ಬೆಳಗ್ಗೆ ಸೆಟ್‌ಗೆ ಬಂದ್ರೆ ಶೂಟಿಂಗ್ ಮುಗಿಯೋ ತನಕ ತಮನ್ನಾ ಹೇಗೆಲ್ಲಾ ಆಡ್ತಾರೆ ಗೊತ್ತಾ?
ತಮನ್ನಾ ಬಾಟಿಯಾ ಸಿನಿಮಾದ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಬ್ಯುಸಿ ಇದ್ದಾರೆ. ತಮ್ಮ ಸಿನಿಮಾ ಪೋಸ್ಟರ್, ಶೂಟಿಂಗ್ ಸೆಟ್‌ನಲ್ಲಿ ಇರುವ ಫೋಟೋಗಳು, ವಿಡಿಯೋಗಳು, ವರ್ಕೌಟ್ ಮಾಡುವ ವಿಡಿಯೋಗಳನ್ನೆಲ್ಲಾ ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ತಮ್ಮ ರೋಟಿನ್ ಲೈಫ್ ಬಗ್ಗೆ ವಿಡಿಯೋವೊಂದನ್ನ ಮಾಡಿ ಹಂಚಿಕೊಂಡಿದ್ದಾರೆ. ಶೂಟಿಂಗ್ ಅಂತ ಹೋದಾಗ ಬೆಳಗ್ಗೆ ಹೋಗಿ ರಾತ್ರಿ ಎಷ್ಟು ಹೊತ್ತಿಗೆ ಮುಗಿಯಲಿದೆ..? ಎನ್ನುವ ವಿಚಾರಗಳನ್ನು ಆ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ತಮನ್ನಾ ಬಾಟಿಯಾ 'ರೈಡ್ 2' ಸಿನಿಮಾದಲ್ಲಿ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಿದ್ದಾರೆ. ಒಂದೇ ಒಂದು ಹಾಡಿಗೆ ಎಷ್ಟೆಲ್ಲಾ ಶ್ರಮ ಹಾಕಿದ್ದಾರೆ ಅನ್ನೋದು ಆ ವಿಡಿಯೋದಲ್ಲಿ ಕಾಣಿಸಿದೆ. ಒಂದೇ ದಿನಕ್ಕೆ ಆ ಹಾಡನ್ನ ಮುಗಿಸಿಕೊಟ್ಟಿರುವ ತಮನ್ನಾ, ಎಷ್ಟು ಗಂಟೆಗೆ ಬಂದ್ರು, ಎಷ್ಟು ಗಂಟೆ ತನಕ ಇದ್ರು ಅನ್ನೋದನ್ನು ಅದರಲ್ಲಿ ಮಾಹಿತಿ ನೀಡಿದ್ದರು. 'ರೈಡ್ 2' ಸಿನಿಮಾದಲ್ಲಿ ನಶಾ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದು, ಒಂದೇ ದಿನದಲ್ಲಿ ಶೂಟ್ ಆಗಿರುವ ಸಾಂಗ್ ಅದಾಗಿದೆ.

ನಶಾ ಹಾಡಿಗಾಗಿ ಸಿನಿಮಾ ಸೆಟ್‌ಗೆ ಬಂದ ತಮನ್ನಾ ಬಾಟಿಯಾ, ಮೇಕಪ್ ಇಲ್ಲದೆಯೇ ಬಂದಿದ್ದರು. ಬೆಳಗ್ಗೆ 9.23ಕ್ಕೆ ಸರಿಯಾಗಿ ಕ್ಯಾರಾವಾನ್ ಬಳಿ ಬಂದು, ಕ್ಯಾಮರಾ ಮೆನ್‌ಗೆ ಒಂದು ಸ್ಮೈಲ್ ಮಾಡಿ, ಅಲ್ಲಿಂದ ಕ್ಯಾರಾವಾನ್ ಏರಿದರು. ಒಂದು ಗಂಟೆ ಸಮಯ ತೆಗೆದುಕೊಂಡು ರೆಡಿಯಾದರು. ಗೋಲ್ಡನ್ ಕಲರ್ ಲೆಹೆಂಗಾ ಧರಿಸಿ, ಸಿಂಪಲ್ ಮೇಕಪ್ ಮಾಡಿಕೊಂಡು, ರಿಂಕಲ್ ರಿಂಕಲ್ ಹೇರ್ ಸ್ಟೈಲ್ ಮಾಡಿಕೊಂಡು ಕಡೆಗೂ ಸೆಟ್‌ಗೆ ವಿಸಿಟ್ ಹಾಕಿದ್ದಾರೆ. ಅಷ್ಟೊತ್ತಿಗಾಗಲೇ 10.24 ಆಗಿತ್ತು. ಅಂದ್ರೆ ಬರೋಬ್ಬರಿ ಒಂದು ಗಂಟೆ ಸಮಯ ತೆಗೆದುಕೊಂಡರು.
