈ ವೇಳೆ ಚಿತ್ರದ ವಿಶೇಷತೆಗಳು ಹಾಗೂ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನ ನಮ್ಮ ಜತೆ ಹಂಚಿಕೊಂಡರು. ಇಲ್ಲಿದೆ ನೋಡಿ ಪ್ರಿಯಾಂಕಾ ಉಪೇಂದ್ರ ಅವರ ಸಂದರ್ಶನದ ವಿಡಿಯೋ....

  English summary
  'Mummy save me' movie is not women oriented film its a emotional horror film says lead actress Priyanka Upendra in an exclusive interview with Filmibeat Kannada. Here is the interview of Kannada Actress Priyanka Upendra. Watch the video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X