twitter
    For Quick Alerts
    ALLOW NOTIFICATIONS  
    For Daily Alerts

    ಡಾ. ರಾಜ್ ತಾಳ್ಮೆ ಕಳೆದುಕೊಂಡಿದ್ದ ಘಟನೆ: ಮೈಸೂರು ಮೋಹನ್ & ಬ್ರದರ್ಸ್ ಸಂದರ್ಶನ

    By ಬಾಲರಾಜ್ ತಂತ್ರಿ
    |

    Recommended Video

    ಡಾ. ರಾಜ್ ತಾಳ್ಮೆ ಕಳೆದುಕೊಂಡಿದ್ದ ಘಟನೆ: ಮೈಸೂರು ಮೋಹನ್ ಎಂಡ್ ಬ್ರದರ್ಸ್ ಸಂದರ್ಶನ | Filmibeat Kannada

    ನಾಲ್ಕು ದಶಕಗಳ ಹಿಂದೆ ಆರ್ಕೆಸ್ಟ್ರಾದ ಮೂಲಕ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿದಂತಹ ತ್ರಿವಳಿ ಸಹೋದರರು, ಮೋಹನ್ ಎಂಡ್ ಬ್ರದರ್ಸ್. 25ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿ, ಮೈಸೂರು ಮೋಹನ್ ಆರ್ಕೆಸ್ಟ್ರಾದ ಮೂಲಕ ನೂರಕ್ಕೂ ಲೈವ್ ಕನ್ಸರ್ಟ್ ನೀಡಿರುವ ಮೋಹನ್ ಆಲಿಯಾಸ್ ಮೈಸೂರು ಮೋಹನ್.

    ಇವರ ಸಹೋದರ ಜೊತೆಗೆ ಖ್ಯಾತ ಗಿಟಾರಿಸ್ಟ್ ಆಗಿರುವ ಸುದರ್ಶನ್ ಅವರು, ಸಿ ಅಶ್ವಥ್, ರಾಜು ಅನಂತಸ್ವಾಮಿ, ಎಸ್ಪಿಬಿ ಮುಂತಾದ ಘಟಾನುಗಟಿಗಳ ಜೊತೆ ಕೆಲಸ ಮಾಡಿರುವವರು. ಇನ್ನೊಬ್ಬ ಸಹೋದರ ಗೋಪಿ, ಫೇಮಸ್ ಬೇಸ್ ಗಿಟಾರಿಸ್ಟ್, ಜೊತೆಗೆ, ಹಂಸಲೇಖ ಅವರ ರೈಟ್ ಹ್ಯಾಂಡ್.

    ವರನಟ ಡಾ. ರಾಜಕುಮಾರ್ ಜೊತೆ 50ಕ್ಕೂ ಹೆಚ್ಚು ವಾದ್ಯಗೋಷ್ಠಿ ನಡೆಸಿರುವ ಈ ತ್ರಿವಳಿ ಸಹೋದರರ ಅಂದಿನ ಮತ್ತು ಇಂದಿನ ಅನುಭವ ಹೇಗಿದೆ? ಅವರ ಜೊತೆಗಿನ ಸಂದರ್ಶನದ ಆಯ್ದಭಾಗ ಇಂತಿದೆ.

    ಪ್ರ: ಚಿಕ್ಕ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಇತ್ತಾ ಅಥವಾ ಪೋಷಕರ ಒತ್ತಾಯದ ಮೇರೆಗೆ ಸಂಗೀತ ಕಲಿತ್ರಾ?
    ಮೋಹನ್ ಬ್ರದರ್ಸ್: ಚಿಕ್ಕ ವಯಸ್ಸಿನಲ್ಲೇ ನಮಗೆ ಆಸಕ್ತಿಯಿತ್ತು. ನಮ್ಮ ವಂಶದವರಿಗೆಲ್ಲರಿಗೂ ಸಂಗೀತದ ಮೇಲೆ ಆಸಕ್ತಿ, ಹಾಗಾಗಿ ಬಾಲ್ಯದಿಂದಲೇ ಸಂಗೀತದ ಮೇಲೆ ಹೆಚ್ಚಿನ ಒಲವು. ನಾವು ಮೂರು ಜನ ಬ್ರದರ್ಸ ಸಣ್ಣ ವಯಸ್ಸಿನಿಂದಲೇ ಈ ಕ್ಷೇತ್ರದ ಮೇಲೆ ಇಂಟರೆಸ್ಟ್ ತೋರಿದೆವು.

