ಯಶ್ ಎಕ್ಸ್ ಕ್ಲೂಸಿವ್ ಸಂದರ್ಶನ: ಇದುವರೆಗೂ ಒಂದು ಲೆಕ್ಕ, ಇನ್ಮುಂದೆ ಒಂದು ಲೆಕ್ಕ

Recommended Video

KGF Kannada Movie: ಯಶ್ ಅವರ ಎಕ್ಸ್ ಕ್ಲೂಸಿವ್ ಸಂದರ್ಶನ | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಇಷ್ಟು ದಿನ ಕನ್ನಡ ಚಿತ್ರರಂಗಕ್ಕೆ ಮಾತ್ರ ಗೊತ್ತಿದ್ದ ಕಾಲವೊಂದಿತ್ತು. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಮಾಸ್ಟರ್ ಪೀಸ್ ಚಿತ್ರಗಳ ಹಿಂದಿ ಡಬ್ ವರ್ಷನ್ ನೋಡಿದ್ಮೇಲೆ ಯಾರಿದು ಯಶ್ ಎಂದು ಕೇಳುವಂತಾಗಿತ್ತು.

ಆಗ ಯಶ್ ಎನ್ನುತ್ತಿದ್ದವರು ಈಗ 'ವೆಲ್ ಕಮ್ ರಾಕಿ ಭಾಯ್' ಎನ್ನುತ್ತಿದ್ದಾರೆ. ಈ ಕಡೆ ಸೌತ್ ಇಂಡಸ್ಟ್ರಿ, ಆ ಕಡೆ ಬಾಲಿವುಡ್ ಇಂಡಸ್ಟ್ರಿ ಕೆಜಿಎಫ್ ಚಿತ್ರವನ್ನ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿದೆ.

ಸಿನಿಜಗತ್ತಿನಗೆ 'ನಯಾ ಸುಲ್ತಾನ' ಎಂದು ಹೇಳುತ್ತಿರುವ ಸಿನಿಮಾ ಮಂದಿ, ಕೆಜಿಎಫ್ ಸಿನಿಮಾ ಹಾಗೂ ಅದರ ಕಲೆಕ್ಷನ್ ಬಗ್ಗೆ ಲೆಕ್ಕಾಚಾರ ಹಾಕ್ತಿದ್ದಾರೆ. ಈ ಕ್ಷಣದಲ್ಲಿ ಕನ್ನಡ ಸಿನಿಮಾದ ಒಂದು ಫೇಮಸ್ ಡೈಲಾಗ್ ನೆನಪಾಗ್ತಿದೆ. ''ಇದುವರೆಗೂ ಒಂದು ಲೆಕ್ಕ, ಇನ್ಮುಂದೆ ಒಂದು ಲೆಕ್ಕ''. ಹೀಗೆಲ್ಲಾ ಅಬ್ಬರ, ಘರ್ಜನೆ, ಸೌಂಡ್ ಮಾಡ್ತಿರುವ ಯಶ್ ಫಿಲ್ಮಿಬೀಟ್ ಕನ್ನಡಕ್ಕೆ ಸಂದರ್ಶನ ನೀಡಿದ್ದಾರೆ.

ಸಂದರ್ಶನ: ಭರತ್ ಕುಮಾರ್

ಬೇರೆ ಭಾಷೆಗಳಲ್ಲಿ ಹೇಗೆ ಸ್ವೀಕರಿಸಿದ್ರು?

ಬೇರೆ ಭಾಷೆಗಳಲ್ಲಿ ಹೇಗೆ ಸ್ವೀಕರಿಸಿದ್ರು?

''ನಾವು ಏನು ಮಾಡಿದ್ವಿ ಅನ್ನೋದು ಅವರೆಲ್ಲರಿಗೂ ಗೊತ್ತಿದೆ. ನಮ್ಮ ಬಗ್ಗೆಯೂ ತಿಳಿದುಕೊಂಡಿದ್ದರು. ಈ ಟ್ರೈಲರ್ ನೋಡಿ, ನಮ್ಮ ಕೆಲಸ ನೋಡಿ ನಮಗೆ ಈ ಗೌರವ ಸಿಕ್ಕಿದೆ. ಅದರಿಂದ ಯಾವುದೇ ಉತ್ಪ್ರೇಕ್ಷೆ ಇಲ್ಲ, ನಾವು ಅಲ್ಲಿ ಹೋಗಿದ್ವಿ ಎಂಬ ದೊಡ್ಡತನನೂ ಇಲ್ಲ. ಕೆಲಸ ಗೊತ್ತಿರೋರು ಎಲ್ಲೇ ಹೋದ್ರು ಕೆಲಸ ಮಾಡಬಹುದು ಅನ್ನೋದು ಮಾತ್ರ ನನ್ನ ನಂಬಿಕೆ''

ಬೇರೆ ಇಂಡಸ್ಟ್ರಿಯಲ್ಲಿ ಯಾವಾಗ ಸಿನಿಮಾ ಮಾಡ್ತೀರಾ?

