»   » 'ಜೀ ಕನ್ನಡ' ಸಕ್ಸಸ್ ಸೂತ್ರಧಾರ ರಾಘವೇಂದ್ರ ಹುಣಸೂರು ಎಕ್ಸ್ ಕ್ಲೂಸಿವ್ ಸಂದರ್ಶನ

'ಜೀ ಕನ್ನಡ' ಸಕ್ಸಸ್ ಸೂತ್ರಧಾರ ರಾಘವೇಂದ್ರ ಹುಣಸೂರು ಎಕ್ಸ್ ಕ್ಲೂಸಿವ್ ಸಂದರ್ಶನ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಐದನೇ ಸ್ಥಾನದಲ್ಲಿದ್ದ ಜೀ ಕನ್ನಡ ವಾಹಿನಿ ಈಗ ಏಕ್ದಂ ಎರಡನೇ ಸ್ಥಾನಕ್ಕೆ ಜಿಗಿದಿದೆ. ಟಿ.ಆರ್.ಪಿ ರೇಟಿಂಗ್ ನಲ್ಲಿ ಜೀ ಕನ್ನಡ ಮೇಲಿಂದ ಮೇಲೆ ಹೀಗೆ ಏರ್ತಿದ್ರೆ, ಕರ್ನಾಟಕದ 'ನಂಬರ್ 1' ಚಾನೆಲ್ ಆಗೋಕೆ ಕೆಲವೇ ದಿನಗಳು ಸಾಕು.

  ಫಿಕ್ಷನ್ ಮತ್ತು ನಾನ್ ಫಿಕ್ಷನ್...ಎರಡರಲ್ಲೂ ಜೀ ಕನ್ನಡ ಸಕ್ಸಸ್ ಕಾಣುತ್ತಿದೆ. ಈ ಯಶಸ್ಸಿನ ಹಿಂದಿನ ಮಾಸ್ಟರ್ ಬ್ರೇನ್ ಬೇರಾರೂ ಅಲ್ಲ, ಜೀ ಕನ್ನಡ ವಾಹಿನಿಯ ಪ್ರೋಗ್ರಾಮಿಂಗ್ ಮತ್ತು ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು.

  ಜೀ ಕನ್ನಡ ವಾಹಿನಿಗೆ ಕಾಲಿಟ್ಟ ಎರಡು ವರ್ಷಗಳಲ್ಲಿ 'ವೀಕೆಂಡ್ ವಿತ್ ರಮೇಶ್', 'ಡ್ರಾಮಾ ಜ್ಯೂನಿಯರ್ಸ್' ಶೋಗಳ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲೂ ಜೀ ಕನ್ನಡ ಜನ ಮನ ತಲುಪುವ ಹಾಗೆ ಮಾಡಿದ್ದಾರೆ ರಾಘವೇಂದ್ರ ಹುಣಸೂರು.

  ತಮ್ಮ ಬಿಜಿ ಶೆಡ್ಯೂಲ್ ನಡುವೆಯೂ ರಾಘವೇಂದ್ರ ಹುಣಸೂರು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತಿಗೆ ಸಿಕ್ಕಿದ್ರು. ರಾಘವೇಂದ್ರ ಹುಣಸೂರು ಜೊತೆಗಿನ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಓದಿರಿ....

  ಸಂದರ್ಶನ : ಹರ್ಷಿತಾ ರಾಕೇಶ್

  ಜೀ ಕನ್ನಡ ವಾಹಿನಿಯಲ್ಲಿ ನಿಮ್ಮ ಜರ್ನಿ....

