ಪರಿ‌ ಜೊತೆಗೆ ಶ್ರೀಲಂಕಾ ಸಂಚಾರ ; ಮಿಲನಾ ಹಾಕಿರೋ ಡ್ರೆಸ್, ಕೂಲಿಂಗ್ ಗ್ಲಾಸ್ ಬೆಲೆ ಎಷ್ಟು ಗೊತ್ತೇ?

By ಎಸ್ ಸುಮಂತ್

ಮಿಲನಾ ನಾಗರಾಜ್ ಈಗಂತು ಸಿಕ್ಕಾಪಟ್ಟೆ ಹ್ಯಾಪಿಯಾಗಿದ್ದಾರೆ. ಯಾಕಂದ್ರೆ ಆ ಖುಷಿಯ ಪ್ರಪಂಚದಲ್ಲಿ ಪರಿ ಇದ್ದಾಳೆ‌. ಎಲ್ಲಿಯೇ ಹೋದರೂ ಎಲ್ಲಿಯೇ ಬಂದರೂ ಪರಿಯನ್ನ ಮಾತ್ರ ಬಿಟ್ಟು ಹೋಗುವುದೇ ಇಲ್ಲ. ಪರಿ ಜೊತೆಗೆ ಇರ್ತಾಳೆ. ಪರಿ ಕೂಡ ಎಲ್ಲರ ಜೊತೆಗೆ ಸಿಕ್ಕಾಪಟ್ಟೆ ಅಡ್ಜೆಸ್ಟ್ ಆಗ್ತಾಳೆ. ಅದರಲ್ಲೂ ಪರಿ ಇದ್ದರೆ ಅಲ್ಲಿ ನಗು ತುಂಬಿ ತುಳುಕುತ್ತಾ ಇರುತ್ತದೆ. ಪರಿ ಜೊತೆಗಿನ ವಿಡಿಯೋ ಜಾಸ್ತಿ ವೈರಲ್ ಆಗ್ತಾ ಇರುತ್ತೆ. ಪರಿ ಜೊತೆಗಿನ ವಿಡಿಯೋ ಜೊತೆಗೆ ಮಿಲನಾ ಹಾಕಿದ್ದ ಡ್ರೆಸ್ ಒಂದು ಗಮನ ಸೆಳೆಯುತ್ತಿದೆ.

ಪರಿಗೆ ನಾವೆಲ್ಲಿದ್ದೀವಿ, ಈ ಸ್ಥಳದ ವಿಶೇಷತೆ ಏನು ಎಂಬುದೆಲ್ಲವನ್ನು ಅರ್ಥ ಮಾಡಿಕೊಳ್ಳುವಷ್ಟು ವಯಸ್ಸಲ್ಲ. ಅದೆಲ್ಲಿಯೇ ಇರಲಿ ಅಪ್ಪ ಅಮ್ಮ ಕಣ್ಣ ಮುಂದೆ ಇರಬೇಕು ಅಷ್ಟೇ. ಆದರೆ, ಪರಿ ಜೊತೆಗೆ ಟ್ರಿಪ್ ಹೊಡೆಯೋದು ಮಿಲನಾ ಹಾಗೂ ಕೃಷ್ಣನಿಗೆ ಬಹಳ ಇಷ್ಟ. ಹೀಗಾಗಿಯೇ ಇದೀಗ ಪರಿಯನ್ನ ಕರೆದುಕೊಂಡು ಶ್ರೀಲಂಕಾದಲ್ಲಿ ಸುತ್ತಾಟ‌ ನಡೆಸಿದ್ದಾರೆ. ಶ್ರೀಲಂಕಾದಲ್ಲೆಲ್ಲಾ ಸುತ್ತಾಡಿ ಎಂಜಾಯ್ ಮಾಡಿದ್ದಾರೆ. ಪರಿ‌ ಮಾತ್ರವಲ್ಲ ಪರಿವಾರದೊಂದಿಗೇನೆ ಶ್ರೀಲಂಕಾದ ಪ್ರವಾಸ ಮಾಡಿದ್ದಾರೆ.

Actress Milana Nagaraj Sri Lanka trip dress and goggles price

ಮಿಲನಾ ಹಾಗೂ ಕೃಷ್ಣ, ಪರಿ ಜೊತೆಗೆ ಅಮೃತಾ ಅಯ್ಯಂಗಾರ್ ಹಾಗೂ ಇನ್ನು ಹಲವು ಸ್ನೇಹಿತರು ಶ್ರೀಲಂಕಾಗೆ ತೆರಳಿದ್ದಾರೆ. ಅಲ್ಲಿ‌ನ ಸಮುದ್ರ ತೀರದಲ್ಲಿ ನಿಂತು ಎಲ್ಲರೂ ಫೋಟೋಗೆ ಪೋಸ್ ನೀಡಿದ್ದಾರೆ. ಮಿಲನಾ ನಾಗರಾಜ್ ಸಿಂಗಲ್ ಆಗಿ ಕೂಡ ಒಂದು ಫೋಟೋ ಹಂಚಿಕೊಂಡಿದ್ದು ಅದರಲ್ಲಿ ಹಾಕಿರುವ ಟಾಪ್, ಗಾಗಲ್ ಗಮನ ಸೆಳೆದಿದೆ. ಆ ಟಾಪ್‌ ಅನ್ನು ಮಿಲನಾ ತೆಗೆದುಕೊಂಡಿರುವುದು ಎಲ್ಲಿ? ಅದರ ಬೆಲೆ ಏನು? ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ.

