For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ಕಾಲಿಡುವ ಮುನ್ನ, ನಟಿ ಸಂಜನಾ ಆಡಿರುವ ಮಾತನೊಮ್ಮೆ ಕೇಳಿ...

  By Harshitha
  |
  Sanjana was the chief guest for Purple Run, Alzheimer's Awareness Event | Filmibeat Kannada

  ನೀವು ದೊಡ್ಡ ಸ್ಟಾರ್ ಆಗ್ಬೇಕು ಅಂತ ಕನಸು ಕಾಣ್ತಿದ್ದೀರಾ.? ಬಣ್ಣದ ಲೋಕದಲ್ಲಿ ದೊಡ್ಡ ತಾರೆಯಾಗಿ ಮಿಂಚ್ಬೇಕು ಎಂಬ ಆಸೆ ನಿಮಗಿದ್ಯಾ.? ವಿದ್ಯೆ ತಲೆಗೆ ಹತ್ತುತ್ತಿಲ್ಲ... ಅದು ಬಿಟ್ಟು ಸಿನಿಮಾಗೆ ಸೇರ್ಕೊಳ್ಳೋಣ ಅಂತ ನೀವೇನಾದ್ರೂ ಅಂದುಕೊಂಡಿದ್ರೆ, ಸ್ವಲ್ಪ ತಾಳಿ...

  ದೊಡ್ಡ ದೊಡ್ಡ ಕನಸು ಕಾಣುವ ಮುನ್ನ ನಟಿ ಸಂಜನಾ ಗಲ್ರಾನಿ ಏನ್ ಹೇಳ್ತಾರೆ ಅಂತ ಮೊದಲು ಕೇಳಿಸಿಕೊಂಡ್ಬಿಡಿ...

  ''ವಿದ್ಯಾಭ್ಯಾಸ ಮುಗಿಸಿದ ನಂತರ ಚಿತ್ರರಂಗಕ್ಕೆ ಬನ್ನಿ. ಸಿನಿಮಾದಲ್ಲಿ ಹಿಟ್ ಆಗಲಿಲ್ಲ ಅಂದ್ರೆ ಡಿಪ್ರೆಸ್ ಆಗುವ ಬದಲು ಬೇರೆ ಆಯ್ಕೆ ಇಟ್ಟುಕೊಳ್ಳಿ. ಬೇರೆ ವೃತ್ತಿಗಳಲ್ಲಿ ಇರುವಂತೆ ಚಿತ್ರರಂಗದಲ್ಲಿಯೂ ತುಂಬಾ ಸ್ಪರ್ಧೆ ಇದೆ. ಹೀಗಾಗಿ ವಿದ್ಯಾಭ್ಯಾಸ ಮಾಡಿ ಬಂದರೆ ಒಳಿತು'' ಎಂಬ ಸಂದೇಶ ನೀಡಿದ್ದಾರೆ ನಟಿ ಸಂಜನಾ ಗಲ್ರಾನಿ.

  ಟಾಲಿವುಡ್ ನಲ್ಲಿ ನಟಿ ಸಂಜನಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

  ನಟಿ ಸಂಜನಾ ಹೇಳಿರುವುದರಲ್ಲಿಯೂ ಅರ್ಥ ಇದೆ. ಚಿತ್ರರಂಗದಲ್ಲಿ ಯಾವುದೂ ಗ್ಯಾರೆಂಟಿ ಇಲ್ಲ. ವಿದ್ಯೆ ಇದ್ದರೆ ಯಾವುದರೂ ಒಂದು ಕೆಲಸ ಸಿಕ್ಕೇ ಸಿಗುತ್ತೆ, ಸಂಬಳ ಅಂತೂ ಬಂದೇ ಬರುತ್ತೆ. ಆದ್ರೆ, ಚಿತ್ರರಂಗದಲ್ಲಿ ಗೆದ್ದ ಎತ್ತಿನ ಬಾಲ ಹಿಡಿಯುವವರೇ ಹೆಚ್ಚು. ಹೀಗಾಗಿ ಒಂದು ಯಶಸ್ಸು ಸಿಗುವವರೆಗೂ ಕಾಯಲೇಬೇಕು. ಅದೃಷ್ಟ ಚೆನ್ನಾಗಿದ್ದರೆ, ಸಕ್ಸಸ್ ಸಿಗುತ್ತೆ. ಒಂದು ವೇಳೆ ಇಲ್ಲ ಅಂದ್ರೆ..?

  ಅದಕ್ಕೆ ವಿದ್ಯಾಭ್ಯಾಸ ಮುಖ್ಯ ಎಂದಿದ್ದಾರೆ ನಟಿ ಸಂಜನಾ. ಅಂದ್ಹಾಗೆ, ಇದನ್ನೆಲ್ಲ ನಟಿ ಸಂಜನಾ ಹೇಳಿದ್ದು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ನೀಡಿದ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ. ಅದನ್ನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

  English summary
  ''Complete your Education before entering into Film Industry'' advices Sanjana Galrani, for all Aspiring Artists.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X