ಬೇರೆ ಇಂಡಸ್ಟ್ರಿಯಲ್ಲಿ ಯಾವಾಗ ಸಿನಿಮಾ ಮಾಡ್ತೀರಾ?

''ಆ ಕಡೆ ಹೋಗ್ಬೇಕು ಅಂದುಕೊಂಡಿದ್ದರೇ ನಾನು ಯಾವಾಗಲೋ ಹೋಗ್ತಿದ್ದೆ. ನನಗೆ ನಮ್ಮ ಜನ ಏನು ಕೊಟ್ಟಿದ್ದಾರೋ ಅದನ್ನ ಇಟ್ಕೊಂಡು ಎಲ್ಲ ಕಡೆ ನಮ್ಮ ಸಿನಿಮಾಗಳನ್ನ ಮಾಡ್ಬೇಕು, ನಮ್ಮ ಸಿನಿಮಾ ಅಂದ್ರೆ ಏನು, ನಮ್ಮ ಇಂಡಸ್ಟ್ರಿ ಏನು ಎನ್ನುವುದನ್ನ ಗೊತ್ತುಪಡಿಸಿಬೇಕು ಅನ್ನೋದು ನನ್ನ ಆಸೆ. ಅದು ಆಗ್ತಿದೆ. ಎಲ್ಲ ಭಾಷೆಯ ಜನರನ್ನ ರಂಜಿಸಬೇಕು, ಅದು ಮುಂದಿನ ದಿನಗಳಲ್ಲೂ ಆಗುತ್ತೆ ಎಂಬ ಭರವಸೆ ಇದೆ''

ಅಂಬಿ ಇಲ್ಲದ ಸಮಯದಲ್ಲಿ ಕೆಜಿಎಫ್ ಬರ್ತಿದೆ?

ಅಂಬಿ ಇಲ್ಲದ ಸಮಯದಲ್ಲಿ ಕೆಜಿಎಫ್ ಬರ್ತಿದೆ?

''ನನ್ನ ಎಲ್ಲ ಯಶಸ್ಸಿನ್ನ, ನನ್ನ ಜರ್ನಿಯನ್ನ ಬಹಳ ಹತ್ತಿರದಿಂದ ನೋಡಿ ಖುಷಿ ಪಟ್ಟು, ಆಶೀರ್ವಾದ ಮಾಡಿದ್ದರು. ಬೇರೆ ಭಾಷೆಯವರ ಬಳಿ ನನ್ನನ್ನು ಪರಿಚಯ ಮಾಡ್ತಿದ್ದ ರೀತಿನೇ ಬೇರೆ, ಅದು ಅವರಿಗೆ ಮತ್ತು ನನಗೆ ಮಾತ್ರ ಗೊತ್ತು. ಇದನ್ನ ಅವರು ನೋಡಿದ್ರೆ ತುಂಬಾ ಖುಷಿ ಪಡ್ತಿದ್ರು. ನೋಡಬೇಕಿತ್ತು. ಅವರು ಎಲ್ಲೇ ಇದ್ರು ನೋಡ್ತಾರೆ, ಖುಷಿ ಪಡ್ತಾರೆ ಅಂತ ನಂಬಿದ್ದೀನಿ''

ನೂರು ಕೋಟಿ ಕ್ಲಬ್ ಗೆ ಹೋಗುತ್ತಾ?

ನೂರು ಕೋಟಿ ಕ್ಲಬ್ ಗೆ ಹೋಗುತ್ತಾ?

