twitter
    For Quick Alerts
    ALLOW NOTIFICATIONS  
    For Daily Alerts

    'ಸಲಿಂಗಕಾಮ'ದ ಬಗ್ಗೆ ನಟ ಚೇತನ್, ನಾಗತಿಹಳ್ಳಿ ಚಂದ್ರಶೇಖರ್ ಏನಂದ್ರು.?

    By Bharath Kumar
    |

    'ಸಲಿಂಗಕಾಮ ಅಪರಾಧವಲ್ಲ' ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ತೀರ್ಪನ್ನ ಬಹುತೇಕ ಹೋರಾಟಗಾರರು, ಸಮಾಜಿಕ ಚಿಂತಕರು, ಸಿನಿಮಾ ತಾರೆಯರು ಸ್ವಾಗತಿಸಿದ್ದಾರೆ.

    ತಮ್ಮ ವೈಯಕ್ತಿಕ ಅಭಿಪ್ರಾಯವನ್ನ ಟ್ವಿಟ್ಟರ್ ಅಥವಾ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರರಂಗದ ಸಿನಿತಾರೆಯರ ಪೈಕಿ ನಟಿ ಪಾರುಲ್ ಯಾದವ್, ಆರ್.ಜೆ ನೇತ್ರಾ, ಪಾರ್ವತಿ ಮೆನನ್, ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಹಲವರು ಸೆಕ್ಷನ್ 377 ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

    ಸಲಿಂಗಕಾಮ ಅಪರಾಧವಲ್ಲ: ಸಿನಿತಾರೆಯರು ಏನಂದ್ರು.? ಸಲಿಂಗಕಾಮ ಅಪರಾಧವಲ್ಲ: ಸಿನಿತಾರೆಯರು ಏನಂದ್ರು.?

    ಇದೀಗ, ಕನ್ನಡದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು, ಸಾಮಾಜಿಕ ಹೋರಾಟಗಾರ ನಟ ಚೇತನ್ ಮತ್ತು ಖ್ಯಾತ ನಿರ್ದೇಶಕ ಕೆ ಎಂ ಚೈತನ್ಯ ಅವರು 'ಸೆಕ್ಷನ್ 377' ಕುರಿತ ತೀರ್ಪಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇವರು ಏನಂದ್ರು.? ಮುಂದೆ ಓದಿ....

    ಸುಪ್ರೀಂಗೆ ತಡವಾಗಿ ಗೊತ್ತಾಗಿದೆ

    ಸುಪ್ರೀಂಗೆ ತಡವಾಗಿ ಗೊತ್ತಾಗಿದೆ

    ಈ ಬಗ್ಗೆ ಹಿರಿಯ ನಿರ್ದೇಶಕ ಹಾಗೂ ನಟ ನಾಗತಿಹಳ್ಳಿ ಚಂದ್ರಶೇಖರ್ ಅವರು ಟ್ವೀಟ್ ಮಾಡಿದ್ದು, ''ಯಾವ ಜೀವಿಗೂ ಹುಟ್ಟಿಗೆ ಮುಂಚೆ ತನ್ನ ಲಿಂಗ, ಜಾತಿ,ಧರ್ಮ, ದೇಶ,ಭಾಪೆಗಳ ಆಯ್ಕೆಗೆ ಸ್ವಾತಂತ್ಯ್ರವಿಲ್ಲ. ಈ ಸತ್ಯ ಸುಪ್ರೀಂಗೆ ತಡವಾಗಿಯಾದರೂ ತಿಳಿಯಿತಲ್ಲ.. ನಮ್ಮ ನ್ಯಾಯಾಂಗ ವ್ವವಸ್ಥೆಯಲ್ಲಿ ನಂಬಿಕೆ ಬಂತು. ಎಲ್ಲ ಮನುಷ್ಯರನ್ನೂ ಕೇವಲ ಮನುಷ್ಯರಂತೆ ಕಾಣೋಣ'' ಎಂದಿದ್ದಾರೆ.