    ಪ್ರ: ಮೈಸೂರು ಮೋಹನ್ ಆರ್ಕೆಸ್ಟ್ರಾ ನೀವು ಆರಂಭಿಸಿದ್ದು ಯಾವಾಗ ಮತ್ತು ಅದಕ್ಕಾದ ಪ್ರೇರಣೆ ಏನು?
    ಮೋಹನ್ ಬ್ರದರ್ಸ್: 1970ರ ಸುಮಾರಿನಲ್ಲಿ ಈ ಆರ್ಕೆಸ್ಟ್ರಾ ಆರಂಭಿಸಿದೆವು, ಏಳೆಂಟು ವರ್ಷದ ಮಕ್ಕಳಾಗಿದ್ದಾಗಲೇ ನಮಗೆ ಆಸಕ್ತಿ, ಮೊದಲು ರಾಮಮಂದಿರ ಮುಂತಾದ ಕಡೆ ನಮಗೆ ಬಂದಿದ್ದನ್ನು ನುಡಿಸುತ್ತಿದ್ದೆವು, ನನ್ನ ಸಹೋದರರೂ ನನ್ನ ಜೊತೆಗಿರುತ್ತಿದ್ದರು. ಕಾಲೇಜು ದಿನಗಳಲ್ಲಿ ನಾವು ಸಂಗೀತಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆವು. ಅನಂತಸ್ವಾಮಿ, ಕಾಳಿಂಗರಾವ್ ಮುಂತಾದವರ ಜೊತೆ ಆರಂಭದ ದಿನಗಳಲ್ಲಿ ಹೋಗುತ್ತಿದ್ದೆವು. ಆ ನಂತರ ನಮ್ಮದೇ ಆರ್ಕೆಸ್ಟ್ರಾ ಆರಂಭಿಸಿದೆವು. ಮುಂದೆ ಓದಿ..

    ಕಿಲಾಡಿ ಕಿಟ್ಟು ಪೂರ್ಣ ಪ್ರಮಾಣದಲ್ಲಿ ಸಂಗೀತ ನೀಡಿದ ಮೊದಲ ಚಿತ್ರ

    ಕಿಲಾಡಿ ಕಿಟ್ಟು ಪೂರ್ಣ ಪ್ರಮಾಣದಲ್ಲಿ ಸಂಗೀತ ನೀಡಿದ ಮೊದಲ ಚಿತ್ರ

    ಪ್ರ: ಕಿಲಾಡಿ ಕಿಟ್ಟು ನೀವು ಪೂರ್ಣ ಪ್ರಮಾಣದಲ್ಲಿ ಸಂಗೀತ ನೀಡಿದ ಮೊದಲ ಚಿತ್ರ, ಈ ಅನುಭವ ಹೇಗಿತ್ತು?
    ಮೋಹನ್ ಬ್ರದರ್ಸ್: 1978ರಲ್ಲಿ ಈ ಚಿತ್ರ ರಿಲೀಸ್ ಆಗಿದ್ದು. ಆ ಕಾಲದಲ್ಲಿ ನನ್ನ ದೊಡ್ದ ಅಣ್ಣ ರಮೇಶ್ ಅವರು, ಮೈಸೂರಿನ ನಿರ್ಮಾಪಕರ ಹತ್ತಿರ ಮಾತನಾಡಿ, ನನ್ನ ಸಹೋದರರಿಗೆ ಚಾನ್ಸ್ ಕೊಡಿ ಅಂದ್ರು, ನಮಗೆ ಚಾನ್ಸ್ ಸಿಕ್ತು. ನಮ್ಮ ಅದೃಷ್ಟ ಏನಂದರೆ ವಿಷ್ಣು ಸರ್ ಮತ್ತು ರಜನಿ ಸರ್ ಒಟ್ಟಾಗಿ ನಟಿಸಿದ ಸಿನಿಮಾವಿದು. ಜೊತೆಗೆ, ಇನ್ನೊಂದು ಲಕ್ ಏನಂದರೆ ಯೇಸುದಾಸ್, ಎಸ್ಪಿಬಿ, ಜಾನಕಮ್ಮ ಮುಂತಾದವರು ಆ ಚಿತ್ರದಲ್ಲಿ ಹಾಡಿರೋದು. ಆರ್ಕೆಸ್ಟ್ರಾ ನಡೆಸುವವರಿಗೆ ಕೊಡಬೇಡಿ, ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ತುಂಬಾ ಜನ ವಿರೋಧಿಸಿದ್ದರು. ಆದರೆ, ದುಡ್ಡು ಹೋದ್ರೆ ನಂದು ಹೋಗುವುದು ತಾನೇ ಎಂದು ನಿರ್ಮಾಪಕರು ನಮ್ಮ ಬೆಂಬಲಕ್ಕೆ ನಿಂತಿದ್ದು, ನಮ್ಮ ಜೀವನದ ಅವಿಸ್ಮರಣೀಯ ಘಟನೆ.