  ಜೀ ಕನ್ನಡಗೆ ನಾನು ಸೇರಿಕೊಂಡು ಎರಡು ವರ್ಷ ಕಂಪ್ಲೀಟ್ ಆಯ್ತು. ಜೀ ಕನ್ನಡಗೂ ನನಗೂ ಹಳೇ ಸಂಬಂಧ ಇದೆ. ಸುವರ್ಣದಲ್ಲಿ ಜರ್ನಿ ಶುರು ಆಗಿ ಒಂದು ವರ್ಷ ಆದ್ಮೇಲೆ ಜೀ ಕನ್ನಡಗೆ ಬಂದೆ. ಅದಾದ ಮೇಲೆ ಮತ್ತೆ ಸುವರ್ಣಗೆ ನಾನ್ ಫಿಕ್ಷನ್ ಹೆಡ್ ಆಗಿ ಹೋದೆ. ಅಲ್ಲಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಎರಡೂವರೆ ವರ್ಷ ಇದ್ದೆ. ಅದಾದ ಮೇಲೆ ಮತ್ತೆ ಇಲ್ಲಿಗೆ (ಜೀ ಕನ್ನಡ) ಪ್ರೋಗ್ರಾಮಿಂಗ್ ಹೆಡ್ ಆಗಿ ಬಂದೆ. ಅಲ್ಲಿ ತನಕ ನಾನು ಬರೀ ರಿಯಾಲಿಟಿ ಶೋಗಳನ್ನಷ್ಟೇ ಡೈರೆಕ್ಟ್ ಮಾಡುತ್ತಿದೆ. ಜೀ ಕನ್ನಡದಲ್ಲಿ ಪ್ರೋಗ್ರಾಮಿಂಗ್ ಹೆಡ್ ಆಗುವ ಆಫರ್ ಬಂತು. ಇದು ಚಾಲೆಂಜಿಂಗ್ ಕೆಲಸ.

  ಜೀ ಕನ್ನಡ ಈಗ ಎರಡನೇ ಸ್ಥಾನಕ್ಕೆ ಜಿಗಿದಿದೆ. ಅದರಲ್ಲಿ ಸೀರಿಯಲ್ ಗಳ ಪಾತ್ರ?

  ಇಲ್ಲಿ ನಾವು ಶುರು ಮಾಡಿದ ಸೀರಿಯಲ್ ಗಳು ಸಕ್ಸಸ್ ಆಯ್ತು. ನನ್ನ ಅತಿ ದೊಡ್ಡ ಖುಷಿ ಇರುವುದು ಸೀರಿಯಲ್ ಗಳ ಸಕ್ಸಸ್ ನಿಂದಾಗಿ. 'ಶ್ರೀರಸ್ತು ಶುಭಮಸ್ತು', 'ಜೊತೆ ಜೊತೆಯಲಿ' ಎರಡೂ ಕೂಡ ಹಿಟ್ ಸೀರಿಯಲ್ ಆಯ್ತು. ಅತಿ ದೊಡ್ಡ ಸಕ್ಸಸ್ ಸಿಕ್ಕಿದ್ದು 'ನಾಗಿಣಿ' ಧಾರಾವಾಹಿಯಿಂದ. ಈಗ ನಡೆಯುತ್ತಿರುವ 'ಮಹಾನದಿ', 'ಜನುಮದ ಜೋಡಿ' ಕೂಡ ಚೆನ್ನಾಗಿ ಹೋಗುತ್ತಿದೆ. ಸುಮಾರು 180 GRP ಯಲ್ಲಿ ಇದ್ದಂತಹ ಚಾನೆಲ್ ಇವತ್ತು 430 GRP ಗೆ ಬಂದಿದೆ. ನಂಬರ್ 5 ಸ್ಥಾನದಲ್ಲಿ ಇದ್ದ ಚಾನೆಲ್ ನಂಬರ್ 2 ಗೆ ಏರಿದೆ. ಇಟ್ ಈಸ್ ಎ ಗ್ರೇಟ್ ಜರ್ನಿ. ಕಳೆದ 9 ತಿಂಗಳಲ್ಲಿ ಪ್ರೋಗ್ರಾಮಿಂಗ್ ಹೆಡ್ ಆಗಿದ್ದ ನನಗೆ ಬಿಸಿನೆಸ್ ಹೆಡ್ ಆಗುವ ಪ್ರಮೋಷನ್ ಕೂಡ ಸಿಕ್ತು. ಐ ಆಮ್ ವೆರಿ ಹ್ಯಾಪಿ.

  ಕಾಂಪಿಟೇಶನ್, ಟಿ.ಆರ್.ಪಿ ಅಂದಕೂಡಲೆ ಪ್ರೆಶರ್, ಸ್ಟ್ರೆಸ್ ಜಾಸ್ತಿ ಇರುತ್ತೆ. ಹೇಗೆ ಮ್ಯಾನೇಜ್ ಮಾಡ್ತೀರಿ?