    ಸಲಿಂಗಕಾಮ ಹೋರಾಟಗಾರರಿಗೆ ಕೊನೆಗೂ ಸಿಕ್ಕ ಜಯ

    ಯಾರನ್ನಾದರೂ ಪ್ರೀತಿಸುವ ಹಕ್ಕಿದೆ

    ಯಾರನ್ನಾದರೂ ಪ್ರೀತಿಸುವ ಹಕ್ಕಿದೆ

    ಸಾಮಾಜಿಕ ಹೋರಾಟಗಾರು ಆ ದಿನಗಳು ಖ್ಯಾತಿಯ ನಟ ಚೇತನ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು,'' ಯಾರನ್ನಾದರೂ ಪ್ರೀತಿಸುವ ಹಕ್ಕನ್ನು ವೈಯಕ್ತಿಕ ಆಯ್ಕೆ ಎಂದು ಸುಪ್ರೀಂ ಕೋರ್ಟ್ ಹೇಳುತ್ತದೆ ... ವಯಸ್ಕರ ನಡುವೆ ಒಮ್ಮತದ ಲೈಂಗಿಕ ಸಂಬಂಧಗಳು ಅಪರಾಧವಲ್ಲ. ಜಸ್ಟೀಸ್! =) ಅಹಿಂಸಾ.'' ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?

    ಇಷ್ಟವಿಲ್ಲ ಅಂದ್ರೆ ಪಾಕಿಸ್ತಾನಕ್ಕೆ ಹೋಗಿ

    ಇಷ್ಟವಿಲ್ಲ ಅಂದ್ರೆ ಪಾಕಿಸ್ತಾನಕ್ಕೆ ಹೋಗಿ

    ಇನ್ನು ನಿರ್ದೇಶಕ ಕೆ ಎಂ ಚೈತನ್ಯ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, '' ನಮ್ಮ ಭಾರತೀಯ ಸಂವಿಧಾನದಲ್ಲಿ ಆಹಾರ, ಧರ್ಮ, ಸಿದ್ಧಾಂತ, ರಾಜಕೀಯ ನಂಬಿಕೆ, ಅಭಿವ್ಯಕ್ತಿ ... ಮತ್ತು ಈಗ ಲೈಂಗಿಕತೆಗೆ ಆಯ್ಕೆ ಮಾಡಲು ನಮ್ಮ ಮೂಲಭೂತ ಹಕ್ಕನ್ನು ನೀಡಿದೆ. ನಿಮಗೆ ಇಷ್ಟವಿಲ್ಲದಿದ್ದರೆ, ಪಾಕಿಸ್ತಾನಕ್ಕೆ ಹೋಗಿ'' ಎಂದು ಹೇಳಿದ್ದಾರೆ.

    ಎಲ್ ಜಿಬಿಟಿ ಅಂದರೇನು, ಕಾಮನಬಿಲ್ಲಿನ ಬಾವುಟ ಏಕೆ?

    ಕರಣ್ ಜೋಹರ್ ಖುಷಿ

    ಕರಣ್ ಜೋಹರ್ ಖುಷಿ

    'ಐತಿಹಾಸಿಕ ತೀರ್ಪು! ಇಂದು ನಿಜಕ್ಕೂ ಹೆಮ್ಮೆಯಾಗುತ್ತಿದೆ. ಸಲಿಂಗಕಾಮವನ್ನು ಅಪರಾಧವಲ್ಲ ಎಂದಿರುವುದು ಮತ್ತು ಸೆಕ್ಷನ್ 377 ಅನ್ನು ರದ್ದು ಮಾಡಿದ್ದು ಮಾನವೀಯತೆ ಮತ್ತು ಸಮಾನ ಹಕ್ಕುಗಳ ಗೆಲುವು. ದೇಶ ಮತ್ತೆ ಆಮ್ಲಜನಕವನ್ನು ವಾಪಸ್ ಪಡೆದಿದೆ' ಎಂದಿದ್ದಾರೆ ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್.

    ಐಪಿಸಿ ಸೆಕ್ಷನ್ 377 ರದ್ದು, ಸುಪ್ರೀಂ ತೀರ್ಪಿಗೆ ಬಾಲಿವುಡ್ ನಲ್ಲಿ ಸಂಭ್ರಮ!ಐಪಿಸಿ ಸೆಕ್ಷನ್ 377 ರದ್ದು, ಸುಪ್ರೀಂ ತೀರ್ಪಿಗೆ ಬಾಲಿವುಡ್ ನಲ್ಲಿ ಸಂಭ್ರಮ!

    English summary
    Supreme Court finally scrapped Section 377 thereby legalising gay love. Among those cheering the verdict are people from the Kannada film industry like director nagathihalli chandrashekar, chetan.
    Friday, September 7, 2018, 12:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X