ಧಾರಾವಾಹಿ ಬೇರೆ ಬೇರೆ.. ಆದರೆ ಡ್ರೆಸ್ ಮಾತ್ರ ಒಂದೇ ; ಇಬ್ಬರೂ ಟ್ರೋಲ್ ಆಗುತ್ತಿರೋದ್ಯಾಕೆ?

By ಎಸ್ ಸುಮಂತ್

ಕೆಲವೊಂದು ರೀಲ್ಸ್ ಅನ್ನ ನೀವೂ ನೋಡಿರುತ್ತೀರಿ. ಲಿಫ್ಟ್‌ನಲ್ಲಿ ನಿಂತಾಗ ನಾಲ್ಕೈದು ಜನ ಒಂದೇ ಥರದ ಡ್ರೆಸ್‌ಗಳನ್ನ ಹಾಕಿರೋನ್ನ ನೋಡಿದ್ದೇವೆ. ಇದೀಗ ಸೀರಿಯಲ್‌ನಲ್ಲಿ ಆ ದೃಶ್ಯವನ್ನ ಕಾಣ್ತಾ ಇದ್ದೇವೆ. ಆದರೆ, ಎರಡು ಸೀರಿಯಲ್ ಬೇರೆ ಬೇರೆ. ಒಂದು ಧಾರಾವಾಹಿಯ ಹೀರೋ ಮತ್ತೊಂದು ಧಾರಾವಾಹಿಯ ಹೀರೋಯಿನ್ ಇಬ್ಬರು ಒಂದೇ ಥರದ ಶರ್ಟ್ ಧರಿಸಿದ್ದಾರೆ. ಇದು ಟ್ರೋಲಿಗರ ಕಣ್ಣಿಗೆ ಬಿದ್ದಿದ್ದು, ಪಾಸಿಟಿವ್ ಆಗಿ ಟ್ರೋಲ್ ಮಾಡಿದ್ದಾರೆ.

ಕಲರ್ಸ್ ಕನ್ನಡದಲ್ಲಿಯೇ ಬರುತ್ತಿರುವ 'ವಧು' ಹಾಗೂ 'ಮುದ್ದು ಸೊಸೆ' ಧಾರಾವಾಹಿಯ ಕಥೆ ಇದು. 'ವಧು' ಧಾರಾವಾಹಿಯ ಸಾರ್ಥಕ್ ಹಾಗೂ ಮುದ್ದು ಸೊಸೆ ಧಾರಾವಾಹಿಯ ವಿದ್ಯಾ ಒಂದೇ ಥರದ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಟ್ರೋಲರ್‌ಗಳಿಗೆ ದೊಡ್ಡ ಹಬ್ಬ ಆಗಿಬಿಟ್ಟಿದೆ. ತಮ್ಮ ಪೇಜ್ ನಲ್ಲಿ ಟ್ರೋಲ್ ಮಾಡಿ ಹಾಕಿದ್ದಾರೆ. ಕನ್ನಡ ಟಿವಿ ಎಕ್ಸ್‌ಪ್ರೆಸ್‌ ಎಂಬ ಪೇಜ್ ಈ ರೀತಿ ಟ್ರೋಲ್ ಮಾಡಿದೆ. ಯಾಕೆ ವಿದ್ಯಾ ಮತ್ತು ಸಾರ್ಥಕ್ ಒಂದೇ ಥರದ ಶರ್ಟ್ ಹಾಕಿದ್ದಾರೆ? "Same same but different" ಅಂತ ಪೇಜ್‌ನಲ್ಲಿ ಪೋಸ್ಟರ್ ಕ್ರಿಯೇಟ್ ಮಾಡಿ ಹಾಕಿದ್ದಾರೆ. ಇದು ಟ್ರೋಲಿಗರಿಗೆ ಒಂಥರ ಸಖತ್ ಖುಷಿ ಕೊಟ್ಟಿದೆ. ಹೌದಲ್ವಾ ಇಬ್ಬರು ಒಂದೇ ಥರ ಹಾಕಿದ್ದಾರೆ ಎಂದು ಎಲ್ಲರೂ ಕಮೆಂಟ್ ಹಾಕ್ತಾ ಇದ್ದಾರೆ.

Abhishek from Vadhu and Pratima from Muddu Sose are trolled for wearing the same shirt

ಈ ರೀತಿ ಘಟನೆ ನಡೆಯೋದು ಕೆಲವೊಂದು ಸಲ ಟ್ರೆಂಡಿಂಗ್ ಟೈಮ್‌ನಲ್ಲಿ. ಅಂದ್ರೆ ಹೊಸದಾಗಿ ಬಂದ ಡಿಸೈನ್‌ಗಳನ್ನು ಶಾಪ್‌ನವರು ಹೆಚ್ಚಾಗಿನೆ ಹಾಕಿರುತ್ತಾರೆ. ಸ್ಟಾಕ್ ಹೆಚ್ಚಾಗಿ ಕಂಡಾಗ ಅದರಲ್ಲೂ ಟ್ರೆಂಡಿಂಗ್ ಎಂದಾಗ ಎಲ್ಲರ ಮನಸ್ಸು ಅತ್ತ ಕಡೆಗೆ ವಾಲುತ್ತದೆ. ಇಂಥ ಪರಿಸ್ಥಿತಿಯಲ್ಲಿ ಮಾತ್ರ ಒಂದೇ ಥರದ ಬಟ್ಟೆಗಳನ್ನ‌ಸುಮಾರು ಜನ ಹಾಕುವುದಕ್ಕೆ ಸಾಧ್ಯ. ಈಗ ವಿದ್ಯಾ ಹಾಗೂ ಸಾರ್ಥಕ್ ವಿಚಾರದಲ್ಲೂ ಅದೇ ನಡೆದಿದೆ.