  ಪ್ರೆಶರ್...ಹೌದು. ನನ್ನ ಪ್ರಕಾರ ಟಿವಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡಲು ಬರುವವರು ಪ್ರೆಶರ್ ನ ಎಂಜಾಯ್ ಮಾಡ್ಬೇಕು. ಕಾಂಪಿಟೇಶನ್ ನಮ್ಮ ಕೈಯಲ್ಲಿ ಇರಲ್ಲ. ಇದು ಪ್ರತಿದಿನದ ಆಟ. 24 ಗಂಟೆ ಚಾನೆಲ್ ನಡೆಯುತ್ತಿರುತ್ತೆ, ನಡೆಯುವಾಗಲೇ ರಿಪೇರಿ ಮಾಡ್ಬೇಕು. ಒಂದ್ ಸಕ್ಸಸ್ ಸಾಕಾಗಲ್ಲ. ಅದನ್ನ ಮತ್ತೆ ಮತ್ತೆ ರಿಪೀಟ್ ಮಾಡ್ತಿರ್ಬೇಕು. ಪ್ರತಿ ದಿನ ಚಾನೆಲ್ ಮುಂದೆ ಪ್ರೇಕ್ಷಕರನ್ನ ಕರೆದು ತಂದು ಕೂರಿಸಬೇಕು. ಅದೇ ಚಾಲೆಂಜ್. ಇಟ್ಸ್ ಫನ್. [ಜೀ ಕನ್ನಡ ಟಿ.ಆರ್.ಪಿ ಉಡೀಸ್; ಎಲ್ಲಾ 'ಡ್ರಾಮಾ' ಮಾಡಿದ್ದಕ್ಕೆ.!]

  ಕಿರುತೆರೆ ಇತಿಹಾಸದಲ್ಲಿ ಜೀ ಕನ್ನಡ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಅದರ ಬಗ್ಗೆ ವಿವರಿಸಬಹುದಾ...

  ಡ್ರಾಮಾ ಜ್ಯೂನಿಯರ್ಸ್ ಸೂಪರ್ ಸಕ್ಸಸ್ ಆಗಿದೆ. ಮಕ್ಕಳ ಕೈಯಲ್ಲಿ ನಾಟಕ ಮಾಡಿಸುವ ಪ್ಲಾನ್ ವರ್ಕೌಟ್ ಆಯ್ತು. ಅದಕ್ಕೆ ತಕ್ಕಂತೆ ಅದ್ಭುತವಾದ ಮಕ್ಕಳು ಸಿಕ್ಕರು. ಅವರಿಗೆ ಟ್ರೇನ್ ಮಾಡುತ್ತಿರುವ ಎಲ್ಲಾ ಮೆಂಟರ್ಸ್ ಗೆ ಈ ಸಕ್ಸಸ್ ಸಲ್ಲಬೇಕು. ಕಾರ್ಯಕ್ರಮದಿಂದ ಬಂದ ರೇಟಿಂಗ್ ಮತ್ತು ರಿವೆನ್ಯೂ ಎಲ್ಲವೂ ಕೂಡ ಇತಿಹಾಸ ಸೃಷ್ಟಿಸಿದೆ. [ಇಂದು 'ಡ್ರಾಮಾ ಜ್ಯೂನಿಯರ್ಸ್'ನಲ್ಲಿ 'ಆರ್ಮುಗಂ' ರವಿಶಂಕರ್ ಆರ್ಭಟ.!]

  ಡ್ರಾಮಾ ಜ್ಯೂನಿಯರ್ಸ್ ಬಜೆಟ್ ಎಷ್ಟು?

  ಪ್ರತಿ ಎಪಿಸೋಡ್ ಗೆ 8.50 ಇಂದ 9 ಲಕ್ಷ ರೂಪಾಯಿ ಖರ್ಚು ಮಾಡುತ್ತೇವೆ. ಅದರಿಂದ ಮೂರು ಪಟ್ಟು ಹೆಚ್ಚು ರೆವೆನ್ಯೂ ಬರುತ್ತಿದೆ. [ನಿಮ್ಮ ಪುಟಾಣಿ ಕೂಡ 'ಡ್ರಾಮಾ ಜ್ಯೂನಿಯರ್ಸ್'ಗೆ ಹೋಗ್ಬೇಕಾ.?]