ಮಿಲನಾ ನಾಗರಾಜ್ ಮಗುವಾದ ಮೇಲೆ ಸಾಮಾನ್ಯವಾಗಿ ಈ ರೀತಿಯಾದಂತ ಡ್ರೆಸ್ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಅಂದರೆ, ಟಾಪ್ ಅಂಡ್ ಪ್ಯಾಂಟ್ ರೀತಿಯ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಈ ಬೇಸಿಗೆ ಕಾಲಕ್ಕೆ ಆ ರೀತಿಯ ಬಟ್ಟೆ ಒಂಥರ ಕಂಫರ್ಟಬಲ್ ಅಂತಾನೇ ಹೇಳಬಹುದು. ಹಾಗೇ ಮಿಲನಾ ಹಾಕಿರುವಂತ ಡ್ರೆಸ್ ಔಟ್ ಡೋರ್‌ಗೂ ಮ್ಯಾಚ್ ಆಗುತ್ತೆ. ಅಂದರೆ, ಆಫೀಸ್‌ಗೆ ಬಳಸಬೇಕೆಂದರೆ ನೋಡಿಕೊಂಡು ತೆಗೆದುಕೊಳ್ಳಬೇಕಾಗಬಹುದು. ಆದರೆ ಹೊರಗೆ ಸುತ್ತಾಡಲು ಹೋಗುವುದಕ್ಕೆ, ಶಾಪಿಂಗ್ ಹೋದಾಗ, ಸಿನಿಮಾಗೆ ಹೋದಾಗ ಈ ಡ್ರೆಸ್‌ಗಳು ಆರಾಮ್ ಎನಿಸುತ್ತವೆ. ಮಿಲನಾ ಹಾಕಿರುವ ಟಾಪ್ ಅಂಡ್ ಪ್ಯಾಂಟ್ ಡ್ರೆಸ್ ಈಗಿನ ಟ್ರೆಂಡ್ ಕೂಡ.

ಮಿಲನಾ ಈ ಡ್ರೆಸ್‌ಗಳನ್ನ ಬಿಸುಇಂಡಿಯಾ ಎಂಬ ಆಪ್ ಮೂಲಕ ಖರೀದಿಸಿದ್ದಾರೆ. ಸಾಕಷ್ಟು ಡ್ರೆಸ್‌ಗಳನ್ನ ಮಿಲನಾ ಆ ಆಪ್ ಮೂಲಕವೇ ತರಿಸಿದ್ದಾರೆ. ಅವರೇ ಟ್ಯಾಗ್ ಮಾಡಿರುವುದರ ಹಿಂದೆ ಹೋಗಿ ನೋಡಿದಾಗ ಈ ಡ್ರೆಸ್‌ನ ಬೆಲೆ ಬಂದು 3,490‌ ರೂಪಾಯಿ ತೋರಿಸುತ್ತಿದೆ. ಹಾಗೆ ಅವರು ಹಾಕಿರುವ ಗಾಗಲ್ ಇನ್ನು ಅದ್ಭುತವಾಗಿದ್ದು, rayban ಬ್ರ್ಯಾಂಡ್ ಎನ್ನಲಾಗಿದೆ. ಇದರ ಬೆಲೆ ಬಂದು 8,090 ರೂಪಾಯಿ ತೋರಿಸ್ತಾ ಇದೆ.

Actress Milana Nagaraj Sri Lanka trip dress and goggles price

ಬೇಸಿಗೆ ಕಾಲಕ್ಕೆ ಒಳ್ಳೆಯ ಬಟ್ಟೆಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಮಿಲನಾ. ಇನ್ನು ಪರಿ ಜೊತೆಗೆ ಹೊಸ ವಿಡಿಯೋವೊಂದನ್ನು ಕೂಡ ಹಂಚಿಕೊಂಡಿದ್ದಾರೆ. ಪರಿಯ ಜೊತೆಗೆ ಫೋಟೋಶೂಟ್ ಮಾಡಿದಂತ ವಿಡಿಯೋ ಅದಾಗಿದೆ. ಮತ್ತೆ ಮತ್ತೆ ನೋಡಬೇಕೆನ್ನುವಷ್ಟು ವಿಡಿಯೋ ಬ್ಯೂಟಿಫುಲ್ ಆಗಿದೆ. ಪರಿಯ ವೆರೈಟಿ ಲುಕ್ ಅನ್ನ ಆ ಫೋಟೋಗಳಲ್ಲಿ ಕ್ಯಾಪ್ಚರ್ ಮಾಡಲಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X