twitter
    For Quick Alerts
    ALLOW NOTIFICATIONS  
    For Daily Alerts

    ರಂಗಿನ ಲೋಕದಲ್ಲಿ ಮನ ಸೆಳೆವ ಭಂಗಿ- ಅನಿತಾಸನ!

    |

    'ಸೈಕೋ' ಚಿತ್ರದ ಮೂಲಕ ನಾಯಕಿಯಾಗಿ ಚಂದನವನ ಸೇರಿದರೂ ಯಾಕೋ ಜನಪ್ರಿಯತೆಗಾಗಿ ದಶಕ ಕಾಯಬೇಕಾಯಿತು. ಅದು ಸಿಕ್ಕಿದ್ದು ಸೂರಿ ನಿರ್ದೇಶನದ, ಶಿವರಾಜ್ ಕುಮಾರ್ ನಟನೆಯ 'ಟಗರು' ಚಿತ್ರ ಬಿಡುಗಡೆಯಾದ ಬಳಿಕ.

    ಸೈಕೊ ಚಿತ್ರವನ್ನು ಕರುಣದಿ ಕಾಯೋ ಮಹದೇಶ್ವರಸೈಕೊ ಚಿತ್ರವನ್ನು ಕರುಣದಿ ಕಾಯೋ ಮಹದೇಶ್ವರ

    ಡಾಲಿ ಧನಂಜಯ್ ಗೆ ಜೋಡಿಯಾಗಿ ಗಮನ ಸೆಳೆದ ನಟಿ ಅನಿತಾ ಭಟ್, ಪ್ರಮುಖ ಪಾತ್ರದಲ್ಲಿ ನಟಿಸಿರುವ ಒಂದಷ್ಟು ಚಿತ್ರಗಳು ಬಿಡುಗಡೆಗೆ ಸಾಲು ನಿಂತಿವೆ. ಅದೃಷ್ಟದಲ್ಲಿ ಸಿಗುವ ಯಶಸ್ಸಿನ ಬಗ್ಗೆ ಅನಿತಾಗೆ ನಂಬಿಕೆ ಇಲ್ಲವಾದರೂ, ಯೋಗದ ಬಗ್ಗೆ ಸಂಪೂರ್ಣ ಕಾಳಜಿ ಇದೆ! ಹಾಗಾಗಿಯೇ ಅಪರೂಪದ ಯೋಗ ಪರಿಣಿತೆಯಾಗಿ ಗುರುತಿಸಲ್ಪಡುತ್ತಿದ್ದಾರೆ.

    ಹಾಟ್ ಹುಡುಗಿ ಸಂಜನಾ ಅವರ ಮೈ ಜುಮ್ಮೆನಿಸುವ 'ಯೋಗಾಭ್ಯಾಸ'.! ಹಾಟ್ ಹುಡುಗಿ ಸಂಜನಾ ಅವರ ಮೈ ಜುಮ್ಮೆನಿಸುವ 'ಯೋಗಾಭ್ಯಾಸ'.!

    ವಿಶ್ವ ಯೋಗ ದಿನಾಚರಣೆಯ ಈ ಸಂದರ್ಭದಲ್ಲಿ 'ಫಿಲ್ಮೀಬೀಟ್ ಕನ್ನಡ' ಅನಿತಾ ಜತೆ ನಡೆಸಿರುವ ಒಂದಷ್ಟು ಮಾತುಕತೆ ಇಲ್ಲಿದೆ.

     ನಿಮ್ಮ ಯೋಗಾಭ್ಯಾಸದ ಜತೆಗಿನ ನಂಟಿನ ಬಗ್ಗೆ ಹೇಳಿ?

    ನಿಮ್ಮ ಯೋಗಾಭ್ಯಾಸದ ಜತೆಗಿನ ನಂಟಿನ ಬಗ್ಗೆ ಹೇಳಿ?