  ವರ್ಷದ ಹಿಂದೆ ಒಂದು ದೊಡ್ಡ ವಿವಾದ ಆಗಿತ್ತು. ಟಿವಿ ಚಾನೆಲ್ ನವರು ಸ್ಟಾರ್ ಗಳನ್ನ ಇಟ್ಕೊಂಡು, ರಿಯಾಲಿಟಿ ಶೋ ಮಾಡಿ ಟಿ.ಆರ್.ಪಿ ತಗೊಳ್ತಾರೆ. ಇದರಿಂದ ಜನ ಸಿನಿಮಾ ನೋಡುತ್ತಿಲ್ಲ, ನಿರ್ಮಾಪಕರಿಗೆ ಲಾಸ್ ಆಗ್ತಿದೆ ಅಂತ ಫಿಲ್ಮ್ ಚೇಂಬರ್ ನಲ್ಲಿ ಗಲಾಟೆ ಆಗಿತ್ತು. ಅವರಿಗೆಲ್ಲಾ, ನೀವು 'ಡ್ರಾಮಾ ಜ್ಯೂನಿಯರ್ಸ್' ಮೂಲಕ ಉತ್ತರ ಕೊಟ್ಟಿದ್ದೀರಾ ಅಂತ ಭಾವಿಸಬಹುದಾ?

  Exactly. ಡ್ರಾಮಾ ಜ್ಯೂನಿಯರ್ಸ್ ಶುರು ಆಗುವ ಮುನ್ನ ಇದ್ದದ್ದು 'ವೀಕೆಂಡ್ ವಿತ್ ರಮೇಶ್'. ಅಲ್ಲಿ ಸ್ಟಾರ್ ಗಳು ಬರ್ತಿದ್ರು. ಸ್ಟಾರ್ ಗಳು ಬಂದ್ರೆ ರೇಟಿಂಗ್ ಬರುತ್ತೆ ಅನ್ನೋದು ಸುಳ್ಳು. ಎಲ್ಲಾ ಚಾನೆಲ್ ಗಳಿಗೆ ಸ್ಟಾರ್ಸ್ ಹೋಗಿರ್ತಾರೆ. ಆದ್ರೆ, ಎಲ್ಲಾ ಕಡೆ ರೇಟಿಂಗ್ ಬಂದಿರುವುದಿಲ್ಲ. ಅವರನ್ನ ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಕ್ರಿಯೇಟಿವಿಟಿ ಮೇಲೆ ರೇಟಿಂಗ್ ಬರುತ್ತದೆ. ಗೆಲ್ಲೋದಕ್ಕೆ ಸ್ಟಾರ್ ಗಳು ಬೇಕಾಗಿಲ್ಲ. ಸ್ಟಾರ್ ಗಳು ಮಾತ್ರ ಗೆಲ್ಲುತ್ತಾರೆ ಅನ್ನೋದು ಸುಳ್ಳು. ಸ್ಟಾರ್ ಗಳನ್ನ ಕರ್ಕೊಂಡು ಬರೋದಕ್ಕಿಂತ, ಬೇರೆಯವರನ್ನ ಕರ್ಕೊಂಡು ಬಂದು ಸ್ಟಾರ್ ಮಾಡೋದು ಸಾಧನೆ ಅಂತ ನಾವು ನಂಬಿದ್ವಿ. 'ಡ್ರಾಮಾ ಜ್ಯೂನಿಯರ್ಸ್' ಮೂಲಕ 18 ಮಕ್ಕಳು ಇವತ್ತು ಸ್ಟಾರ್ ಗಳಾಗಿದ್ದಾರೆ. [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]

  ಡ್ರಾಮಾ ಜ್ಯೂನಿಯರ್ಸ್ ನಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿ?

  ಅಚಿಂತ್ಯ [ಮಕ್ಕಳ ಪ್ರತಿಭೆ ಮುಂದೆ ಶಿವಣ್ಣ, ರವಿಚಂದ್ರನ್ ತಲೆಬಾಗಲು ಸಾಧ್ಯವೇ.?]

