ನಟಿ 'ಮಾನಸ ಜೋಷಿ'ಗಿರುವ ಕೊರಗು ಒಂದೇ.! ಏನದು.?
ಸುಮನಾ ಕಿತ್ತೂರು ನಿರ್ದೇಶನದ 'ಕಿರಗೂರಿನ ಗಯ್ಯಾಳಿಗಳು' ಸಿನಿಮಾದಲ್ಲಿ ಗಯ್ಯಾಳಿ ಆಗಿ ಕಾಣಿಸಿಕೊಂಡಿದ್ದವರು ನಟಿ ಮಾನಸ ಜೋಷಿ. 'ಹಜ್', 'ಲಾಸ್ಟ್ ಬಸ್' ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ಸಿನಿಮಾಗಳಲ್ಲಿ ಮಾನಸ ಜೋಷಿ ನಟಿಸಿದ್ದಾರೆ.
ಹಾಗ್ನೋಡಿದ್ರೆ, ದೂರದರ್ಶನ ವಾಹಿನಿಯ ಮಹೇಶ್ ಜೋಷಿ ಪುತ್ರಿಯಾಗಿರುವ ಮಾನಸ ಜೋಷಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು 'ಬಹುಪರಾಕ್' ಸಿನಿಮಾದಿಂದ. ಅಲ್ಲಿಂದ ಇಲ್ಲಿಯವರೆಗೂ ಪಾತ್ರಗಳನ್ನ ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಿರುವ ಮಾನಸ ಜೋಷಿ ಸದ್ಯ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಬಹುಮುಖ ಪ್ರತಿಭೆ ಆಗಿರುವ ಮಾನಸ ಜೋಷಿ ಕಥಕ್ ಡ್ಯಾನ್ಸರ್ ಕೂಡ ಹೌದು. ಸ್ಕೂಲ್ ಹಾಗೂ ಕಾಲೇಜ್ ನಲ್ಲಿರುವಾಗ ವಾಲಿಬಾಲ್, ಬಾಸ್ಕೆಟ್ ಬಾಲ್... ಹಲವು ಕ್ರೀಡೆಗಳಲ್ಲಿ ಸಕ್ರಿಯರಾಗಿದ್ದರೂ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕ ಪಡೆದಿರುವ ಪ್ರತಿಭಾವಂತೆ ಈ ಮಾನಸ ಜೋಷಿ.

ಇಂತಿಪ್ಪ ಮಾನಸ ಜೋಷಿಗೆ ಒಂದು ಕೊರಗು ಇದ್ಯಂತೆ. ಅದೇನಪ್ಪಾ ಅಂದ್ರೆ, ಮಾನಸ ಜೋಷಿ ಜೀವನದಲ್ಲಿ ಯಾರೊಬ್ಬರೂ ಪ್ರಪೋಸ್ ಮಾಡ್ಲಿಲ್ವಂತೆ. ಹಾಗಂತ ಸ್ವತಃ ಮಾನಸ 'ಫಿಲ್ಮಿಬೀಟ್ ಕನ್ನಡ'ಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅಂದ್ಹಾಗೆ, ಸದ್ಯ ಮಾನಸ ಜೋಷಿಗೆ ಮದುವೆ ಆಗಿದೆ. ಮೂರು ವರ್ಷಗಳ ಹಿಂದೆ ಮಾನಸ ಜೋಷಿ ವಿವಾಹ ಮಹೋತ್ಸವ ನಡೆದಿತ್ತು.
ಮದುವೆ ಆದ್ಮೇಲೂ, ಚಿತ್ರರಂಗದಲ್ಲಿ ಮಾನಸ ಜೋಷಿ ಸಕ್ರಿಯರಾಗಿದ್ದಾರೆ. ಒಳ್ಳೊಳ್ಳೆ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ. ಮಾನಸ ಜೋಷಿ ಜೊತೆಗಿನ ಸಂದರ್ಶನದ ವಿಡಿಯೋ ಇಲ್ಲಿದೆ, ನೋಡಿರಿ...


Click it and Unblock the Notifications











