ಕೇಸರಿ ಲೆಹಂಗಾದಲ್ಲಿ ಮಿಂಚಿದ್ದ ರಾಧಿಕಾ ಪಂಡಿತ್ ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!
ರಾಧಿಕಾ ಪಂಡಿತ್ ಎಲ್ಲರಿಗೂ ಒಂದು ರೀತಿಯ ಸ್ಪೂರ್ತಿಯೇ ಸರಿ. ಸುಖವಾದ ದಾಂಪತ್ಯ ಜೀವನಕ್ಕೆ ಇವರ ಸೂತ್ರಗಳೆ ಸ್ಪೂರ್ತಿ. ಎರಡು ಮಕ್ಕಳ ತಾಯಿಯಾಗಿ ಕಂಪ್ಲೀಟ್ ತಾಯಿಯ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಟಾಪ್ ಹೀರೋಯಿನ್ ಆಗಿದ್ದವರು, ಮದುವೆಯಾದ ಮೇಲೆ ಪರಿಪೂರ್ಣ ಗೃಹಿಣಿಯಾದರು. ರಾಧಿಕಾ ಪಂಡಿತ್‌ಗೆ ದೊಡ್ಡ ಅಭಿಮಾನಿ ಬಳಗವಿದೆ. ನಮ್ಮ ನಟಿ ಆದಷ್ಟು ಬೇಗ ಕಮ್ ಬ್ಯಾಕ್ ಆಗಬೇಕು ಅಂತಾನೇ ಬಯಸುತ್ತಾರೆ. ಅದಕ್ಕೆ ನಟಿ ರಾಧಿಕಾ ಇನ್ನು ಯಾವುದೇ ಸೂಚನೆಯನ್ನ ನೀಡಿಲ್ಲ. ಬದಲಿಗೆ ಜಾಹೀರಾತುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಒಂದು ಜ್ಯುವೆಲ್ಲರಿ ಶಾಪ್‌ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅದು ದೊಡ್ಡ ಕಾರ್ಯಕ್ರಮ. ಹಲವರಿಗೆ ರಾಧಿಕಾ ಪಂಡಿತ್ ಕಡೆಯಿಂದಾನೆ ಜ್ಯುವೆಲ್ಲರಿ ಗಿಫ್ಟ್ ಕೂಡ ಕೊಡಿಸಿದ್ದರು. ಈ ಕಾರ್ಯಕ್ರಮಕ್ಕೆ ರಾಧಿಕಾ ಪಂಡಿತ್ ರೆಡ್ ಕಲರ್ ಡ್ರೆಸ್‌ನಲ್ಲಿ ಮುದ್ದಾಗಿ ಮೇಕಪ್ ಮಾಡಿಕೊಂಡು ಬಂದಿದ್ದರು. ಈ ಲುಕ್ ಎಲ್ಲರ ಗಮನ ಸೆಳೆದಿತ್ತು. ರಾಧಿಕಾ ಪಂಡಿತ್ ಡ್ರೆಸ್ ತಕ್ಕ ಹಾಗೇ ಮೇಕಪ್ ಕೂಡ ಮಾಡಿದ್ದರು. ಆ ಡ್ರೆಸ್ ವಿಶೇಷತೆಯನ್ನ ಹೇಳ್ತೀವಿ ನೋಡಿ.

ಆ ಇವೆಂಟ್‌ನಲ್ಲಿ ರಾಧಿಕಾ ಪಂಡಿತ್ ಆರೇಂಜ್ ಲೆಹೆಂಗಾ ಧರಿಸಿದ್ದರು. ಈ ರೀತಿಯಾದ ಲೆಹೆಂಗಾವನ್ನು ಆಲ್ಮೋಸ್ಟ್ ಮದುವೆಯಂತಹ ಶುಭ ಸಮಾರಂಭಗಳಲ್ಲಿ ಹಾಕುತ್ತಾರೆ. ರಾಧಿಕಾ ಪಂಡಿತ್ ಜ್ಯುವೆಲ್ಲರಿ ಶಾಪ್ ಕಾರ್ಯಕ್ರಮಕ್ಕೆ ಹಾಕಿಕೊಂಡು ಬಂದಿದ್ದರು. ಇದು ಕೇಸರಿ ಹಾಗೂ ಗೋಲ್ಡನ್ ಕಲರ್ ಮಿಶ್ರಿತ ಡ್ರೆಸ್ ಆಗಿದೆ. ಅದಕ್ಕೆ ಮ್ಯಾಚ್ ಅಗುವ ಜ್ಯುವೆಲ್ಲರಿಯನ್ನು ಹಾಕಿದ್ದಾರೆ. ಲಂಗ, ಬ್ಲೌಸ್, ದುಪ್ಪಟ್ಟ ಮೂರೂ ಕೂಡ ಸೇಮ್ ಕಲರ್ ಹೊಂದಿದೆ. ಆದರೆ ಬ್ಲೌಸ್ ಸ್ಟಿಚ್ ಮಾಡುವಾಗ ಪ್ಲೈನ್ ಕ್ಲಾತ್ ಕೂಡ ಬಳಕೆ ಮಾಡಲಾಗಿದೆ. ಬ್ಲೌಸ್ ಮಧ್ಯ ಭಾಗಕ್ಕೆ ಪ್ಲೈನ್ ಬಟ್ಟೆ ಹಾಕಿದ್ದು, ತೋಳುಗಳಿಗೆ ಫ್ಲವರ್ ಮಿಶ್ರಿತ ಡಿಸೈನ್ ಮಾಡಲಾಗಿದೆ. ಇನ್ನು ದುಪ್ಪಟ್ಟವನ್ನ ಒಂದು ಭಾಗಕ್ಕೆ ಬರುವಂತೆ ಹಾಕಿದ್ದಾರೆ. ಟ್ರೆಡಿಷನಲ್ ಅಂಡ್ ಮಾಡರ್ನ್ ಎರಡು ಲುಕ್‌ನಲ್ಲೂ ತುಂಬಾ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಇದರ ಬೆಲೆ ಬರೋಬ್ಬರಿ 50 ಸಾವಿರ ರೂಪಾಯಿ ಎನ್ನಲಾಗಿದೆ.