  ಡ್ರಾಮಾ ಜ್ಯೂನಿಯರ್ಸ್ ನಲ್ಲಿ 4-5 ವರ್ಷದ ಮಕ್ಕಳೂ ಇದ್ದಾರೆ. 12-13 ವರ್ಷದ ಮಕ್ಕಳೂ ಇದ್ದಾರೆ. 12-13 ವರ್ಷದ ಮಕ್ಕಳಿಗೆ ಇರುವಷ್ಟು ತಿಳುವಳಿಕೆ 4-5 ವರ್ಷದ ಮಕ್ಕಳಿಗೆ ಇರಲ್ಲ. ಹೀಗಿರುವಾಗ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ ತೂಗುವುದು ಎಷ್ಟು ಸರಿ?

  ಅದನ್ನ ನಾವು ಸ್ಕ್ರಿಪ್ಟ್ ಡಿಸೈನ್ ಮಾಡುವಾಗಲೇ ಪ್ಲಾನ್ ಮಾಡಿರ್ತೀವಿ. ಮಕ್ಕಳ ತಿಳುವಳಿಕೆ ಮೇಲೆ ಸ್ಕ್ರಿಪ್ಟ್ ರೆಡಿ ಆಗಿರುತ್ತೆ. 5 ವರ್ಷದ ಮಕ್ಕಳಿಗೆ ಇರುವ ಕ್ಯೂಟ್ನೆಸ್ 11 ವರ್ಷದವರಿಗೆ ಇರಲ್ಲ. ಎಲ್ಲವನ್ನ calculate ಮಾಡಿ ಸ್ಕ್ರಿಪ್ಟ್ ಮಾಡುತ್ತೇವೆ.

  ಅಂದ್ಮೇಲೆ 'ವಿನ್ನರ್' ನಿರ್ಧಾರ ಆಗುವುದು ಹೇಗೆ?

  ಈಗ ಅದರದ್ದೇ ಜಿಜ್ಞಾಸೆ ನಡೆಯುತ್ತಿದೆ. ಒಂದು ರೇಸ್ ಓಡಬೇಕಾದರೆ ಒಬ್ಬ ವಿನ್ನರ್ ಇರಲೇಬೇಕು. ಅದರ ಜೊತೆ ಅಡಿಷನಲ್ ಅವಾರ್ಡ್ ಕೊಡುವ ಪ್ಲಾನ್ನಿಂಗ್ ನಡೆಯುತ್ತಿದೆ. 'ಡ್ರಾಮಾ ಜ್ಯೂನಿಯರ್ಸ್' ಒಂದು ಪರ್ಫಾಮೆನ್ಸ್ ಓರಿಯೆಂಟೆಡ್ ಶೋ ಆಗಿರುವುದರಿಂದ ಪರ್ಫಾಮೆನ್ಸ್ ಆಧಾರದ ಮೇಲೆ ಒಬ್ಬ ವಿನ್ನರ್ ನಿರ್ಧಾರ ಆಗುತ್ತೆ.

  ಹಾಗಾದ್ರೆ, ಗ್ರ್ಯಾಂಡ್ ಫಿನಾಲೆಯಲ್ಲಿ ಆಡಿಯನ್ಸ್ ವೋಟ್ ಕೂಡ ತಾಳೆ ಹಾಕುತ್ತೀರಾ?

  ಹೌದು. ಆಡಿಯನ್ಸ್ ವೋಟ್ ಮತ್ತು ಜಡ್ಜ್ ಗಳ ನಿರ್ಧಾರ. ಎರಡನ್ನೂ ಲೆಕ್ಕ ಹಾಕಿ ವಿನ್ನರ್ ಆಯ್ಕೆ ಮಾಡಲಾಗುವುದು.

  ಕೆಲವು ಸಂಚಿಕೆಗಳಲ್ಲಿ ಎಲಿಮಿನೇಷನ್ ಇರ್ಲಿಲ್ಲ. ಅದಕ್ಕೆ ಪ್ರೇಕ್ಷಕರಿಂದ ಬಂದ ರೆಸ್ಪಾನ್ಸ್ ಕಾರಣ ಆಯ್ತಾ?

  ಕೆಲವು ಸಂಚಿಕೆಗಳಲ್ಲಿ ಮಕ್ಕಳ ಪರ್ಫಾಮೆನ್ಸ್ ನೋಡಿದ್ರೆ, ಯಾರನ್ನೂ ಎಲಿಮಿನೇಟ್ ಮಾಡ್ಬೇಕು ಅಂತ ಅನಿಸುವುದೇ ಇಲ್ಲ. ಎಲ್ಲರೂ ಒಂದೇ ತೂಕ ಕಂಡು ಬಂದಾಗ ಅನಿವಾರ್ಯವಾಗಿ ನಾವು ಎಲಿಮಿನೇಟ್ ಮಾಡ್ಲಿಲ್ಲ.