ಆ ಶರ್ಟ್ ಎಲ್ಲರಿಗೂ ಅಚ್ಚು ಮೆಚ್ಚಾಗುವಂತಹ ಶರ್ಟ್. ಹಳದಿ ಹಾಗೂ ಕಪ್ಪು ಬಣ್ಣದ ಚೆಕ್ಸ್ ಶರ್ಟ್‌ ಸಾಮಾನ್ಯವಾಗಿ ಬಹಳ ಮಂದಿ ಧರಿಸುತ್ತಾರೆ. ಬ್ಲಾಕ್ ಕಲರ್ ಬಾಕ್ಸ್ ಸ್ಟೈಲ್ ಇರುವ ಶರ್ಟ್ ಇದು. ಈ ಶರ್ಟ್ ಸಾಮಾನ್ಯವಾಗಿ ಎಲ್ಲಾ ಕಡೆಯೂ ಸಿಗುತ್ತದೆ. ಅದರಲ್ಲೂ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ಇಂತಹದ್ದೇ ಸಾಮ್ಯತೆ ಇರುವ ಡಿಸೈನ್ ಅನ್ನು ಸೇಲ್ ಮಾಡುತ್ತವೆ. ಅಲ್ಲಿ ಸಿಗುವ ಬೆಲೆಯ ಆಧಾರದ ಮೇಲೆ ಈ ದರವನ್ನ ಹೇಳಲಾಗುತ್ತಿದೆ. ಆದರೆ ಆ ಇಬ್ಬರು ಧಾರಾವಾಹಿಗಾಗಿ ಯಾವ ಕಡೆ ಬಟ್ಟೆ ತೆಗೆದುಕೊಂಡಿದ್ದಾರೆ ಎಂಬುದರ ಮೇಲೆ ಬಟ್ಟೆಯ ಗುಣಮಟ್ಟ ಹಾಗೂ ಬೆಲೆ ನಿಗದಿಯಾಗುತ್ತದೆ. ಆದರೆ ಇದೇ ಥರದ ಶರ್ಟ್ ಬೇಕು ಅಂದ್ರೆ ಎಲ್ಲಾ ಕಡೆಯಲ್ಲೂ ಸುಲಭವಾಗಿ ಸಿಗಲಿದೆ.

Abhishek from Vadhu and Pratima from Muddu Sose are trolled for wearing the same shirt

ಇನ್ನು ಈ ಇಬ್ಬರ ಧಾರಾವಾಹಿಯ ಬಗ್ಗೆ ಕೊಂಚ ಮಾಹಿತಿ ನೀಡೋದಾದ್ರೆ, ಸಾರ್ಥಕ್ 'ವಧು' ಎಂಬ ಧಾರಾವಾಹಿಯಲ್ಲಿ ನಟಿಸ್ತಾ ಇದ್ದಾರೆ. ಡಿವೋರ್ಸ್ ಅನ್ನೋದೆ ಸಾರ್ಥಕ್ ಜೀವನದಲ್ಲಿ ನರಕವನ್ನ ತೋರಿಸುತ್ತಿದೆ‌. ವಧುಳನ್ನೆ ವರಿಸಬಹುದು ಎಂಬ ಅನುಮಾನ ಎಲ್ಲರಲ್ಲೂ ಇದೆ. ಆದರೆ ಹೇಗೆ ಎಂಬುದು ಎಲ್ಲರ ಕುತೂಹಲ. ಇನ್ನು ವಿದ್ಯಾ ವಿಚಾರಕ್ಕೆ ಬರೋದಾದ್ರೆ ಈಗಷ್ಟೇ ಮೂಡಿ ಬರುತ್ತಿರುವ 'ಮುದ್ದು ಸೊಸೆ' ಮೂಲಕ ಮನರಂಜಿಸುತ್ತಿದ್ದಾರೆ. ಓದುವ ಕನಸಿಟ್ಟುಕೊಂಡ ಹುಡುಗಿಗೆ ಮದುವೆ ಮಾಡಿ ಬಿಡುವ ಕಥೆಯದು. ಮುಂದೆ ಹೇಗೆ ತನ್ನ ಕನಸ್ಸನ್ನ ನನಸು ಮಾಡಿಕೊಳ್ಳುತ್ತಾಳೆ ಎಂಬ ಕುತೂಹಲ 'ಮುದ್ದು ಸೊಸೆ' ಧಾರಾವಾಹಿ ವೀಕ್ಷಕರ ಮುಂದಿದೆ. ಸದ್ಯ ಈ ಎರಡೂ ಧಾರಾವಾಹಿಗಳು ಸಖತ್ ಆಗಿಯೇ ಮೂಡಿ ಬರುತ್ತಿದೆ.

More from Filmibeat

English summary
Abhishek from Vadhu and Pratima from Muddu Sose are trolled for wearing the same shirt
Read more about: actors filmibeat original troll
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X