ವಿಡಿಯೋ: ಪ್ರತಿಭಾವಂತ ಸಂಗೀತ ನಿರ್ದೇಶಕ ನೋಬಿನ್ ಪೌಲ್ ಸಂದರ್ಶನ

By Harshitha

ಡಿ.ಸತ್ಯ ಪ್ರಕಾಶ್ ನಿರ್ದೇಶನದ 'ರಾಮ ರಾಮ ರೇ' ಚಿತ್ರವನ್ನ ನೋಡಿದವರಿಗೆ, ಸಿನಿಮಾದ ಬ್ಯಾಕ್ ಗ್ರೌಂಡ್ ಸ್ಕೋರ್ ತುಂಬಾ ಕಾಡುತ್ತೆ. ಅಂದ್ಹಾಗೆ, 'ರಾಮ ರಾಮ ರೇ' ಚಿತ್ರಕ್ಕೆ ಬ್ಯಾಕ್ ಗ್ರೌಂಡ್ ಸ್ಕೋರ್ ಸಂಯೋಜನೆ ಮಾಡಿದವರು ಪ್ರತಿಭಾವಂತ ಸಂಗೀತ ನಿರ್ದೇಶಕ ನೋಬಿನ್ ಪೌಲ್.

ಜಾಹೀರಾತುಗಳಿಗೆ 1000ಕ್ಕೂ ಹೆಚ್ಚು ಜಿಂಗಲ್ಸ್ ಕಂಪೋಸ್ ಮಾಡಿದ್ದ, ಕಿರುಚಿತ್ರಗಳಿಗೆ ಸಂಗೀತ ನೀಡುತ್ತಿದ್ದ ನೋಬಿನ್ ಪೌಲ್ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು 'ಟೈಟ್ಲು ಬೇಕಾ' ಚಿತ್ರದಿಂದ.

Watch Video: Kannada Music Director Nobin Paul interview

ಬಳಿಕ 'ರಾಮ ರಾಮ ರೇ' ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಿದ ನೋಬಿನ್ ಪೌಲ್, 'ಡೈಯಾನಾ ಹೌಸ್', 'ಶುದ್ಧಿ', 'ಚೂರಿಕಟ್ಟೆ' ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನ ಹೊರಹಾಕಿದರು. ಇಂತಿಪ್ಪ ನೋಬಿನ್ ಪೌಲ್ ಗೆ ಇದೀಗ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ.

ಸದ್ಯ ನೋಬಿನ್ ಪೌಲ್ ಕೈಯಲ್ಲಿ 'ಕೆಫೆ ಗ್ಯಾರೇಜ್', 'ಅನುಕ್ತ', 'ಹೌರಾ ಬ್ರಿಡ್ಜ್' ಹಾಗೂ 'ಕಥಾ ಸಂಗಮ' ಚಿತ್ರಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ನಿರ್ಮಾಣದ '777 ಚಾರ್ಲಿ' ಚಿತ್ರಕ್ಕೂ ಸಂಗೀತ ನೀಡುತ್ತಿರುವವರು ಇದೇ ನೋಬಿನ್ ಪೌಲ್.

''777 ಚಾರ್ಲಿ' ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಖುಷಿ ಆಗಿದೆ. ನನ್ನ ಪ್ರತಿಭೆಯನ್ನ ಪ್ರೂವ್ ಮಾಡಲು ಇದೊಂದು ಒಳ್ಳೆಯ ಅವಕಾಶ. ಎಲ್ಲರೂ ಈ ಸಿನಿಮಾವನ್ನ ಎಂಜಾಯ್ ಮಾಡ್ತಾರೆ'' ಅಂತ 'ಫಿಲ್ಮಿಬೀಟ್ ಕನ್ನಡ'ಕ್ಕೆ ನೀಡಿದ ಸಂದರ್ಶನದಲ್ಲಿ ನೋಬಿನ್ ಪೌಲ್ ಹೇಳಿದ್ದಾರೆ.

'ಸಖತ್ ಶುಕ್ರವಾರ' ಕಾರ್ಯಕ್ರಮದಲ್ಲಿ ನೋಬಿನ್ ಪೌಲ್ ನೀಡಿರುವ ಸಂದರ್ಶನದ ಮೊದಲ ಭಾಗ ಇಲ್ಲಿದೆ, ನೋಡಿರಿ...

More from Filmibeat

English summary
Kannada Music Director Nobin Paul speaks about his upcoming movies in Sakkath Shukravara show. Watch video here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X