ಒಂದೇ ತರಹ ಪಾತ್ರ ಮಾಡಲು ಮಾನಸ ಜೋಷಿಗೆ ಇಷ್ಟವಿಲ್ಲ.!
'ಬಹುಪರಾಕ್', 'ಕಿರಗೂರಿನ ಗಯ್ಯಾಳಿಗಳು', 'ಹಜ್', 'ಲಾಸ್ಟ್ ಬಸ್' ಸೇರಿದಂತೆ ಕನ್ನಡದ ಕೆಲವೇ ಕೆಲವು ಸಿನಿಮಾಗಳಲ್ಲಿ ಮಾತ್ರ ನಟಿ ಮಾನಸ ಜೋಷಿ ಅಭಿನಯಿಸಿದ್ದಾರೆ.
ಯಾಕೆ ಹೀಗೆ.? ಪ್ರತಿಭಾವಂತೆ ಆಗಿರುವ ಮಾನಸ ಜೋಷಿಗೆ ಅವಕಾಶಗಳು ಬರ್ತ್ತಿಲ್ವಾ.? ಇಲ್ಲ, ಮಾನಸ ಜೋಷಿ ತುಂಬಾ ಚ್ಯೂಸಿ ಆಗಿದ್ದಾರಾ.? ಎಂಬ ಅನುಮಾನ ಹಲವರಿಗೆ ಕಾಡಬಹುದು.

ಈ ಅನುಮಾನಕ್ಕೆ ನಟಿ ಮಾನಸ ಜೋಷಿ ಸ್ಪಷ್ಟನೆ ಕೊಟ್ಟಿದ್ದಾರೆ. ''ಈಗಾಗಲೇ ಮಾಡಿರುವ ಪಾತ್ರಗಳನ್ನ ಪದೇ ಪದೇ ಮಾಡುವುದು ನನಗೆ ಇಷ್ಟ ಇಲ್ಲ. 'ಕಿರಗೂರಿನ ಗಯ್ಯಾಳಿಗಳು' ಸಿನಿಮಾ ಆದ್ಮೇಲೆ, ಅದೇ ತರಹ 15 ಗಯ್ಯಾಳಿ ಪಾತ್ರಗಳು ಬಂದವು. 'ಲಾಸ್ಟ್ ಬಸ್' ಆದ್ಮೇಲೆ 12 ಸೈಕೋ-ಥ್ರಿಲ್ಲರ್ ಸ್ಕ್ರಿಪ್ಟ್ ಗಳು ಬಂದವು. ಪಾತ್ರದಿಂದ ಪಾತ್ರಕ್ಕೆ ನನಗೆ ವೇರಿಯೇಷನ್ ಇರಬೇಕು. ಹೀಗಾಗಿ ನಾನು ಒಪ್ಪಿಕೊಳ್ಳಲಿಲ್ಲ'' ಅಂತಾರೆ ನಟಿ ಮಾನಸ ಜೋಷಿ
''ಹೊಸಬರ ಜೊತೆಗೆ ಸಿನಿಮಾ ಮಾಡುವೆ. ಆದ್ರೆ, ಸ್ಕ್ರಿಪ್ಟ್ ಹಾಗೂ ನನ್ನ ಪಾತ್ರ ಚೆನ್ನಾಗಿರಬೇಕು. ಒಳ್ಳೊಳ್ಳೆ ಕ್ಯಾರೆಕ್ಟರ್ ಸಿಗಬೇಕು'' ಎನ್ನುವುದು ನಟಿ ಮಾನಸ ಜೋಷಿ ಬಯಕೆ.
ಕಿರುತೆರೆಯಲ್ಲಿ 'ಮಹಾದೇವಿ' ಸೀರಿಯಲ್ ಮಾಡಿರುವ ಮಾನಸ ಜೋಷಿ ಸದ್ಯ ಸ್ಟಾರ್ ಸುವರ್ಣ ವಾಹಿನಿಗಾಗಿ 'ಶ್ರೀ' ಎಂಬ ಧಾರಾವಾಹಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಮಾನಸ ಜೋಷಿ ಜೊತೆಗಿನ ಸಂದರ್ಶನದ ಪಾರ್ಟ್-2 ಇಲ್ಲಿದೆ, ನೋಡಿರಿ...


Click it and Unblock the Notifications











