»   » ಎಕ್ಸ್ ಕ್ಲ್ಯೂಸಿವ್: 'ಮಮ್ಮಿ' ಚಿತ್ರದ ನೈಜ ಕಥೆ ಬಿಚ್ಚಿಟ್ಟ ನಿರ್ದೇಶಕ ಲೋಹಿತ್

ಎಕ್ಸ್ ಕ್ಲ್ಯೂಸಿವ್: 'ಮಮ್ಮಿ' ಚಿತ್ರದ ನೈಜ ಕಥೆ ಬಿಚ್ಚಿಟ್ಟ ನಿರ್ದೇಶಕ ಲೋಹಿತ್

Posted By:
Subscribe to Filmibeat Kannada

ನಟಿ ಪ್ರಿಯಾಂಕಾ ಉಪೇಂದ್ರ ಅಭಿನಯದ 'ಮಮ್ಮಿ ಸೇವ್ ಮಿ' ಸದ್ಯ ಚಿತ್ರ ಜಗತ್ತಿನಲ್ಲಿ ತುಂಬಾ ವಿಶೇಷವೆನಿಸಿಕೊಂಡಿರುವ ಹಾರರ್ ಸಿನಿಮಾ. ಬರಿ ಟ್ರೈಲರ್ ಮೂಲಕವೇ ಇಡೀ ಚಿತ್ರರಂಗವನ್ನ ಬೆರಗುಗೊಳಿಸಿರುವ ಚಿತ್ರ. 7 ತಿಂಗಳ ಗರ್ಭಿಣಿ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಹಾಗೂ ಮಗಳ ಪಾತ್ರದಲ್ಲಿ ಬಾಲ ನಟಿ ಯುವಿನಾ ಅಭಿನಯಿಸಿದ್ದಾರೆ. ಅದ್ಬುತ ಕ್ಯಾಮೆರಾ ವರ್ಕ್, ಕುತೂಹಲ ಮೂಡಿಸುವಂತಹ ಸಂಗೀತ ಈ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

ಹೀಗೆ, ಸಿನಿಮಾ ಬಿಡುಗಡೆಗೂ ಮುಂಚೆನೆ ಇಷ್ಟೆಲ್ಲಾ ಸುದ್ದಿ ಮಾಡಲು ಕಾರಣ ಚಿತ್ರದ ನಿರ್ದೇಶಕ ಲೋಹಿತ್.[ಎಕ್ಸ್ ಕ್ಲ್ಯೂಸಿವ್: ಮಮ್ಮಿ ಹಾರರ್ ಅನುಭವ ತೆರೆದಿಟ್ಟ ಪ್ರಿಯಾಂಕಾ ಉಪೇಂದ್ರ]

ಲೋಹಿತ್ ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕೆ ಆಕ್ಷನ್ ಹೇಳಿದ್ದು, ಚಿತ್ರದ ಬಗ್ಗೆ ಹೈ ಎಕ್ಸ್ ಪೆಕ್ಟೇಶನ್ ಹುಟ್ಟುಹಾಕಿದ್ದಾರೆ. ತಮ್ಮ ಚೊಚ್ಚಲ ಸಿನಿಮಾದಲ್ಲೇ, ಕನ್ನಡ, ತೆಲುಗು, ತಮಿಳಿನ ಸ್ಟಾರ್ ನಟ, ನಟಿಯರೆಲ್ಲಾ 'ಮಮ್ಮಿ ಸೇವ್ ಮಿ' ಚಿತ್ರದ ಬಗ್ಗೆ ಮಾತನಾಡುವಂತೆ ಮಾಡಿದ್ದಾರೆ.[ಕಿಚ್ಚ ಮೆಚ್ಚಿದ 'ಮಮ್ಮಿ': 'ನಾನು ನೋಡಲೇಬೇಕು' ಎಂದ ಸುದೀಪ್]

ಹೀಗೆ, ಪ್ರತಿ ಹಂತದಲ್ಲೂ ಪ್ರೇಕ್ಷಕರ ಕುತೂಹಲವನ್ನ ಕೆರಳಿಸಿರುವ 'ಮಮ್ಮಿ ಸೇವ್ ಮಿ' ಇದೇ ವಾರ (ಡಿಸೆಂಬರ್ 02) ತೆರೆಕಾಣುತ್ತಿದೆ. ಈ ವೇಳೆ ಚಿತ್ರದ ನಿರ್ದೇಶಕ ಲೋಹಿತ್ ನಿಮ್ಮ ಫಿಲ್ಮಿ ಬೀಟ್ ನಡೆಸಿದ ಸಂದರ್ಶನದಲ್ಲಿ ಚಿತ್ರದ ಬಗ್ಗೆ ಮಾತನಾಡಿದ್ದು, ಮಮ್ಮಿ ಸೇವ್ ಮಿ ಚಿತ್ರದ ನೈಜ ಘಟನೆ ಬಿಚ್ಚಿಟ್ಟಿದ್ದಾರೆ. ಇಲ್ಲಿದೆ ನೋಡಿ 'ಮಮ್ಮಿ ಸೇವ್ ಮಿ' ಚಿತ್ರದ ನಿರ್ದೇಶಕ ಲೋಹಿತ್ ಅವರ ಸಂದರ್ಶನದ ವಿಡಿಯೋ.

English summary
Here is the interview of Kannada Movie 'Mummy save me' Director Lohith. Watch the video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada