51ರಲ್ಲೂ ಮಾಸದ ಹೃತಿಕ್ ರೋಷನ್ ಗತ್ತು: 'ಗ್ರೀಕ್ ಗಾಡ್' ಬಾಡಿ ಸೀಕ್ರೆಟ್ ಕೇಳಿದ್ರೆ ದಂಗಾಗ್ತೀರಾ?
ಬಾಲಿವುಡ್ ಅಂಗಳದಲ್ಲಿ ನಟರಿಗೆ ಕೊರತೆಯಿಲ್ಲ, ಸೂಪರ್ ಸ್ಟಾರ್‌ಗಳಿಗೆ ಬರವಿಲ್ಲ. ಆದರೆ ದಶಕಗಳು ಕಳೆದರೂ ತನ್ನ ಸಿಂಹಾಸನವನ್ನು ಬಿಟ್ಟುಕೊಡದ ಒಬ್ಬನೇ ಒಬ್ಬ ಗ್ರೀಕ್ ಗಾಡ್ ಇದ್ದಾನೆ. ಅವನ ನಗು ಕಂಡರೆ ಹುಡುಗಿಯರ ಎದೆಬಡಿತ ನಿಲ್ಲುತ್ತದೆ, ಅವನ ಡ್ಯಾನ್ಸ್ ನೋಡಿದರೆ ಎಂತ ಡ್ಯಾನ್ಸರ್‌ಗೆ ಕೂಡ ಬೆವರು ಇಳಿಯುತ್ತದೆ. ಬೆಳ್ಳಿತೆರೆಯ ಮೇಲೆ ಅವನು ಎಂಟ್ರಿ ಕೊಟ್ಟರೆ ಸಾಕು ಇಡೀ ಥಿಯೇಟರ್‌ಗೆ ಕಿಚ್ಚು ಬಿದ್ದಂತಾಗುತ್ತದೆ.
ಈ ನಟನಿಗೆ ವಯಸ್ಸು ಬರೀಅಂಕಿ ಅಷ್ಟೇ. ಹದಿಹರೆಯದ ಹುಡುಗರು ಜಿಮ್ನಲ್ಲಿ ವರ್ಷಗಟ್ಟಲೆ ಬೆವರು ಸುರಿಸಿದರೂ ಸಿಗದ ಮೈಕಟ್ಟು ಇವರ ಸೊತ್ತು. ಇವರ ಪರ್ಸನಾಲಿಟಿ ಮುಂದೆ ಹತ್ತಾರು ಯುವ ನಟರು ಮಂಕಾಗಿ ಕಾಣುವುದು ಸುಳ್ಳಲ್ಲ.

ದೂರದಿಂದ ನೋಡಿದರೆ ಇವರು ಮನುಷ್ಯನೋ ಅಥವಾ ಅಮೃತಶಿಲೆಯಲ್ಲಿ ಕೆತ್ತಿದ ಸುಂದರ ಕೆತ್ತನೆಯೋ ಎಂಬ ಅನುಮಾನ ಬರುತ್ತದೆ. ಇಡೀ ಭಾರತೀಯ ಚಿತ್ರರಂಗ ಇವರ ಫಿಟ್ನೆಸ್ ನೋಡಿ ಕಣ್ಣು ಬಾಯಿ ಬಿಡುತ್ತಿದೆ. ಇವತ್ತು ಜಗತ್ತೇ ಇವರನ್ನು ಆರಾಧಿಸುತ್ತಿದೆ. ಇಷ್ಟೆಲ್ಲಾ ಬಿಲ್ಡಪ್ ಕೊಟ್ಟ ಮೇಲೆ ನಿಮಗೆ ಈಗಾಗ್ಲೇ ಗೊತ್ತಾಗಿರಬಹುದು ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು...
ಅರ್ಧ ಶತಕ ದಾಟಿದ್ರೂ ಅದೇ ಖದರ್
ನಾವು ಮಾತನಾಡುತ್ತಿರುವುದು ಬಾಲಿವುಡ್‌ನ ಅಸಲಿ ಸುಲ್ತಾನ್ 'ಗ್ರೀಕ್ ಗಾಡ್' ಹೃತಿಕ್ ರೋಷನ್ ಬಗ್ಗೆ. ಈತನ ವಯಸ್ಸು 51 ವರ್ಷ. ಆದರೆ ಬಾಡಿ ನೋಡಿದರೆ ಯಾರಿಗಾದರೂ ಶಾಕ್ ಆಗಲೇಬೇಕು. ಅರ್ಧ ಶತಕ ಬಾರಿಸಿದ ಮೇಲೆ ಸಾಮಾನ್ಯವಾಗಿ ಮನುಷ್ಯ ಆರಾಮವಾಗಿ ಇರಲು ಬಯಸುತ್ತಾನೆ. ಆದರೆ ಹೃತಿಕ್ ಮಾತ್ರ ದಿನೇ ದಿನೇ ಕಬ್ಬಿಣದಂತೆ ಗಟ್ಟಿಯಾಗುತ್ತಿದ್ದಾರೆ.
ಹೃತಿಕ್ ರೋಷನ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಫೋಟೋಗಳು ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿವೆ. ಅವರ ಆ ಕಲ್ಲಿನಂತೆ ಕೆತ್ತಿದ ಮೈಕಟ್ಟು, ಮಿಂಚುವ ಸಿಕ್ಸ್ ಪ್ಯಾಕ್ ಮತ್ತು ಆಕರ್ಷಕ ನೋಟ ನೋಡಿ ಇಡೀ ಫ್ಯಾನ್ಸ್ ಲೋಕ ಫಿದಾ ಆಗಿದೆ. "ಈ ವಯಸ್ಸಲ್ಲೂ ಇದು ಹೇಗೆ ಸಾಧ್ಯ?" ಎಂದು ಎಲ್ಲರೂ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇದೀಗ ಸ್ವತಃ ಹೃತಿಕ್ ಅವರೇ ತಮ್ಮ ಫಿಟ್ನೆಸ್ ಮಂತ್ರವನ್ನು ರಿವೀಲ್ ಮಾಡಿದ್ದಾರೆ.
ಹೃತಿಕ್ ಪ್ಲೇಟ್ನಲ್ಲಿ ಏನಿರುತ್ತೆ?
ಹೃತಿಕ್ ರೋಷನ್ ತಮ್ಮ ಡಯಟ್ ವಿಚಾರದಲ್ಲಿ ಎಷ್ಟು ಕಟ್ಟುನಿಟ್ಟು ಎನ್ನುವುದಕ್ಕೆ ಅವರು ತಿನ್ನುವ ಆಹಾರವೇ ಸಾಕ್ಷಿ. 51ರಲ್ಲೂ ಫಿಟ್ ಆಗಿರಲು ಅವರು ಇವುಗಳನ್ನು ಪ್ರತಿನಿತ್ಯ ಸೇವಿಸುತ್ತಾರೆ:
ಗ್ರೀನ್ ಸಾಸ್ ಮಾಂಸ: ಹಸಿರು ಬಣ್ಣದ ಜಿಡ್ಡಿನ ಸಾಸ್ನಿಂದ ಸಂಪೂರ್ಣವಾಗಿ ಮುಚ್ಚಿದ ತೆಳ್ಳಗಿನ ಮಾಂಸದ ಚೂರುಗಳು ಇವರ ಫೇವರೆಟ್. ಇದು ದೇಹಕ್ಕೆ ಬೇಕಾದ ಪ್ರೋಟೀನ್ ನೀಡುತ್ತದೆ.
ಸುಟ್ಟ ಬ್ರಸೆಲ್ಸ್ ಮೊಗ್ಗು: ಅತ್ಯಂತ ಪೌಷ್ಟಿಕಾಂಶವಿರುವ ಬ್ರಸೆಲ್ಸ್ ಮೊಗ್ಗುಗಳನ್ನು ಲಘುವಾಗಿ ಸುಟ್ಟು ಇವರು ಸೇವಿಸುತ್ತಾರೆ.
ಹುರಿದ ಕುಂಬಳಕಾಯಿ: ಕುಂಬಳಕಾಯಿಯನ್ನು ಹುರಿದು ಸೇವಿಸುವುದು ಇವರ ಮೈಕಟ್ಟಿನ ರಹಸ್ಯಗಳಲ್ಲಿ ಒಂದು.
ಬಣ್ಣ ಬಣ್ಣದ ತರಕಾರಿಗಳು: ಇವರ ತಟ್ಟೆಯಲ್ಲಿ ಬೆಲ್ ಪೆಪರ್, ಕ್ಯಾರೆಟ್ ಸೇರಿದಂತೆ ಹತ್ತಾರು ಬಗೆಯ ತರಕಾರಿಗಳು ಸದಾ ಇರುತ್ತವೆ.
ಬ್ರೋಕೊಲಿ ಮ್ಯಾಜಿಕ್: ಲಘುವಾಗಿ ಹುರಿದ ಬ್ರೋಕೊಲಿ ಹೃತಿಕ್ ಅವರ ಆಹಾರದ ಪ್ರಮುಖ ಭಾಗ.