    ನಾನು ತುಂಬ ಚಿಕ್ಕವಳಿರುವಾಗಲೇ ಯೋಗ ಕಲಿಕೆ ಆರಂಭಿಸಿದ್ದೆ. ಬಹಳ ಮಂದಿ ಪ್ರಾಣಾಯಾಮ ಮಾತ್ರವೇ ಯೋಗ ಎಂದು ತಪ್ಪು ತಿಳಿದುಕೊಂಡಿದ್ದಾರೆ. ಆದರೆ, ನಿಜವಾಗಿ ನಾವು ಮಾಡುವ ವ್ಯಾಯಾಮ, ಜಿಮ್ ನಲ್ಲಿನ ವರ್ಕೌಟ್ ಏನಿದೆಯೋ ಅದೇ ಯೋಗ! ಹಾಗಾಗಿ ನನಗೆ ಅದೊಂದು ಬೇರೆಯೇ ವೃತ್ತಿ ಎನ್ನುವ ಕಲ್ಪನೆ ಮೂಡಿಯೇ ಇಲ್ಲ. ಹಾಗಾಗಿ ಯೋಗವನ್ನು ಇನ್ನು ಮುಂದೆಯೂ ದೇವೇಗೌಡರಂತೆ ಅಭ್ಯಾಸ ಮುಂದುವರಿಸಿಕೊಂಡು ಹೋಗಬೇಕು ಎನ್ನುವ ಕನಸು ಕಂಡಿದ್ದೇನೆ.

     ಅದು ಸರಿ. ಆದರೆ ಯೋಗ ತರಬೇತಿ ಕೇಂದ್ರ ಶುರು ಮಾಡಲು ಕಾರಣವೇನು?

    ಅದು ಸರಿ. ಆದರೆ ಯೋಗ ತರಬೇತಿ ಕೇಂದ್ರ ಶುರು ಮಾಡಲು ಕಾರಣವೇನು?

    ಇವೆಲ್ಲವೂ ಒಂದಕ್ಕೊಂದು ಸಂಬಂಧ ಪಟ್ಟಂಥ ವಿಚಾರಗಳು. ಒಬ್ಬ ಕಲಾವಿದೆಯಾಗಿ ವೈಯಕ್ತಿಕವಾಗಿ ಯೋಗ ನನಗೆ ಎಷ್ಟು ಅಗತ್ಯವೋ ಅದೇ ರೀತಿ, ವೃತ್ತಿ ಪರವಾಗಿ ಕೂಡ ಒಂದು ಕಲಾವಿದರಿಗೆ ಇಂಥದೊಂದು ಯೋಗ ತರಬೇತಿ ಕೇಂದ್ರದ ಅಗತ್ಯವಿದೆ. ಆಸಕ್ತಿಗಳೇ ವೃತ್ತಿಯಾಗಿ ಬದಲಾಗುವ ಸಾಧ್ಯತೆ ಕೆಲವರಿಗಷ್ಟೇ ಇರುತ್ತದೆ. ಅದೃಷ್ಟ ಎನ್ನುವಂತೆ ನನ್ನ ಎರಡು ವೃತ್ತಿಗಳು ಕೂಡ ನನ್ನ ಆಸಕ್ತಿಗೆ ಸಂಬಂಧಿಸಿಯೇ ಇವೆ. ಹಾಗಾಗಿಯೇ ಸೋಹಂ ಅರ್ಪಣಾ ಎನ್ನುವ ಯೋಗ ತರಬೇತಿ ಕೇಂದ್ರ ಶುರು ಮಾಡಿದೆ. ಜತೆಗೆ ಇದೊಂದು ಸೇವೆ ಎನ್ನುವ ನಂಬಿಕೆ ನನಗಿದೆ.

    ಡಾಲಿಯ ಬೇಬಿ, ಬೋರಾಪುರದ ನಿಂಗಿಗೆ ಭಾರಿ ಡಿಮ್ಯಾಂಡ್ ಡಾಲಿಯ ಬೇಬಿ, ಬೋರಾಪುರದ ನಿಂಗಿಗೆ ಭಾರಿ ಡಿಮ್ಯಾಂಡ್

     ಸೇವೆ ಎನಿಸಿಕೊಳ್ಳಬೇಕಾದರೆ ಯೋಗಾಭ್ಯಾಸ ಉಚಿತವಾಗಿರಬೇಕು ಅಲ್ಲವೇ?

    ಸೇವೆ ಎನಿಸಿಕೊಳ್ಳಬೇಕಾದರೆ ಯೋಗಾಭ್ಯಾಸ ಉಚಿತವಾಗಿರಬೇಕು ಅಲ್ಲವೇ?