''ಆ ಬಗ್ಗೆ ನಿರೀಕ್ಷೆ ಇದ್ರೆ ಒಳ್ಳೆಯದು. ತುಂಬಾ ದೊಡ್ಡ ದೊಡ್ಡ ಕೆಲಸಗಳು ನಡೆದಿದೆ. ತೂಕವಿಲ್ಲದೇ ಸಮ್ಮನೆ ಮಾತನಾಡುವುದು ಬೇಡ. ನಾನು ಯಾವಾಗಲೂ ನಮ್ಮ ಸಿನಿಮಾಗಳ ಒರಿಜಿನಲ್ ಕಲೆಕ್ಷನ್ ಎಷ್ಟಿದ್ಯೋ ಅಷ್ಟೆ ಹೇಳುವುದು. ಸತ್ಯನಾ ಹೇಳ್ತೀವಿ. ಸಿನಿಮಾ ಬಿಡುಗಡೆ ಆಗಲಿ. ನಾನು, ನಿರ್ದೇಶಕರು ನಿಜ ಹೇಳ್ತೀವಿ. ಪ್ರಿ-ರಿಲೀಸ್ ಬಿಸಿನೆಸ್ ತುಂಬಾ ದೊಡ್ಡ ಮಟ್ಟದಲ್ಲಿ ಆಗಿದೆ. ಆ ಬಗ್ಗೆ ಖುಷಿ ಇದೆ''

ಪೈರಸಿ ತಡೆಯುವುದಕ್ಕೆ ನಿಮ್ಮ ಕ್ರಮ ಏನು?

ಪೈರಸಿ ತಡೆಯುವುದಕ್ಕೆ ನಿಮ್ಮ ಕ್ರಮ ಏನು?

''ಪೈರಸಿ ಮಾಡೋಕೆ ಆಗಲ್ಲ. ಅದೆಲ್ಲಾ ಸುಳ್ಳು, ಸುಮ್ಮನೇ ಅವರೇ ಎಡಿಟ್ ಮಾಡಿ, ಅದಕ್ಕೆ ಟೈಮ್ ಕೋಡ್ ಹಾಕಿ ವೈರಲ್ ಮಾಡಿದ್ದಾರೆ. ಅದೆಲ್ಲಾ ಆಗಲ್ಲ, ಅದಕ್ಕೆ ಏನು ಬೇಕೋ ಆ ಕ್ರಮ ತಗೊಂಡಿದ್ದೀವಿ. ಅದನ್ನ ಮೀರಿ ಆ ವರ್ಷನ್ ನೋಡ್ತಾರೆ ಅಂದ್ರೆ ಅವರಿಗೆ ನಷ್ಟ. ಯಾಕಂದ್ರೆ, ಇಷ್ಟು ಅದ್ಭುತವಾದ ಸಿನಿಮಾ ಮಾಡಿ, ಥಿಯೇಟರ್ ನಲ್ಲಿ ನೋಡಲಿ ಅಂತ. ಪೈರಸಿ ಮಾಡೋದಕ್ಕಿಂತ ನೋಡೋರ ಬಗ್ಗೆ ಅಯ್ಯೋ ಅನ್ಸುತ್ತೆ''

ಪುನೀತ್ ಫ್ಯಾನ್ಸ್ ಶೋ ಆಯೋಜನೆ ಮಾಡಿದ್ದಾರೆ?

ಪುನೀತ್ ಫ್ಯಾನ್ಸ್ ಶೋ ಆಯೋಜನೆ ಮಾಡಿದ್ದಾರೆ?

ತುಂಬಾ ಒಳ್ಳೆ ಬೆಳವಣಿಗೆ ಇದು. ಅಪ್ಪು ಅವರ ಸಿನಿಮಾ ಬಂದ್ರೆ ನಮ್ಮ ಫ್ಯಾನ್ಸ್ ಹೋಗಿ ನೋಡ್ತಾರೆ, ನಮ್ಮ ಸಿನಿಮಾ ಬಂದಾಗ ಅವರ ಫ್ಯಾನ್ಸ್, ಎಲ್ಲರ ಫ್ಯಾನ್ಸ್ ನೋಡ್ತಾರೆ. ಎಲ್ಲರೂ ಮನುಷ್ಯರು. ಎಲ್ಲರೂ ಕನ್ನಡಿಗರೇ. ಎಲ್ಲರೂ ನಮ್ಮವರೇ, ನಾವೆಲ್ಲ ಒಂದೇ ಕುಟುಂಬ. ನೀವು ಮಾಧ್ಯಮದವರು ಆ ನಟ ಈ ನಟ ಅಂತ ನೋಡ್ತೀರಾ. ಹಾಗೆ ಆಗಬಾರದು'' ಎಂದು ಯಶ್ ಸಂತಸ ವ್ಯಕ್ತಪಡಿಸಿದರು.

More from Filmibeat

English summary
Rocking star Yash starrer KGF is one of the biggest Kannada movies ever released in Kannada film industry. KGF is getting released on December 21st all over the world in five languages including Hindi, Tamil, Telugu, Malayalm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X