    ಎಷ್ಟು ಚಿತ್ರದ ಹಾಡುಗಳಿಗೆ ಸಂಗೀತ ಕಂಪೋಸ್ ಮಾಡಿದ್ದೀರಾ?

    ಎಷ್ಟು ಚಿತ್ರದ ಹಾಡುಗಳಿಗೆ ಸಂಗೀತ ಕಂಪೋಸ್ ಮಾಡಿದ್ದೀರಾ?

    ಪ್ರ: ಇದುವರೆಗೆ ಎಷ್ಟು ಚಿತ್ರದ ಹಾಡುಗಳಿಗೆ ಸಂಗೀತ ಕಂಪೋಸ್ ಮಾಡಿದ್ದೀರಾ? ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ ನಾಗ್ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡಿರಬೇಕಲ್ವಾ?
    ಮೋಹನ್ ಬ್ರದರ್ಸ್: 50 ರಿಂದ 60 ಚಿತ್ರಗಳಿಗೆ ಸಂಗೀತ ನೀಡಿದ್ದೆವು, ಅದರಲ್ಲಿ 15 ಚಿತ್ರಗಳು ರಿಲೀಸ್ ಆಗಿಲ್ಲ. ಅನಂತನಾಗ್, ಶಂಕರನಾಗ್, ಟೈಗರ್ ಪ್ರಭಾಕರ್ ಮುಂತಾದ ಖ್ಯಾತ ನಟರ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡಿದ್ದೆವು. ವಿನೋದ್ ರಾಜ್ ಜೊತೆಗೂ ಕೆಲಸ ಮಾಡಿದ್ದೆವು. ಶಂಕರನಾಗ್ ಜೊತೆ ಬೆಂಕಿಚೆಂಡು ಚಿತ್ರಕ್ಕೆ ಕೆಲಸ ಮಾಡಿದ್ದೆವು.

    ಡಾ. ರಾಜ್ ತಾಳ್ಮೆ ಕಳೆದುಕೊಂಡ ಘಟನೆ

    ಡಾ. ರಾಜ್ ತಾಳ್ಮೆ ಕಳೆದುಕೊಂಡ ಘಟನೆ

    ಪ್ರ: ರಾಜ್ ಜೊತೆ ಹಲವಾರು ವರ್ಷದ ಒಡನಾಟವನ್ನು ಇಟ್ಟುಕೊಂಡವರು ನೀವು. ಅವರ ಜೊತೆ ಮರೆಯಲಾಗದ ನಿಮ್ಮ ಅನುಭವವನ್ನು ಹಂಚಿಕೊಳ್ಳುತ್ತೀರಾ?