  'ವೀಕೆಂಡ್ ವಿತ್ ರಮೇಶ್' ಸೀಸನ್ 3 ಶುರುವಾಗ್ತಿದ್ಯಂತೆ...

  ಹೌದು. ರಮೇಶ್ ಸರ್ ಸದ್ಯ ಅಮೇರಿಕಾದಲ್ಲಿ ಇದ್ದಾರೆ. ಅವರು ವಾಪಸ್ ಬರಲಿ ಅಂತ ಕಾಯ್ತಿದ್ದೇನೆ. ಅವರು ಬಂದ ಬಳಿಕ ಚರ್ಚೆ ಮಾಡಿ 'ವೀಕೆಂಡ್ ವಿತ್ ರಮೇಶ್-3' ಶುರು ಮಾಡುತ್ತೇವೆ. ಕಾಮನ್ ಮ್ಯಾನ್ ಕೂಡ ಈ ಬಾರಿ ಸಾಧಕರ ಕುರ್ಚಿಯಲ್ಲಿ ಕೂರುವ ಅವಕಾಶ ಇದೆ. ಅದು ಇನ್ನೂ ಡಿಸೈನಿಂಗ್ ಸ್ಟೇಜ್ ನಲ್ಲಿ ಇದೆ. [ಚಿತ್ರಗಳು: 'ಜೀ ಕನ್ನಡ' ದಶಕದ ಸಂಭ್ರಮದ ವರ್ಣರಂಜಿತ ಸಮಾರಂಭ]

  'ವೀಕೆಂಡ್ ವಿತ್ ರಮೇಶ್ ಎರಡನೇ ಆವೃತ್ತಿ' ಮಾಡುವಾಗ ಸಿನಿಮಾದವರು ಮಾತ್ರ ಸಾಧಕರಾ... ಎಂಬ ಪ್ರಶ್ನೆ ವೀಕ್ಷಕರ ವಲಯದಲ್ಲಿ ಕೇಳಿ ಬಂದಿತ್ತು. ಈ ಬಾರಿ ಹೇಗೆ?

  ಸೀಸನ್ 2 ನಲ್ಲಿ ಸಿನಿಮಾದವರು ಮಾತ್ರ ಅಂತ ನಾವು ಬಹಳ ಕ್ಲಿಯರ್ ಆಗಿದ್ವಿ. ಈಗ ಇನ್ನೊಂದ್ ಲೆವೆಲ್ ಗೆ ತೆಗೆದುಕೊಂಡು ಹೋಗುವ ಪ್ಲಾನ್ನಿಂಗ್ ಇದೆ.

  ಸಾಧಕರ ಸೀಟ್ ಮೇಲೆ ಕ್ರೀಡಾಪಟುಗಳನ್ನ ಜನ ಎಕ್ಸ್ ಪೆಕ್ಟ್ ಮಾಡ್ತಿದ್ದಾರಲ್ಲಾ....

  ಖಂಡಿತ ಅದು ಈ ಬಾರಿ ಆಗುತ್ತೆ. ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ಡ್ರಾವಿಡ್ ರವರನ್ನ ಕರೆಸುವ ಆಸೆ ನನಗೂ ಇದೆ. ಆದರೆ ಅವರು ಬರಬೇಕಲ್ಲಾ? ನಮ್ಮ ಪ್ರಯತ್ನ ಮಾಡುತ್ತಿದ್ದೇವೆ.

  'ಡ್ರಾಮಾ ಜ್ಯೂನಿಯರ್ಸ್' ಮುಗಿತಾ ಬಂತು. ಮುಂದಿನ ಶೋ...

  ಅದೇ ಟೈಮ್ ಗೆ 'ಕಾಮಿಡಿ ಕಿಲಾಡಿಗಳು' ಶುರು ಆಗಲಿದೆ.

  English summary
  Zee Kannada Programming/Business head Raghavendra Hunsur shared his success journey in an exclusive interview with Filmibeat Kannada. Take a look.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more