ನಟಿ ಮೇಘನಾ ರಾಜ್ ಧರಿಸಿರುವ ಈ ಔಟ್ ಫಿಟ್, ಬ್ಯಾಗ್ ಬೆಲೆ ಎಷ್ಟಿರಬಹುದು ಗೆಸ್ ಮಾಡ್ತೀರಾ?

By ಎಸ್ ಸುಮಂತ್

ಮೇಘನಾ ರಾಜ್ ಈಗಂತೂ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿ ಹೋಗಿದ್ದಾರೆ. ಅದರಲ್ಲೂ ರಾಯನ್ ಜೊತೆಗಿನ ವಿಡಿಯೋಗಳೇ ಹೆಚ್ಚು ಕ್ಲಿಕ್ ಆಗುತ್ತವೆ. ರಾಯನ್‌ನ ತೊದಲು ನುಡಿ, ಹೊಸದನ್ನು ಕಂಡಾಗ ಓ ವಾವ್ ಎನ್ನುವ ಮಾತುಗಳು ವೀಕ್ಷಕರನ್ನು ಸೆಳೆಯುತ್ತವೆ. ಮೇಘನಾ ರಾಜ್ ಕೂಡ ಅಷ್ಟೇ ತನ್ನ ಪುಟ್ಟ ಪ್ರಪಂಚದಲ್ಲಿ ರಾಯನ್‌ಗೆ ದೊಡ್ಡ ಸಮಯ ಮೀಸಲಿಟ್ಟಿದ್ದಾರೆ.

ಅಮ್ಮನಾಗಿ ಮಗನಿಗೆ ಏನೆಲ್ಲಾ ಕೊಡಬೇಕೋ ಅದೆಲ್ಲವನ್ನು ಕೊಟ್ಟಿದ್ದಾರೆ. ಸಮಯ, ಆಟ, ಪಾಠ, ಊಟ ಎಲ್ಲವೂ. ಈಗ ಬೇಸಿಗೆ ರಜೆ ಇರುವ ಕಾರಣ ಮಗನ ಜೊತೆಗೆ ಮೈಸೂರು ಸುತ್ತಾಡಿಕೊಂಡು ಬಂದಿದ್ದಾರೆ. ಇದು ಮಗನ ಜೊತೆಗಾದರೆ ದುಬೈಗೂ ಮೇಘನಾ ರಾಜ್ ಭೇಟಿ ನೀಡಿದ್ದಾರೆ. ಆಗ ಅವರೊಂದು ಔಟ್ ಫಿಟ್ ಹಾಕಿದ್ದರು. ಅದು ಎಲ್ಲರ ಗಮನ ಸೆಳೆದಿದೆ. ಹಾಗಾದ್ರೆ ಯಾವುದು ಆ ಔಟ್ ಫಿಟ್? ಅದರ ಬೆಲೆ ಏನು ಅನ್ನೋದನ್ನು ನೋಡೋಣಾ ಬನ್ನಿ.

Actress Meghana Raj outfit and bag cost and details

ಎಸ್.. ದುಬೈನ ಮಾನವ ನಿರ್ಮಿತ ದ್ವೀಪಕ್ಕೆ ಭೇಟಿ ನೀಡಿರುವ ವಿಡಿಯೋವೊಂದನ್ನ ಮೇಘನಾ ರಾಜ್ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ನೀರಿನಲ್ಲಿರುವ ಮೀನುಗಳನ್ನು ತಮ್ಮ ವಿಡಿಯೋದಲ್ಲಿ ಕ್ಯಾಚ್ ಮಾಡುವ ಸಾಹಸ ಮಾಡಿದ್ದಾರೆ. ಸಣ್ಣ ಸಣ್ಣ ಮೀನುಗಳು ಆ ವಿಡಿಯೋದಲ್ಲಿ ಸೆರೆಯಾಗಿವೆ. ಮೊದಲೇ ಪ್ರತಿ ದಿನ, ಪ್ರತಿ ಕ್ಷಣ ರಾಯನ್ ಜೊತೆಗೆ ಆಡುತ್ತಾ, ಮೇಘನಾ ರಾಜ್ ಕೂಡ ಮಗುವಾಗಿ ಬಿಟ್ಟಿದ್ದಾರೆ ಎನಿಸುತ್ತದೆ. ಅದೇ ಕಾರಣಕ್ಕೆ ಮೇಘನಾ ರಾಜ್‌ಗೆ ಈ ರೀತಿ ಸಣ್ಣ ಸಣ್ಣ ವಿಚಾರಗಳು ವಾವ್ ಎನಿಸುವಂತೆ ಫೀಲ್ ಆಗುತ್ತಿತ್ತು. ಆ ಮೀನುಗಳನ್ನು ಕಂಡು ಎಂಜಾಯ್ ಮಾಡ್ತಾರೆ. ಮೇಘನಾ ರಾಜ್ ಮುಖದಲ್ಲಿ ಆ ಖುಷಿ ನೋಡಿ ಅಭಿಮಾನಿಗಳು ಆನಂದ ಪಟ್ಟಿದ್ದಾರೆ. ಈ ದ್ವೀಪಕ್ಕೆ ಮೇಘನಾ ರಾಜ್ ಭೇಟಿ ಕೊಟ್ಟಾಗ ಹಾಕಿದ್ದ ಔಟ್ ಫಿಟ್ ವಿಡಿಯೋ ಕೂಡ ಹಂಚಿಕೊಂಡಿದ್ದರು. ಅದರ ವ್ಯಾಲ್ಯೂ ಏನಿದೆ ಎಂಬುದನ್ನು ನೋಡೋಣ.