    ಮೋಹನ್ ಬ್ರದರ್ಸ್: ಅವರು ತಾಳ್ಮೆ, ಸೌಮ್ಯದಿಂದ ಇರೋದನ್ನು ನೋಡಿದ್ದೆವು. ಆದರೆ ಅಂತಹ ಮನುಷ್ಯನಿಗೂ ತಾಳ್ಮೆ ಕಳೆದುಕೊಳ್ಳುವಂತಹ ಕೆಲಸವನ್ನು ಅವರ ಅಭಿಮಾನಿಯೊಬ್ಬ ಮಾಡಿದ್ದ. ದಾವಣಗೆರೆಯಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆವು. ನಾವು ಒಂದು ರೂಂನಲ್ಲಿ ಇದ್ದೆವು. ಬೆಳಗ್ಗೆ ನಾಲ್ಕು ಗಂಟೆಗೆ ರಾಜಣ್ಣ ಎದ್ದು ಯೋಗ ಮಾಡುವವರು. ಅದನ್ನು ಒಬ್ಬ ಅಭಿಮಾನಿ ಕಿಟಕಿಯಿಂದ ನೋಡುತ್ತಿದ್ದ, ಅದಕ್ಕೆ ರಾಜ್ ಅಪ್ಸೆಟ್ ಆಗಿದ್ದರು. ಮಹಡಿಯಿಂದ ಹತ್ತಿಬಂದು ಅವನು ಅದನ್ನು ವೀಕ್ಷಿಸುತ್ತಿದ್ದ, ಎಲ್ಲಾದರೂ ಹೆಚ್ಚುಕಮ್ಮಿ ಆದರೆ ಏನು ಗತಿ ಅನ್ನುವುದು ಅವರ ಕನ್ಸರ್ನ್ ಆಗಿತ್ತು.

    ಲೈವ್ ಕಾರ್ಯಕ್ರಮದ ವೇಳೆ ರಾಜಣ್ಣ ಸಂಗೀತದಲ್ಲಿ ಸ್ವಲ್ಪ ತಪ್ಪಾದ್ರೂ ಹೊಂದಿಕೊಂಡು ಹೋಗುತ್ತಿದ್ದರು. ನಮ್ಮ ಮೇಲೆ ಯಾರಿಗೂ ಒತ್ತಡ ಹಾಕಲು ಅವರು ಬಿಡುತ್ತಿರಲಿಲ್ಲ. ಪ್ರತಿಯೊಂದು ವಿಚಾರವನ್ನು ತಿಳಿದುಕೊಂಡಿದ್ದ ಪುಣ್ಯಾತ್ಮರು, ಅವರ ಜೊತೆಗೆ ಕೆಲಸ ಮಾಡಿದ್ದು ನಮ್ಮ ಪುಣ್ಯ.

    ಸಿ ಅಶ್ವಥ್, ರಾಜು ಅನಂತಸ್ವಾಮಿ, ಎಸ್ಪಿಬಿ ಜೊತೆ ಕೆಲಸ ಮಾಡಿದ್ದೀ

    ಸಿ ಅಶ್ವಥ್, ರಾಜು ಅನಂತಸ್ವಾಮಿ, ಎಸ್ಪಿಬಿ ಜೊತೆ ಕೆಲಸ ಮಾಡಿದ್ದೀ

    ಪ್ರ: ಸಿ ಅಶ್ವಥ್, ರಾಜು ಅನಂತಸ್ವಾಮಿ, ಎಸ್ಪಿಬಿ ಜೊತೆ ಕೆಲಸ ಮಾಡಿದ್ದೀರಿ, ನಿಮ್ಮ ಅನುಭವ?

    ಸುದರ್ಶನ್: ಅಶ್ವಥ್ ಸರ್ ಜೊತೆ ನನ್ನ ಒಡನಾಟ ಆರಂಭವಾಗಿದ್ದು ಒಂದು ಕೋ ಇನ್ಸಿಡೆಂಟ್. ಮೊದಲು ಅವರ ಜೊತೆ ನನಗೆ ಒಡನಾಟವಿರಲಿಲ್ಲ. 15ವರ್ಷದ ಹಿಂದೆ ಅವರ ಎಡ್ಮಿನ್ ಕೆಲಸವನ್ನು ನೋಡಿಕೊಳ್ಳುವರು ಬೇಕು ಎಂದು ನನ್ನ ಸ್ನೇಹಿತರಾದ ಪ್ರಸಾದ್ ಅನ್ನುವವರು influence ಮಾಡಿದ್ರು. ಅಲ್ಲಿ ಸೇರಿಕೊಂಡ ನಂತರ, ನಾನು ಗಿಟಾರಿಸ್ಟ್ ಅನ್ನೋದು ಗೊತ್ತಾಯಿತು. ಅವರ ಕಾರ್ಯಕ್ರಮಕ್ಕೆ ಹೋಗೋಕೆ ಶುರುಮಾಡಿದೆ.

    ಕನ್ನಡವೇ ಸತ್ಯ ಎನ್ನುವ ಕಾರ್ಯಕ್ರಮ ಬಂತು, ಆ ಕಾರ್ಯಕ್ರಮ ನಭೂತೋ ನಭವಿಷ್ಯತಿ ರೀತಿಯಲ್ಲಿ ಸಾಗಿತು. ಗ್ಲೋಬಲ್ events ನವರು ಆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅವರಿಗೆ ಮನಸ್ಸಿನಲ್ಲಿ ಏನಾದರೂ ಆಗಬೇಕೂಂತ ಬಂದರೆ, ಆಗಲೇ ಬೇಕು ಆ ರೀತಿಯ ಛಲ ಅವರಲ್ಲಿತ್ತು. ರಾಜು ಅನಂತಸ್ವಾಮಿ, ವಯಸ್ಸಿನಲ್ಲಿ ನನಗಿಂತ ಚಿಕ್ಕವನಾದರೂ ಅದ್ಭುತ ಕಲಾವಿದ.

    ಪ್ರೇಮಲೋಕ, ರಣಧೀರ ಆ ಕಾಲದಲ್ಲೂ ನೀವು ಹಂಸಲೇಖ ಜೊತೆಗಿದ್ರಾ?

    ಪ್ರೇಮಲೋಕ, ರಣಧೀರ ಆ ಕಾಲದಲ್ಲೂ ನೀವು ಹಂಸಲೇಖ ಜೊತೆಗಿದ್ರಾ?

    ಪ್ರ: ನೀವು ಹಂಸಲೇಖ ಅವರ ರೈಟ್ ಹ್ಯಾಂಡ್ ಅಂತ ಕೇಳ್ಪಟ್ಟೆ. ಪ್ರೇಮಲೋಕ, ರಣಧೀರ ಆ ಕಾಲದಲ್ಲೂ ನೀವು ಹಂಸಲೇಖ ಜೊತೆಗಿದ್ರಾ?

    ಗೋಪಿ: ಅವರ 30-35 ಸಿನಿಮಾ ಆದಮೇಲೆ ನಾನು ಅವರ ಜೊತೆ ಸೇರಿದೆ. ನನ್ನ ಮತ್ತು ಅವರ ಭೇಟಿ ಅಕಸ್ಮತ್ತಾಗಿ ಆಗಿರೋದು. ಚೆನ್ನೈನಿಂದ ಬರಬೇಕಾದ ವ್ಯಕ್ತಿ ಬಂದಿರಲಿಲ್ಲ. ರೀರೆಕಾರ್ಡಿಂಗಿಗೆ ಬೇಸ್ ಗಿಟಾರಿಸ್ಟ್ ಬೇಕಿತ್ತು. ಶ್ರೀನಾಥ್ ಅವರ ಸಿನಿಮಾವದು. ಎರಡು ದಿನಕ್ಕೆ ನನಗೆ ಬರಲು ಹೇಳಿದ್ರು, ಮೂರನೇ ದಿನ ಚೆನ್ನೈನಿಂದ ಗಿಟಾರಿಸ್ಟ್ ಬಂದ ನಂತರ, ನಾನು ಹೊರಡಲು ರೆಡಿಯಾಗಿದ್ದೆ. ಆಗ ಹಂಸಲೇಖ, ಕಂಟಿನ್ಯೂಟಿ ತಪ್ಪುತ್ತೆ, ನೀನೇ ನುಡಿಸಪ್ಪಾ.. ಕನ್ನಡದ ಹುಡುಗ ಬೇರೆ ನೀನು ಎಂದು ಚಾನ್ಸ್ ಕೊಟ್ರು.

    ಅಲ್ಲಿಂದ ಅವರ ಜೊತೆ ಒಡನಾಟ ಆರಂಭವಾಯಿತು. ಹದಿನೆಂಟು ಗಂಟೆ ಅವರ ಜೊತೆಗೇ ಇರುತ್ತಿದ್ದೆ, 23ವರ್ಷದಿಂದ ಅವರ ಜೊತೆಗೇ ಇದ್ದೇನೆ. ನಾನು 25ಸಿನಿಮಾಗಳಿಗೆ ಸಂಗೀತ ನಿರ್ದೇಶನ ಬೇರೆ ಮಾಡಿದ್ದೇನೆ. ಉದ್ಭವ, ಪ್ರಚಂಡ ರಾವಣ ಮುಂತಾದ ಸಿನಿಮಾಗಳು, ಮುಸುರಿ ಕೃಷ್ಣಮೂರ್ತಿಯವರ ಐದಾರು ಸಿನಿಮಾಗಳಿಗೆ ಸಂಗೀತ ನೀಡಿದ್ದೇನೆ. ಐದು ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಬಂತು. ಇತ್ತೀಚೆಗೆ ನನ್ನ ಸಂಗೀತ ನಿರ್ದೇಶನದ ಲಿಟಲ್ ಮಾಸ್ಟರ್ ಸಿನಿಮಾಗೆ ಅನುರಾಧ ಭಟ್ ಅವರಿಗೆ ಉತ್ತಮ ಗಾಯಕಿ ಪ್ರಶಸ್ತಿ ಬಂತು.

    ಕನ್ನಡದ ಪ್ರತಿಭೆಗಳನ್ನು ಕಡೆಗಣಿಸಲಾಗುತ್ತಿದೆಯಾ?

    ಕನ್ನಡದ ಪ್ರತಿಭೆಗಳನ್ನು ಕಡೆಗಣಿಸಲಾಗುತ್ತಿದೆಯಾ?

    ಪ್ರ: ಹಿಂದಿ ಗಾಯಕರಿಗೆ ಮಣೆಹಾಕಲು, ಕನ್ನಡದ ಪ್ರತಿಭೆಗಳನ್ನು ಕಡೆಗಣಿಸಲಾಗುತ್ತಿದೆಯಾ?

    ಮೋಹನ್ ಬ್ರದರ್ಸ್: ಹಿಂದಿಯಲ್ಲೂ ತುಂಬಾ ಉತ್ತಮ ಸಿಂಗರ್ಸ್ ಗಳಿದ್ದಾರೆ. ಆದರೆ ನಮ್ಮವರಿಗೂ ಉತ್ತಮ ಅವಕಾಶ ಸಿಗಬೇಕು, ಹಂಸಲೇಖ ಅವರು ಅದನ್ನೇ ಹೇಳುತ್ತಿದ್ದರು. ನೂರಾರು ಟೆಕ್ನಿಷಿಯನ್, ಆರ್ಟಿಸ್ಟ್ ಗಳನ್ನು ಸಂದರ್ಶನ ಮಾಡಿ ಕನ್ನಡದವರನ್ನೇ ಹಂಸಲೇಖ ಹಾಕಿಕೊಳ್ಳುತ್ತಿದ್ದರು. ರಾಜೇಶ್ ಕೃಷ್ಣನ್, ನಂದಿತಾ, ಹೇಮಂತ್ ಮುಂತಾದವರಿದ್ದಾರೆ. ನಮ್ಮವರಿಗೇ ಹೆಚ್ಚಿನ ಅವಕಾಶ ಸಿಗಬೇಕು ಎನ್ನುವುದು ನಮ್ಮ ಆಶಯ ಕೂಡಾ.

    ಪ್ರ: ಇದುವರೆಗಿನ ನಿಮ್ಮ ಈ ವೃತ್ತಿ ಜೀವನದಲ್ಲಿ ನೀವು ಇಷ್ಟಪಟ್ಟ ಕನ್ನಡ ಹಾಡು?
    ಮೋಹನ್ ಬ್ರದರ್ಸ್: ರಾಜಕುಮಾರ್ ಅವರ ಕಸ್ತೂರಿ ನಿವಾಸದ ಆಡಿಸಿನೋಡು..ಬೀಳಿಸಿನೋಡು

    ಸಂಗೀತ ನಿರ್ದೇಶಕರಿಗೆ ನಿಮ್ಮ ಕಿವಿಮಾತು ಏನು?

    ಸಂಗೀತ ನಿರ್ದೇಶಕರಿಗೆ ನಿಮ್ಮ ಕಿವಿಮಾತು ಏನು?

    ಪ್ರ: ಈಗಿನ ಸಿಂಗರ್ಸ್ ಮತ್ತು ಸಂಗೀತ ನಿರ್ದೇಶಕರಿಗೆ ನಿಮ್ಮ ಕಿವಿಮಾತು ಏನು?
    ಮೋಹನ್ ಬ್ರದರ್ಸ್: ಸಿನಿಮಾ ತೆಗೆಯುತ್ತಿರುವವರಿಗೆ ಆಗಿನ ಕಾಲದಲ್ಲಿ ಹೇಗೆ ಸಾಹಿತ್ಯ, ಸಂಗೀತ ಇರುತ್ತಿತ್ತೋ ಅದನ್ನೇ ಕೊಡಲು ನಿರ್ಮಾಪಕರು ಮೊದಲು ಸೂಚಿಸಬೇಕು. ಈಗಿನ ಹಾಡುಗಳಲ್ಲಿ ಸೌಂಡ್ ಜಾಸ್ತಿ. ಸಾಹಿತ್ಯಕ್ಕೆ ಹೆಚ್ಚಿನ ಮಣೆಯಿಲ್ಲ. ಆ ಕ್ಷಣದಲ್ಲಿ ಹಾಡು ಇಷ್ಟವಾಗುತ್ತದೆಯೇ ಹೊರತು ಆಮೇಲೆ ಇರುವುದಿಲ್ಲ. ಹಳೆಯ ಸಿನಿಮಾ/ಹಾಡುಗಳಲ್ಲಿ ಮೆಸೇಜ್ ಇರುತ್ತಿತ್ತು. ಈಗಿನ ಮಕ್ಕಳು ರಿಯಾಲಿಟಿ ಶೋನಲ್ಲಿ ಆಯ್ಕೆಮಾಡಿಕೊಳ್ಳುವುದೇ ಹಳೆಯ ಹಾಡುಗಳನ್ನು.

    ಸುದರ್ಶನ್: ಈಗಿನವರಲ್ಲೂ ಒಳ್ಳೆ ವಿದ್ಯೆ, ಪ್ರತಿಭೆ ಇದ್ದವರು ಇದ್ದಾರೆ. ರಿಯಾಲಿಟಿ ಶೋ ಬಂದ ನಂತರ, ಮಕ್ಕಳಲ್ಲಿ ತಂದೆತಾಯಿ ಸರಿಯಾದ ರೀತಿಯಲ್ಲಿ ಪಾಠ ಕಲಿಸುತ್ತಿಲ್ಲ ಅನ್ನಿಸುತ್ತೆ. ಸಂಗೀತಕ್ಕೆ ತಡೆ ಅನ್ನೋದು ಇಲ್ಲ. ತಂದೆ ತಾಯಿ ಸರಿಯಾದ ಮಾರ್ಗದರ್ಶನ ತೋರಿಸಿದರೆ, ಮಕ್ಕಳು ಮುಂದಕ್ಕೆ ಬರುತ್ತಾರೆ. ಸಂಗೀತವನ್ನು ಒಳ್ಳೆಯ ಸ್ಕೂಲಿನಲ್ಲಿ ಕಲಿಸಬೇಕು.

    ಗೋಪಿ: ಟ್ರೆಂಡ್ ಚೇಂಜ್ ಆಗ್ತಿದೆ. ಮೊದಲು ಕಟ್ಟಿಗೆ, ಸೀಮೆಯೆಣ್ಣೆ, ಗ್ಯಾಸ್, ಇಲೆಕ್ಟ್ರಿಕ್ ಬಂದಿದೆ. ಈಗಿನ ಯುವಕರಿಗೆ ಈಗಿನ ಸಂಗೀತ ಇಷ್ಟವಾಗುತ್ತದೆ. ಹಳೆಯ ಮೆಲೋಡಿಯನ್ನು ಇಟ್ಟುಕೊಂಡರೆ, ಈಗಿನ ಸಂಗೀತವೂ ಉಳಿಯುತ್ತದೆ.

    English summary
    Yesteryear noted musicians Mysore Mohan and his brothers, Sudarshan (famours guitarist), Gopi (Famous base guitarist) exclusive interview. Mysore Mohan and brothers shared their experience of musical life, Dr. Rajkumar etc.
    Monday, February 12, 2018, 15:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X