ಅಲ್ಲಿಂದ ಹಾಡಿನ ಶೂಟಿಂಗ್ ಶುರು. ಆದರೆ ಗಂಟೆಗಳ ಲೆಕ್ಕವೇ ಇಲ್ಲ. ಆದರೂ ಅಂದುಕೊಂಡಂತೆ ಸ್ಟೆಪ್ ಬರ್ತಾ ಇಲ್ಲ. ಅಲ್ಲಿ ನೋಡಿದ್ರೆ ಸಮಯ ಓಡ್ತಾ ಇದೆ. ಆಗಾಗೊಮ್ಮೆ ನೀರು ಕುಡಿದು ಸ್ಟೆಪ್ ಹಾಕೋದಕ್ಕೆ ಶುರು ಮಾಡಿದರು. 12.35 ಆಗಿತ್ತು. ಡ್ಯಾನ್ಸ್ ಕೂಡ ಚೆನ್ನಾಗಿ ಬರ್ತಾ ಇತ್ತು. ಆದರೆ ಕಾಲ್ಗೆಜ್ಜೆ ಹಾಕಿದ್ದರಲ್ಲಿ ಯಡವಟ್ಟಾಗಿತ್ತು. ಡ್ರೆಸ್ ತುದಿ ಕಾಲ್‌ಗೆಜ್ಜೆಗೆ ಸಿಕ್ಕಿ ಹಾಕಿಕೊಂಡಿತ್ತು. ಆ ಸಮಸ್ಯೆಯನ್ನು ತಮನ್ನಾ ತಮ್ಮ ವಿಡಿಯೋದಲ್ಲಿ ತೋರಿಸಿದ್ದಾರೆ. ಅದನ್ನ ಸರಿ ಮಾಡಿಕೊಳ್ಳುವಷ್ಟರಲ್ಲಿ, ಒಂದೆರಡು ಹೆಜ್ಜೆ ಹಾಕುವಷ್ಟರಲ್ಲಿ 1.08 ನಿಮಿಷ ಆಗಿತ್ತು. ನಾಯಿ ಅಡ್ಡ ಬಂತು. ಸೀದಾ ಸಾದಾ ಹೆದರದೆ ಸಾಗಿದ ನಾಯಿ ಕಂಡು ತಮನ್ನಾ ಕೂಡ ಖುಷಿ ಪಟ್ರು.
ಒಂದೇ ಡ್ಯಾನ್ಸ್ ಆದರೂ ಅದಕ್ಕೆ ಸಾಕಷ್ಟು ಶ್ರಮ ಹಾಕಲೇಬೇಕಾಗುತ್ತದೆ. ಈ ರೀತಿಯ ಡ್ಯಾನ್ಸ್ ಮಾಡುವಾಗಲೂ ವಿಶ್ರಾಂತಿಯ ಅಗತ್ಯವೂ ಇರುತ್ತದೆ. ತಮನ್ನಾ ಕೂಡ ನಡು ನಡುವೆ ಸುಸ್ತಾಗ್ತಾ ಇದ್ರು. ಹೀಗಾಗಿ ಕೊಂಚ ವಿಶ್ರಾಂತಿ ಪಡೆದು ಮತ್ತೆ ಹೆಜ್ಜೆ ಹಾಕಿದ್ದಾರೆ. ತಮನ್ನಾ ಹಂಚಿಕೊಂಡಿರುವ ವಿಡಿಯೋ ನೋಡಿದ್ರೇನೆ ಅರ್ಥವಾಗುತ್ತದೆ. ಒನ್ ಮೋರ್ ಒನ್ ಮೋರ್ ಅಂತಾ ಇರೋದು ಕಾಣಿಸ್ತಾ ಇದೆ.
ಅಷ್ಟೇ ಅಲ್ಲ, ಆ ರಿಟೇಕ್ಸ್ ಜಾಸ್ತಿಯಾದಾಗ ತಮನ್ನಾ ಕೋಪ ಮಾಡಿಕೊಂಡಿದ್ದನ್ನು ಕಾಣಬಹುದು. ಕೋಪ ಅಂದ್ರೆ ಬೇರೆ ಯಾರದ್ದೋ ಮೇಲೆ ಮಾಡಿಕೊಂಡ ಕೋಪ ಅಲ್ಲ ಅದು. ಛೇ ಸರಿಯಾಗಲಿಲ್ವಲ್ಲಅಂತ ತನಗೆ ತಾನೇ ಮಾಡಿಕೊಂಡ ಕೋಪ. ಹಾಗೇ ಆ ಡ್ಯಾನ್ಸ್ ಸೆರಿಯಾಗಿ ಬರಲಿ ಅಂತ ಕುಂತಲ್ಲಿ ನಿಂತಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ. ಇಷ್ಟು ದೊಡ್ಡ ನಟಿಯೂ ಅಷ್ಟು ಡೆಡಿಕೇಷನ್ ತೋರುವುದು ಬೇರೆಯವರಿಗೆ ಮಾದರಿಯೇ ಸರಿ. ಒಟ್ನಲ್ಲಿ ನಶಾ ಹಾಡನ್ನ ಮುಗಿಸುವಷ್ಟರಲ್ಲಿ ಮಧ್ಯರಾತ್ರಿ 12.15 ಆಗಿತ್ತು. ಪ್ಯಾಕಪ್ ಮಾಡಿಕೊಂಡು ಮನೆ ಕಡೆ ಹೊರಟರು. ಇದು ಮಿಲ್ಕಿ ಬ್ಯೂಟಿ ತಮನ್ನಾ ಬಾಟಿಯಾ ಒಂದು ದಿನ ಡೈಲಿ ರೊಟೀನ್ ಆಗಿತ್ತು.


Click it and Unblock the Notifications