ಹೃತಿಕ್ ಕೊಟ್ಟ ಖಡಕ್ ಫಾರ್ಮುಲಾ
ಈತನ ಫಿಟ್ನೆಸ್ ಹಿಂದಿರೋದು ಯಾವುದೇ ಅದ್ಭುತ ಶಕ್ತಿಯಲ್ಲ, ಬದಲಿಗೆ ಶಿಸ್ತು. ಅವರು ಹೇಳಿರುವ ಮೂರು ಪದಗಳ ಮಂತ್ರ ಈಗ ಸಖತ್ ಟ್ರೆಂಡ್ ಆಗುತ್ತಿದೆ. "ಕಡಿಮೆ ತಿನ್ನಿ, ನಿಮ್ಮ ಕೆಲಸವನ್ನು ಹೆಚ್ಚು ಪ್ರೀತಿಸಿ ಮತ್ತು ನಿಮ್ಮ ಊಟದ ತಟ್ಟೆ ದೊಡ್ಡದಾಗಿ ಕಾಣುವಂತೆ ಮಾಡಿ" ಎನ್ನುವ ಫಾರ್ಮುಲಾವನ್ನು ಅವರು ಜಗತ್ತಿಗೆ ತಿಳಿಸಿದ್ದಾರೆ. ಇದು ಕೇವಲ ಡಯಟ್ ಅಲ್ಲ, ಇದು ಜೀವನದ ಪಾಠ.
ನಮ್ಮ ಮನಸ್ಸು ಯಾವತ್ತೂ ಹಸಿವಿನ ಹಿಂದೆ ಓಡುತ್ತದೆ. ಆದರೆ ಹೃತಿಕ್ ಹೇಳುವಂತೆ ನಾವು ತಿನ್ನುವ ಪ್ರಮಾಣ ಕಡಿಮೆಯಿದ್ದರೂ ಅದು ನೋಡಲು ಹೆಚ್ಚಿರಬೇಕು. ಮನಸ್ಸಿಗೆ ತೃಪ್ತಿ ಸಿಕ್ಕರೆ ಹೊಟ್ಟೆ ತಾನಾಗಿಯೇ ತುಂಬುತ್ತದೆ. ಊಟದ ಮೇಲೆ ಇರುವ ಪ್ರೀತಿಗಿಂತ, ಮಾಡುವ ಕೆಲಸದ ಮೇಲೆ ಹೆಚ್ಚು ಪ್ರೀತಿ ಬೆಳೆಸಿಕೊಂಡರೆ ದೇಹವು ಚೈತನ್ಯದಿಂದ ಕೂಡಿರುತ್ತದೆ ಎಂಬುದು ಈ ಗ್ರೀಕ್ ಗಾಡ್ನ ಖಡಕ್ ಐಡಿಯಾ.
ದೊಡ್ಡ ಪ್ಲೇಟ್, ಸಣ್ಣ ಊಟ
ಸಾಮಾನ್ಯವಾಗಿ ಡಯಟ್ ಮಾಡುವವರು ಸಣ್ಣ ತಟ್ಟೆ ಬಳಸುತ್ತಾರೆ. ಆದರೆ ಹೃತಿಕ್ ಇಲ್ಲಿ ಉಲ್ಟಾ ಟ್ರಿಕ್ ಬಳಸಿದ್ದಾರೆ. ದೊಡ್ಡ ತಟ್ಟೆಯಲ್ಲಿ ಕಡಿಮೆ ಪ್ರಮಾಣದ ಪೌಷ್ಟಿಕ ಆಹಾರವನ್ನು ಹರಡಿಟ್ಟುಕೊಂಡು ತಿನ್ನುವುದು ಇವರ ಸ್ಟೈಲ್. ಇದರಿಂದ ನಾವು ತುಂಬಾ ತಿನ್ನುತ್ತಿದ್ದೇವೆ ಎಂಬ ಭ್ರಮೆ ಮೂಡುತ್ತದೆ ಆದರೆ ನಿಜವಾಗಿ ನಾವು ತಿನ್ನುವುದು ದೇಹಕ್ಕೆ ಬೇಕಾದಷ್ಟು ಮಾತ್ರ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
'ವಾರ್- 2' ಬಳಿಕ ಹೊಸ ಸಿನಿಮಾ ಕಡೆ ಹೃತಿಕ್ ಮುಖ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಅವರು ತನು-ಮನ ಮುಡಿಪಾಗಿಟ್ಟಿದ್ದಾರೆ. 51ರಲ್ಲೂ ಈ ಮಟ್ಟದ ಶ್ರಮ ಹಾಕುತ್ತಿರುವ ಹೃತಿಕ್ ರೋಷನ್ ನಿಜಕ್ಕೂ ಯುವ ಪೀಳಿಗೆಗೆ ಮಾದರಿ.


Click it and Unblock the Notifications