ಡ್ರೆಸ್‌ಗಳನ್ನ ತೆಗೆದುಕೊಳ್ಳಲು ಹಲವಾರು ಬ್ರ್ಯಾಂಡ್ ಗಳು ಇದಾವೆ. ಇದೇ ರೀತಿಯಾದ ಲೆಹೆಂಗಾ masabagupta ದಲ್ಲೂ ಸಿಗುತ್ತಿದೆ. ಅದರಲ್ಲಿ ಈ ಆರೇಂಜ್ ಲೆಹೆಂಗಾ ಬೆಲೆ 50 ಸಾವಿರ ರೂಪಾಯಿ ತೋರಿಸುತ್ತಿದೆ. ರಾಧಿಕಾ ಪಂಡಿತ್ ಹಾಕುವ ಡ್ರೆಸ್‌ಗಳೆಲ್ಲಾ ಬ್ರ್ಯಾಂಡ್ ಡ್ರೆಸ್‌ಗಳೇ ಆಗಿರುತ್ತವೆ. ಈ ಡ್ರೆಸ್ ಕೂಡ ಅಷ್ಟೇ ದುಬಾರಿ ಇರಬಹುದು ಬಿಡಿ. ಆದರೆ ರಾಧಿಕಾ ಪಂಡಿತ್ ಹಾಕಿರುವ ಡ್ರೆಸ್ ಎಲ್ಲಿಯದು ಎಂಬ ಮಾಹಿತಿ ಇಲ್ಲ. ಅದೇ ರೀತಿಯಾದ ಡ್ರೆಸ್ ಬೇಕು ಎಂದವರಿಗೆ ಆನ್‌ಲೈನ್‌ನಲ್ಲಿ ಸಿಗಲಿದೆ.
ಹಾಗೇ ರಾಧಿಕಾ ಪಂಡಿತ್ ಈ ಡ್ರೆಸ್‌ಗೆ ಒಳ್ಳೆ ಹೇರ್ ಸ್ಟೈಲ್ ಕೂಡ ಮಾಡಿದ್ದಾರೆ. ಬನ್ ಟೈಪ್ ಹಾಕಿ, ಜಡೆ ಕಟ್ಟಿದ್ದಾರೆ. ಇದಕ್ಕೆ ಮ್ಯಾಚ್ ಆಗುವಂತ ಜ್ಯುವೆಲ್ಲರಿ ಕೂಡ ಹಾಕಿದ್ದಾರೆ. ಗ್ರೀನ್ ಅಂಡ್ ಗೋಲ್ಡನ್ ಕಲರ್ ಮಿಶ್ರಿತ ಜ್ಯುವೆಲ್ಲರಿ ಸೆಟ್ ಹಾಕಿದ್ದಾರೆ. ಕಿವಿಗೆ ದೊಡ್ಡ ದೊಡ್ಡ ಜುಮುಕಿ ಹಾಗೇ ಕತ್ತಿಗೆ ದೊಡ್ಡ ನೆಕ್ಲೆಸ್ ಹಾಕಿದ್ದಾರೆ. ಡ್ರೆಸ್ ಕೂಡ ಗ್ರ್ಯಾಂಡ್ ಆಗಿದ್ದು, ಜ್ಯುವೆಲ್ಲರಿ ಕೂಡ ಅಷ್ಟೇ ಗ್ರ್ಯಾಂಡ್ ಆಗಿ ಹಾಕಿದ್ದಾರೆ. ಕೈಗೆ ಸಿಂಪಲ್ಲಾಗಿ ಒಂದು ಸಿಂಗಲ್ ಸಿಂಗಲ್ ಬಳೆಯನ್ನ ಹಾಕಿದ್ದಾರೆ. ಒಟ್ಟಾರೆ ಮೊನ್ನೆಯ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರ ಆರೇಂಜ್ ಲೆಹೆಂಗಾ ಅವರ ಅಭಿಮಾನಿಗಳ ಗಮನವನ್ನು ಸೆಳೆದಿದೆ.


Click it and Unblock the Notifications











