70 ವರ್ಷದ ಹಳೆಯ ಸೀರೆಯಲ್ಲಿ ಮಿಂಚಿದ ಪೂಜಾ ಹೆಗ್ಡೆ; ಈ ಸೀರೆಯ ವಿಶೇಷತೆ ಏನು?

By ಎಸ್ ಸುಮಂತ್

ಪೂಜಾ ಹೆಗ್ಡೆ ಬಹುಭಾಷಾ ನಟಿ. ಕರಾವಳಿ ಮೂಲದ ಈ ಸುಂದರಿ ಆಗಾಗ ತಮ್ಮ ಗ್ಲಾಮರ್ ಮೂಲಕವೇ ಸದ್ದು ಮಾಡಿದವರು. ಬಹುಭಾಷಾ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಪೂಜಾ ಹೆಗ್ಡೆ, ಇದೀಗ ತಮ್ಮ ಅಜ್ಜಿಯ ಸೀರೆಯನ್ನುಟ್ಟು ಪೋಸ್ ಕೊಟ್ಟಿದ್ದಾರೆ. ಅದರೊಟ್ಟಿಗಿನ ನಂಟಿನ ಗುಟ್ಟನ್ನು ತಿಳಿಸಿದ್ದಾರೆ.

ನಟಿ ಪೂಜಾ ಹೆಗ್ಡೆ ತನ್ನ ಅಜ್ಜಿಯ ಸೀರೆಯನ್ನುಟ್ಟು ಮಿಂಚಿದ್ದಾರೆ. ಅದರಲ್ಲೂ ಅವರು ಉಟ್ಟಿರುವ ಸೀರೆ 70 ವರ್ಷದ ಹಿಂದಿನದ್ದು. ಅಬ್ಬಬ್ಬ ಯಾರಿಗೆ ಆಗಲಿ ಆಶ್ಚರ್ಯವಾಗದೆ ಇರುತ್ತದೆಯೇ. ಈಗಲೂ ಆ ಸೀರೆಯ ಬಣ್ಣ ಕೊಂಚವೂ ಬಿಟ್ಟಿಲ್ಲ, ಎಲ್ಲಿಯೂ ಮಾಸಿಲ್ಲ. ಅಷ್ಟು ಅದ್ಭುತವಾದ, ಹೊಸ ರೀತಿಯ ಸೀರೆಯಂತೆಯೇ ಕಾಣಿಸುತ್ತಿದೆ.

Actress Pooja Hegde new photoshoot with 70 year old grandmother green saree

ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ತಾಯಂದಿರ ಸೀರೆ, ಅಜ್ಜಿಯಂದಿರ ಸೀರೆ ಎಂದರೆ ಬಲು ಪ್ರೀತಿ. ಅದೆಷ್ಟೇ ಶ್ರೀಮಂತರಾದರೂ, ಫೇಮಸ್ ನಟಿಯರಾದರೂ ತಾವೂ ಫಸ್ಟ್ ಟೈಮ್ ಉಡುವಂತದ್ದು ಅಮ್ಮಂದಿರ ಅಥವಾ ಅಜ್ಜಿಯಂದಿರ ಹಳೆಯ ಸೀರೆಯನ್ನೇ. ಅದರಲ್ಲೂ ಅಮ್ಮಂದಿರ ರಿಸೆಪ್ಶನ್ ಸೀರೆ ಏನಾದರೂ ಸಿಕ್ಕಿದರೆ ಆ ಖುಷಿಗೆ ಪಾರವೇ ಇರುವುದಿಲ್ಲ. ಈಗ ನಟಿ ಪೂಜಾ ಹೆಗ್ಡೆ ಕೂಡ ಸಂತಸದಲ್ಲಿ ತೇಲುತ್ತಾ ಇದ್ದಾರೆ. ತನ್ನ ಅಜ್ಜಿಯ ಸೀರೆಯನ್ನ ಉಟ್ಟಿರುವೇ ಆ ಖುಷಿಗೆ ಕಾರಣ. ಆ ಸೀರೆಯೂ ಅತ್ಯದ್ಭುತವಾಗಿದೆ. ಸೀರೆಯುಟ್ಟು, ಪೋಸ್ ಕೊಟ್ಟಿದ್ದು, ಫೋಟೋಗಳನ್ನ ಹಂಚಿಕೊಂಡಿರುವ ಪೂಜಾ ಹೆಗ್ಡೆ ಅದರೊಟ್ಟಿಗೆ ಇಂದಷ್ಟು ಭಾವನಾತ್ಮಕ ಪದಗಳನ್ನು ಕಟ್ಟಿದ್ದಾರೆ.