    ಇರಬಹುದು. ಹಾಗಂತ ನಾನು ಉಚಿತವಾಗಿ ಯೋಗ ಹೇಳಿಕೊಡುತ್ತಿಲ್ಲ. ಸಮಾಜದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಕೆಲಸವನ್ನು ಸೇವೆ ಎಂದೇ ಹೇಳುತ್ತೇವೆ. ಯೋಗ ಕೂಡ ಅದರಲ್ಲೇ ಸೇರುವ ಕಾರಣ, ನಾನು ನನ್ನ ಕೆಲಸವನ್ನು ಕೂಡ ಸೇವೆ ಎಂದೇ ಹೇಳುತ್ತೇನೆ. ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಒಂದು ಕೊಡುಗೆ ನೀಡಬೇಕು ಎನ್ನುವ ಕಾರಣದಿಂದ ಸೋಹಂ ಅರ್ಪಣಾ ಸ್ಥಾಪಿಸಿದೆ. ಇದರಲ್ಲಿ ಅರ್ಪಣಾ ಟ್ರಸ್ಟ್ ಮತ್ತು ಬಿಸ್ನೆಸ್ ಎರಡೂ ಜತೆಯಾಗಿ ಸಾಗುತ್ತದೆ. ಇಲ್ಲಿ ಯೋಗ ಶಿಕ್ಷಕಿಯರು ಇರುತ್ತಾರೆ. ಬೆಳಿಗ್ಗೆ ಐದರಿಂದ ರಾತ್ರಿ ಒಂಬತ್ತರ ತನಕ ಯೋಗ ಚಟುವಟಿಕೆಗಳು ನಡೆಯುತ್ತಿರುತ್ತವೆ.

     ಯೋಗ ಮಹಿಳೆಯರಿಗೆ ಹೆಚ್ಚು ಅಗತ್ಯ ಎಂದು ನೀವು ಹೇಳಲು ಕಾರಣವೇನು?

    ಯೋಗ ಮಹಿಳೆಯರಿಗೆ ಹೆಚ್ಚು ಅಗತ್ಯ ಎಂದು ನೀವು ಹೇಳಲು ಕಾರಣವೇನು?

    ಸಾಮಾನ್ಯವಾಗಿ ಆರೋಗ್ಯ ಕೆಡಿಸಿಕೊಂಡಾದರೂ ಸೌಂದರ್ಯ ಉಳಿಸಿಕೊಳ್ಳಬೇಕು ಎನ್ನುವ ಹಂತಕ್ಕೆ ಮುನ್ನುಗ್ಗುವ ಮಹಿಳೆಯರಿಗೆ ಕೊರತೆ ಇರುವುದಿಲ್ಲ. ಆದರೆ, ಆರೋಗ್ಯದ ಜತೆಯಲ್ಲೇ ದೇಹ ಸೌಂದರ್ಯ ಉಳಿಸಿಕೊಳ್ಳುವಂಥ ಯೋಗಾಭ್ಯಾಸ ಎನ್ನುವುದು ಮಹಿಳೆಯರ ಪಾಲಿಗೆ ವರ ಸಿಕ್ಕಂತೆ. ಸ್ತ್ರೀಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಪಿಸಿಒಡಿ ಸಮಸ್ಯೆ, ಕಾಲು ನೋವುಗಳಿಗೆ ಪರಿಹಾರ ಮತ್ತು ಹೆಚ್ಚಿನ ಮಂದಿಗೆ ಸಮಸ್ಯೆಯಾಗಿರುವ ಭುಜ ನೋವು ಮತ್ತು ಮೈಗ್ರೇನ್ ಗಳ ನಿವಾರಣೆಗೆ ಪ್ರಾಣಾಯಾಮ, ಮೆಡಿಟೇಶನ್, ಯೋಗಮುದ್ರ ಮೊದಲಾದವು ಪ್ರಮುಖ ಪಾತ್ರವಹಿಸುತ್ತವೆ.

     ಅಂತಾರಾಷ್ಟ್ರೀಯ ಯೋಗ ದಿನದ ಬಗ್ಗೆ ನಿಮ್ಮ ಅನಿಸಿಕೆ ಏನು?

    ಅಂತಾರಾಷ್ಟ್ರೀಯ ಯೋಗ ದಿನದ ಬಗ್ಗೆ ನಿಮ್ಮ ಅನಿಸಿಕೆ ಏನು?

