ಲೋ ಬಜೆಟ್ ಚಿತ್ರಕ್ಕೆ ಫ್ರೀ ಆಗಿ ಸಾಂಗ್ ಕಂಪೋಸ್ ಮಾಡ್ತಾರಾ ನೋಬಿನ್ ಪೌಲ್.?

By Harshitha

ಸಿನಿಮಾ ರಂಗದಲ್ಲಿ ಏನು ನಡೆಯುವುದಿಲ್ಲ ಹೇಳಿ..? ''ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದರೆ ಸಾಕು, ಸಂಭಾವನೆಯೇ ಬೇಡ'' ಅಂತ ಹೇಳುವವರಿದ್ದಾರೆ. ಇತ್ತ 'ಲೋ ಬಜೆಟ್' ಹೆಸರಿನಲ್ಲಿ ಎಲ್ಲಾ ಕೆಲಸಗಳನ್ನು ಬಿಟ್ಟಿಯಾಗಿ ಮಾಡಿಸಿಕೊಳ್ಳುವ ನಿರ್ಮಾಪಕರು/ನಿರ್ದೇಶಕರೂ ಇದ್ದಾರೆ. ಈ ಅನುಭವ ಸಂಗೀತ ನಿರ್ದೇಶಕ ನೋಬಿನ್ ಪೌಲ್ ಅವರಿಗೂ ಆಗಿದೆ.

'ಟೈಟ್ಲು ಬೇಕಾ', 'ರಾಮ ರಾಮ ರೇ', 'ಶುದ್ಧಿ', 'ಚೂರಿಕಟ್ಟೆ' ಮುಂತಾದ ಕನ್ನಡ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿರುವ ನೋಬಿನ್ ಪೌಲ್ ಮೂಲತಃ ಮಲಯಾಳಂ ಭಾಷಿಕರು. ಮೊದಲು ಜಾಹೀರಾತು ಹಾಗೂ ಶಾರ್ಟ್ ಫಿಲ್ಮ್ ಗಳಿಗೆ ಸಂಗೀತ ನೀಡುತ್ತಿದ್ದ ನೋಬಿನ್ ಪೌಲ್ ಗೆ ಚಿತ್ರರಂಗದ ಭಾಗ್ಯದ ಬಾಗಿಲು ತೆರೆದಿದ್ದು ಸ್ಯಾಂಡಲ್ ವುಡ್ ನಿಂದ.

Will Kannada Music Director Nobin Paul compose songs for free

ಹೀಗಾಗಿ, ಮಲಯಾಳಿ ನೋಬಿನ್ ಪೌಲ್ ಇಷ್ಟ ಪಟ್ಟು ಕನ್ನಡ ಕಲಿತು, ಕನ್ನಡ ಚಿತ್ರಗಳಿಗೆ ಸಂಗೀತ ನೀಡುತ್ತಿದ್ದಾರೆ. ಇದೇ ನೋಬಿನ್ ಪೌಲ್ ಬಳಿ ಕೆಲ ನಿರ್ದೇಶಕರು ಬಂದು ''ನಮ್ಮದು ಲೋ ಬಜೆಟ್ ಸಿನಿಮಾ. ಹೀಗಾಗಿ ಫ್ರೀಯಾಗಿ ಒಂದು ಸಾಂಗ್ ಮಾಡಿಕೊಡಿ'' ಅಂತ ಕೇಳಿಕೊಂಡಿದ್ದರಂತೆ. ಅಂಥ ಕೆಲ ನಿರ್ದೇಶಕರಿಗೆ ನೋಬಿನ್ ಪೌಲ್ ಫ್ರೀಯಾಗಿ ಹಾಡುಗಳನ್ನ ಸಂಯೋಜಿಸಿ ಕೊಟ್ಟಿದ್ದೂ ಇದೆ.

ಈಗಲೂ ಹಾಗೇ ಮಾಡ್ತೀರಾ.? ಅಂತ ಕೇಳಿದ್ರೆ, ''ಖಂಡಿತ ಇಲ್ಲ. ನನ್ನ ಬಳಿ ಅಷ್ಟು ಸಮಯ ಇಲ್ಲ. ಹಲವು ಸಿನಿಮಾಗಳಿಗೆ ಸಂಗೀತ ಸಂಯೋಜಿಸುವ ಕೆಲಸ ಇದೆ'' ಅಂತಾರೆ ನೋಬಿನ್ ಪೌಲ್.

ಅಂದ್ಹಾಗೆ, ಸದ್ಯ 'ಕೆಫೆ ಗ್ಯಾರೇಜ್', 'ಅನುಕ್ತ', 'ಹೌರಾ ಬ್ರಿಡ್ಜ್', 'ಕಥಾ ಸಂಗಮ' ಹಾಗೂ '777 ಚಾರ್ಲಿ' ಚಿತ್ರಗಳಲ್ಲಿ ನೋಬಿನ್ ಪೌಲ್ ಬಿಜಿಯಾಗಿದ್ದಾರೆ.

ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕಾಗಿ ಸಂಗೀತ ನಿರ್ದೇಶಕ ನೋಬಿನ್ ಪೌಲ್ ನೀಡಿರುವ ಸಂದರ್ಶನದ ಎರಡನೇ ಭಾಗ ಇಲ್ಲಿದೆ, ನೋಡಿರಿ...

More from Filmibeat

English summary
Will Kannada Music Director Nobin Paul compose songs for free.? Read this article to know the answer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X