"ವಿಂಟೇಜ್ ಕ್ಲೋಸೆಟ್‌ನಿಂದ, 70 ವರ್ಷ ಹಳೆಯ ಬೆರಗುಗೊಳಿಸುವ ಸೀರೆ. ನನ್ನ ಸುಂದರ ಅಜ್ಜಿಯ ಫೋಟೋಗಳು, ಮದುವೆಗೆ ಹೋಗಲು ತಯಾರಾಗುವ ಮೊದಲು ಮನೆಯಲ್ಲಿ ಮಲ್ಲಿಗೆಯ ತಾಜಾ ವಾಸನೆ. ಮೊದಲ ಮಳೆಯ ಬಳಿಕ ಒದ್ದೆಯಾದ ಮಂಗಳೂರಿನ ಮಣ್ಣಿನ ಸುವಾಸನೆ. ಸರಳವಾದ ವಸ್ತುಗಳಲ್ಲಿಯೇ ಸೌಂದರ್ಯವಿದೆ' ಎಂದು ಬರೆದು ಹಾರ್ಟ್ ಸಿಂಬಲ್‌ಗಳನ್ನ ಹಾಕಿದ್ದಾರೆ. ಅಷ್ಟೇ ಅಲ್ಲ ಟ್ರೆಡಿಷನಲ್ ಮ್ಯೂಸಿಕ್ ಹಾಕಿದ್ದು, ಒಮ್ಮೆ ಆ ಪೋಸ್ಟ್ ನೋಡಿದರೆ ಮನಸ್ಸು ಕೂಡ ಕಳೆದೋಗಬೇಕು ಅಷ್ಟು ಅದ್ಭುತವಾದ ಪೋಸ್ಟ್ ಕ್ರಿಯೇಟ್ ಮಾಡಿದ್ದಾರೆ.

Actress Pooja Hegde new photoshoot with 70 year old grandmother green saree

ಪೂಜಾ ಹೆಗ್ಡೆ ಅವರ ಪ್ರೀತಿಯ ಅಜ್ಜಿಯ ಬಳಿ ಒಳ್ಳೊಳ್ಳೆ ಕಲೆಕ್ಷನ್ ಸೀರೆಗಳೇ ಇದಾವೆ ಅನ್ಸುತ್ತೆ. ಈಗ ಪೂಜಾ ಹೆಗ್ಡೆ ಹಾಕಿರುವಂತ ಸೀರೆ ಕೂಡ ಬಹಳ ಅಪರೂಪದ ಕಲರ್ ಅನ್ನ ಹೊಂದಿರುವಂತದ್ದಾಗಿದೆ. ಪಾಚಿ ಹಸಿರು ಬಣ್ಣದ ಸೀರೆ ಅದಾಗಿದ್ದು, ಅದರಲ್ಲಿ ಸಣ್ಣ ಎಳೆಯ ಬಾಕ್ಸ್ ಡಿಸೈನ್ ಮಾಡಲಾಗಿದೆ. ಈ ಸೀರೆ ಹಾಕಿದಾಕ ಲುಕ್ ಸೂಪರ್ ಅನ್ನಿಸೋದ್ರಲ್ಲಿ ಅನುಮಾನವೇ ಇಲ್ಲ‌. ಪೂಜಾ ಹೆಗ್ಡೆ ಕೂಡ ಆ ಸೀರೆಗೆ ಹೇಗೆ ಬೇಕೋ ಅಷ್ಟೇ ಸಾಂಪ್ರಾದಾಯಿಕವಾಗಿ ರೆಡಿಯಾಗಿದ್ದಾರೆ. ಕೈಗೆ ಹಸಿರು ಪ್ಲೈನ್ ಬಳೆಗಳನ್ನ ಹಾಕಿದ್ದಾರೆ. ಹಿಂದಿನ ಕಾಲದಲ್ಲಿ ಈ ರೀತಿಯ ಬಳೆಯನ್ನ ಹೆಣ್ಣು ಮಕ್ಕಳು ಹೆಚ್ಚಾಗಿ ಹಾಕ್ತಾ ಇದ್ರು. ಆದರೆ ಈಗಿನ ಕಾಲಕ್ಕೆ ಆ ಬಳೆಗಳನ್ನ ಓಲ್ಡ್ ಫ್ಯಾಷನ್ ಅಂತಾನು ಅಂತಾರೆ.

ಆದರೆ ಈಗೆಲ್ಲಾ ಓಲ್ಡ್ ಈಸ್ ಗೋಲ್ಡ್ ಅಲ್ವಾ. ಅದೇ ಕಾಲ ರಿಪೀಟ್ ಆಗ್ತಾ ಇದೆ‌. ಅದರ ಜೊತೆಗೆ ಕತ್ತಿಗೆ ಒಂದು ಆಕರ್ಷಣೀಯವಾದಂತ, ಹಿಂದಿನ ಕಾಲದಲ್ಲಿ ಫೇಮಸ್ ಆಗಿದ್ದಂತಹ ಕಾಸಿನ ಸರದ ಡಿಸೈನ್‌ನಲ್ಲಿ ಮಾಡಿರುವ ನೆಕ್ಲೇಸ್ ಹಾಕಿದ್ದಾರೆ. ಪಾಚಿ‌ ಕಲರ್ ಸೀರೆ, ಗೋಲ್ಡನ್ ಕಲರ್ ನೆಕ್ಲೇಸ್, ಹಸಿರು ಗಾಜಿನ ಬಳೆಗಳು, ಮುಡಿ ತುಂಬಾ ಮಲ್ಲಿಗೆ ಹೂ, ಹಣೆ ತುಂಬಾ ಕುಂಕುಮ ಇಟ್ಟರೆ ಆ ಹೆಣ್ಣಿನ ಅಂದಕ್ಕೆ ಸರಿ ಸಾಟಿಯಲ್ಲಿ ಹೇಳಿ. ಈಗ ಪೂಜಾ ಹೆಗ್ಡೆ ಸೌಂದರ್ಯ ಕೂಡ ಅಷ್ಟೇ ಹೆಚ್ಚಾದಂತೆ ಕಾಣಿಸ್ತಾ ಇದೆ.

More from Filmibeat

English summary
Actress Pooja Hegde new photoshoot with 70 year old grandmother green saree.
Read more about: life style pooja hegde fashion
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X