ವೈಟ್ ಕಲರ್ ಟಾಪ್. ಅದರ ಬಾರ್ಡರ್ ಪಿಂಕ್ ಕಲರ್ ಫ್ಲವರ್ ಡಿಸೈನ್ ಮಾಡಲಾಗಿತ್ತು. ಅದಕ್ಕೆ ವೈಟ್ ಕಲರ್ ಶೂ ಹಾಕಿದ್ದರು. ಆ ಶೂ ಮುಂಭಾಗ ಮಣಿಗಳಿಂದ ಡಿಸೈನ್ ಮಾಡಲಾಗಿದೆ. ಜೊತೆಗೆ ಕಣ್ಣಿಗೊಂದು ಕೂಲಿಂಗ್ ಗ್ಲಾಸ್, ಕೈಯಲ್ಲೊಂದು ಬ್ಯೂಟಿಫುಲ್ ಬ್ಯಾಗ್. ಒಮ್ಮೆ ಹೊರಗೆ ಹೋಗಬೇಕಾದರೆ ಈ ಔಟ್ ಫಿಟ್ ಎಲ್ಲರಿಗೂ ಬಹಳ ಮುಖ್ಯವಾಗಿರುತ್ತದೆ. ಮೇಘನಾ ರಾಜ್ ಕೂಡ ಮೇಕಪ್ ಅಂಡ್ ಔಟ್ ಫಿಟ್ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ.

Actress Meghana Raj outfit and bag cost and details

ಸದ್ಯಕ್ಕೆ ಈಗ ಹಾಕಿರುವ ಔಟ್ ಫಿಟ್ ಮಹಿಳಾ ಮಣಿಗಳನ್ನು ಸೆಳೆಯುತ್ತಿದೆ. ಈ ಬ್ಯಾಗ್ ಬೆಲೆ louisvuitton ಬ್ರ್ಯಾಂಡ್ ಎಂದು ಹೇಳಲಾಗುತ್ತಿದೆ. ಇದರ ಬೆಲೆ ₹1,29,000.00 ಎಂದು ಅಂತರಜಾಲದಲ್ಲಿ ಲಭ್ಯವಿದೆ. ಹಾಗೇ ಶೂ ಬೆಲೆ ಬಂದು ₹6,886.89 ಇದೆ. ಹಾಗೇ ಸನ್‌ಗ್ಲಾಸ್ ಬೆಲೆ ಬಂದು ₹999 ತೋರಿಸುತ್ತಿದೆ. ಒಂದು ಅಂದಾಜಿನ ಮೇಲೆ ಮೇಘನಾ ರಾಜ್ ಹಾಕಿರುವ ಔಟ್ ಫಿಟ್ ಬೆಲೆಯನ್ನ ತಿಳಿಯಲಾಗಿದೆ. ಇದೇ ನಿಖರ ಬೆಲೆ ಎಂಬುದನ್ನು ಸ್ಪಷ್ಟವಾಗಿ ಹೇಳುವುದಕ್ಕೆ ಆಗಲ್ಲ. ಡ್ರೆಸ್ ಯಾವ ಬ್ರ್ಯಾಂಡ್ ಅನ್ನೋದರ‌ ಮೇಲೂ ಬೆಲೆಯ ನಿರ್ಧಾರವಾಗುತ್ತದೆ. ಸದ್ಯ‌ ಮೇಘನಾ ರಾಜ್ ಔಟ್ ಫಿಟ್ ಬ್ಯೂಟಿಫುಲ್ ಆಗಿದ್ದು, ಯಾರಾದ್ರೂ ರೀಕ್ರಿಯೇಟ್ ಮಾಡುವುದಾದರೆ ಈ ಬೆಲೆಯಲ್ಲಿ ಅವೆಲ್ಲವೂ ಸಿಗಲಿದೆ. ಸದ್ಯ ನಟಿ ಮೇಘನಾ ರಾಜ್ ದುಬೈ ಟ್ರಿಪ್‌ನ ಎಂಜಾಯ್ ಮಾಡ್ತಾ ಇದ್ದಾರೆ.

More from Filmibeat

English summary
Actress Meghana Raj outfit and bag cost and details.
Read more about: meghana raj actress life style
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X