For Quick Alerts
  ALLOW NOTIFICATIONS  
  For Daily Alerts

  ಒಂದೇ ತರಹ ಪಾತ್ರ ಮಾಡಲು ಮಾನಸ ಜೋಷಿಗೆ ಇಷ್ಟವಿಲ್ಲ.!

  By Harshitha
  |
  Sakkath Shukravara with Pavan Ranadheera season 2 : Manasa Joshi part 2| Filmibeat Kannada

  'ಬಹುಪರಾಕ್', 'ಕಿರಗೂರಿನ ಗಯ್ಯಾಳಿಗಳು', 'ಹಜ್', 'ಲಾಸ್ಟ್ ಬಸ್' ಸೇರಿದಂತೆ ಕನ್ನಡದ ಕೆಲವೇ ಕೆಲವು ಸಿನಿಮಾಗಳಲ್ಲಿ ಮಾತ್ರ ನಟಿ ಮಾನಸ ಜೋಷಿ ಅಭಿನಯಿಸಿದ್ದಾರೆ.

  ಯಾಕೆ ಹೀಗೆ.? ಪ್ರತಿಭಾವಂತೆ ಆಗಿರುವ ಮಾನಸ ಜೋಷಿಗೆ ಅವಕಾಶಗಳು ಬರ್ತ್ತಿಲ್ವಾ.? ಇಲ್ಲ, ಮಾನಸ ಜೋಷಿ ತುಂಬಾ ಚ್ಯೂಸಿ ಆಗಿದ್ದಾರಾ.? ಎಂಬ ಅನುಮಾನ ಹಲವರಿಗೆ ಕಾಡಬಹುದು.

  ಈ ಅನುಮಾನಕ್ಕೆ ನಟಿ ಮಾನಸ ಜೋಷಿ ಸ್ಪಷ್ಟನೆ ಕೊಟ್ಟಿದ್ದಾರೆ. ''ಈಗಾಗಲೇ ಮಾಡಿರುವ ಪಾತ್ರಗಳನ್ನ ಪದೇ ಪದೇ ಮಾಡುವುದು ನನಗೆ ಇಷ್ಟ ಇಲ್ಲ. 'ಕಿರಗೂರಿನ ಗಯ್ಯಾಳಿಗಳು' ಸಿನಿಮಾ ಆದ್ಮೇಲೆ, ಅದೇ ತರಹ 15 ಗಯ್ಯಾಳಿ ಪಾತ್ರಗಳು ಬಂದವು. 'ಲಾಸ್ಟ್ ಬಸ್' ಆದ್ಮೇಲೆ 12 ಸೈಕೋ-ಥ್ರಿಲ್ಲರ್ ಸ್ಕ್ರಿಪ್ಟ್ ಗಳು ಬಂದವು. ಪಾತ್ರದಿಂದ ಪಾತ್ರಕ್ಕೆ ನನಗೆ ವೇರಿಯೇಷನ್ ಇರಬೇಕು. ಹೀಗಾಗಿ ನಾನು ಒಪ್ಪಿಕೊಳ್ಳಲಿಲ್ಲ'' ಅಂತಾರೆ ನಟಿ ಮಾನಸ ಜೋಷಿ

  ನಟಿ 'ಮಾನಸ ಜೋಷಿ'ಗಿರುವ ಕೊರಗು ಒಂದೇ.! ಏನದು.? ನಟಿ 'ಮಾನಸ ಜೋಷಿ'ಗಿರುವ ಕೊರಗು ಒಂದೇ.! ಏನದು.?

  ''ಹೊಸಬರ ಜೊತೆಗೆ ಸಿನಿಮಾ ಮಾಡುವೆ. ಆದ್ರೆ, ಸ್ಕ್ರಿಪ್ಟ್ ಹಾಗೂ ನನ್ನ ಪಾತ್ರ ಚೆನ್ನಾಗಿರಬೇಕು. ಒಳ್ಳೊಳ್ಳೆ ಕ್ಯಾರೆಕ್ಟರ್ ಸಿಗಬೇಕು'' ಎನ್ನುವುದು ನಟಿ ಮಾನಸ ಜೋಷಿ ಬಯಕೆ.

  ಗಾಯಕ ರಘು ದೀಕ್ಷಿತ್ ಬಗ್ಗೆ ಹೀಗೊಂದು ತಪ್ಪು ಕಲ್ಪನೆ.! ಗಾಯಕ ರಘು ದೀಕ್ಷಿತ್ ಬಗ್ಗೆ ಹೀಗೊಂದು ತಪ್ಪು ಕಲ್ಪನೆ.!

  ಕಿರುತೆರೆಯಲ್ಲಿ 'ಮಹಾದೇವಿ' ಸೀರಿಯಲ್ ಮಾಡಿರುವ ಮಾನಸ ಜೋಷಿ ಸದ್ಯ ಸ್ಟಾರ್ ಸುವರ್ಣ ವಾಹಿನಿಗಾಗಿ 'ಶ್ರೀ' ಎಂಬ ಧಾರಾವಾಹಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ಸಪ್ತಪದಿ ತುಳಿಯಲಿರುವ 'ಕಿರಗೂರಿನ ಗಯ್ಯಾಳಿ' ಮಾನಸ ಜೋಷಿ ಸಪ್ತಪದಿ ತುಳಿಯಲಿರುವ 'ಕಿರಗೂರಿನ ಗಯ್ಯಾಳಿ' ಮಾನಸ ಜೋಷಿ

  ಮಾನಸ ಜೋಷಿ ಜೊತೆಗಿನ ಸಂದರ್ಶನದ ಪಾರ್ಟ್-2 ಇಲ್ಲಿದೆ, ನೋಡಿರಿ...

  English summary
  Kannada Actress Manasa Joshi speaks about her roles in Sakkath Shukravara show. Watch video here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X