    ಬಹಳಷ್ಟು ಮನುಷ್ಯರು ತಮ್ಮ ದೇಹ ಮತ್ತು ಮನಸ್ಸನ್ನು ಪೂರ್ತಿಯಾಗಿ , ಆರೋಗ್ಯಪೂರ್ಣವಾಗಿ ಬಳಸದೇ ಲೋಕದಿಂದ ಮರೆಯಾಗುತ್ತಾರೆ. ಆದರೆ ಹೇಗೆ ಆರೋಗ್ಯಪೂರ್ಣ ದೇಹದೊಂದಿಗೆ ಮನಸ್ಸು ಕೂಡ ಇದ್ದರೆ ನಿತ್ಯೋತ್ಸಾಹ ತುಂಬಿರುತ್ತದೆ ಎಂದು ತಿಳಿಸಲು ಯೋಗ ಅಗತ್ಯವಾಗಿದೆ. ಅದರಲ್ಲಿಯೂ ಇಂದಿನ ವೇಗದ ದಿನಗಳಲ್ಲಿ ಯೋಗದ ಮೂಲಕ ಸ್ಟ್ರೆಸ್ ಮ್ಯಾನೇಜ್ಮೆಂಟ್ ಮಾಡುವ ಆವಶ್ಯ ಎಲ್ಲರಿಗೂ ಇರುತ್ತದೆ. ಅದನ್ನು ನೆನಪಿಸುವಂತೆ ಮೂಡಿ ಬರುವ ಈ ದಿನಾಚರಣೆ ನಮ್ಮೆಲ್ಲರ ಅಗತ್ಯವಾಗಿದೆ.

     ಯೋಗದತ್ತ ಮುಖ ಮಾಡಿರುವ ಕಾರಣ ಸಿನಿಮಾದಿಂದ ದೂರ ಇದ್ದೀರ?

    ಯೋಗದತ್ತ ಮುಖ ಮಾಡಿರುವ ಕಾರಣ ಸಿನಿಮಾದಿಂದ ದೂರ ಇದ್ದೀರ?

    ಖಂಡಿತವಾಗಿಯೂ ಇಲ್ಲ. ಆಗಲೇ ಹೇಳಿದಂತೆ ನನ್ನ ಆಸಕ್ತಿ, ವೃತ್ತಿ, ಪ್ರವೃತ್ತಿಗಳು ಒಂದಂಕ್ಕೊಂದು ಪೂರಕವಾಗಿರುವುದರಿಂದ ನಾನು ಚಿತ್ರರಂಗದೊಂದಿಗೆ ನಿರಂತರ ಸಂಬಂಧ ಇರಿಸಿಕೊಂಡೇ ಇದ್ದೇನೆ. ಕಳೆದ ವರ್ಷ ಟಗರು ಸೇರಿದಂತೆ ಮೂರು ಚಿತ್ರಗಳಲ್ಲಿ ನಟಿಸಿದ್ದೆ. ಈ ಬಾರಿ ನಾನೇ ಟೈಟಲ್ ರೋಲ್ ನಲ್ಲಿರುವ ಅಭಿರಾಮಿ, ವೈಶಾಖಿನಿ ಎನ್ನುವ ಚಿತ್ರಗಳು ದೊರಕಿವೆ. ಜತೆಗೆ ಬೆಂಗಳೂರು69, ಡಿ ಎನ್ ಎ, ಪ್ರೀತ್ಸೋರು, ಸದ್ಗುಣ ಸಂಪನ್ನ ಮಾಧವ, ಕನ್ನೇರಿ, ಪ್ರಭುತ್ವ ಮತ್ತು ಕಲಿವೀರ ಹೀಗೆ ಒಪ್ಪಿಕೊಂಡ ಚಿತ್ರಗಳ ಪಟ್ಟಿ ದೊಡ್ಡದಿದೆ. ಒಟ್ಟಿನಲ್ಲಿ ನನಗೆ ಗುರುತಿಸಿಕೊಳ್ಳುವಂಥ ಪಾತ್ರ ಬಂದಾಗ ನಾನು ಸಿನಿಮಾ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುವುದಂತೂ ಖಚಿತ.

    English summary
    Worlds Yoga Day special: Kannada actress Anitha Bhat interview. Anitha has started her own yoga business.
    Friday, June 21, 2019, 14:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X